Trending| ಸಹೋದರಿಗೆ ಹೆಣ್ಣು ಮಗು ಹುಟ್ಟಿದ್ದಕ್ಕೆ ಉಚಿತ ಪೆಟ್ರೋಲ್ ನೀಡಿದ ಕಲಿಯುಗ ಕರ್ಣ!

ದೀಪಕ್ ತನ್ನ ಪಂಪ್‌ನಲ್ಲಿ ಜನದಟ್ಟಣೆಯ ಸಮಯದಲ್ಲಿ ಆಫರ್ ನೀಡುವುದಕ್ಕೆ ತೀರ್ಮಾನಿಸಿದರು. 100 ರೂಪಾಯಿ ಪೆಟ್ರೋಲ್ ಖರೀದಿಸುವವರಿಗೆ ಐದು ಶೇಕಡಾ ಮತ್ತು 200-500 ರೂಪಾಯಿ ಖರೀದಿಗೆ ಶೇಕಡಾ 10 ರಷ್ಟು ಹೆಚ್ಚುವರಿ ನೀಡಲಾಗಿದೆ.

ಸಾಂದರ್ಭಿಕ ಚಿತ್ರ.

ಸಾಂದರ್ಭಿಕ ಚಿತ್ರ.

  • Share this:

    ಇನ್ನು ಹಳ್ಳಿ ಕಡೆಗಳಲ್ಲಿ ಹೆಣ್ಣು ಮಗು ಹುಟ್ಟಿದರೆ ಬೇಸರ ಮಾಡಿಕೊಳ್ಳುವ ಜನರಿದ್ದಾರೆ. ಗಂಡು ಮಗು ಹುಟ್ಟಿದರೆ ಅವರಿಗೆ ಎಲ್ಲಿಲ್ಲದ ಸಂತೋಷ, ಸಂಭ್ರಮ, ಆದರೆ ಮಧ್ಯಪ್ರದೇಶದಲ್ಲಿ (MadyaPradesh) ವ್ಯಕ್ತಿಯೊಬ್ಬ ತನ್ನ ಸಹೋದರಿಗೆ ಹೆಣ್ಣು ಮಗು ಆಗಿರುವ ಸುದ್ದಿ ಕೇಳಿ ಅದನ್ನು ಸಂತೋಷದಿಂದ ಆಚರಿಸಲು ಎಲ್ಲಾ ವಾಹನ ಸವಾರರಿಗೆ ಪೆಟ್ರೋಲ್ ಉಚಿತವಾಗಿ ನೀಡಿದ್ದಾರೆ. ಬೆತುಲ್ (Betul) ಜಿಲ್ಲೆಯ ಪೆಟ್ರೋಲ್ ಪಂಪ್ (Petrol Bunk) ಮಾಲೀಕರು ತಮ್ಮ ಕುಟುಂಬದಲ್ಲಿ ಹೆಣ್ಣು ಮಗುವಿನ ಜನನವನ್ನು ಆಚರಿಸಲು ಉಚಿತ ಪೆಟ್ರೋಲ್ ನೀಡಿದ್ದು, ನಿಜಕ್ಕೂ ವಿಶೇಷವಾಗಿದೆ ಎಂದು ಹೇಳಬಹುದು. ದೀಪಕ್ ಸೈನಾನಿ ಎಂಬ ವ್ಯಕ್ತಿಯು ತನ್ನ ಸಹೋದರಿ ಶಿಖಾ ಪೊರ್ವಾಲ್ ಅವರಿಗೆ ಹೆಣ್ಣು ಮಗುವೊಂದು ಅಕ್ಟೋಬರ್ 9 ರಂದು ಜನಿಸಿದೆ.


    ಅವರ ಸಹೋದರಿಗೆ ಹೆಣ್ಣು ಮಗು ಹುಟ್ಟಿದ್ದನ್ನು ವಿಶಿಷ್ಟ ರೀತಿಯಲ್ಲಿ ಆಚರಿಸಲು ಬಯಸಿದ್ದರು. ಈ ವರ್ಷದ ಮಾರ್ಚ್‌ನಲ್ಲಿ ಪೆಟ್ರೋಲ್ ಪಂಪ್ ತೆರೆದ ನಂತರ ತನ್ನ ಗ್ರಾಹಕರಿಗೆ ಮರಳಿ ನೀಡುವ ಅವಕಾಶವನ್ನು ಅವನು ಬಯಸಿದರೂ, ನವರಾತ್ರಿಯ ಶುಭ ದಿನಗಳಲ್ಲಿ ಹೆಣ್ಣು ಮಗುವಿನ ಆಗಮನವು ದೀಪಕ್‌ಗೆ ಸೂಕ್ತ ಅವಕಾಶದಂತೆ ಒದಗಿ ಬಂದಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.


    ಇದೂ ಸಹ ಒಂದು ಮಾರ್ಕೆಟಿಂಗ್ ತಂತ್ರ:

    ದೀಪಕ್ ಮೊದಲಿಗೆ ಹಿಂಜರಿದರೂ, ಜನರು ಇದನ್ನು ಅಗ್ಗದ ಮಾರ್ಕೆಟಿಂಗ್ ತಂತ್ರ ಎಂದು ಭಾವಿಸುತ್ತಾರೆಯೇ ಎಂದು ಅವರು ಈ ಆಲೋಚನೆಯಿಂದ ಹಿಂಜರಿಯಲು ಪ್ರಯತ್ನಿಸಿದರೂ ಹಾಗೆಯೆ ಮುಂದುವರಿದರು. "ಜನರು ಇದನ್ನು ಅಗ್ಗದ ಪ್ರಚಾರದ ಸ್ಟಂಟ್ ಎಂದು ಭಾವಿಸುವುದು ನನಗೆ ಇಷ್ಟವಿರಲಿಲ್ಲ, ಅದಕ್ಕಾಗಿಯೇ ನಾನು ಸ್ವಲ್ಪ ಸಮಯದವರೆಗೆ ಆಲೋಚನೆ ಮಾಡಿದೆ. ಆದರೆ ನಂತರ ಅದನ್ನು ಮುಂದುವರಿಸಲು ನಿರ್ಧರಿಸಿದೆ, ಏಕೆಂದರೆ ನನ್ನ ಚಿಂತನೆ ಮಹತ್ವದ್ದಾಗಿದೆ" ಎಂದು ಅವರು ಸುದ್ದಿ ಮಾಧ್ಯಮಕ್ಕೆ ತಿಳಿಸಿದರು.


    ದೀಪಕ್ ಆವಾಗಲೇ ನವರಾತ್ರಿಯ ಅಷ್ಟಮಿ, ನವಮಿ ಮತ್ತು ದಸರಾ ಹಬ್ಬದ ದಿನಗಳಲ್ಲಿ ಕ್ರಮವಾಗಿ ಈ ವರ್ಷ 13, 14 ಮತ್ತು 15 ರಂದು ಅವರು ಹಾಕುವ ಪೆಟ್ರೋಲ್ ಮೇಲೆ 5 ರಿಂದ 10 ಪ್ರತಿಶತ ಹೆಚ್ಚುವರಿ ಪೆಟ್ರೋಲ್ ನೀಡಲು ನಿರ್ಧರಿಸಿದರು. ಆಫರ್ ಬಗ್ಗೆ ಗ್ರಾಹಕರಿಗೆ ತಿಳಿಸಲು ಒಂದು ಸೂಚನಾ ಫಲಕವನ್ನು ಸಹ ಹಾಕಲಾಗಿತ್ತು.


    ಇದನ್ನೂ ಓದಿ: Two-Headed Turtle: ಎರಡು ತಲೆಯ, ಆರು ಕಾಲಿನ ಅಪರೂಪದ ಆಮೆ ಮರಿ ಪತ್ತೆ!

    ದೀಪಕ್ ತನ್ನ ಪಂಪ್‌ನಲ್ಲಿ ಜನದಟ್ಟಣೆಯ ಸಮಯದಲ್ಲಿ ಆಫರ್ ನೀಡುವುದಕ್ಕೆ ತೀರ್ಮಾನಿಸಿದರು. 100 ರೂಪಾಯಿ ಪೆಟ್ರೋಲ್ ಖರೀದಿಸುವವರಿಗೆ ಐದು ಶೇಕಡಾ ಮತ್ತು 200-500 ರೂಪಾಯಿ ಖರೀದಿಗೆ ಶೇಕಡಾ 10 ರಷ್ಟು ಹೆಚ್ಚುವರಿ ನೀಡಲಾಗಿದೆ. ದೀಪಕ್ ಸುದ್ದಿ ಮಾಧ್ಯಮಕ್ಕೆ "ನಾನು ಬೆಳಿಗ್ಗೆ 9 ರಿಂದ 11 ಮತ್ತು ಸಂಜೆ 5 ರಿಂದ 7ರ ನಡುವೆ ಗರಿಷ್ಠ ಗ್ರಾಹಕರ ಸಂಖ್ಯೆಯನ್ನು ಗಮನಿಸಿದ್ದೇನೆ ಮತ್ತು ಈ ಸಮಯದಲ್ಲಿ ಹೆಚ್ಚುವರಿ 5 ರಿಂದ 10 ಶೇಕಡಾವನ್ನು ನೀಡಲು ನಿರ್ಧರಿಸಿದೆ" ಎಂದು ಹೇಳಿದರು.


    ತಂಗಿಗೆ ಪೆಟ್ರೋಲ್ ಉಡುಗೊರೆ:

    ತನ್ನ ಸಹೋದರನೊಂದಿಗೆ ಜಂಟಿಯಾಗಿ ಪಂಪ್ ಹೊಂದಿರುವ ದೀಪಕ್ ಪ್ರಕಾರ, ಈ ಕೆಲಸ ಮಾಡಿದ್ದು ತನ್ನ ತಂಗಿಗೆ ಉಡುಗೊರೆಯಾಗಿತ್ತು. ಹೆಣ್ಣು ಮಗುವಿನ ಜನನವನ್ನು ಆಚರಿಸುವುದು ಇತ್ತೀಚೆಗೆ ಸಾಮಾನ್ಯ ಸಂಗತಿಯಾಗಿದೆ. ಈ ವರ್ಷದ ಏಪ್ರಿಲ್‌ ನಲ್ಲಿ ನವಜಾತ ಮಗಳಿಗೆ ರಾಜಸ್ಥಾನದ ಹಳ್ಳಿಯಲ್ಲಿ ಅಸಾಮಾನ್ಯ ಸ್ವಾಗತವನ್ನು ನೀಡಲಾಯಿತು ಮತ್ತು ಹೆಲಿಕಾಪ್ಟರ್‌ನಲ್ಲಿ ಮನೆಗೆ ಕರೆತಂದರು.


    ಇದನ್ನೂ ಓದಿ: Flipkart: ಇಯರ್​​ಫೋನ್ ಆರ್ಡರ್ ಮಾಡಿದ್ರೆ, ಖಾಲಿ ಡಬ್ಬ ಕಳಿಸಿದ ಫ್ಲಿಪ್​​ಕಾರ್ಟ್; ಟಿವಿ ನಟ ಫುಲ್ ಗರಂ

    ಸುಮಾರು 35 ವರ್ಷಗಳ ನಂತರ ಈ ಕುಟುಂಬದಲ್ಲಿ ಜನಿಸಿದ ಮೊದಲ ಹೆಣ್ಣು ಮಗಳು ಅದಕ್ಕಾಗಿಯೇ ಈ ಆಚರಣೆಯು ಭವ್ಯವಾಗಿತ್ತು. ಆದ್ದರಿಂದ ಈ ಕಾಪ್ಟರ್ ಅನ್ನು ಬಾಡಿಗೆಗೆ ಪಡೆಯಲು ಮತ್ತು ಆಚರಣೆಯನ್ನು ಅದ್ಧೂರಿಯಾಗಿ ಮಾಡಲು ತಂದೆ 4.5 ಲಕ್ಷ ರೂಪಾಯಿ ಖರ್ಚು ಮಾಡಿದ್ದರು.

    Published by:MAshok Kumar
    First published: