ತಾಯಿ (Mother) ತನ್ನ ಮಗುವಿಗಾಗಿ ಏನು ಬೇಕಾದರೂ ಮಾಡಬಲ್ಲಳು ಎಂಬುದು ಎಲ್ಲರಿಘು ತಿಳಿದಿದೆ. ಇದನ್ನು ನಾವು ಆಗಾಗ್ಗೆ ಕೇಳುತ್ತೇವೆ-ನೋಡುತ್ತೇವೆ-ಅನುಭವಿಸುತ್ತಿರುತ್ತೇವೆ. ಮಕ್ಕಳು ಎಷ್ಟೇ ಬೆಳೆದರೂ ತಾಯಿ ಅವರನ್ನು ಸದಾ ನೋಡಿಕೊಳ್ಳುತ್ತಾರೆ. ಇಂದೋರ್‌ನಲ್ಲಿ ಆತ್ಮಹತ್ಯೆಗೆ ಯತ್ನಿಸಿದ ಯುವಕನೊಬ್ಬನನ್ನು ತಾಯಿ ಉಳಿಸಿದ್ದಾಳೆ. ತಾಯಿಯ ಕಾಳಜಿ ಮತ್ತು ಜಾಗರೂಕತೆಯಿಂದ ಮತ್ತೆ ಜೀವ (Life)ಪಡೆದಿದ್ದಾನೆ. ಹೀಗಿರುವಾಗ ಕೊನೆ ಕ್ಷಣದಲ್ಲಿ ಮೊಬೈಲ್ (Mobile) ರಿಂಗಣಿಸದೇ ಇದ್ದಿದ್ದರೆ ಬಹುಶಃ ಅಮ್ಮನಿಗೂ ಏನೂ ಮಾಡಲು ಸಾಧ್ಯವಾಗುತ್ತಿರಲಿಲ್ಲ. ಏನಿದು ಸುದ್ದಿ ಅಂತ ಆಶ್ಚರ್ಯವಾಗ್ತಾ ಇದ್ಯಾ? ನೀವೇ ನೋಡಿ.
ಈ ಸುದ್ಧಿಯಂತೂ ಭಯಾನಕವಾಗಿದೆ. ಅದೃಷ್ಟದಿಂದ ಪಾರಾಗಿದ್ದಾನೆ ಈ ವ್ಯಕ್ತಿ. ತಾಯಿ ಮತ್ತು ಆತನ ಮೊಬೈಲ್ ಈ ಯುವಕನ ಜೀವವನ್ನು ಉಳಿಸಿದೆ. ಯಾವ ರೀತಿಯಾಗಿ ಅಂತ ನೀವೇ ಈ ಸುದ್ದಿಯನ್ನು ಸಂಪೂರ್ಣವಾಗಿ ಓದುವುದರ ಮೂಲಕ ತಿಳಿದುಕೊಳ್ಳಿ.
ಮಧ್ಯಪ್ರದೇಶದ ಇಂದೋರ್‌ನ 20 ವರ್ಷದ ಅರವಿಂದ್ ತನ್ನ ಕೋಣೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಸಿಕ್ಕಿರುವ ಮಾಹಿತಿ ಪ್ರಕಾರ ಘಟನೆ ನಡೆದ ದಿನ ಯಾವುದೋ ಕೆಲಸದ ನಿಮಿತ್ತ ಆತ ಹೊರಗೆ ಹೋಗಿದ್ದರು. ಮನೆಗೆ ಮರಳಿದ ನಂತರ ಅವರ ತಾಯಿ ಊರ್ಮಿಳಾ ಅವರಿಗೆ ಊಟ ಮತ್ತು ಚಹಾವನ್ನು ನೀಡಿದರು.
ಸೇವಿಸಿದ ನಂತರ ತನ್ನ ಕೋಣೆಗೆ ಹೋದನು.ಸ್ವಲ್ಪ ಹೊತ್ತಿನ ನಂತರ ಅವನ ಮೊಬೈಲ್ ರಿಂಗಣಿಸುವ ಸದ್ದು ತಾಯಿಗೆ ಕೇಳಿಸಿತು. ಆದರೆ, ಬಹಳ ಹೊತ್ತಾದರೂ ಮಗ ಫೋನ್ ತೆಗೆಯದಿರುವುದನ್ನು ತಾಯಿ ಊರ್ಮಿಳಾ ಗಮನಿಸಿದ್ದಾರೆ. ಅರವಿಂದ್ ಕೋಣೆಯ ಬಾಗಿಲನ್ನು ಒಳಗಿನಿಂದ ಲಾಕ್ ಮಾಡಿದ್ದ. ಊರ್ಮಿಳಾ ಕಿಟಕಿಯಿಂದ ನೋಡಿದಾಗ ಅರವಿಂದ್ ಛಾವಣಿಯಿಂದ ನೇತಾಡುತ್ತಿರುವುದನ್ನು ನೋಡಿದಳು. ಇದನ್ನು ನೋಡಿದ ತಾಯಿ ಕಿರುಚಿಕೊಂಡಳು. ಆಗ ಸಹಾಯಕ್ಕೆ ಬಂದ ನೆರೆಹೊರೆಯವರು ಬಾಗಿಲು ಒಡೆದು ಅರವಿಂದ್ ಅವರನ್ನು ಹೊರಕ್ಕೆ ಕರೆದೊಯ್ದಿದ್ದಾರೆ.
ಇದನ್ನೂ ಓದಿ: 102 ಮಕ್ಕಳು, 12 ಪತ್ನಿಯರು, 568 ಮೊಮ್ಮಕ್ಕಳನ್ನು ಹೊಂದಿರುವ ವ್ಯಕ್ತಿ! ಈತ ಸಾಧಾರಣ ವ್ಯಕ್ತಿ ಅಲ್ಲ ಕಣ್ರೀ
ಚಿಂತಾಜನಕ ಸ್ಥಿತಿಯಲ್ಲಿದ್ದ ಅರವಿಂದ್ ಅವರನ್ನು ಚಿಕಿತ್ಸೆಗಾಗಿ ಎಂವೈ ಆಸ್ಪತ್ರೆಗೆ ಕರೆದೊಯ್ಯಲಾಯಿತು. ಸೀರೆಯ ನೆರವಿನಿಂದ ನೇತಾಡುತ್ತಿದ್ದ ಕಾರಣ, ಅವರ ತಲೆ ಕುತ್ತಿಗೆಗೆ ಒತ್ತಿದೆ ಮತ್ತು ಮಾರ್ಕ್ ಆಗಿದೆ.
ಹೀಗಾಗಿ ಹೆಚ್ಚಿನ ಚಿಕಿತ್ಸೆಗಾಗಿ ಬಾಂಬೆ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಅರವಿಂದ್ ಅವರ ಮೊಬೈಲ್ ಲಾಕ್ ಆಗಿರುವುದರಿಂದ ಘಟನೆ ನಡೆದಾಗ ಯಾರು ಕರೆ ಮಾಡುತ್ತಿದ್ದರು ಎಂಬುದು ಇನ್ನೂ ಬಹಿರಂಗವಾಗಿಲ್ಲ. ಅವರು ಈಗಲೇ ಏನನ್ನೂ ಹೇಳುವ ಸ್ಥಿತಿಯಲ್ಲಿಲ್ಲ. ಆತನ ಹೇಳಿಕೆ ದಾಖಲಿಸಿಕೊಂಡ ಬಳಿಕ ಮುಂದಿನ ತನಿಖೆಗೆ ಪೊಲೀಸರಿಗೆ ನೆರವಾಗುವ ಸಾಧ್ಯತೆ ಇದೆ. ಆತ್ಮಹತ್ಯೆಗೆ ಯತ್ನಿಸಿದ್ದು ಏಕೆ ಎಂಬುದೂ ಬಹಿರಂಗವಾಗಲಿದೆ.
ಏತನ್ಮಧ್ಯೆ, ನಮ್ಮ ಮಾನಸಿಕ ಆರೋಗ್ಯವು ಪ್ರಮುಖ ಭಾಗವಾಗಿದೆ. ನಾವು ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಸಾಮಾಜಿಕವಾಗಿ ಹೇಗೆ ವರ್ತಿಸುತ್ತೇವೆ ಎಂಬುದು ನಮ್ಮ ಮಾನಸಿಕ ಆರೋಗ್ಯದ ಸ್ಥಿತಿಯನ್ನು ಅವಲಂಬಿಸಿರುತ್ತದೆ. ಮಾನಸಿಕ ಆರೋಗ್ಯವು ಉತ್ತಮವಾಗಿಲ್ಲದಿದ್ದರೆ, ಒಬ್ಬ ವ್ಯಕ್ತಿಯು ಕೆಲವೊಮ್ಮೆ ಆತ್ಮಹತ್ಯೆಯಂತಹ ವಿಪರೀತ ಕ್ರಮಗಳನ್ನು ತೆಗೆದುಕೊಳ್ಳುತ್ತಾನೆ.
ಅರವಿಂದ್ ಪ್ರಕರಣದಲ್ಲೂ ಇದೇ ರೀತಿಯ ಘಟನೆ ನಡೆದಿರಬಹುದು ಎಂದು ಅಂದಾಜಿಸಲಾಗಿದೆ. ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಳ್ಳುವ ಯೋಚನೆಯಲ್ಲಿದ್ದರೆ ನಿಮ್ಮ ಹತ್ತಿರವಿರುವ ಯಾರೊಂದಿಗಾದರೂ ಮಾತನಾಡಬೇಕು. ಬಹುಶಃ ಈ ಸಂಭಾಷಣೆಯಿಂದ ಹೊರಬರಲು ಒಂದು ಮಾರ್ಗವಿದೆ.
ನಮ್ಮ ಜೀವನ ಶೈಲಿಯು ಬದಲಾಗುತ್ತಿದ್ದಂತೆಯೇ ಮಾನಸಿಕ ಮತ್ತು ಆರೋಗ್ಯದ ಮೇಲೆಯೂ ಪರಿಣಾಮ ಬೀರುತ್ತದೆ. ಹೀಗಾಗಿ ಅದೇನೇ ಒತ್ತಡ ಇದ್ದರೂ ಕೂಡ ನಾವು ನಮ್ಮವರಲ್ಲಿ ವಿಷಯಗಳನ್ನು ಹಂಚಿಕೊಳ್ಳಬೇಕು. ಯಾರು ಇಲ್ಲ ಅಂದ್ರೆ ಏಕಾಂಗಿಯಾಗಿ ವಾಕಿಂಗ್ ಹೋಗಿ, ಮೋಟಿವೇಷ್ನಲ್ ಮಾತುಗಾಲನ್ನು ಕೇಳಿ ಅಥವಾ ಧ್ಯಾನ ಮಾಡುವುದು ಕೂಡ ಸೂಕ್ತ. ಅರವಿಂದ್ ಜೀವವನ್ನು ಉಳಿಸುವಲ್ಲಿ ಆತನ ಮೊಬೈಲ್ ಮತ್ತು ತಾಯಿ ಪ್ರಮುಖ ಪಾತ್ರವನ್ನು ವಹಿಸಿದ್ದಾರೆ ಅಂದ್ರೂ ತಪ್ಪಾಗಲಾರದು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ