ಸಾಮಾನ್ಯವಾಗಿ ನಟ-ನಟಿಯರು ಹಾಕಿದಂತಹ ಫ್ಯಾನ್ಸಿ ಉಡುಪುಗಳ ಫೋಟೋವನ್ನು ತೆಗೆಯಲು ಛಾಯಾಗ್ರಾಹಕರ ದಂಡು ಯಾವಾಗಲೂ ನೆರೆದಿರುತ್ತದೆ. ನಟ ನಟಿಯರು ಇಂತಹ ಜಾಗಕ್ಕೆ ಬರುತ್ತಿದ್ದಾರೆ ಅಂತ ಗೊತ್ತಾದರೆ ಸಾಕು ಅವರಿಗಿಂತಲೂ ಮುಂಚಿತವಾಗಿ ಬಂದು ಈ ಛಾಯಾಗ್ರಾಹಕರು ನಿಂತಿರುತ್ತಾರೆ. ಎಲ್ಲಾ ಛಾಯಾಗ್ರಾಹಕರು ಸಿನಿ ನಟ ನಟಿಯರ ವಿಭಿನ್ನ ಬಗೆಯ ಫೋಟೋ ಸೆರೆಹಿಡಿಯಲು ಕಾಯುತ್ತಿರುತ್ತಾರೆ. ಬಾಲಿವುಡ್ನ ಕಿರುತೆರೆ ಹಾಗೂ ಹಿರಿತೆರೆಯಲ್ಲಿ ಖ್ಯಾತಿಯ ಉತ್ತುಂಗಕ್ಕೇರಿರುವ ನಟಿ ಮೌನಿ ರಾಯ್ ತಮ್ಮ ಬಿಕಿನಿ ಫೋಟೋಗಳು ಮತ್ತು ಡ್ಯಾನ್ಸ್ ಫೋಸ್ಗಳಿಂದ ಸಖತ್ ವೈರಲ್ ಆಗುತ್ತಿದ್ದರು. ನಟಿ ತಮ್ಮ ಇನ್ಸ್ಟಾಗ್ರಾಮ್ ನಿಂದ ಸಖತ್ ಫೇಮಸ್ ಆಗಿದ್ದು ತಮ್ಮ ಫೋಟೋಗಳಿಂದ ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ತಮ್ಮ ದಿರಿಸಿನ ಕಾರಣದಿಂದ ತೀವ್ರ ಮುಜುಗರಕ್ಕೊಳಕ್ಕಾದ ನಟಿಯ ವಿಡಿಯೊಗಳು ಇದೀಗ ವೈರಲ್ ಆಗಿದ್ದು ನೆಟ್ಟಿಗರ ಕಾಮೆಂಟ್ಗಳಿಗೆ ತುತ್ತಾಗಿದ್ದಾರೆ.
ಸೆಲೆಬ್ರಿಟಿ ಫೋಟೋಗ್ರಾಫರ್ ವೈರಲ್ ಭಯಾನಿ ತಮ್ಮ ಇನ್ಸ್ಟಾಗ್ರಾಮ್ನಲ್ಲಿ ಮೌನಿಯವರು ವೇಗವಾಗಿ ತಮ್ಮ ಕಾರಿನತ್ತ ಧಾವಿಸುತ್ತಿರುವ ವಿಡಿಯೋವನ್ನು ಹಂಚಿಕೊಂಡಿದ್ದಾರೆ. ಮೌನಿ ಧರಿಸಿದ್ದ ಹಾಲ್ಟರ್ ನೆಕ್ ದಿರಿಸಿನ ಭಾಗ ಕೊಂಚ ತೆರೆದಿದ್ದು ಆಕೆಯ ದೇಹದ ಭಾಗಗಳನ್ನು ತೋರಿಸುವಂತಿದೆ. ಈ ದೃಶ್ಯಗಳು ಕ್ಯಾಮರಾದಲ್ಲಿ ಸೆರೆಯಾಗಿದ್ದು ಮೌನಿ ಮುಜುಗರದ ಸನ್ನಿವೇಶಕ್ಕೆ ಒಳಗಾಗಿದ್ದಾರೆ.
ಅಂಧೇರಿಯ ಟಿಸಿರೀಸ್ ಕಚೇರಿಯ ಮುಂಭಾಗದಲ್ಲಿ ತನ್ನ ಅಭಿಮಾನಿಗಳಿಗೆ ಹಾಗೂ ಛಾಯಾಗ್ರಾಹಕರಿಗೆ ಮೌನಿ ಫೋಟೋಗಳಿಗೆ ಫೋಸ್ ನೀಡುತ್ತಿರುವುದು ವಿಡಿಯೋದಲ್ಲಿ ಸೆರೆಯಾಗಿದೆ. ವಿಡಿಯೋದಲ್ಲಿ ಸೆರೆಯಾದ ದೃಶ್ಯದಲ್ಲಿ ಮೌನಿ ತಾವು ಧರಿಸಿದ್ದ ದಿರಿಸಿನಲ್ಲಿ ಅಷ್ಟೊಂದು ಆರಾಮವಾಗಿರಲಿಲ್ಲ ಎಂಬುದು ಬಹಿರಂಗವಾಗಿತ್ತು. ಮೌನಿಯವರು ಪ್ರಿಂಟ್ ಹೊಂದಿರುವ ಫಿಟ್ ಆದ ಹಾಲ್ಟರ್ ನೆಕ್ನ ದಿರಿಸನ್ನು ಧರಿಸಿದ್ದರು. ಆಕೆಯ ಕುತ್ತಿಗೆಯ ಭಾಗಕ್ಕೆ ದಿರಿಸು ಸರಿಯಾಗಿ ಹೊಂದಿಕೊಂಡಿರಲಿಲ್ಲ ಇದರಿಂದ ಮೌನಿ ಫೋಟೋಗೆ ಪೋಸ್ ಕೊಡುವ ಸಂದರ್ಭದಲ್ಲಿ ಕಿರಿಕಿರಿಯನ್ನು ಅನುಭವಿಸುತ್ತಿದ್ದರು ಎಂಬುದು ವ್ಯಕ್ತವಾಗಿದೆ. ಇದರ ನಡುವೆಯೂ ಪೋಟೋಗ್ರಾಫರ್ಗಳು ವಿಡಿಯೋಗ್ರಾಫರ್ಗಳು ಮೌನಿಯವರ ಕಿರಿಕಿರಿಯ ಕ್ಷಣಗಳನ್ನು ಕ್ಲಿಕ್ಕಿಸಿದ್ದು ಇದರಿಂದ ಮೌನಿಯವರ ಅಭಿಮಾನಿಗಳು ಹಾಗೂ ನೆಟ್ಟಿಗರು ಸಾಮಾಜಿಕ ತಾಣದಲ್ಲಿ ಕಾಮೆಂಟ್ಗಳ ಸುರಿಮಳೆಯನ್ನೇ ಸುರಿಸಿದ್ದಾರೆ.
View this post on Instagram
ಮೌನಿಯವರು ಫೋಸ್ ನೀಡುತ್ತಿರುವಾಗ ದಿರಿಸಿನ ಒಂದು ಭಾಗವನ್ನು ಕೂದಲಿನಿಂದ ಇನ್ನೊಂದು ಭಾಗವನ್ನು ಕೈಗಳಿಂದ ಮುಚ್ಚಿದ್ದರು. ಇದನ್ನು ನೋಡಿದ ನೆಟ್ಟಿಗರು ಇಂತಹ ಬಟ್ಟೆಗಳನ್ನು ನಟಿ ಏಕೆ ಧರಿಸುತ್ತಾರೆ ಎಂದು ಪ್ರಶ್ನಿಸಿದ್ದಾರೆ. ನಿಮಗೆ ಆರಾಮದಾಯಕವಲ್ಲದ ಉಡುಪನ್ನು ನೀವು ಏಕೆ ಧರಿಸುತ್ತೀರಿ ಮತ್ತು ಇಂತಹ ಮುಜುಗರಕ್ಕೆ ಏಕೆ ಒಳಗಾಗುತ್ತೀರಿ ಎಂದು ಇನ್ನೊಬ್ಬ ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
'ಲಂಡನ್ ಕಾನ್ಫಿಡೆನ್ಶಿಯಲ್' ವೆಬ್ ಸಿರೀಸ್ ನಲ್ಲಿ ಕೊನೆಯ ಬಾರಿಗೆ ಕಾಣಿಸಿಕೊಂಡ ಮೌನಿ ರಾಯ್, ಬಾಲಿವುಡ್ನ ಬ್ರಹ್ಮಾಸ್ತ್ರ ಚಿತ್ರದಲ್ಲಿ ಆಲಿಯಾ ಭಟ್ ಹಾಗೂ ರಣಬೀರ್ ಕಪೂರ್ ಜೊತೆಗೆ ನಟಿಸಿದ್ದಾರೆ ಈ ಚಿತ್ರ ಮುಂಬರುವ ದಿನಗಳಲ್ಲಿ ಬಿಡುಗಡೆಯಾಗಲಿದೆ.ಅವರು ಅಯಾನ್ ಮುಖರ್ಜಿ ನಿರ್ದೇಶನದ ಚಿತ್ರದಲ್ಲಿ ದಮಯಂತಿ ಪಾತ್ರವನ್ನು ಸಹ ನಿರ್ವಹಿಸಲಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ