ಮದುವೆ ವಾರ್ಷಿಕೋತ್ಸವದಂದು ಹೆಂಡತಿಗೆ ದುಬಾರಿ ಗಿಫ್ಟ್ ನೀಡಿದ ಧೋನಿ

ಸಾಕ್ಷಿ ಧೋನಿ

ಸಾಕ್ಷಿ ಧೋನಿ

ಮದುವೆ ವಾರ್ಷಿಕೋತ್ಸವದಂದು ಹೆಂಡತಿ ಸಾಕ್ಷಿಗೆ ಅಮೂಲ್ಯವಾದ ದುಬಾರಿ ಉಡುಗೊರೆ ನೀಡಿದ್ದಾರೆ ಧೋನಿ

  • Share this:

ಕ್ಯಾಪ್ಟನ್ ಕೂಲ್ ಎಂದೇ ಖ್ಯಾತಿಯಾದ ಭಾರತೀಯ ಕ್ರಿಕೆಟ್ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ತಮ್ಮ ಪತ್ನಿ ಸಾಕ್ಷಿಗೆ ತಮ್ಮ ಹನ್ನೊಂದನೆಯ ಮದುವೆ ವಾರ್ಷಿಕೋತ್ಸವಕ್ಕೆ ಉಡುಗೊರೆಯಾಗಿ ವಿಂಟೇಜ್ ಕಾರನ್ನು ನೀಡಿದ್ದಾರೆ. ಸಾಕ್ಷಿ ಅವರನ್ನು ಧೋನಿ ಹನ್ನೊಂದು ವರ್ಷಗಳ ಹಿಂದೆ ಮದುವೆ ಆಗಿದ್ದರು. ಹೀಗೆ ಮಾಹಿ ತಮ್ಮ ಪತ್ನಿಗೆ ವಿಶೇಷವಾದಂತಹ ಉಡುಗೊರೆಯನ್ನು ನೀಡಿದ್ದಾರೆ. ಪತ್ನಿಗೆ ದುಬಾರಿ ಉಡುಗೊರೆಗಳನ್ನು ನೀಡುವುದು ಮಾತ್ರವಲ್ಲದೆ ಸಭೆ ಸಮಾರಂಭಗಳಲ್ಲಿ ಕೂಡ ಮಾಹಿ ಪತ್ನಿಯ ಉಪಸ್ಥಿತಿಗೆ ಕುಂದು ಉಂಟಾಗದಂತೆ ನೋಡಿಕೊಳ್ಳುತ್ತಾರೆ. ಹೀಗೆ ಕ್ಯಾಪ್ಟನ್ ಕೂಲ್ ಬರಿ ಒಳ್ಳೆಯ ಆಟಗಾರನಲ್ಲದೆ ಒಬ್ಬ ಉತ್ತಮ ಪತಿ ಎಂಬುದನ್ನು ಕೂಡ ಎಂದು ಮಾಹಿ ಸಾಬೀತು ಮಾಡಿದ್ದಾರೆ.
ಮಾಹಿ ಮತ್ತು ಸಾಕ್ಷಿ ಇಬ್ಬರೂ ತಮ್ಮ ಹನ್ನೊಂದನೆಯ ಮದುವೆ ವಾರ್ಷಿಕೋತ್ಸವವನ್ನು ಜುಲೈ4ರಂದು ಆಚರಿಸಿಕೊಂಡರು. ಆ ಸಂದರ್ಭದಲ್ಲಿ ಧೋನಿ ತಮ್ಮ ಪತ್ನಿಗೆ ವಿಂಟೇಜ್ ವೋಕ್ಸ್ವ್ಯಾಗನ್ ಬೀಟಲ್ ಅನ್ನುಉಡುಗೊರೆಯಾಗಿ ನೀಡಿದರು. ಮಾಹಿಗೆ ಬೈಕ್ ಮತ್ತು ಕಾರ್‌ಗಳನ್ನು ಸಂಗ್ರಹಿಸುವುದು ಎಂದರೆ ತುಂಬಾ ಇಷ್ಟವಿದ್ದು,ಅವರ ಬಳಿ ಅನೇಕ ತರಹದ ಬೈಕ್ಗಳನ್ನೂ ಮತ್ತುಕಾರ್​ಗಳನ್ನು ಹೊಂದಿದ್ದಾರೆ. ಥ್ಯಾಂಕ್ ಯು ಫಾರ್ ದ ಆ್ಯನಿವರ್ಸರಿ ಗಿಫ್ಟ್ಎಂದು ತಾವು ಉಡುಗೊರೆ ಸ್ವೀಕರಿಸಿದ ನಂತರ ನೀಲಿ ಬಣ್ಣದ ವಿಂಟೇಜ್ ಕಾರಿನ ಫೋಟೋವನ್ನು ತಮ್ಮ ಇನ್ಸ್ಟಾಗ್ರಾಮ್ ನಲ್ಲಿಅಪ್ಲೋಡ್ ಮಾಡಿಕೊಂಡು ಕ್ಯಾಪ್ಷನ್ ನಲ್ಲಿ ಸಾಕ್ಷಿ ಬರೆದಿದ್ದಾರೆ. 2011ವಿಶ್ವ ಕಪ್​ ವಿಜೇತ ತಂಡದ ನಾಯಕನಾಗಿದ್ದಂತಹ ಮಹೇಂದ್ರ ಸಿಂಗ್ ಧೋನಿ ಅವರು 2021 ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕರಾಗಿ ಮೈದಾನಕ್ಕಿಳಿದಿದ್ದ ಅವರ ಕ್ರಿಕೆಟ್ ಜೀವನದ ಕೊನೆಯ ಟೊರ್ನಾಮೆಂಟ್ ಇಂಡಿಯನ್ ಪ್ರೀಮಿಯರ್ ಲೀಗ್ ಆಗಿತ್ತು.


ಇದನ್ನು ಓದಿ: ನಿಮಗೆ ಇಷ್ಟ ಇಲ್ಲ ಎಂದರೆ, ನಿರ್ಲಕ್ಷಿಸಿ; ಅರ್ಜಿ ವಜಾಗೊಳಿಸಿದ ಸುಪ್ರೀಂ


2020ರಲ್ಲಿ ಐಪಿಎಲ್ ನಲ್ಲಿ ಮಾಹಿ ತಂಡ ಪ್ಲೇ ಆಫ್ ತಲುಪದೇ ಹೋಗಿದ್ದು ಐಪಿಎಲ್ ಇತಿಹಾಸದಲ್ಲೇಮೊದಲ ಭಾರಿಯಾಗಿತ್ತು. ಆನಂತರ 2021ರ ಐಪಿಎಲ್ ಆವೃತ್ತಿಯಲ್ಲಿ ಮಾಹಿ ನಾಯಕತ್ವದ ಸಿಎಸ್ಕೆ ತಂಡವು ಪಾಯಿಂಟ್ಸ್ ಟೇಬಲ್​ನಲ್ಲಿ ಎರಡನೆಯ ಸ್ಥಾನದಲ್ಲಿತ್ತು. ಆದರೆ ಕೋವಿಡ್ ಕೇಸ್‌ಗಳ ಹೆಚ್ಚಳದಿಂದ ಭಾರತದಲ್ಲಿ ಟೂರ್ನಮೆಂಟ್ ಅರ್ಧಕ್ಕೆ ನಿಲ್ಲಿಸಲಾಯಿತು. ಏಳು ಪಂದ್ಯಗಳನ್ನಾಡಿ ಐದರಲ್ಲಿ ಜಯಗಳಿಸಿದ್ದ ಸಿಎಸ್ಕೆ ತಂಡವು 1. 263ರನ್ ರೆಟ್ ಪಡೆದ ಸಿಎಸ್‌ಕೆ ತಂಡವು ಟೂರ್ನಮೆಂಟ್ ನಲ್ಲಿ ತುಂಬಾ ಚೆನ್ನಾಗಿ ಆಡುತ್ತಿದ್ದರು. ಮತ್ತೆ ಈಗ ಉಳಿದ ಅರ್ಧ ಐಪಿಎಲ್ ಟೂರ್ನಮೆಂಟ್ ಅನ್ನು ಯುಎಈ ಯಲ್ಲಿ ಸೆಪ್ಟೆಂಬರ್ ಮತ್ತು ಅಕ್ಟೊಬರ್ ನಲ್ಲಿಪುನಃ ಶುರು ಮಾಡುವ ನಿರೀಕ್ಷೆಗಳು ಇವೆ.


ಮಾಹಿ ಕಳೆದ ವರ್ಷ ಆಗಸ್ಟ್ ನಲ್ಲಿಅಂತಾರಾಷ್ಟ್ರೀಯ ಕ್ರಿಕೆಟ್ಆ ಟಕ್ಕೆ ವಿದಾಯ ಹೇಳಿದ್ದರು ಅವರು ಆಡಿದಂತಹ ಕೊನೆಯ ಅಂತಾರಾಷ್ಟ್ರೀಯ ಪಂದ್ಯ 2019ರಲ್ಲಿ ನ್ಯೂಜ್ಲ್ಯಾನ್ಡ್ ವಿರುದ್ಧ ಸೆಮಿಫೈನಲ್ ಪಂದ್ಯ ಆಗಿತ್ತು.

First published: