Viral Video: ಮೃಗಾಲಯದಲ್ಲಿ ಮಗುವನ್ನು ಕರಡಿ ಬಳಿಗೆ ಎಸೆದ ತಾಯಿ! ಮುಂದೆ ಆಗಿದ್ದೇನು?
Mother throws her Daughter: ಗಂಡನಿಂದ ದೂರವಾಗಿ ರಷ್ಯಾದಲ್ಲಿ ವಾಸವಾಗಿದ್ದ ಮಹಿಳೆ ತನ್ನ ಮಗುವಿನ ಜೊತೆ ಉಜ್ಬೇಕಿಸ್ತಾನದಲ್ಲಿ ಮೃಗಾಲಯ ನೋಡಲು ಬಂದಿದ್ದಳು.. ಮೊದಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಪತಿಯ ಮೇಲಿನ ಕೋಪವನ್ನು ವ್ಯಕ್ತಪಡಿಸಲು ಮಗುವನ್ನ ಕರಡಿ ಬಳಿಗೆ ಎಸೆದಿದ್ದಾಳೆ.
ತಾಯಿಯಾದವಳು(Mother) ಮಕ್ಕಳಿಗೆ(Children) ಏನು ತೊಂದರೆಯಾಗದಂತೆ ಸಾಕಷ್ಟು ಜಾಗ್ರತೆ(Care) ವಹಿಸುತ್ತಾರೆ.. ಮಕ್ಕಳ ಆರೋಗ್ಯದಲ್ಲಿ(Health) ಕೊಂಚ ಏರುಪೇರಾದರೂ ತನಗೆ ನೋವಾಗಿದೆ ಎನ್ನುವಷ್ಟು ತಾಯಿ ಸಂಕಟಪಡುತ್ತಾರೆ.. ಹೀಗಾಗಿಯೇ ಪ್ರಪಂಚದಲ್ಲಿ(World) ಉಪ್ಪಿಗಿಂತ (Salt)ರುಚಿ ಇಲ್ಲ ತಾಯಿಗಿಂತ ಬಂಧುವಿಲ್ಲ ಎನ್ನುವ ಮಾತುಗಳನ್ನು ಹೇಳಲಾಗುತ್ತದೆ.. ಅಲ್ಲದೆ ತಾಯಿ ಅಮ್ಮ-ಅವ್ವ ಕೋಟಿ ದೇವರುಗಳಿಗೆ(God) ಸಮ ಎಂದು ಹೇಳಲಾಗುತ್ತೆ.. ಯಾಕಂದ್ರೆ ತಾಯಿಯಾದವಳು ಎಂತಹ ಕಷ್ಟದ ಸಂದರ್ಭದಲ್ಲಿಯೂ(Situation) ಮಕ್ಕಳನ್ನು ಬಿಟ್ಟು ಹೋಗುವುದಿಲ್ಲ.. ತನಗೆ ಕಷ್ಟ ಬಂದರೂ ಸಹ ಮಕ್ಕಳಿಗೆ ಕಷ್ಟ ಬರದಂತೆ ತಡೆಯುವ ಕೆಲಸ ಮಾಡುತ್ತಾರೆ. ಒಂದು ವೇಳೆ ಪ್ರಪಾತಕ್ಕೆ ಬೀಳುವ ಸಂದರ್ಭ ಬಂದರೂ ತಾಯಿ ಅಂತ ಸಂದರ್ಭದಲ್ಲಿ ಮಗುವಿನ ರಕ್ಷಣೆ ಮಾಡುವ ಪ್ರಯತ್ನ ಮಾಡುತ್ತಾಳೆ.. ಇದು ಒಬ್ಬ ತಾಯಿ ತನ್ನ ಮಗುವಿನ ಮೇಲೆ ಇಟ್ಟಿರುವ ಪ್ರೀತಿ.
ಆದರೆ ಪ್ರಸ್ತುತ ದಿನಮಾನಗಳಲ್ಲಿ ಮಕ್ಕಳು ತಾಯಿಯ ಮೇಲೆ ಹಲ್ಲೆ ನಡೆಸುತ್ತಿರುವುದು, ತಾಯಿಯೇ ಮಕ್ಕಳನ್ನು ಕೊಲೆ ಮಾಡಲು ಯತ್ನಿಸುತ್ತಿರುವ ಘಟನೆಗಳು ನಡೆಯುತ್ತಿವೆ.. ಪ್ರಪಂಚದಲ್ಲಿ ಕೆಟ್ಟ ಮಕ್ಕಳಿರಬಹುದು ಕೆಟ್ಟ ತಾಯಿ ಇರುವುದಿಲ್ಲ ಎನ್ನುವ ಮಾತುಗಳನ್ನು ಸುಳ್ಳಾಗಿಸುತ್ತದೆ. ಇದಕ್ಕೆ ಪೂರಕವಾಗಿ ಹಲವಾರು ಘಟನೆಗಳು ನಮ್ಮ ಮುಂದೆ ಇವೆ. ಅದೇ ರೀತಿ ತಾಯಿಯೊಬ್ಬಳು ತಾನು ಹೆತ್ತ ಮಗುವನ್ನೇ ಅಪಾಯಕ್ಕೆ ತಳ್ಳಿರುವ ಹೃದಯ ವಿದ್ರಾವಕ ಘಟನೆಯೊಂದು ಇಲ್ಲಿದೆ..
ಕರಡಿ ಬಳಿ ಮಗುವನ್ನು ಎಸೆದ ಕಟುಕಿ ತಾಯಿ
ತನ್ನ ಮೂರು ವರ್ಷದ ಹೆಣ್ಣು ಮಗುವಿನ ಜೊತೆ ಮೃಗಾಲಯ ನೋಡಲು ಬಂದಿದ್ದ ತಾಯಿಯೊಬ್ಬಳು ತನ್ನ ಕೈಯಲ್ಲಿದ್ದ ಹೆಣ್ಣುಮಗುವನ್ನು ಕರಡಿ ಬಳಿ ಎಸೆದಿರುವ ಹೃದಯವಿದ್ರಾವಕ ಘಟನೆ ಉಜ್ಬೇಕಿಸ್ತಾನದಲ್ಲಿ ನಡೆದಿದೆ. ಡೈಲಿ ಮೇಲ್ ವರದಿ ಮಾಡಿರುವ ಪ್ರಕಾರ ಹೆಣ್ಣು ಮಗುವಿನ ಜೊತೆ ಮೃಗಾಲಯಕ್ಕೆ ಬಂದ ತಾಯಿ ಜೂಜು ಎನ್ನುವ ಕರಡಿಯಿದ್ದ ಸುಮಾರು 16 ಅಡಿಗಳಷ್ಟು ಕೆಳಗೆ ಮಗುವನ್ನು ಎಸೆದು ಸಾಯಿಸಲು ಯತ್ನಿಸಿದ್ದಾಳೆ. ಇನ್ನು ತಾಯಿ-ಮಗುವನ್ನು ಕರಡಿ ಬಳಿ ಎತ್ತಿ ಎಸೆಯಲು ಯತ್ನಿಸಿದ ವೇಳೆಯಲ್ಲಿ ಪಕ್ಕದಲ್ಲಿದ್ದವರು ಆಕೆಯನ್ನು ತಡೆಯಲು ಯತ್ನಿಸಿದ್ದಾರೆ.. ಆದರೆ ತಾಯಿ ಮಗುವನ್ನು ಕರಡಿ ಬಳಿ ಎಸೆದಿದ್ದಾಳೆ.
ಇನ್ನು ಮಗುವನ್ನ ಕರಡಿ ಬಳಿಗೆ ಎಸೆಯುತ್ತಿದ್ದಂತೆ ಅಲ್ಲಿಯೇ ಇದ್ದ ಮೃಗಾಲಯದ ಸಿಬ್ಬಂದಿ ಮೂರು ವರ್ಷದ ಹೆಣ್ಣು ಮಗುವಿನ ರಕ್ಷಣೆ ಮಾಡಿದ್ದಾರೆ.16 ಅಡಿಗಳಷ್ಟು ಕೆಳಗೆ ಬಿದ್ದ ಮಗುವಿಗೆ ಗಾಯಗಳಾಗಿದ್ದು ಮಗುವನ್ನ ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗುತ್ತಿದೆ.ಇನ್ನು ಮಹಿಳೆಯನ್ನು ಹತ್ಯೆ ಪ್ರಕರಣದಲ್ಲಿ ಬಂಧಿಸಲಾಗಿದ್ದು, ಪ್ರಕರಣ ಸಾಬೀತಾದರೆ 15 ವರ್ಷ ಜೈಲು ಶಿಕ್ಷೆಗೆ ಆಗಲಿದೆ. ಈ ಕುರಿತು ಮೃಗಾಲಯದ ಸಿಬ್ಬಂದಿ ಮಾತನಾಡಿ, ಮಹಿಳೆ ಏಕಾಏಕಿ ಮಗುವನ್ನು ಕರಡಿಯ ಬಳಿ ಎಸೆದಿದ್ದಾಳೆ. ಆಕೆಯ ಉದ್ದೇಶವೇನು ಎಂದು ತಿಳಿದಿಲ್ಲ ಸದ್ಯ ಮಗುವನ್ನು ರಕ್ಷಿಸಲಾಗಿದೆ ಎಂದಿದ್ದಾರೆ.
VIEWER DISCRETION IS ADVISED!
CCTV footage shows a woman throwing her daughter into a bear's enclosure in Uzbekistan's Tashkent Zoo.
The toddler was not harmed by the bear, but she was hospitalized with injuries due to the fall.
ಇನ್ನು ಮೂರು ವರ್ಷದ ಹೆಣ್ಣು ಮಗುವನ್ನ ಕರಡಿ ಬಳಿಗೆ ಎಸೆದ ಮಹಿಳೆ ಮಾನಸಿಕ ಖಿನ್ನತೆಯಿಂದ ನರಳುತ್ತಿದ್ದಳು ಎನ್ನಲಾಗಿದೆ. ಗಂಡನಿಂದ ದೂರವಾಗಿ ರಷ್ಯಾದಲ್ಲಿ ವಾಸವಾಗಿದ್ದ ಮಹಿಳೆ ತನ್ನ ಮಗುವಿನ ಜೊತೆ ಉಜ್ಬೇಕಿಸ್ತಾನದಲ್ಲಿ ಮೃಗಾಲಯ ನೋಡಲು ಬಂದಿದ್ದಳು.. ಮೊದಲೇ ಮಾನಸಿಕ ಖಿನ್ನತೆಗೆ ಒಳಗಾಗಿದ್ದರಿಂದ ಪತಿಯ ಮೇಲಿನ ಕೋಪವನ್ನು ವ್ಯಕ್ತಪಡಿಸಲು ಮಗುವನ್ನ ಕರಡಿ ಬಳಿಗೆ ಎಸೆದಿದ್ದಾಳೆ ಎಂದು ಹೇಳಲಾಗುತ್ತಿದೆ. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ..
ವೈರಲ್ ಆಗಿರುವ ವಿಡಿಯೋ ನೋಡಿ ನೆಟ್ಟಿಗರು ಬೆಚ್ಚಿಬಿದ್ದಿದ್ದಾರೆ. ಮಗುವನ್ನು ಎಸೆಯುವ ತಾಯಿಯೂ ಇದ್ದಾಳಾ ಎಂದು ನೆಟ್ಟಿಗರು ಕಾಮೆಂಟ್ ಮಾಡಿದ್ದಾರೆ.
Published by:ranjumbkgowda1 ranjumbkgowda1
First published:
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ