ಮೈಸೂರು: ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅಲಿಯಾಸ್ ಎಂಎಸ್ ಧೋನಿ (MS Dhoni) ಅಲಿಯಾಸ್ ಮಾಹಿ (Mahi) ಅಂದ್ರೆ ಯಾರಿಗೆ ಗೊತ್ತಿಲ್ಲ ಹೇಳಿ? ಅದರಲ್ಲೂ ಕ್ರಿಕೆಟ್ ಅಭಿಮಾನಿಗಳ (Cricket Fans) ಪಾಲಿಗೆ ಧೋನಿ ಎಂದಿದ್ದರೂ ಕೂಲ್ ಕ್ಯಾಪ್ಟನ್ನೇ (Cool Captain). ಬರೀ ಭಾರತದಲ್ಲಿ (India) ಅಷ್ಟೇ ಅಲ್ಲ ವಿಶ್ವದಾದ್ಯಂತ ಧೋನಿ ಅಭಿಮಾನಿಗಳು ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಅವರು ಧೋನಿಯವರ ಮುಖವನ್ನು, ಹಾವಭಾವವನ್ನು ಕನಸಿನಲ್ಲಿಯೂ ಗುರುತಿಸಬಲ್ಲರು. ಇತ್ತ ಮೈಸೂರಿನ ಚಾಮುಂಡೇಶ್ವರಿ ವ್ಯಾಕ್ಸ್ ಮ್ಯೂಸಿಯಂನಲ್ಲಿ (Mysuru Chamundeshwari Wax Museum) ಎಂಎಸ್ ಧೋನಿಯವರ ಮೇಣದ ಪ್ರತಿಮೆಯೊಂದನ್ನು (Wax Statue) ನಿರ್ಮಾಣ ಮಾಡಲಾಗಿದೆ. ಆದರೆ ಈ ಪ್ರತಿಮೆ ಇದೀಗ ಧೋನಿ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಗಿದೆ! ಮೇಣದ ಪ್ರತಿಮೆ ನೋಡಿದ ಅಭಿಮಾನಿಗಳು ಧೋನಿ ಎಲ್ಲಿ ಕಾಣಿಸುತ್ತಿಲ್ಲ ಅಂತ ಹುಡುಕುತ್ತಿದ್ದಾರಂತೆ!
ಮೈಸೂರಿನಲ್ಲಿ ಧೋನಿ ಮೇಣದ ಪ್ರತಿಮೆ ನಿರ್ಮಾಣ
ಮೈಸೂರಿನ ಚಾಮುಂಡೇಶ್ವರಿ ವ್ಯಾಕ್ಸ್ ಮ್ಯೂಸಿಯಂನಲ್ಲಿ ಕ್ರಿಕೆಟ್ ದಂತಕಥೆ, ಕೂಲ್ ಕ್ಯಾಪ್ಟನ್ ಎಂಎಸ್ ಧೋನಿಯವರ ಮೇಣದ ಪ್ರತಿಮೆಯೊಂದನ್ನು ನಿರ್ಮಾಣ ಮಾಡಲಾಗಿದೆ. ಆದರೆ ಮೇಣದ ಪ್ರತಿಮೆ ನೋಡಿದ ಧೋನಿ ಅಭಿಮಾನಿಗಳು ಶಾಕ್ಗೆ ಒಳಗಾಗಿದ್ದಾರಂತೆ.
Shut up that's Shoaib not Dhoni 😭 https://t.co/QYvWWHXiid
— Inactive || Bunny 🍸 (@starlord_pro_) October 7, 2022
ಮ್ಯೂಸಿಯಂನಲ್ಲಿ ನಿರ್ಮಾಣಗೊಂಡಿರುವ ಪ್ರತಿಮೆ ಧೋನಿಯವರನ್ನು ಹೋಲುತ್ತಿಲ್ಲ ಅಂತಿದ್ದಾರೆ ಅವರ ಅಭಿಮಾನಿಗಳು. ಇದು ಪಾಕಿಸ್ತಾನದ ಕ್ರಿಕೆಟ್ ಆಟಗಾರ ಶೋಯೆಬ್ ಅವರನ್ನು ಹೋಲುತ್ತಿದೆ ಅಂತ ಧೋನಿ ಫ್ಯಾನ್ಸ್ ಕಿಡಿಕಾರಿದ್ದಾರೆ.
ಇದನ್ನೂ ಓದಿ: MS Dhoni: ಮಹತ್ವದ ಘೋಷಣೆ ಮಾಡಿದ ಧೋನಿ, ವಿಶ್ವಕಪ್ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್ ಕೂಲ್
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್
ಧೋನಿಯವರ ಮೇಣದ ಪ್ರತಿಮೆಯ ಫೋಟೋ ಇದೀಗ ಸೋಶಿಯಲ್ ಮೀಡಿಯಾಗಳಲ್ಲಿ ಭಾರೀ ವೈರಲ್ ಆಗಿದೆ. ಇದು ಧೋನಿಯಲ್ಲ, ಧೋನಿಯವರ ಪ್ರತಿಮೆ ಎಲ್ಲಿದೆ ಅಂತ ಫ್ಯಾನ್ಸ್ ಕೇಳುತ್ತಿದ್ದಾರೆ. ಕೆಲವರಂತೂ ಇದು ಎಂಎಸ್ ಧೋನಿಯೋ, ರಣಬೀರ್ ಕಪೂರ್ ಅವರೋ ಅಂತ ಪ್ರಶ್ನಿಸುತ್ತಿದ್ದಾರೆ.
ಆದಿಪುರುಷನನ್ನು ಎಳೆದು ತಂದ ನೆಟ್ಟಿಗರು!
ಇತ್ತೀಚಿಗಷ್ಟೇ ರಿಲೀಸ್ ಆದ ನಟ ಪ್ರಭಾಸ್ ಅಭಿನಯದ ಆದಿಪುರುಷ ಸಿನಿಮಾದ ಟೀಸರ್ ಕೂಡ ಟೀಕೆಗೆ ಒಳಗಾಗಿತ್ತು. ಅದನ್ನು ನೋಡಿದ್ದ ಪ್ರೇಕ್ಷಕರು, ಇದು ಕಾರ್ಟೂನ್ ಸಿನಿಮಾದಂತಿದೆ ಅಂತ ಟೀಕಿಸಿದ್ದರು. ಇದೀಗ ಧೋನಿ ಮೇಣದ ಪ್ರತಿಮೆ ವಿಚಾರದಲ್ಲೂ ಆದಿ ಪುರುಷನನ್ನು ಎಳೆದು ತಂದಿದ್ದಾರೆ.
ಆದಿಪುರುಷ ಸಿನಿಮಾಗೆ ವಿಎಫ್ಎಕ್ ಮಾಡದವನೇ ಪ್ರತಿಮೆ ನಿರ್ಮಿಸಿದ್ದಾನೆ!
"ಎಂಎಸ್ ಧೋನಿಯವರ ಮೇಣದ ಪ್ರತಿಮೆಯನ್ನು ಮಾಡಿದ ಕಲಾವಿದ ಯಾರು ಅಂತ ಗೊತ್ತಾಯಿತು. ಆತ ಆದಿಪುರುಷನಿಗೆ ವಿಎಫ್ಎಕ್ಸ್ ರಚಿಸಿದವನೇ " ಎಂದು ನೆಟ್ಟಿಗರೊಬ್ಬರು ತಮಾಷೆಯಾಗಿ ಹೇಳಿದ್ದಾರೆ.
ಸೋಶಿಯಲ್ ಮೀಡಿಯಾಗಳಲ್ಲಿ ತರಹೇವಾರಿ ಕಾಮೆಂಟ್
ಈ ಪೋಸ್ಟ್ಗೆ ಪ್ರತಿಕ್ರಿಯಿಸಿದ ಖ್ಯಾತ ಕ್ರಿಕೆಟ್ ಬರಹಗಾರ ಜರೋಡ್ ಕಿಂಬರ್, "ಇದು ನನ್ನ ಬರಹಕ್ಕಿಂತ ದೊಡ್ಡದಾಗಿದೆ" ಎಂದು ಬರೆದಿದ್ದಾರೆ. "ಧೋನಿ ಮತ್ತು ರಣಬೀರ್ ಕಪೂರ್ ಪ್ರತಿಮೆಯಲ್ಲಿ ಒಂದೇ ರೀತಿ ಕಾಣುತ್ತಿದ್ದಾರೆ" ಎಂದು ಕಾಮೆಂಟ್ ಮಾಡಿದ್ದಾರೆ, ಇನ್ನೊಬ್ಬ ನೆಟ್ಟಿಗರು "ಶಟ್ ಅಪ್ ಶೋಯೆಬ್, ಇದು ಧೋನಿ ಅಲ್ಲ" ಎಂದು ಉಲ್ಲಾಸದಿಂದ ಹೇಳಿದ್ದಾರೆ. "ಶೋಯಬ್ ಮಲಿಕ್ ಭಾರತೀಯ ಕ್ರಿಕೆಟ್ ತಂಡದ ಜೆರ್ಸಿಯಲ್ಲಿ ವಿಭಿನ್ನವಾದ ಕೇಶವಿನ್ಯಾಸದೊಂದಿಗೆ ಕಾಣಿಸಿಕೊಂಡಿದ್ದಾರೆ" ಅಂತ ಮತ್ತೊಬ್ಬರು ಕಾಮೆಂಟ್ ಮಾಡಿದ್ದಾರೆ.
ವಿಶ್ವಕಪ್ ಕುರಿತು ಭವಿಷ್ಯ ನುಡಿದ ಕ್ಯಾಪ್ಟನ್ ಕೂಲ್
ಭಾರತ ಈ ಬಾರಿ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ನಲ್ಲಿ ಜಯ ಸಾಧಿಸುವ ಮೂಲಕ ಮತ್ತೊಮ್ಮೆ ವಿಶ್ವಕಪ್ ಗೆಲ್ಲಲಿದೆ ಎಂದು ಧೋನಿ ಹೇಳಿದ್ದಾರೆ. ಇದಕ್ಕೆ ಉದಾಹರಣೆಯನ್ನು ನೀಡಿದ ಅವರು, 2011ರಲ್ಲಿ ಪ್ರಥಮ ಬಾರಿಗೆ ಓರಿಯೋ ಭಾರತದಲ್ಲಿ ಲಾಂಚ್ ಆಯಿತು ಆ ವರ್ಷ ನಾವು ಭಾರತ ವಿಶ್ವಕಪ್ ಗೆದ್ದಿತು. ಅದರಂತೆ ಈ ಬಾರಿಯೂ ಓರಿಯೋ ಪ್ರಥಮ ಬಾರಿಗೆ ಇಂಡಿಯಾದಲ್ಲಿ ಲಾಂಚ್ ಆಗುತ್ತಿದೆ ಅಂದರೆ ಈ ಸಲವೂ ಭಾರತ ಟಿ20 ವಿಶ್ವಕಪ್ ಗೆಲ್ಲಲಿದೆ ಎಂದು ಹೇಳಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ