MS Dhoni: ಸಾಕ್ಷಿ ಸಿಂಗ್ ಧೋನಿ ಮತ್ತೆ ಗರ್ಭಿಣಿ, ಎರಡನೇ ಮಗುವಿನ ನಿರೀಕ್ಷೆಯಲ್ಲಿ MSD ಜೋಡಿ

ಧೋನಿ ಪತ್ನಿ, ಪುತ್ರಿ ಝೀವಾ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಜಯ ಗಳಿಸುತ್ತಲೇ ಮೈದಾನಕ್ಕೆ ಬಂದ ಧೋನಿಯನ್ನು ಅಪ್ಪಿ ಹಿಡಿದಿದ್ದರು. ಈ ವೇಳೆಯೂ ತೆಗೆದ ಸಾಕ್ಷಿ ಫೋಟೋಗಳು ಗರ್ಭಿಣಿಯಾಗಿರುವುದನ್ನ ತೋರಿಸುತ್ತಿವೆ.

ಎಂ.ಎಸ್​.ಧೋನಿ ಕುಟುಂಬ

ಎಂ.ಎಸ್​.ಧೋನಿ ಕುಟುಂಬ

  • Share this:
    ಎಂ.ಎಸ್. ಧೋನಿ(MS Dhoni) ನಾಯಕತ್ವದ ಚೆನ್ನೈ ಸೂಪರ್ ಕಿಂಗ್ಸ್‌(CSK) ತಂಡ ಇಂಡಿಯನ್ ಪ್ರೀಮಿಯರ್ ಲೀಗ್‌(IPL)ನಲ್ಲಿ ನಾಲ್ಕನೇ ಬಾರಿಗೆ ಚಾಂಪಿಯನ್ಸ್ (Champions)ಪಟ್ಟ ಅಲಂಕರಿಸಿದೆ. ದುಬೈ(Dubai) ಇಂಟರ್ ನ್ಯಾಷನಲ್ ಸ್ಟೇಡಿಯಂನಲ್ಲಿ ನಿನ್ನೆ ನಡೆದ ಐಪಿಎಲ್ 2021ರ ಫೈನಲ್ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್(KKR) ವಿರುದ್ಧ 27 ರನ್​ಳಿಂದ ಸಿಎಸ್​ಕೆ ತಂಡ ಜಯ ಗಳಿಸಿದೆ. ಇದರೊಂದಿಗೆ ಐಪಿಎಲ್ ಇತಿಹಾಸದಲ್ಲಿ ಚೆನ್ನೈ ಎರಡನೇ ಅತೀ ಬಲಿಷ್ಠ ತಂಡವೆಂಬ ದಾಖಲೆ ನಿರ್ಮಿಸಿದೆ. ಇತ್ತ ಚೆನ್ನೈ ಸೂಪರ್​ ಕಿಂಗ್ಸ್​ ಅಭಿಮಾನಿಗಳಿಗೆ ಡಬಲ್​ ಬಂಪರ್​ ಸಿಕ್ಕ ಹಾಗೆ ಆಗಿದೆ. ಗೆದ್ದಿದ್ದು ಒಂದೇ ಕಪ್​, ಡಬಲ್​ ಬಂಪರ್​ ಹೇಗೆ ಅಂತೀರಾ? ಇದಕ್ಕೆ ಉತ್ತರ ಮತ್ತೆ ಮಹೇಂದ್ರ ಸಿಂಗ್​ ಧೋನಿ ಅಪ್ಪ ಆಗುತ್ತಿದ್ದಾರೆ. ಸಾಕ್ಷಿ ಸಿಂಗ್​ ಧೋನಿ(Sakshi singh dhoni) ಮತ್ತೆ ಗರ್ಭಿಣಿ(pregnant)ಯಾಗಿದ್ದಾರೆ. 2022ರಲ್ಲಿ ಎರಡನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ಎಂ.ಎಸ್​.ಧೋನಿ. ಈ ವಿಚಾರ ತಿಳಿದು ಸಿಎಸ್​ಎಕೆ ಅಭಿಮಾನಿಗಳು ‘ಡಬಲ್​ ವಿಜಿಲ್​ ಪೋಡು’ ಅಂತಿದ್ದಾರೆ

    ಸಾಕ್ಷಿ ಸಿಂಗ್​ ಧೋನಿ ಫೋಟೋಗಳು ವೈರಲ್​

    ಚೆನ್ನೈ ಸೂಪರ್‌ ಕಿಂಗ್ಸ್‌ಗೆ ಪಂದ್ಯಗಳಿದ್ದಾಗೆಲ್ಲಾ ಸಾಕ್ಷಿ ಧೋನಿ ಮತ್ತು ಮಗಳು ಝೀವಾ ಧೋನಿ ಸ್ಟೇಡಿಯಂನಲ್ಲಿ ಕೂತು ಸಿಎಸ್‌ಗೆ ಸಪೋರ್ಟ್​ ಮಾಡುತ್ತಾ ಚಿಯರ್​ ಮಾಡುತ್ತಿದ್ದರು. ಈ ಚಿತ್ರಗಳು ಅನೇಕ ಬಾರಿ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುತ್ತಿತ್ತು. ಇದೇ ಟೂರ್ನಿಯ ಸೆಮಿಫೈನಲ್​ ಪಂದ್ಯದಲ್ಲಿ ಧೋನಿ ಮಗಳು ಝೀವಾ ಸಿಎಸ್​ಕೆ ಗೆಲುವಿಗಾಗಿ ಕೈ ಮುಗಿದು ಪ್ರಾರ್ಥಿಸುವ ಫೋಟೋ ವೈರಲ್​ ಆಗಿತ್ತು.ಇದೀಗ ಫೈನಲ್​ ಪಂದ್ಯ ಮುಗಿದ ಬಳಿಕವೂ ಕೆಲ ಫೋಟೋಗಳು ಭಾರೀ ವೈರಲ್ ಆಗುತ್ತಿವೆ. ಧೋನಿ ಪತ್ನಿ ಸಾಕ್ಷಿ ಉಬ್ಬಿದ ಹೊಟ್ಟೆಯ ಚಿತ್ರಗಳು ಸೋಷಿಯಲ್​ ಮೀಡಿಯಾದಲ್ಲಿ ಓಡಾಡುತ್ತಿದೆ.





    ಅಧಿಕೃತ ಮಾಹಿತಿ ನೀಡದ ದಂಪತಿ

    ಇಷ್ಟೆಲ್ಲಾ ಫೋಟೋಗಳು ವೈರಲ್​ ಆಗುತ್ತಿದ್ದರೂ ಧೋನಿ ದಂಪತಿ ಈ ಬಗ್ಗೆ ಮಾಹಿತಿ ಬಿಟ್ಟುಕೊಟ್ಟಿಲ್ಲ. ಐಪಿಎಲ್​ ಗೆದ್ದ ಧೋನಿ ಭಾರತಕ್ಕೆ ಬಂದ ಬಳಿಕ ಈ ಬಗ್ಗೆ ಟ್ವೀಟ್​ ಅಥವಾ ಇನ್​ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿ ಮಾಹಿತಿ ನೀಡುತ್ತಾರಾ ಅಂತಾ ಕಾದುನೋಡಬೇಕಿದೆ. ಧೋನಿ ಪತ್ನಿ, ಪುತ್ರಿ ಝೀವಾ ಫೈನಲ್‌ ಪಂದ್ಯದಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ ವಿರುದ್ಧ ಚೆನ್ನೈ ಸೂಪರ್ ಕಿಂಗ್ಸ್‌ ಜಯ ಗಳಿಸುತ್ತಲೇ ಮೈದಾನಕ್ಕೆ ಬಂದ ಧೋನಿಯನ್ನು ಅಪ್ಪಿ ಹಿಡಿದಿದ್ದರು. ಈ ವೇಳೆಯೂ ತೆಗೆದ ಸಾಕ್ಷಿ ಫೋಟೋಗಳು ಗರ್ಭಿಣಿಯಾಗಿರುವುದನ್ನ ತೋರಿಸುತ್ತಿವೆ. ಆದರೂ ಧೋನಿ ಕಡೆಯಿಂದ ಯಾವುದೇ ಅಧಿಕೃತ ಮಾಹಿತಿ ಸಿಕ್ಕಿಲ್ಲ.

    ಸಾಕ್ಷಿ ಗರ್ಭಿರ್ಣಿಯಾಗಿರುವುದು ನಿಜ ಎಂದ​ ರೈನಾ ಪತ್ನಿ

    ಸಾಕ್ಷಿ ಸಿಂಗ್​ ಧೋನಿ ಗರ್ಭಿಣಿಯಾಗಿರುವುದು ನಿಜ ಎಂದು ಸುರೇಶ್​ ರೈನಾ ಪತ್ನಿ ಪ್ರಿಯಾಂಕ ಹೇಳಿದ್ದಾರೆ. ಈ ಬಗ್ಗೆ ಪೋಸ್ಟ್​ ಮಾಡಿರುವ ಪ್ರಿಯಾಂಕ ’ಸಾಕ್ಷಿ ಗರ್ಭಿಣಿಯಾಗಿದ್ದಾರೆ, 2022ರ ವೇಳೆಗೆ ಧೋನಿ ದಂಪತಿ ಮಗುವಿನ ನಿರೀಕ್ಷೆಯಲ್ಲಿದ್ದಾರೆ’ ಎಂದು ಅವರು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದಾರೆ. ಇನ್ನುಈ ಪೋಸ್ಟ್ ಕಂಡ ಧೋನಿ ಫ್ಯಾನ್ಸ್​ಗೆ ಡಬಲ್​ ಧಮಾಕಾ ಸಿಕ್ಕಂತೆ ಆಗಿದೆ. ‘ಚಿನ್ನ ತಲಾ ಕಮ್ಮಿಂಗ್​’ ಅಂತ ಕಮೆಂಟ್​ ಮಾಡುತ್ತಾ ತಮ್ಮ ಸಂತಸವನ್ನು ವ್ಯಕ್ತಪಡಿಸುತ್ತಿದ್ದಾರೆ.

    ವರದಿ - ವಾಸುದೇವ್.ಎಂ
    Published by:Latha CG
    First published: