Viral News: ಶಿವಾಜಿ ಜಯಂತಿ ಕಾರ್ಯಕ್ರಮದಲ್ಲಿ ಸಂಸದರಿಂದ ತಗ್ಗೆದೆಲೆ ಡೈಲಾಗ್

ತಗ್ಗೇದೆ.. ಲೇ,, ಎನ್ನುವ ಪುಷ್ಪ ಸಿನಿಮಾದ ಡೈಲಾಗ್ ಸಂಸದರು ಎರಡು ಭಾರಿ  ಹೇಳುತ್ತಿದ್ದಂತೆ, ವೇದಿಕೆ ಎದುರಿದ್ದ ಸಾವಿರಾರು ಯುವಕರು ಹುಚ್ಚೆದ್ದು ಕುಣಿದಿದ್ದು, ಕಾರ್ಯಕ್ರಮದ ಉದ್ದಕ್ಕೂ ಜನರು ಮೋದಿ ಮೋದಿ ಘೋಷಣೆ ಹಾಕಿದ್ದು ಕಂಡುಬಂತು.

ಕೋಲಾರ ಶಿವಾಜಿ ಜಯಂತಿ ಶೋಭಾಯಾತ್ರೆ

ಕೋಲಾರ ಶಿವಾಜಿ ಜಯಂತಿ ಶೋಭಾಯಾತ್ರೆ

  • Share this:
ಕೋಲಾರ(ಮಾ.16): ಜಿಲ್ಲೆಯ ಮುಳಬಾಗಿಲು ಪಟ್ಟಣದಲ್ಲಿ ವಿಶ್ವ ಹಿಂದೂ ಪರಿಷತ್ ಹಾಗು ಹಿಂದೂಪರ ಸಂಘಟನೆಗಳು ಆಯೋಜಿಸಿದ್ದ, 392 ನೇ ಶಿವಾಜಿ ಜಯಂತಿ (Shivaji Jayanthi) ಪ್ರಯುಕ್ತ ಶೋಭಾಯಾತ್ರೆ ಕಾರ್ಯಕ್ರಮ ಅದ್ದೂರಿಯಾಗಿ ನೆರವೇರಿದೆ, ಶೋಭಾಯಾತ್ರೆ ನಂತರ ಸಂಜೆ ಆಯೋಜಿಸಿದ್ದ ಸಮಾರೋಪ ಸಮಾರಂಭದಲ್ಲಿ ಸಾವಿರಾರು ಹಿಂದೂಪರ ಕಾರ್ಯಕರ್ತರು (Hindu Activists), ಸಾರ್ವಜನಿಕರು ಭಾಗಿಯಾಗಿದ್ದರು, ಸಮಾರೋಪ ಸಭಾರಂಭದಲ್ಲಿ ವಿಶ್ವ ಹಿಂದೂ ಪರಿಷತ್ ಸ್ವಾಮೀಜಿಗಳಾದ ವೆಂಕಟೇಶ್ ಆಚಾರಿ, ಸಂಸದ ಮುನಿಸ್ವಾಮಿ, ಮಂಗಳೂರು ಮೂಲದ ಶರತ್ ಪಂಪೆ. ಧರ್ಮ ಪ್ರಚಾರಕಿ ಹಾರಿಕ ಮಂಜುನಾಥ್ ಭಾಗಿಯಾಗಿದ್ದರು. ಕಾರ್ಯಕ್ರಮದ ವೇದಿಕೆ ಭಾಷಣದಲ್ಲಿ ಮಾತನಾಡಿದ ಸಂಸದ ಮುನಿಸ್ವಾಮಿ, ಕೋಲಾರ (Kolar) ನಗರದ ಕ್ಲಾಕ್ ಟವರ್ (Clock Tower)‌ ನಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ಹಾರಿಸಿಯೇ ತೀರುತ್ತೇವೆ ಎಂದು ಎಚ್ಚರಿಕೆ ನೀಡಿದ್ದಾರೆ.

ನಮ್ಮ ಕ್ಲಾಕ್ ಟವರ್ ಪಾಕಿಸ್ತಾನದ (Pakistan) ಗಡಿಯಲ್ಲಿ ಇಲ್ಲ, ನಾವು ಯಾವುದಕ್ಕು ಹೆದರಲ್ಲ, ಶಿವಮೊಗ್ಗದ ಹರ್ಷನ ಸಾವು ಹಲವರು ನೋಡಿದ್ದು, ಯಾರು ಸಹಕಾರಕ್ಕೆ ಧಾವಿಸಿಲ್ಲ, ಮುಂದೆ ಯಾವುದೇ ಹರ್ಷ ನಿಸ್ಸಾಯಕರಾಗಿ ಸಾವನ್ನಪ್ಪಬಾರದು, ಹಿಂದೂ ಧರ್ಮದ ರಕ್ಷಕರಾಗಿ ಎಲ್ಲರು ಛತ್ರಪತಿ ಶಿವಾಜಿಯಂತೆ ಹೋರಾಡಬೇಕಿದೆ ಎಂದಿದ್ದಾರೆ.

ಸಂಸದರ ತಗ್ಗೆದೆಲೆ ಡೈಲಾಗ್

ಮುಳಬಾಗಿಲು ಪಟ್ಟಣದಲ್ಲಿ ಆಯೋಜಿಸಿದ್ದ ಶೋಭಾಯಾತ್ರೆ ಕಾರ್ಯಕ್ರಮಕ್ಕು ಕೆಲವರು ಅಡ್ಡಗಾಲು ಹಾಕಿದ್ದಾರೆ, ಕೇಂದ್ರ ಹಾಗು ರಾಜ್ಯದಲ್ಲು ನಮ್ಮದೇ ಸರ್ಕಾರ ಇದೆ ಎನ್ನುತ್ತಾ, ತಗ್ಗೇದೆ.. ಲೇ,, ಎನ್ನುವ ಪುಷ್ಪ ಸಿನಿಮಾದ ಡೈಲಾಗ್ ಸಂಸದರು ಎರಡು ಭಾರಿ  ಹೇಳುತ್ತಿದ್ದಂತೆ, ವೇದಿಕೆ ಎದುರಿದ್ದ ಸಾವಿರಾರು ಯುವಕರು ಹುಚ್ಚೆದ್ದು ಕುಣಿದಿದ್ದು, ಕಾರ್ಯಕ್ರಮದ ಉದ್ದಕ್ಕೂ ಜನರು ಮೋದಿ ಮೋದಿ ಘೋಷಣೆ ಹಾಕಿದ್ದು ಕಂಡುಬಂತು.

ಶೋಭಾಯಾತ್ರೆ ಕಾರ್ಯಕ್ರಮದಲ್ಲಿ ಸಾವಿರಾರು ಯುವಕರು ಭಾಗಿ.

ಮುಳಬಾಗಿಲು ನಗರದಲ್ಲಿ ಛತ್ರಪತಿ ಶಿವಾಜಿ ಜಯಂತಿ ಪ್ರಯುಕ್ತ ವಿಶ್ವ ಹಿಂದೂ ಪರಿಷತ್ ಆಯೋಜಿಸಿದ್ದ ಶೋಭಾಯಾತ್ರೆ ಕಾರ್ಯಕ್ರಮದಲ್ಲಿ, ಮುಳಬಾಗಿಲು ಪಟ್ಟಣದಿಂದ ವಿವಿದೆಡೆಯಿಂದ ಆಗಮಿಸಿದ್ದ ಸಾವಿರಾರು ಯುವಕರು ಭಾಗಿಯಾಗಿದ್ದರು, ಹಲವು ವರ್ಷಗಳ ಬಳಿಕ ಹಿಂದೂಪರ ಸಂಘಟನೆಗಳು ಶೋಭಾಯಾತ್ರೆ ಕಾರ್ಯಕ್ರಮ ಆಯೋಜಿಸಿದ್ದು, ಇದೇ ಮೊದಲ ಭಾರಿಗೆ ದೊಡ್ಡ ಸಂಖ್ಯೆಯಲ್ಲಿ ಯುವಕರು ಭಾಗಿಯಾಗಿದ್ದರು ಎನ್ನಲಾಗಿದೆ.

ಡಿಜೆ ಹಾಡುಗಳಿಗೆ ಹೆಜ್ಜೆ ಹಾಕಿದ ಯುವಕರು

ಮುಳಬಾಗಿಲು ನಗರದ ಪ್ರಮುಖ ರಸ್ತೆಯಲ್ಲಿ ಸಾಗಿದ ಛತ್ರಪತಿ ಶಿವಾಜಿ ಸ್ತಬ್ತದ ಹಿಂಭಾಗದಲ್ಲಿ, ಯುವಕರು ಡಿ.ಜೆ ಹಾಡುಗಳಿಗೆ ಕುಣಿದು ಕುಪ್ಪಳಿಸಿದರು,.

ಇದನ್ನೂ ಓದಿ: Shocking: ಅಪರಾಧದ ಕಥೆ ಓದಿ ಹಾಲಿವುಡ್ ಶೈಲಿಯಲ್ಲಿ ಕಳ್ಳತನ! ಮಠದ ಸ್ವಾಮೀಜಿ ಲಾಕರ್ ಮುಟ್ಟದೇ ಬಂದ ಕಳ್ಳರು!

ಸಾವಿರಾರು ಯುವಕರ ಜೊತೆಗೂಡಿದ ಸಂಸದ ಮುನಿಸ್ವಾಮಿ, ಯುವಕರ ಜೊತೆಗೂಡಿ ಶೋಭಾಯಾತ್ರೆ ಮೆರವಣಿಗೆಯಲ್ಲಿ ಭಾಗಿಯಾಗಿ ಬೆಂಬಲ ಸೂಚಿಸಿದರು, ಇನ್ನು ಕಾರ್ಯಕ್ರಮದಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸ್ ಬಿಗಿ ಬಂದೋಬಸ್ತ್ ಆಯೋಜಿಸಲಾಗಿತ್ತು.

ಅಂಗಡಿ ಮುಂಗಟ್ಟು ಬಂದ್

ಶೋಭಾಯಾತ್ರೆ ಮೆರವಣಿಗೆ ಸಾಗುವ ಮಾರ್ಗದಲ್ಪಿ ಅಂಗಡಿ ಮುಂಗಟ್ಟುಗಳನ್ನು ಪೊಲೀಸರು ಬಂದ್ ಮಾಡಿಸಿದ್ದು, ಮುಳಬಾಗಿಲು ಪಟ್ಟಣದ ಹೊರವಲಯದಲ್ಲಿನ ಅಂಗಡಿಗಳನ್ನ ವ್ಯಾಪಾರಿಗಳು ಸ್ವಯಂ ಪ್ರೇರಿತರಾಗಿ ಮುಚ್ಚಿ ಶೋಭಾಯಾತ್ರೆಗೆ ಬೆಂಬಲ ಸೂಚಿಸಿದರು.

ಇದನ್ನೂ ಓದಿ: Honeymoonಗೆ ಪ್ಲಾನ್​ ಮಾಡಿದ್ರೆ ಈ ತಾಣಗಳು ಬೆಸ್ಟ್​ ಅಂತೆ

ಇನ್ನು ಮುಳಬಾಗಿಲು ಪಟ್ಟಣದಲ್ಲಿ ಒಂದು ದಿನದ ಮಟ್ಟಿಗೆ ಮಧ್ಯ ಮಾರಾಟವನ್ನ ಅಬಕಾರಿ ಇಲಾಖೆ ನಿಷೇದಿಸಿದ್ದು, ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಪೊಲೀಸರು ಭದ್ರತೆ ಒದಗಿಸಿ ಯಶಸ್ವಿಯಾದರು.
Published by:Divya D
First published: