HOME » NEWS » Trend » MOTOR VEHICLE ACT DETAILS HERE IS YOU SHOULD KNOW ABOUT ACCIDENT POLICY CLAIM STG SCT

ಕಾರು ಅಪಘಾತವಾದಾಗ ಗಾಯಾಳುವಿಗೆ ಪರಿಹಾರ ಹೇಗೆ? ಮೋಟಾರ್‌ ವಾಹನ ಕಾಯ್ದೆಯಲ್ಲೇನಿದೆ?; ಇಲ್ಲಿದೆ ವಿವರ

ಗೋಲ್ಡನ್ ಅವರ್ ಎಂದರೆ ಅಪಘಾತ ನಡೆದು ವ್ಯಕ್ತಿ ಗಾಯಗೊಂಡ ಒಂದು ಗಂಟೆಯೊಳಗಿನ ಅವಧಿ. ಈ ಸಮಯದಲ್ಲಿ ತ್ವರಿತ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಸಾವನ್ನು ತಡೆಗಟ್ಟುವ ಸಾಧ್ಯತೆಯಿದೆ.

news18india
Updated:March 9, 2021, 3:29 PM IST
ಕಾರು ಅಪಘಾತವಾದಾಗ ಗಾಯಾಳುವಿಗೆ ಪರಿಹಾರ ಹೇಗೆ? ಮೋಟಾರ್‌ ವಾಹನ ಕಾಯ್ದೆಯಲ್ಲೇನಿದೆ?; ಇಲ್ಲಿದೆ ವಿವರ
ಸಾಂದರ್ಭಿಕ ಚಿತ್ರ
  • Share this:
ರಸ್ತೆ ಅಪಘಾತಕ್ಕೆ ಕಾರಣವಾದ ಮೋಟಾರು ವಾಹನದ ಚಾಲಕ ಮತ್ತು / ಅಥವಾ ಮಾಲೀಕರು ಗಾಯಗೊಂಡ ವ್ಯಕ್ತಿಗೆ ತಕ್ಷಣದ ವೈದ್ಯಕೀಯ ಚಿಕಿತ್ಸೆ ಪಡೆಯಲು ಎಲ್ಲಾ ಸಮಂಜಸವಾದ ಕ್ರಮಗಳನ್ನು ತೆಗೆದುಕೊಳ್ಳುವ ಅಗತ್ಯವಿದೆ.

"ಗೋಲ್ಡನ್ ಅವರ್" ಎಂದರೇನು?

"ಗೋಲ್ಡನ್ ಅವರ್" ಎಂದರೆ ಅಪಘಾತ ನಡೆದು ವ್ಯಕ್ತಿ ಗಾಯಗೊಂಡ ಒಂದು ಗಂಟೆಯೊಳಗಿನ ಅವಧಿ. ಈ ಸಮಯದಲ್ಲಿ ತ್ವರಿತ ವೈದ್ಯಕೀಯ ಆರೈಕೆಯನ್ನು ನೀಡುವ ಮೂಲಕ ಸಾವನ್ನು ತಡೆಗಟ್ಟುವ ಸಾಧ್ಯತೆಯಿದೆ.

ಗೋಲ್ಡನ್ ಅವರ್ ಸಮಯದಲ್ಲಿ ಕ್ಯಾಶ್‌ಲೆಸ್‌ ಚಿಕಿತ್ಸೆ ಎಂದರೇನು?
ಮೋಟಾರು ವಾಹನ (ತಿದ್ದುಪಡಿ) ಕಾಯ್ದೆ, 2019 ರ ಸೆಕ್ಷನ್ 162 (1) ಗೋಲ್ಡನ್ ಅವರ್‌ನಲ್ಲಿ ರಸ್ತೆ ಅಪಘಾತ ಸಂತ್ರಸ್ತರಿಗೆ ಹಣವಿಲ್ಲದೆ ಚಿಕಿತ್ಸೆ ನೀಡುವ ಯೋಜನೆಯನ್ನು ಒದಗಿಸುತ್ತದೆ.

ಅಪಘಾತ ನಡೆದ ಸಮಯದಲ್ಲಿ ನಿಮ್ಮ ಬಳಿ ವಿಮೆ ಇಲ್ಲದಿದ್ದರೆ..?
ಕಾರು ಮಾಲೀಕರು / ಚಾಲಕರು ಕಾಯಿದೆಯ ಪ್ರಕಾರ ಪರಿಹಾರದ ಜೊತೆಗೆ ಹಕ್ಕು ಪಾವತಿಸಲು ಹೊಣೆಗಾರರಾಗಿದ್ದಾರೆ. ಹೀಗಾಗಿ, ವಿಮಾ ರಕ್ಷಣೆಯನ್ನು ಹೊಂದಿರುವುದು ಅಪಘಾತಕ್ಕೀಡಾದವರಿಗೆ ಯಾವುದೇ ವ್ಯತ್ಯಾಸವನ್ನುಂಟು ಮಾಡುವುದಿಲ್ಲ. ಕಾರು ಮಾಲೀಕರು ತಮ್ಮ ವಿಮಾ ಪಾಲಿಸಿಯಲ್ಲಿ ಕಡ್ಡಾಯ ರಕ್ಷಣೆಯನ್ನು ಹೊಂದಿರಬೇಕು.ನಿಮ್ಮ ವಾಹನವನ್ನು ಸ್ನೇಹಿತ ಅಥವಾ ಚಾಲಕ ಓಡಿಸುತ್ತಿದ್ದರೆ ಅಪಘಾತಕ್ಕೆ ಯಾರು ಹೊಣೆ?
ವಾಹನ ಚಾಲನೆ ಮಾಡುವ ವ್ಯಕ್ತಿಗೆ ಸೆಕ್ಷನ್ 279,337,338 ಮತ್ತು 304 ಎ ಐಪಿಸಿ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುವುದು. ಆದರೆ, 1988 ರ ಮೋಟಾರು ವಾಹನ ಕಾಯ್ದೆ ಅಡಿಯಲ್ಲಿ ದಂಡವನ್ನು ಕಾರು ಮಾಲೀಕರಿಗೆ ವಿಧಿಸಲಾಗುತ್ತದೆ.

ಡ್ರೈವಿಂಗ್ ಲೈಸೆನ್ಸ್‌ ಇಲ್ಲದವರಿಗೆ ನಿಮ್ಮ ವಾಹನವನ್ನು ನೀಡಿದ್ದರೆ..?
ಅಂತಹ ಪರಿಸ್ಥಿತಿಯಲ್ಲಿ ವಾಹನ ಮಾಲೀಕರು ಮತ್ತು ಚಾಲಕರು - ಇಬ್ಬರೂ ಸಹ ಇದರಿಂದ ಸಂಭವಿಸುವ ಡ್ಯಾಮೇಜ್‌ಗಳಿಗೆ ಹೊಣೆಯಾಗುತ್ತಾರೆ. ಅದರ ಜೊತೆಗೆ ಅನ್ವಯವಾಗುವ ಕಾನೂನಿನ ಪ್ರಕಾರ ಪರಿಹಾರವನ್ನೂ ನೀಡಬೇಕಾಗುತ್ತದೆ.

ಬಾಲಾಪರಾಧಿಗಳಿಂದ ಅಪಘಾತ ಸಂಭವಿಸಿದರೆ..?
ಬಾಲಾಪರಾಧಿ ಮಾಡಿದ ಇಂತಹ ಅಪರಾಧಗಳಿಗೆ ವಾಹನದ ಮಾಲೀಕರು ಅಥವಾ ಬಾಲಾಪರಾಧಿಗಳ ಪಾಲಕರು ತಪ್ಪಿತಸ್ಥರೆಂದು ಪರಿಗಣಿಸಲಾಗುತ್ತದೆ. ಆದರೆ, ಮಾಲೀಕರು ಮತ್ತು / ಅಥವಾ ಪಾಲಕರು ತನ್ನ ಅರಿವಿಲ್ಲದೆ ಅಪರಾಧ ಎಸಗಿದ್ದಾರೆಂದು ಸಾಬೀತುಪಡಿಸಿದರೆ ಯಾವುದೇ ಹೊಣೆಗಾರಿಕೆಯು ಮಾಲೀಕರು ಅಥವಾ ಪೋಷಕರ ಮೇಲೆ ಬೀಳುವುದಿಲ್ಲ. ಅಲ್ಲದೆ, ಬಾಲಾಪರಾಧಿಗಳಿಗೆ ಕಾಯಿದೆಯ ಸೆಕ್ಷನ್ 8 ರ ಅಡಿಯಲ್ಲಿ ಕಲಿಯುವ ಚಾಲನಾ ಪರವಾನಗಿ ಅಥವಾ ಎಲ್‌ಎಲ್‌ ನೀಡಲಾಗಿದ್ದರೆ ಮತ್ತು ಕಲಿಯುವವರ ಪರವಾನಗಿಯಡಿಯಲ್ಲಿ ಕಾರ್ಯನಿರ್ವಹಿಸಲು ಅನುಮತಿ ಪಡೆದ ವಾಹನವನ್ನು ಚಾಲನೆ ಮಾಡುತ್ತಿದ್ದರೆ ಹೊಣೆಗಾರಿಕೆಯು ಮಾಲೀಕರ ಮೇಲೆ ಬೀಳುವುದಿಲ್ಲ. ಬಾಲಾಪರಾಧಿಗಳ ಮೇಲೆ ಹೊಣೆಗಾರಿಕೆ / ಉಲ್ಲಂಘನೆಯನ್ನು ನಿಗದಿಪಡಿಸಿದರೆ ಅಂತಹ ಬಾಲಾಪರಾಧಿಗಳಿಗೆ ಕಾಯಿದೆಯ ಪ್ರಕಾರ ಶಿಕ್ಷೆಯಾಗುತ್ತದೆ ಮತ್ತು ಯಾವುದೇ ಪಾಲನಾ ಶಿಕ್ಷೆಯನ್ನು ಬಾಲಾಪರಾಧಿ ನ್ಯಾಯ ಕಾಯ್ದೆ 2000 ರ ಪ್ರಕಾರ ನಿರ್ವಹಿಸಲಾಗುತ್ತದೆ.

ನಾನು ವೈಯಕ್ತಿಕವಾಗಿ ಅಪಘಾತಕ್ಕೊಳಗಾಗಿರುವ ಬಗ್ಗೆ ಹಕ್ಕು ಸಲ್ಲಿಸಿದರೆ, ನಾನು ನ್ಯಾಯಾಲಯಕ್ಕೆ ಹೋಗಬೇಕೇ..?
ನಿಮ್ಮ ವಕೀಲರು ಕೇಸ್‌ ಹಾಕಿದ ಬಳಿಕ ನಿಮ್ಮ ಪ್ರಕರಣವು ಯೋಗ್ಯವೆಂದು ಚಾಲಕರ ವಿಮಾ ಕಂಪನಿ ಒಪ್ಪಿದರೆ, ಮತ್ತು ಆ ಮೊತ್ತವನ್ನು ನೀವು ಇತ್ಯರ್ಥಗೊಳಿಸಲು ಬಯಸಿದರೆ, ನಿಮ್ಮ ಪ್ರಕರಣವು ನ್ಯಾಯಾಲಯಕ್ಕೆ ಹೋಗುವುದಿಲ್ಲ. ಆದರೂ, ಹಕ್ಕು ಇತ್ಯರ್ಥವಾಗದಿದ್ದರೆ, ನ್ಯಾಯಾಲಯದಲ್ಲಿ ಸೂಕ್ತವಾದ ಹಕ್ಕನ್ನು ಸಲ್ಲಿಸಿದರೆ ಪರಿಹಾರ ಸಿಗುತ್ತದೆ.

ಅಪಘಾತ ಸಂತ್ರಸ್ತರಿಗೆ ಪರಿಹಾರ..!
ತನ್ನ ಸಂಬಂಧಿ ಮತ್ತು ರಕ್ತಸಂಬಂಧಿಗಳ ಪ್ರಾಣಹಾನಿ ಸಂದರ್ಭದಲ್ಲಿ ಹಕ್ಕುದಾರನು ಮೋಟಾರು ವಾಹನಗಳ (ತಿದ್ದುಪಡಿ) ಕಾಯ್ದೆ, 2019 ರ ಸೆಕ್ಷನ್ 140 ಅಥವಾ ಸೆಕ್ಷನ್ 163 ಎ ಅಡಿಯಲ್ಲಿ ಪರಿಹಾರವನ್ನು ಪಡೆಯಬಹುದು. ಸೆಕ್ಷನ್ 140 ರ ಅಡಿಯಲ್ಲಿ ಸ್ಥಿರವಾದ ಪರಿಹಾರವನ್ನು ಪಡೆಯಬಹುದು. ಆದರೆ, ಸೆಕ್ಷನ್ 163 ಎ ಅಡಿಯಲ್ಲಿ ಪರಿಹಾರವನ್ನು ಕಾಯ್ದೆಯಡಿ ನಿರ್ಧರಿಸಲಾಗುತ್ತದೆ. ಆದರೆ, 5,00,000 ರೂ. ಪರಿಹಾರವನ್ನು ಸೆಕ್ಷನ್ 163 ಎ ಅಡಿಯಲ್ಲಿ ಮಾತ್ರ ಕ್ಲೈಮ್ ಮಾಡಬಹುದು.

ನನಗೆ ಅಪಘಾತವಾದ ಸಮಯದಲ್ಲಿ ನಾನು ಸೀಟ್ ಬೆಲ್ಟ್ ಧರಿಸದಿದ್ದರೆ..? ಆಗಲೂ ಡ್ಯಾಮೇಜ್‌ಗಳನ್ನು ರಿಕವರ್‌ ಮಾಡಬಹುದೇ..?
ಇದು ಅಪಘಾತ ಸಂಭವಿಸಿದ ರಾಜ್ಯವನ್ನು ಅವಲಂಬಿಸಿರುತ್ತದೆ. ಕೆಲವು ರಾಜ್ಯಗಳಲ್ಲಿ, ನಿರ್ಲಕ್ಷ್ಯದ ಕಾರಣದಿಂದ ಪರಿಹಾರವನ್ನು ನಿರಾಕರಿಸಬಹುದು ಅಥವಾ ಕಡಿಮೆ ಮಾಡಬಹುದು. ಆದರೆ, ಇತರೆ ಇತರ ರಾಜ್ಯಗಳಲ್ಲಿ ಸೀಟ್ ಬೆಲ್ಟ್ ಧರಿಸದ ಕಾರಣ ಪರಿಹಾರವನ್ನು ಕಡಿತಗೊಳಿಸಲಾಗುವುದಿಲ್ಲ

ರಸ್ತೆ ಅಪಘಾತಕ್ಕೀಡಾದವರು ಮೃತಪಟ್ಟರೆ..?
ವಾಹನದ ಚಾಲಕನಿಗೆ ಭಾರತೀಯ ದಂಡ ಸಂಹಿತೆ 1860 ರ ಸೆಕ್ಷನ್ 304 ಎ ಅಡಿಯಲ್ಲಿ ಶಿಕ್ಷೆ ವಿಧಿಸಲಾಗುತ್ತದೆ. ಅಪಘಾತ / ನಿರ್ಲಕ್ಷ್ಯದ ಚಾಲನೆಯಿಂದಾಗಿ ಅಪಘಾತ / ಸಾವು ಸಂಭವಿಸಿದೆ ಎಂದು ಪ್ರಾಸಿಕ್ಯೂಷನ್‌ ವಾದ ಮಾಡಬೇಕಾಗುತ್ತದೆ.

(ಮಾಹಿತಿ: ಪ್ರಾಚಿ ಮಿಶ್ರಾ)

Published by: Sushma Chakre
First published: March 9, 2021, 3:29 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories