Viral Video: ಕೋಪಗೊಂಡ ಮಗುವನ್ನು ಸಂತೈಸಿದ ತಾಯಿಯ ವಿಡಿಯೋ ನಿಮಗೂ ಯೂಸ್‌ ಆಗ್ಬಹುದು

Viral Video: ಪುಟ್ಟ ಹುಡುಗನ ಮೇಲೆ ಕೋಪಗೊಳ್ಳುವ ಬದಲು ಪರಿಸ್ಥಿತಿಯನ್ನು ಶಾಂತವಾಗಿ ನಿರ್ವಹಿಸಿದ್ದಕ್ಕಾಗಿ ಡೆಸ್ಟಿನಿಯನ್ನು ಶ್ಲಾಘಿಸಿದ್ದಾರೆ.

ಸಮಧಾನಪಡಿಸಿದ ತಾಯಿ

ಸಮಧಾನಪಡಿಸಿದ ತಾಯಿ

  • Share this:
ಇತ್ತೀಚೆಗೆ ಸಾಮಾಜಿಕ ಮಾಧ್ಯಮಗಳಲ್ಲಿರುವ ಪುಟಗಳ ಮೇಲೆ ಕಣ್ಣಾಡಿಸುತ್ತಾ ಹೋದಂತೆ ನಾವು ಅಂತರ್ಜಾಲದಲ್ಲಿ ನೂರಾರು ವೈರಲ್ ವಿಡಿಯೋಗಳನ್ನು(Viral video) ಕಾಣುತ್ತೇವೆ. ಅವುಗಳಲ್ಲಿ ಹೆಚ್ಚಿನವುಗಳನ್ನು ನಾವು ನೋಡಿ ಮರುಕ್ಷಣವೇ ಆ ವಿಡಿಯೋವನ್ನು ಮರೆತು ಬಿಡುತ್ತೇವೆ. ಆದರೆ ಕೆಲವು ವಿಡಿಯೋಗಳು ನಮ್ಮ ಹೃದಯಕ್ಕೆ ತುಂಬಾ ಹತ್ತಿರವಾಗುತ್ತವೆ ಮತ್ತು ಅವುಗಳನ್ನು ನೋಡಿದಾಗ ಅದರಿಂದ ಅಮೂಲ್ಯವಾದ (valuable) ಜೀವನದ ಪಾಠ (Lessons)ಕಲಿತಿರುತ್ತೇವೆ. ಇಲ್ಲಿಯೂ ಸಹ ಒಂದು ವಿಡಿಯೋ ತುಣುಕು ತುಂಬಾನೇ ವೈರಲ್ ಆಗಿದ್ದು, ತಾಯಿಯೊಬ್ಬಳು ತನ್ನ ಕೋಪಗೊಂಡ ಮಗುವನ್ನು ಸಹಾನುಭೂತಿ(sympathizes) ತೋರಿಸಿ ಅದರ ಕೋಪವನ್ನು ಕಡಿಮೆ ಮಾಡುತ್ತಾರೆ. ಈ ವಿಡಿಯೋವನ್ನು ನೀವು ತಪ್ಪದೆ ನೋಡಿ, ಏಕೆಂದರೆ ನಾಳೆ ನಿಮ್ಮ ಮನೆಯಲ್ಲಿರುವ ಮಗು (Anger Kid)ಕೋಪಿಸಿಕೊಂಡಾಗ ಅದನ್ನು ಹೊಡೆಯದೆ ಬಡಿಯದೆ, ಅದರ ಮೇಲೆ ರೇಗಾಡದೆ ಹೇಗೆ ಸಮಾಧಾನ ಮಾಡುವುದು ಎಂದು ನಿಮಗೆ ತಿಳಿಯಬಹುದು.

ಹೇಗೆ ಸಮಾಧಾನ ಮಾಡಿದ್ದು
ಈ ವಿಡಿಯೋವನ್ನು ಹಂಚಿಕೊಳ್ಳುವುದರ ಜೊತೆಗೆ ಬರೆಯಲಾದ ಶೀರ್ಷಿಕೆಯಲ್ಲಿ, ಇನ್‌ಸ್ಟಾಗ್ರಾಮ್ ಬಳಕೆದಾರರಾದ ಡೆಸ್ಟಿನಿ ಬೆನೆಟ್ ಕೋಪಗೊಂಡ ಮಗನನ್ನು ಹೇಗೆ ಸಮಾಧಾನ ಮಾಡಿದರು ಮತ್ತು ಅದರಲ್ಲೂ ಆ ಮಗುವಿನೊಂದಿಗೆ ಭಾವನಾತ್ಮಕವಾಗಿ ಮಾತುಗಳನ್ನು ಆಡುವುದರ ಮೂಲಕ ಹೇಗೆ ಸಮಾಧಾನ ಮಾಡಿದರು ಎಂಬುದನ್ನು ನೋಡಬಹುದು.

ಇದನ್ನೂ ಓದಿ: Viral Video: 11 ತಿಂಗಳ ಈ ಪುಟಾಣಿ ಇಡೀ ಚಿಕನ್ ವಿಂಗ್ ತಿಂದು ತೇಗಿದ್ದಾನೆ..ವಿಡಿಯೋ ನೋಡಿ

ಮೂಲತಃ ಟಿಕ್‌ಟಾಕ್‌ನಲ್ಲಿ ಹಂಚಿಕೊಳ್ಳಲಾದ ವಿಡಿಯೋ ಡೆಸ್ಟಿನಿ ತನ್ನ ಮಗನಿಗೆ ಅವಳು ಅವನನ್ನು ಎಷ್ಟು ಪ್ರೀತಿಸುತ್ತಾಳೆ ಎಂದು ಹೇಳುವುದರೊಂದಿಗೆ ಶುರುವಾಗುತ್ತದೆ.

ವಿಡಿಯೋ ನೋಡಿ:
ಕಲಿಯಬೇಕು
ಆ ತಾಯಿ ತನ್ನ ಮಗನಿಗೆ “ಕೆಲವೊಮ್ಮೆ ವಿಷಯಗಳು ನಾವು ಅಂದುಕೊಂಡ ಹಾಗೆ ನಡೆಯುವುದಿಲ್ಲ ಮತ್ತು ಆದ್ದರಿಂದ ನಾವು ಕೋಪಗೊಳ್ಳುತ್ತೇವೆ. ಆದರೆ ನಾವು ಅವುಗಳನ್ನು ಮರೆಯಲು ಕಲಿಯಬೇಕು” ಎಂದು ತುಂಬಾ ಸಮಾಧಾನದಿಂದ ಹೇಳಿದ್ದನ್ನು ನಾವು ವಿಡಿಯೋದಲ್ಲಿ ನೋಡಬಹುದಾಗಿದೆ. ನಂತರ ಡೆಸ್ಟಿನಿ ತನ್ನ ಮಗನನ್ನು ಬಿಗಿಯಾಗಿ ಅಪ್ಪಿಕೊಳ್ಳುವುದರೊಂದಿಗೆ ಈ ವಿಡಿಯೋ ಕೊನೆಗೊಳ್ಳುತ್ತದೆ.

2.7 ಲಕ್ಷ ಜನರು ವೀಕ್ಷಣೆ
ಈ ತಾಯಿ ಮತ್ತು ಮಗನ ಜೋಡಿಯ ನಡುವಿನ ಭಾವನಾತ್ಮಕ ಸಂವಾದವು ನೆಟ್ಟಿಗರಿಂದ ಮೆಚ್ಚುಗೆಯನ್ನು ಮತ್ತು ವೈವಿಧ್ಯಮಯ ಪ್ರತಿಕ್ರಿಯೆಗಳನ್ನು ಪಡೆದಿದೆ. ಈ ವಿಡಿಯೋ ತುಣುಕು 2.7 ಲಕ್ಷ ಜನರು ವೀಕ್ಷಿಸಿದ್ದು, ತಮ್ಮ ಕಾಮೆಂಟ್‌ಗಳನ್ನು ಪೋಸ್ಟ್ ಮಾಡಿದ ಬಳಕೆದಾರರು, ಪುಟ್ಟ ಹುಡುಗನ ಮೇಲೆ ಕೋಪಗೊಳ್ಳುವ ಬದಲು ಪರಿಸ್ಥಿತಿಯನ್ನು ಶಾಂತವಾಗಿ ನಿರ್ವಹಿಸಿದ್ದಕ್ಕಾಗಿ ಡೆಸ್ಟಿನಿಯನ್ನು ಶ್ಲಾಘಿಸಿದ್ದಾರೆ.

ಸ್ಪೂರ್ತಿದಾಯಕ ಕ್ಷಣ
"ತಾಯಿ ಡೆಸ್ಟಿನಿ ತುಂಬಾನೇ ಜಾಣೆ! ಈ ಸ್ಪೂರ್ತಿದಾಯಕ ಕ್ಷಣವನ್ನು ಸೆರೆಹಿಡಿಯಲು ಮತ್ತು ಅದನ್ನು ನಮ್ಮೊಂದಿಗೆ ಹಂಚಿಕೊಂಡಿದ್ದಕ್ಕಾಗಿ ನಮಗೆ ತುಂಬಾ ಸಂತೋಷವಾಗಿದೆ, ಇದರಿಂದ ನಾವೆಲ್ಲರೂ ನಮ್ಮ ಮಕ್ಕಳೊಂದಿಗೆ ಉತ್ತಮವಾಗಿ ನಡೆದುಕೊಳ್ಳಲು ಮತ್ತು ಉತ್ತಮ ಭಾವನಾತ್ಮಕ ಸಂಬಂಧ ಹೊಂದಲು ಈ ವಿಡಿಯೋ ನಿಜಕ್ಕೂ ಸಹಾಯ ಮಾಡಬಹುದು" ಎಂದು ಬಳಕೆದಾರರೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: https://kannada.news18.com/news/lifestyle/how-to-get-adhaar-card-for-your-new-born-baby-ssd-666315.html

ಧನ್ಯವಾದಗಳು
ಇನ್ನೊಬ್ಬರು "ಇದು ತುಂಬಾ ಸುಂದರವಾಗಿತ್ತು, ನನ್ನ ಕಣ್ಣಲ್ಲಿ ಈಗಾಗಲೇ ಕಣ್ಣೀರು ಬರುತ್ತಿದೆ ಇದನ್ನು ನೋಡಿ. ವಿಡಿಯೋ ಹಂಚಿಕೊಂಡಿದ್ದಕ್ಕಾಗಿ ಧನ್ಯವಾದಗಳು" ಎಂದು ಪ್ರತಿಕ್ರಿಯಿಸಿದ್ದಾರೆ. ಈ ವಿಡಿಯೋವನ್ನು ಇದುವರೆಗೆ ಇನ್‌ಸ್ಟಾಗ್ರಾಮ್‌ನಲ್ಲಿ 20,000ಕ್ಕೂ ಹೆಚ್ಚು ಜನರು ಇಷ್ಟ ಪಟ್ಟಿದ್ದಾರೆ. ನಮ್ಮ ನಿರಾಶೆ, ಕೋಪವನ್ನು ಹೆಚ್ಚು ಶಾಂತತೆಯಿಂದ ಪರಿಹರಿಸಿಕೊಳ್ಳಲು ನಾವು ಕಲಿತರೆ, ನಮ್ಮ ಜೀವನವು ಸಂತೋಷವಾಗಿರುತ್ತದೆ ಎಂದು ಇದರಿಂದ ಅರ್ಥ ಮಾಡಿಕೊಳ್ಳಬಹುದು.

 ಕ್ಯೂಟ್ ವಿಡಿಯೋ
ಮಗು ಮತ್ತು ಮಂಗನ ಕ್ಯೂಟ್ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಮಿಂಚಿನಂತೆ ಹರಿದಾಡುತ್ತಿದೆ. ಮನೆ ಮಂಭಾಗದ ಮಂಚದ ಮೇಲೆ ಮಗು ಕುಳಿತಾಗ ಬಂದ ಮಂಗ ಕಪಿಚೇಷ್ಠೆ ಮಾಡುತ್ತದೆ. ಈ ವಿಡಿಯೋಗೆ ಲಕ್ಷಕ್ಕೂ ಅಧಿಕ ಲೈಕ್ಸ್ ಬಂದಿವೆ. ನೆಟ್ಟಿಗರು ಮಗುವಿನ ಧೈರ್ಯ ಕಂಡು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಗ್ರಾಮೀಣ ಭಾಗದ ವಿಡಿಯೋ ಇದಾಗಿದ್ದು, ಕುಟುಂಸ್ಥರು ಮಗುವನ್ನು ಹಗ್ಗದಿಂದ ಮಾಡಲ್ಪಟ್ಟ ಮಂಚದ ಮೇಲೆ ಕೂರಿಸಿದ್ದಾರೆ. ಅದಕ್ಕೆ ಆಟವಾಡಲು ಹಳೆಯ ಮೊಬೈಲ್ ನೀಡಿದ್ದಾರೆ. ಈ ವೇಳೆ ಅಲ್ಲಿಗೆ ಬಂದ ಮಂಗ, ನಿಧಾನವಾಗಿ ಮಗುವಿನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಳ್ಳುತ್ತದೆ.
ಚಾಲಾಕಿ ಮಗು ಅಳದೇ ಮಂಗನ ತಲೆಗೆ ಮೊಟಕಿ ಮೊಬೈಲ್ ಕಸಿದುಕೊಳ್ಳುತ್ತದೆ. ಮಗು ಮೊಬೈಲ್ ಕಸಿದುಕೊಳ್ಳುವಾಗ ಅದನ್ನು ಎದೆಗೆ ತಬ್ಬಿ ಹಿಡಿದಿರುತ್ತದೆ. ಆದ್ರೆ ಮಂಗ ಮತ್ತೆ ಮಗುವಿನ ಕೈಯಲ್ಲಿದ್ದ ಮೊಬೈಲ್ ಕಸಿದುಕೊಳ್ಳುತ್ತದೆ. .jagadeeshmadinenimadineni ಎಂಬವರ ಇನ್ ಸ್ಟಾಗ್ರಾಂ ಖಾತೆಯಲ್ಲಿ ಈ ವಿಡಿಯೋ ಹಂಚಿಕೊಳ್ಳಲಾಗಿದ್ದು, 1.5 ಲಕ್ಷಕ್ಕೂ ಅಧಿಕ ಲೈಕ್ಸ್ ಪಡೆದುಕೊಂಡಿದೆ.

Published by:vanithasanjevani vanithasanjevani
First published: