ಹೊಸ ಅವತಾರದಲ್ಲಿ ಮಿಂಚುತ್ತಿರುವ 'ಹೇರ್​​​ ಸ್ಟೈಲ್ ಕಿಂಗ್ ಧೋನಿ'

news18
Updated:July 29, 2018, 2:44 PM IST
ಹೊಸ ಅವತಾರದಲ್ಲಿ ಮಿಂಚುತ್ತಿರುವ 'ಹೇರ್​​​ ಸ್ಟೈಲ್ ಕಿಂಗ್ ಧೋನಿ'
news18
Updated: July 29, 2018, 2:44 PM IST
ನ್ಯೂಸ್ 18 ಕನ್ನಡ

ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಹೊಸ ಹೊಸ ಪ್ರಯೋಗ ಮಾಡುವುದರಲ್ಲಿ ಎತ್ತಿದ ಕೈ. ಅದರಲ್ಲು ತನ್ನ ಡಿಫರೆಂಟ್ ಹೇರ್ ಸ್ಟೈಲ್ ಮೂಲಕ ಧೋನಿ ಅನೇಕ ಬಾರಿ ಗಮನ ಸೆಳೆದಿದ್ದರು. ಇದೀಗ ಮತ್ತೆ ಧೋನಿ ಅವರು ಹೊಸ ಅವತಾರದಲ್ಲಿ ಕಾಣಿಸಿಕೊಂಡಿದ್ದಾರೆ.

ಇಂಗ್ಲೆಂಡ್ ವಿರುದ್ಧದ ಟಿ-20 ಹಾಗೂ ಏಕದಿನ ಸರಣಿ ಮುಗಿಸಿ ಸದ್ಯ ತವರಿಗೆ ಮರಳಿರುವ ಧೋನಿ ಕುಟುಂಬದ ಜೊತೆ ಕಾಲ ಕಳೆಯುತ್ತಿದ್ದಾರೆ. ಈ ಮಧ್ಯೆ ಕೂಲ್ ಕ್ಯಾಪ್ಟನ್ ಹೊಸ ಹೇರ್ ಸ್ಟೈಲ್ ಮಾಡಿಸಿದ್ದಾರೆ. 37 ವರ್ಷ ಪ್ರಾಯದ ಧೋನಿ ತಮ್ಮ ಕೂದಲಿನ ಹಿಂಭಾಗದಲ್ಲಿ ವಿ ಶೇಪ್ ನೀಡುವ ಮೂಲಕ ‘ವಿ ಹವ್ಕ್’ ಕಟ್ಟಿಂಗ್ ಮಾಡಿಸಿದ್ದಾರೆ. ಸದ್ಯ ಧೋನಿ ಅವರ ಈ ಹೊಸ ಹೇರ್​​​ ಸ್ಟೈಲ್ ಫೋಟೋ ವೈರಲ್ ಆಗುತ್ತಿದೆ.

 
Loading...

The Old “V Hawk” is back! #captainsaab #menshair #barber #mohawk #dhoni . Hair for @mahi7781 by @sapnamotibhavnani . . . . . . #madowothair #bandra #mensfashion #menshaircuts #newhair #shootlife #bandra #bandrahairstylist #bandrasalon #mumbailife #mumbaisalon #mumbaidiaries #mumbai #mahi #captaincool #fades #barbershop #barberlife #hairdiaries #stylistlife #celebritystylist #celebrity #sapnabhavnani


A post shared by Mad O Wot Hair Salon (@madowothair) on


ಧೋನಿ ಅವರು ಈ ಹಿಂದೆ ಇಂಗ್ಲೆಂಡ್ ಪ್ರವಾಸದಲ್ಲಿರುವಾಗ ತನ್ನ ಹುಟ್ಟು ಹಬ್ಬ ಆಚರಿಸಿಕೊಂಡಿದ್ದರು. ಈ ವೇಳೆ ಹಾರ್ದಿಕ್ ಪಾಂಡ್ಯ ಅವರು ಧೋನಿಗೆ ವಿಭಿನ್ನ ರೀತಿಯಲ್ಲಿ ಕಟ್ಟಿಂಗ್ ಮಾಡಿಸಿ ಬರ್ತ್​​​ ಡೇ ಗಿಫ್ಟ್​ ನೀಡಿದ್ದರು.
First published:July 29, 2018
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ