Viral News: ಮಗನ ಜೊತೆ ತಾಯಿಯೂ ಶಾಲೆ ಕಲೀತಾಳೆ! ಹೀಗೊಂದು ವಿಚಿತ್ರ ಘಟನೆ

27 ವರ್ಷದ ನೇಪಾಳಿ ಮಹಿಳೆಯೊಬ್ಬರು ತಮಗೆ ಮದುವೆಯಾಗಿ ಇಬ್ಬರು ಮಕ್ಕಳ ತಾಯಿ ಆದ ನಂತರ ಶಾಲೆಗೆ ಹೋಗುತ್ತಿದ್ದಾರೆ ನೋಡಿ. ಆ ಮಹಿಳೆಯ ಹೆಸರು ಪಾರ್ವತಿ ಸುನಾರ್ ಎಂದು ಹೇಳಲಾಗುತ್ತಿದ್ದು, ಇವರು ತಮ್ಮ ಮದುವೆಗೂ ಮುಂಚೆ ಅರ್ಧಕ್ಕೆ ಬಿಟ್ಟ ಶಿಕ್ಷಣವನ್ನು ಮತ್ತೆ ಪೂರ್ಣಗೊಳಿಸಲು ಶಾಲೆಯ ಮೆಟ್ಟಿಲು ಏರಿದ್ದಾರೆ. ಹೌದು.. ಇವರು ಏಳನೇ ತರಗತಿಯಲ್ಲಿ ತನ್ನ ಮಗನ ಜೊತೆಗೆ ಅವನ ತರಗತಿಯಲ್ಲಿಯೇ ಪಾಠ ಕೇಳಲು ಹೋಗುತ್ತಿದ್ದಾರೆ.

ಮಗನ ಜೊತೆ ಪಾಠ ಕಲಿಯಲು ಶಾಲೆಗೆ ಹೋಗುತ್ತಿರುವ ತಾಯಿ

ಮಗನ ಜೊತೆ ಪಾಠ ಕಲಿಯಲು ಶಾಲೆಗೆ ಹೋಗುತ್ತಿರುವ ತಾಯಿ

  • Share this:
ಎಷ್ಟೋ ಜನರು ತಮ್ಮ ಮನೆಯಲ್ಲಿ (Home) ಚೆನ್ನಾಗಿ ಓದಿಕೊಳ್ಳಲು ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸಿಕೊಟ್ಟರೂ ಸಹ ಅವರಿಗೆ ವಿದ್ಯಾಭ್ಯಾಸದ (Education) ಮೇಲೆ ಅಷ್ಟಾಗಿ ಆಸಕ್ತಿ ಇರದ ಕಾರಣ ತಮ್ಮ ಓದನ್ನು ಅರ್ಧಕ್ಕೆ ಬಿಟ್ಟಿರುತ್ತಾರೆ. ಇನ್ನೂ ಕೆಲ ಸಂದರ್ಭಗಳಲ್ಲಿ ತಮ್ಮ ಬಳಿ ಯಾವುದೇ ಸೌಲಭ್ಯವಿಲ್ಲದಿದ್ದರೂ (Facility) ಸಹ ತಮ್ಮ ವಿದ್ಯಾಭ್ಯಾಸವನ್ನು ಮಾತ್ರ ಯಾವುದೇ ಪರಿಸ್ಥಿತಿಯಲ್ಲಿ ಪೂರ್ತಿ ಮಾಡಬೇಕು ಅಂತ ಹಠ ಹಿಡಿದು ತಮ್ಮ ಓದನ್ನು ಮುಗಿಸುವ ಅನೇಕರನ್ನು ನೋಡಿರುತ್ತೇವೆ. ಇದರಲ್ಲಿ ಕೆಲವರು ತಮ್ಮ ಮದುವೆಯಾದ (Marriage) ನಂತರ ಅರ್ಧಕ್ಕೆ ನಿಲ್ಲಿಸಿದ ತಮ್ಮ ಓದನ್ನು ಪೂರ್ತಿ ಮಾಡಿಕೊಳ್ಳಲು ಮತ್ತೆ ಕಾಲೇಜಿಗೆ ಅಡ್ಮಿಷನ್ ಮಾಡಿಸುವುದನ್ನು ನಾವು ನೋಡಿರುತ್ತೇವೆ.

ಮದುವೆಯಾಗಿ ಮಕ್ಕಳಾದರೂ ಸಹ ಓದಿ ಪದವಿಯನ್ನು ಮುಗಿಸಿರುವುದನ್ನು ಸಹ ನಾವು ನೋಡಿರುತ್ತೇವೆ. ಆದರೆ ಇಲ್ಲಿ ನಡೆದಿರುವ ಘಟನೆ ಇದಕ್ಕಿಂತ ಸ್ವಲ್ಪ ವಿಭಿನ್ನವಾಗಿದೆ ಎಂದು ಹೇಳಿದರೆ ತಪ್ಪಾಗುವುದಿಲ್ಲ.

ಮದುವೆಗೂ ಮುಂಚೆ ಅರ್ಧಕ್ಕೆ ಬಿಟ್ಟ ಶಿಕ್ಷಣ ಪೂರ್ಣಗೊಳಿಸಿದ ಮಹಿಳೆ 
27 ವರ್ಷದ ನೇಪಾಳಿ ಮಹಿಳೆಯೊಬ್ಬರು ತಮಗೆ ಮದುವೆಯಾಗಿ ಇಬ್ಬರು ಮಕ್ಕಳ ತಾಯಿ ಆದ ನಂತರ ಶಾಲೆಗೆ ಹೋಗುತ್ತಿದ್ದಾರೆ ನೋಡಿ. ಆ ಮಹಿಳೆಯ ಹೆಸರು ಪಾರ್ವತಿ ಸುನಾರ್ ಎಂದು ಹೇಳಲಾಗುತ್ತಿದ್ದು, ಇವರು ತಮ್ಮ ಮದುವೆಗೂ ಮುಂಚೆ ಅರ್ಧಕ್ಕೆ ಬಿಟ್ಟ ಶಿಕ್ಷಣವನ್ನು ಮತ್ತೆ ಪೂರ್ಣಗೊಳಿಸಲು ಶಾಲೆಯ ಮೆಟ್ಟಿಲು ಏರಿದ್ದಾರೆ. ಹೌದು.. ಇವರು ಏಳನೇ ತರಗತಿಯಲ್ಲಿ ತನ್ನ ಮಗನ ಜೊತೆಗೆ ಅವನ ತರಗತಿಯಲ್ಲಿಯೇ ಪಾಠ ಕೇಳಲು ಹೋಗುತ್ತಿದ್ದಾರೆ.

ಇದನ್ನೂ ಓದಿ: World Record: ಅಬ್ಬಬ್ಬಾ ಈ ಮಹಿಳೆಯ ಉಗುರು ಸ್ಕೂಲ್ ಬಸ್​​ಗಿಂತ ಉದ್ದವಂತೆ! 10 ಮಹಿಳೆಯರ ಈ ವಿಶ್ವದಾಖಲೆಗಳನ್ನೊಮ್ಮೆ ನೋಡಿ

ಅವಳು ಕೇವಲ 15 ವರ್ಷದವಳಿದ್ದಾಗ ತಮಗಿಂತ ಏಳು ವರ್ಷ ದೊಡ್ಡವನೊಂದಿಗೆ ಪ್ರೀತಿ ಮಾಡಿ ಓಡಿಹೋದರು. ಹಾಗೆ ಓಡಿಹೋದ ಪಾರ್ವತಿ ಸುನಾರ್ ಅವರು ಮನೆಯ ಲೆಕ್ಕಪತ್ರಗಳನ್ನು ನಿರ್ವಹಿಸಲು ಸಾಧ್ಯವಾಗುವಷ್ಟು ಸಾಕ್ಷರರಾಗಲು ಈಗ ಬಯಸುತ್ತಿದ್ದಾರೆ ಎಂದು ಹೇಳಬಹುದು.

ಶಿಕ್ಷಣದ ಬಗ್ಗೆ ಮಹಿಳೆ ಏನು ಹೇಳಿದ್ದಾರೆ ನೋಡಿ
"ನಾನು ಕಲಿಕೆಯನ್ನು ಆನಂದಿಸುತ್ತಿದ್ದೇನೆ ಮತ್ತು ಅದು ನನ್ನ ಸ್ವಂತ ಮಕ್ಕಳಂತೆ ಇರುವ ಸಹಪಾಠಿಗಳೊಂದಿಗೆ ತರಗತಿಗಳಿಗೆ ಹಾಜರಾಗಲು ತುಂಬಾನೇ ಹೆಮ್ಮೆ ಅನ್ನಿಸುತ್ತಿದೆ" ಎಂದು ಸುನಾರ್ ಹೇಳಿದ್ದಾರೆ. ನೇಪಾಳದಲ್ಲಿ ಶೇಕಡಾ 57ರಷ್ಟು ಮಹಿಳೆಯರು ಮಾತ್ರ ಸಾಕ್ಷರರಾಗಿದ್ದಾರೆ. ಶಾಲೆಯನ್ನು ತೊರೆಯುವ ತನ್ನ ನಿರ್ಧಾರದ ಬಗ್ಗೆ ಈಗ ವಿಷಾದ ವ್ಯಕ್ತಪಡಿಸುತ್ತಾ ಪಾರ್ವತಿ "ನಾನು ನನ್ನ ಶಾಲೆಯನ್ನು ತೊರೆಯಬಾರದಿತ್ತು ಎಂದು ನನಗೆ ಈಗ ಅನ್ನಿಸುತ್ತಿದೆ" ಎಂದು ಅವರು ಹೇಳುತ್ತಾರೆ.

ಮಗನ ಜೊತೆ ಪಾಠ ಕಲಿಯಲು ಶಾಲೆಗೆ ಹೋಗುತ್ತಿರುವ ತಾಯಿ
ಆಕೆಯ ಮಗ ರೇಶಮ್​ಗೆ ಈಗ 11 ವರ್ಷ ವಯಸ್ಸು ಮತ್ತು ಈತ ಹೊಸ ಶಾಲಾ ಸಹಪಾಠಿಯನ್ನು ಹುಡುಕಲು ತುಂಬಾನೇ ಉತ್ಸುಕನಾಗಿದ್ದಾನೆ. ತನ್ನ ತಾಯಿಯ ಬಗ್ಗೆ ಹೆಮ್ಮೆಪಡುತ್ತಾನೆ. ಅವನು ತನ್ನ ತಾಯಿಯೊಂದಿಗೆ ಮಧ್ಯಾಹ್ನ ಊಟದ ವಿರಾಮದಲ್ಲಿ ಊಟ ಮಾಡುವುದರ ಜೊತೆಗೆ ಸ್ವಲ್ಪ ಸಮಯವನ್ನು ಕಳೆಯುತ್ತಾನೆ. ಅಷ್ಟೇ ಅಲ್ಲದೆ ಹತ್ತಿರದ ಇನ್ಸ್ಟಿಟ್ಯೂಟ್ ನಲ್ಲಿ ಅವರು ಹಾಜರಾಗುವ ಕಂಪ್ಯೂಟರ್ ತರಗತಿಗಳಿಗೆ ಆಕೆ ಹೋಗುವಾಗ ಮಗನಾದವನು ಸೈಕಲ್ ಹಿಂದಿನ ಸೀಟಿನಲ್ಲಿ ಕುಳಿತು ಹೋಗುತ್ತಾನೆ. ಒಟ್ಟಿನಲ್ಲಿ ಹೇಳುವುದಾದರೆ ಅಮ್ಮನೊಂದಿಗೆ ಶಾಲೆಗೆ ಹೋಗುವುದಕ್ಕೆ ನನಗೆ ತುಂಬಾನೇ ಸಂತೋಷವಾಗಿದೆ ಎಂದು ರೇಶಮ್ ಹೇಳುತ್ತಾನೆ.

ಇದನ್ನೂ ಓದಿ: Kannada: ವಿದೇಶಿ ಪ್ರಜೆಗಳ ಕನ್ನಡ ಕಲಿಯುವ ಪ್ರಯತ್ನ; ವೈರಲ್ ಆಗ್ತಿದೆ ಸುಂದರ ವಿಡಿಯೋ

ಒಂದು ಸರಳ ಕುಟುಂಬಕ್ಕೆ ಸೇರಿದ ಸುನಾರ್, ಮಕ್ಕಳಾದ ರೇಶಮ್ ಮತ್ತು ಅರ್ಜುನ್ ಮತ್ತು ಅವಳ ಅತ್ತೆಯೊಂದಿಗೆ ಒಂದು ಚಿಕ್ಕ ತಗಡಿನ ಛಾವಣಿಯ ಎರಡು ಕೋಣೆಗಳ ಮನೆಯಲ್ಲಿ ವಾಸಿಸುತ್ತಿದ್ದಾರೆ. ಅವರ ಆಡುಗಳನ್ನು ಸಹ ಅಲ್ಲಿಯೇ ಮನೆಯ ಹತ್ತಿರ ಒಂದು ಖಾಲಿ ಪ್ರದೇಶದಲ್ಲಿ ಬಿಡಲಾಗುತ್ತದೆ ಮತ್ತು ಮನೆಯಲ್ಲಿ ಶೌಚಾಲಯದ ಕೊರತೆಯಿಂದಾಗಿ, ಕುಟುಂಬವು ಶೌಚಾಲಯಕ್ಕೆಂದು ಹತ್ತಿರದ ಸಾರ್ವಜನಿಕ ಭೂಮಿಯನ್ನು ಬಳಸುತ್ತಾರೆ.

ಸುನಾರ್ ಅವರ ಪತಿ ಚೆನ್ನೈನಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಾರೆ ಮತ್ತು ಪಾರ್ವತಿ ಸುನಾರ್ ಅವರ ಈ ಕಥೆಯು ಅನೇಕ ಮಹಿಳೆಯರಿಗೆ ಮತ್ತೆ ಶಾಲೆಗೆ ಸೇರಲು ಪ್ರೇರೇಪಿಸುತ್ತದೆ ಎಂದು ಸ್ಥಳೀಯ ಆಡಳಿತವು ಭಾವಿಸುತ್ತದೆ.
Published by:Ashwini Prabhu
First published: