Viral Video: ಕುಡಿದ ಮತ್ತಿನಲ್ಲಿ ವದ್ಧನ ನಿರ್ದಯವಾಗಿ ಥಳಿಸಿದ ಕಾನ್​ಸ್ಟೇಬಲ್, ವೈರಲ್ ಆಯ್ತು ವಿಡಿಯೋ

ಮಧ್ಯಪ್ರದೇಶದ ಜಬಲ್‌ಪುರ ರೈಲು ನಿಲ್ದಾಣದಲ್ಲಿ ವೃದ್ಧನೊಬ್ಬನ ಮೇಲೆ ಥಳಿಸಿದ ಆರೋಪದ ಹಿನ್ನಲೆಯಲ್ಲಿ ಪೊಲೀಸ್ ಪೇದೆ ವಿರುದ್ಧ ಮಹತ್ವದ ಕ್ರಮ ಕೈಗೊಂಡು ಅವನ್ನು ಅಮಾನತುಗೊಳಿಸಲಾಗಿದೆ.

ಪೋಲಿಸ್ ಪೇದೆ ವೃದ್ಧನನ್ನು ಥಳಿಸುತ್ತಿರುವ ದೃಶ್ಯ

ಪೋಲಿಸ್ ಪೇದೆ ವೃದ್ಧನನ್ನು ಥಳಿಸುತ್ತಿರುವ ದೃಶ್ಯ

  • Share this:
ಮಧ್ಯಪ್ರದೇಶದ (Madya Pradesh)  ಜಬಲ್‌ಪುರ (Jabalpur) ರೈಲ್ವೆ ನಿಲ್ದಾಣದಲ್ಲಿ (Railway Station) ಪೊಲೀಸ್ ಪೇದೆಯೊಬ್ಬರು (Police Constable) ಕುಡಿದ ಅಮಲಿನಲ್ಲಿ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ ವಯೋವೃದ್ಧನ (Old Man) ಮೇಲೆ ಅಮಾನುಷವಾಗಿ ಥಳಿಸಿದ ವಿಡಿಯೋ ವೈರಲ್  (Viral Video) ಆಗಿದೆ. ಇದಾದ ನಂತರ ರೈಲ್ವೆ ಆಡಳಿತದಲ್ಲಿ ಘಟನೆಯ ಕುರಿತು ಸಂಚಲನ ಉಂಟಾಗಿತ್ತು. ವಿಚಾರಣೆಯಲ್ಲಿ ಜಬಲ್‌ಪುರ ರೈಲ್ವೇ ಪ್ಲಾಟ್‌ಫಾರ್ಮ್ ಸಂಖ್ಯೆ-5 ರಲ್ಲಿ ನಡೆದ ಘಟನೆ ಎಂದು ತಿಳಿದು ಬಂದಿದೆ. ಮಾಹಿತಿ ಪ್ರಕಾರ ರೇವಾ (Reva) ಎಸ್ಪಿ ತಕ್ಷಣ ಹಲ್ಲೆ ನಡೆಸಿದ ಪೊಲೀಸ್ ಪೇದೆ ಅನಂತ್ ಶರ್ಮಾ (Ananth Sharma) ಅವರನ್ನು ಅಮಾನತುಗೊಳಿಸಿದ್ದಾರೆ.

ಮಧ್ಯಪ್ರದೇಶದ ಜಬಲ್‌ಪುರ ರೈಲು ನಿಲ್ದಾಣದಲ್ಲಿ ವೃದ್ಧನೊಬ್ಬನ ಮೇಲೆ ಥಳಿಸಿದ ಆರೋಪದ ಹಿನ್ನಲೆಯಲ್ಲಿ ಪೊಲೀಸ್ ಪೇದೆ ವಿರುದ್ಧ ಮಹತ್ವದ ಕ್ರಮ ಕೈಗೊಳ್ಳಲಾಗಿದೆ. ವಾಸ್ತವವಾಗಿ, ರೈಲ್ವೇ ನಿಲ್ದಾಣದ ಪ್ಲಾಟ್‌ಫಾರ್ಮ್‌ನಲ್ಲಿ ವೃದ್ಧನ ಮೇಲೆ ಕಾನ್‌ಸ್ಟೆಬಲ್ ಅಮಾನುಷವಾಗಿ ಹಲ್ಲೆ ನಡೆಸಿದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ತೀವ್ರವಾಗಿ ವೈರಲ್ ಆಗುತ್ತಿದೆ. ಈ ವಿಡಿಯೋ ವೈರಲ್ ಆದ ನಂತರ ರೈಲ್ವೆ ಆಡಳಿತದಲ್ಲಿ ಸಂಚಲನ ಮೂಡಿತ್ತು. ಬುಧವಾರ ಈ ಘಟನೆ ನಡೆದಿದೆ.

ಇದನ್ನೂ ಓದಿ: Man v/s Donkey: ಕತ್ತೆಗೆ ಪದೇ ಪದೇ ಥಳಿಸಿ, ತನ್ನ ಕರ್ಮದ ಫಲ ಅಲ್ಲೇ ಪಡೆದ ವ್ಯಕ್ತಿ! ವೈರಲ್ ವಿಡಿಯೋ ನೀವೂ ನೋಡಿ

ಅಮಲಿನ ಮತ್ತಿನಲ್ಲಿದ್ದ ವೃದ್ದ
ಜಬಲ್ ಪುರದ ರೈಲ್ಚೆ ನಿಲ್ದಾಣದಲ್ಲಿ ವೃದ್ಧನೊಬ್ಬ ಕುಡಿದ ಅಮಲಿನಲ್ಲಿದ್ದು ಅವನು ನಿಲ್ದಾಣದಲ್ಲಿ ಅನುಚಿತವಾಗಿ ವರ್ತಿಸಿದ್ದಾನೆ ಎಂದು ತಿಳಿದುಬಂದಿದೆ. ಇದನ್ನು ಕಂಡ ಪೋಲಿಸ್ ಪೇದೆ ವೃದ್ಧನ ಮೇಲೆ ಸಿಟ್ಟುಗೊಂಡು ಅವನ ಮೇಲೆ ಕ್ರೂರವಾಗಿ ತಳಿಸಿದ್ದಾರೆ.

ವೀಡಿಯೋ ವೈರಲ್
ಪೋಲಿಸ್ ಕಾನ್ಸ್ಟೇಬಲ್ ವೃದ್ಧನನ್ನು ಥಳಿಸುತ್ತಿರುವ ದೃಶ್ಯವನ್ನು ಯಾರೋ ಒಬ್ಬ ಪ್ರಯಾಣಿಕ ಸರೆಹಿಡಿದು ಸಾಮಾಜಿಕ ಮಾದ್ಯಮದಲ್ಲಿ ಹಂಚಿಕೊಂಡಿದ್ದಾನೆ. ವೀಡಿಯೋದಲ್ಲಿ ವೃದ್ಧನ ಮೇಲೆ ಪೇದೆ ಪದೇ ಪದೇ ಒದೆಯುವುದನ್ನು ಗಮನಿಸಬಹುದು ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆ ಘಟನೆಯು ತೀವ್ರರೂಪವನ್ನು ಪಡೆದಿದೆ.

ವೀಡಿಯೋ ಇಲ್ಲಿದೆ ನೋಡಿ

https://youtu.be/T76gDt6HDuU

ಆರೋಪಿ ಕಾನ್ಸ್ಟೇಬಲ್ ರೇವಾ ನಿವಾಸಿ
ಘಟನೆಯ ಕುರಿತಾದ ಸುದ್ದಿ ಹಬ್ಬುತಿದ್ದಂತೆ ರೈಲ್ವೇ ಪೊಲೀಸರು ಈ ಕುರಿತು ತನಿಖೆ ಆರಂಭಿಸಿದರು ಮತ್ತು ಆರೋಪಿ ಕಾನ್‌ಸ್ಟೆಬಲ್ ರೇವಾ ನಿವಾಸಿ ಅನಂತ್ ಶರ್ಮಾ ಎಂದು ತಿಳಿದು ಬಂದಿದೆ.  ವೃದ್ಧನ ಹೆಸರು ಗೋಪಾಲ್ ಪ್ರಸಾದ್ ಎಂದು ತಿಳಿದಿದೆ.

ಪೋಲಿಸ್ ಪೇದೆಯ ಅಮಾನತು
ವಿಷಯ ಗಂಭೀರವಾಗುತ್ತಿರುವುದನ್ನು ಕಂಡ ನಂತರ, ಕಾನ್‌ಸ್ಟೆಬಲ್ ಯಾರೂ ಎಂದು ಖಚಿತಪಡಿಸಿಕೊಂಡು ನಂತರ ಪೊಲೀಸರು ಕಾನ್ಸ್ಟೇಬಲ್ ಮೇಲೆ ತಕ್ಷಣವೇ ಗಮನಹರಿಸಿ ಅವರ ವಿರುದ್ಧ ಕ್ರಮ ಕೈಗೊಂಡರು. ಮಾಹಿತಿ ಪ್ರಕಾರ ರೇವಾ ಎಸ್ಪಿ ತಕ್ಷಣ ಹಲ್ಲೆ ನಡೆಸಿದ ಪೊಲೀಸ್ ಪೇದೆ ಅನಂತ್ ಶರ್ಮಾ ಅವರನ್ನು ಅಮಾನತುಗೊಳಿಸಿದ್ದಾರೆ.

ಆರೋಪಿ ಕಾನ್ಸ್ ಟೇಬಲ್ ವಿಚಾರಣೆ
ಘಟನೆಯ ನಂತರ ತಕ್ಷಣವೇ ಪೋಲಿಸರು ಆರೋಪಿ ಕಾನ್ಸ್ಟೇಬಲ್ ಅನಂತ್ ಶರ್ಮಾನನ್ನು ವಿಚಾರಣೆಗೆ ಒಳಪಡಿಸಿದರು. ವಿಚಾರಣೆಯಿಂದ ದೊರೆತ ಮಾಹಿತಿಯ ಪ್ರಕಾರ, ವೃದ್ಧ ಆತನೊಂದಿಗೆ ಅನುಚಿತವಾಗಿ ವರ್ತಿಸುತ್ತಿದ್ದು, ನಿಲ್ದಾಣದಲ್ಲಿದ್ದ ಆತನ ಸಹ ಪ್ರಯಾಣಿಕರು ಕೂಡ ಅಮಲೇರಿದ ಸ್ಥಿತಿಯಲ್ಲಿದ್ದರು ಎಂದು ತಿಳಿದು ಬಂದಿದೆ.

ಇದನ್ನೂ ಓದಿ: Vampire Queen: ಇವಳು ರಾಣಿಯಲ್ಲ, ರಾಕ್ಷಸಿ! ಬರೋಬ್ಬರಿ 600ಕ್ಕೂ ಹೆಚ್ಚು ಹುಡುಗಿಯರನ್ನು ಕೊಂದು ಅವರ ರಕ್ತದಲ್ಲಿ ಸ್ನಾನ ಮಾಡುತ್ತಿದ್ದಳು!

ಘಟನೆಯ ಕುರಿತು ಹೆಚ್ಚಿನ ವಿಚಾರಣೆ ನಡೆಸುತ್ತಿರುವ ಪೋಲಿಸ್
"ನಾವು ಈ ವಿಷಯದ ಬಗ್ಗೆ ತನಿಖೆಯನ್ನು ಪ್ರಾರಂಭಿಸಿದ್ದೇವೆ ಮತ್ತು ಜಿಅರ್ ಪಿ(GRP) ತಂಡವು ಕಾನ್‌ಸ್ಟೆಬಲ್‌ನನ್ನು ವಿಚಾರಣೆ ನಡೆಸುತ್ತಿದೆ" ಎಂದು ಹಿರಿಯ ಪೊಲೀಸ್ ಅಧಿಕಾರಿಗಳು ತಿಳಿಸಿದ್ದಾರೆ.
Published by:Nalini Suvarna
First published: