• Home
  • »
  • News
  • »
  • trend
  • »
  • MS Dhoni Video: ಕುದುರೆ ಜೊತೆ ಧೋನಿ ರೇಸ್; ಕೂಲ್ ಕ್ಯಾಪ್ಟನ್ ಫಿಟ್​ನೆಸ್​ಗೆ ಅಭಿಮಾನಿಗಳು ಫಿದಾ

MS Dhoni Video: ಕುದುರೆ ಜೊತೆ ಧೋನಿ ರೇಸ್; ಕೂಲ್ ಕ್ಯಾಪ್ಟನ್ ಫಿಟ್​ನೆಸ್​ಗೆ ಅಭಿಮಾನಿಗಳು ಫಿದಾ

ಕುದುರೆ ಮರಿ ಜೊತೆ ಧೋನಿ ರೇಸಿಂಗ್

ಕುದುರೆ ಮರಿ ಜೊತೆ ಧೋನಿ ರೇಸಿಂಗ್

MS Dhoni Horse Racing Video: ಮಗಳು ಜೀವಾಳ ಮೆಚ್ಚಿನ ಬಿಳಿ ಕುದುರೆ ಮರಿಯೊಂದಿಗೆ ರೇಸಿಂಗ್ ನಡೆಸಿರುವ ಎಂ.ಎಸ್. ಧೋನಿ ವಿಡಿಯೋವನ್ನು ಅವರ ಪತ್ನಿ ಸಾಕ್ಷಿ ಸಿಂಗ್ ಶೇರ್ ಮಾಡಿದ್ದಾರೆ.

  • Share this:

ಟೀಂ ಇಂಡಿಯಾದ ಕೂಲ್ ಕ್ಯಾಪ್ಟನ್ ಎಂದೇ ಹೆಸರಾಗಿದ್ದ ಮಹೇಂದ್ರ ಸಿಂಗ್ ಧೋನಿ ಈಗ ತಮ್ಮ ಫ್ಯಾಮಿಲಿ ಜೊತೆ ಸಖತ್ ಎಂಜಾಯ್ ಮಾಡುತ್ತಿದ್ದಾರೆ. ಕೊರೋನಾದಿಂದಾಗಿ ಹೆಂಡತಿ, ಮಗಳ ಜೊತೆಗೆ ಹೆಚ್ಚಿನ ಸಮಯ ಕಳೆಯುತ್ತಿರುವ ಎಂ.ಎಸ್. ಧೋನಿ ಅವರ ಹೊಸ ವಿಡಿಯೋವೊಂದು ಈಗ ವೈರಲ್ ಆಗಿದೆ. ತಮ್ಮ ಮಗಳು ಜೀವಾಳ ಫೇವರಿಟ್ ಕುದುರೆಯೊಂದಿಗೆ ಧೋನಿ ರೇಸ್​ ನಡೆಸುತ್ತಿರುವ ವಿಡಿಯೋವನ್ನು ಸಾಕ್ಷಿ ಸಿಂಗ್ ಧೋನಿ ಶೇರ್ ಮಾಡಿದ್ದಾರೆ.


ಮ್ಯಾಚ್ ನಡೆಯುವಾಗ ಕ್ರಿಕೆಟ್ ಮೈದಾನದ ತುಂಬ ಓಡುತ್ತಿದ್ದ ಧೋನಿ ಈಗ ತಮ್ಮ ಫಾರ್ಮ್​ ಹೌಸ್​ನ ಮೈದಾನದಲ್ಲಿ ಕುದುರೆ ಮರಿಯ ಜೊತೆ ರನ್ನಿಂಗ್ ರೇಸ್ ಮಾಡಿದ್ದಾರೆ. ಈ ವಿಡಿಯೋ ಸೋಷಿಯಲ್ ಮೀಡಿಯಾದಲ್ಲಿ ಸಾಕಷ್ಟು ಬಾರಿ ಶೇರ್ ಆಗಿದೆ.
ಚೇತಕ್ ಎಂಬ ಕಪ್ಪು ಬಣ್ಣದ ಕುದುರೆಯನ್ನು ಸಾಕಿದ್ದ ಧೋನಿ ಇತ್ತೀಚೆಗೆ ಲಿಲ್ಲಿ ಎಂಬ ಬಿಳಿ ಬಣ್ಣದ ಕುದುರೆ ಮರಿಯೊಂದನ್ನು ಫಾರ್ಮ್​ ಹೌಸ್​ಗೆ ತಂದಿದ್ದರು. ಧೋನಿ ಮಗಳು ಜೀವಾಳಿಗೆ ಈ ಕುದುರೆಯೆಂದರೆ ಫೇವರಿಟ್ ಆಗಿತ್ತು. ಮಗಳ ಕುದುರೆಯೊಂದಿಗೆ ರನ್ನಿಂಗ್ ರೇಸ್ ನಡೆಸಿರುವ ಕೂಲ್ ಕ್ಯಾಪ್ಟನ್ ನಾನಾ? ನೀನಾ? ಎಂದು ಫಾರ್ಮ್ ಹೌಸ್ ಅಂಗಳದ ತುಂಬ ಓಡಿರುವ ವಿಡಿಯೋ ನೋಡಿದ ಅಭಿಮಾನಿಗಳು ಖುಷಿಯಾಗಿದ್ದಾರೆ.ಈ ವಯಸ್ಸಿನಲ್ಲೂ ಯುವಕರಂತೆ ಓಡುವ ಧೋನಿಯನ್ನು ಕೂಡ ಹಲವರು ಹುಬ್ಬೇರಿಸಿದ್ದಾರೆ. ಅಂತಾರಾಷ್ಟ್ರೀಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿರುವ ಎಂ.ಎಸ್. ಧೋನಿ ಐಪಿಎಲ್​ನಲ್ಲಿ ಮಾತ್ರ ಆಡುತ್ತಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್​ ಕ್ಯಾಪ್ಟನ್ ಆಗಿರುವ ಎಂ.ಎಸ್. ಧೋನಿ ಕೊರೋನಾದಿಂದಾಗಿ ಐಪಿಎಲ್ ಮುಂದೂಡಿಕೆಯಾಗಿರುವುದರಿಂದ ಕುಟುಂಬದವರೊಂದಿಗೆ ಸಮಯ ಕಳೆಯುತ್ತಿದ್ದಾರೆ.


ರೇಸ್​ನಲ್ಲಿ ಧೋನಿಗಿಂತ ಮುಂದೆ ಓಡಿರುವ ಕುದುರೆ ಮರಿ ಧೋನಿಯ ಬೆವರಿಳಿಸಿದೆ. ಸ್ಟ್ರಾಂಗರ್, ಫಾಸ್ಟರ್​ ಎಂಬ ಕ್ಯಾಪ್ಷನ್ ಕೊಟ್ಟು ಈ ವಿಡಿಯೋವನ್ನು ಸಾಕ್ಷಿ ಸಿಂಗ್ ಧೋನಿ ಶೇರ್ ಮಾಡಿದ್ದಾರೆ.

Published by:Sushma Chakre
First published:

ಸುದ್ದಿ 18ಕನ್ನಡ ಟ್ರೆಂಡಿಂಗ್

ಮತ್ತಷ್ಟು ಓದು