(VIDEO): ಚಾರ್ಜರ್ ಕೇಬಲ್ ಕಟ್ ಮಾಡಿದ್ದಕ್ಕೆ ಇಲಿಗೆ ಇಂತಹ ಶಿಕ್ಷೆಯೆ?; ಇದು ರಾಜ್ಯದಲ್ಲೇ ನಡೆದ ಘಟನೆ

ಇಲಿಯನ್ನು ಸರ್ವನಾಶ ಮಾಲು ಇಲಿ ಪಾಷಾಣ ಅಥವಾ ಇತರೆ ವಿಷದ ಮದ್ದುಗಳನ್ನು ಇಡುವುದನ್ನು ನೀಡಿದ್ದೀವಿ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮೊಬೈಲ್ ಚಾರ್ಜರ್​​ನ ಕೇಬಲ್ ಕಟ್ ಮಾಡಿತೆಂದು ಇಲಿಗೆ ಹಿಂಸೆ ನೀಡಿ ವಿಚಿತ್ರವಾಗಿ ಶಿಕ್ಷೆ ನೀಡಿದ್ದಾನೆ.

Vinay Bhat | news18
Updated:February 18, 2019, 10:12 PM IST
(VIDEO): ಚಾರ್ಜರ್ ಕೇಬಲ್ ಕಟ್ ಮಾಡಿದ್ದಕ್ಕೆ ಇಲಿಗೆ ಇಂತಹ ಶಿಕ್ಷೆಯೆ?; ಇದು ರಾಜ್ಯದಲ್ಲೇ ನಡೆದ ಘಟನೆ
ಫೋಟೋ: ಇಲಿಗೆ ಚಿತ್ರಹಿಂಸೆ ನೀಡುತ್ತಿರುವುದು
  • News18
  • Last Updated: February 18, 2019, 10:12 PM IST
  • Share this:
ಬೆಂಗಳೂರು: ಇಲಿಗಳ ಕಾಟ ಅನುಭವಿಸದವರು ಯಾರಿದ್ದಾರೆ ಹೇಳಿ. ಆಹಾರ, ಧಾನ್ಯ, ಬಟ್ಟೆ, ಕಾಗದಿಂದ ಹಿಡಿದು ಎಲ್ಲವನ್ನು ಚಲ್ಲಾಪಿಲ್ಲಿಯಾಗಿ ಮಾಡುವ ಈ ಮೂಷಕ ಕಾಟವನ್ನು ಸಹಿಸಲಾಗುವುದಲ್ಲ. ಮನೆಯ ಯಾವುದೊ ಮೂಲೆಯಲ್ಲಿ ಕುಳಿತುಕೊಂಡು ರಾತ್ರಿಯಾಗುತ್ತಿದ್ದಂತೆ ತನ್ನ ಆಟದಿಂದ ಕಾಟ ನೀಡಲು ಇಲಿ ಆರಂಭಿಸುತ್ತದೆ. ಇದರ ಮುಕ್ತಿಗಾಗಿ ಅನೇಕರು ಇಲಿ ಪಾಷಾಣ ಅಥವಾ ಇತರೆ ವಿಷದ ಮದ್ದುಗಳನ್ನು ಇಡುವುದನ್ನು ನೀಡಿದ್ದೀವಿ. ಆದರೆ, ಇಲ್ಲೊಬ್ಬ ವ್ಯಕ್ತಿ ತನ್ನ ಮೊಬೈಲ್ ಚಾರ್ಜರ್​​ನ ಕೇಬಲ್ ಕಟ್ ಮಾಡಿತೆಂದು ಇಲಿಗೆ ಹಿಂಸೆ ನೀಡಿ ವಿಚಿತ್ರವಾಗಿ ಶಿಕ್ಷೆ ನೀಡಿದ್ದಾನೆ.

ಇಲಿಯನ್ನು ಹೇಗಾದ್ರು ಮಾಡಿ ಹಿಡಿಯಬೇಕೆಂದು ತಂತ್ರರೂಪಿಸಿದ ಈತ, ಕೊನೆಗೂ ಬೋನಿನೊಳಗಡೆ ಸಿಲುಕಿವಂತೆ ಮಾಡಿದ್ದಾನೆ. ತನ್ನ ವಶದಲ್ಲಿರುವ ಇಲಿಯನ್ನ ಅಂಗಾತ ಮಲಗಿಸಿ ನೀರಿನ ಬಾಟಲ್​ಗೆ ಬಿಗಿಯಾಗಿ ಇಲಿಯ 4 ಕಾಲುಗಳನ್ನು ಕಟ್ಟಿಹಾಕಿದ್ದಾನೆ. ಬಳಿಕ ಒಂದು ಕೋಲು ಕೈನಲ್ಲಿ ಹಿಡಿದು ರಾಗಿ ಕಡಿತೀಯಾ..?, ವೈರ್ ಕಡಿತೀಯಾ..?, ಸೋಪ್ ತಿಂತಿಯಾ..? ಎಂದು ಇಲಿಗೆ ಜೋರಾಗಿ ಬಾರಿಸುತ್ತಾನೆ. ನೋವು ತಾಳಲಾರದೆ ಇಲಿ ಚೀರಿದರು ಬಿಡದ ಈತ ಮತ್ತೆ ಮತ್ತೆ ಹೊಡೆಯುತ್ತಾನೆ.

ಇದನ್ನೂ ಓದಿ: ಗೂಗಲ್​ನಲ್ಲಿ ‘ಬೆಸ್ಟ್ ಟಾಯ್ಲೆಟ್ ಪೇಪರ್‘ ಅಂತ ಟೈಪ್ ಮಾಡಿದ್ರೆ ಏನು ತೋರಿಸುತ್ತೆ ಗೊತ್ತಾ..?

ಈ ಘಟನೆ ನಡೆದಿದ್ದು ಬೇರೆ ಯಾವುದೇ ದೇಶ ಅಥವಾ ಬೇರೆ ರಾಜ್ಯದಲ್ಲಲ್ಲ. ಬದಲಾಗಿ ನಮ್ಮ ಕರ್ನಾಟಕ ರಾಜ್ಯದ ಮೈಸೂರಿನಲ್ಲಿ. ಸುಮಾರು ಒಂದು ವರ್ಷದ ಹಿಂದೆ ಈ ಘಟನೆ ನಡೆದಿದ್ದು, ಕನ್ನಡದಲ್ಲೇ ಈ ವಿಡಿಯೋದಲ್ಲಿರುವ ವ್ಯಕ್ತಿ ಇಲಿಗೆ ಚಿತ್ರಹಿಂಸೆ ನೀಡುತ್ತಿದ್ದಾನೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ. ಇಲಿಗಳನ್ನು ಕೊಲ್ಲುವುದು ಕಾನೂನು ಬಾಹಿರ ಅಲ್ಲವಿದ್ದರು, ಪ್ರಾಣಿ ಹಿಂಸೆ ಅಪರಾಧವಲ್ಲವೆ.

ವಿಡಿಯೋ ಕೃಪೆ: ಡೈಲಿ ಮೇಲ್ ವೆಬ್​​ಸೈಟ್​ 
First published:February 18, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...