Viral Video: ಪುಟ್ಟ ಕಂದಮ್ಮನ ಜೊತೆ ಪದವಿ ಸ್ವೀಕರಿಸಿದ ತಾಯಿ, ವಿಡಿಯೋ ವೈರಲ್

ಪುಟ್ಟ ಕಂದನನ್ನು ಕಂಕುಳಲ್ಲಿ ಎತ್ತಿಕೊಂಡು, ತಾಯಿಯೊಬ್ಬಳು ಪದವಿ ಸ್ವೀಕಾರ ಮಾಡುತ್ತಿರುವ ವಿಡಿಯೋ ಒಂದು ಸಾಮಾಜಿಕ ಮಾಧ್ಯಮದಲ್ಲಿ ನೆಟ್ಟಿಗರ ಮನ ಗೆಲ್ಲುತ್ತಿದೆ. ತಾಯಿಯೊಬ್ಬಳ ಸಂಭ್ರಮಕ್ಕೆ ಆಕೆಯ ಮುದ್ದು ಕಂದಮ್ಮ ಕೂಡ ಸಾಕ್ಷಿಯಾಗಿದ್ದು ತುಂಬಾ ಖುಷಿಯ ಸಂಗತಿ ಎನ್ನಲು ಅಡ್ಡಿಯಿಲ್ಲ ಅಲ್ಲವೇ? ಇದೇ ಕಾರಣಕ್ಕೆ ನೆಟ್ಟಿಗರು ಈ ವಿಡಿಯೋವನ್ನು ನೋಡಿ ಸಂತಸ ಪಟ್ಟಿದ್ದಾರೆ.

ಕಂದಮ್ಮನನ್ನು ಎತ್ತಿಕೊಂಡು ಪದವಿ ಪಡೆದ ಮಹಿಳೆ

ಕಂದಮ್ಮನನ್ನು ಎತ್ತಿಕೊಂಡು ಪದವಿ ಪಡೆದ ಮಹಿಳೆ

  • Share this:
ಪುಟ್ಟ ಕಂದನನ್ನು (Baby) ಕಂಕುಳಲ್ಲಿ ಎತ್ತಿಕೊಂಡು, ತಾಯಿಯೊಬ್ಬಳು (Mother) ಪದವಿ ಸ್ವೀಕಾರ (graduation degree receiving )ಮಾಡುತ್ತಿರುವ ವಿಡಿಯೋ (Video) ಒಂದು ಸಾಮಾಜಿಕ ಮಾಧ್ಯಮದಲ್ಲಿ (Social Media) ನೆಟ್ಟಿಗರ ಮನ ಗೆಲ್ಲುತ್ತಿದೆ. ಹೆಣ್ಣು ತನ್ನ ಬದುಕಿನ ಯಾವುದೇ ಹಂತದಲ್ಲಿ ಶಿಕ್ಷಣದ ಬಗೆಗಿನ ತನ್ನಾಸೆಯನ್ನು ಪೂರೈಸಿಕೊಳ್ಳುವ ಮಟ್ಟಿಗೆ ಬೆಳೆದಿದ್ದಾಳೆ, ಬೆಳೆಯುತ್ತಿದ್ದಾಳೆ. ಅದಲ್ಲದೇ ಮದುವೆಯಾದ ಮಹಿಳೆಯರು (Married Women) ಓದು ಮುಂದುವರಿಸುವುದು ಇದೇನು ಮೊದಲಲ್ಲ. ಆದರೂ, ತಾಯಿಯೊಬ್ಬಳ ಸಂಭ್ರಮಕ್ಕೆ ಆಕೆಯ ಮುದ್ದು ಕಂದಮ್ಮ ಕೂಡ ಸಾಕ್ಷಿಯಾಗಿದ್ದು ತುಂಬಾ ಖುಷಿಯ ಸಂಗತಿ ಎನ್ನಲು ಅಡ್ಡಿಯಿಲ್ಲ ಅಲ್ಲವೇ? ಇದೇ ಕಾರಣಕ್ಕೆ ನೆಟ್ಟಿಗರು ಈ ವಿಡಿಯೋವನ್ನು ನೋಡಿ ಸಂತಸ ಪಟ್ಟಿದ್ದಾರೆ.

ಮಗಳನ್ನು ಎತ್ತಿಕೊಂಡು ಪದವಿ ಸ್ವೀಕಾರ ಮಾಡಿದ ತಾಯಿ
ಈ ವಿಡಿಯೋದಲ್ಲಿ ಪದವಿ ಪ್ರದಾನ ಸಮಾರಂಭವೊಂದರಲ್ಲಿ ತಾಯಿಯೊಬ್ಬಳು ತನ್ನ ಮಗಳನ್ನು ಎತ್ತಿಕೊಂಡು, ಅತ್ಯಂತ ಹೆಮ್ಮೆಯಿಂದ ವೇದಿಕೆಗೆ ಹೋಗಿ, ಪದವಿಯನ್ನು ಸ್ವೀಕಾರ ಮಾಡುತ್ತಿರುವ ದೃಶ್ಯವನ್ನು ಕಾಣಬಹುದು. ಸುತ್ತಲೂ ನೆರೆದಿರುವ ಸಾವಿರಾರು ಮಂದಿ ಚಪ್ಪಾಳೆ ತಟ್ಟುತ್ತಿದ್ದರೆ, ಆ ಪುಟಾಣಿ ಖುಷಿಯಿಂದ ನಗುತ್ತಿರುವುದನ್ನು ನೋಡಬಹುದು. ತಾಯಿಯ ಮುಖದಲ್ಲೂ ಹೆಮ್ಮೆ ಮತ್ತು ಸಂತೋಷ ಎರಡೂ ಎದ್ದು ಕಾಣುತ್ತಿತ್ತು. ಪದವಿ ಸ್ವೀಕಾರಕ್ಕೆ ತಾಯಿ ಮಾತ್ರವಲ್ಲ, ಪುಟ್ಟ ಮಗಳಿಗೂ ಒಂದು ಗೌನ್ ಹಾಕಲಾಗಿತ್ತು. ತಾನು ಬಹಳ ವರ್ಷಗಳಿಂದ ಈ ಕ್ಷಣದ ಬಗ್ಗೆ ಕನಸು ಕಾಣುತ್ತಿದ್ದೆ ಎಂದು ಆ ತಾಯಿ ಹೇಳಿಕೊಂಡಿದ್ದಾರೆ.




ಗೂಡ್ ನ್ಯೂಸ್ ಮೂಮೆಂಟ್ ಇನ್ಸ್‍ಸ್ಟಾಗ್ರಾಂ ಪುಟದಲ್ಲಿ ಈ ವಿಡಿಯೋವನ್ನು ಹಂಚಿಕೊಳ್ಳಲಾಗಿದೆ. ಅಷ್ಟೇ ಅಲ್ಲ, ವಿಡಿಯೋದ ಜೊತೆ, ಆ ತಾಯಿ ಮತ್ತು ಆಕೆಯ ಕುರಿತ ಒಂದು ವಿಸ್ತಾರವಾದ ಅಡಿಬರಹವನ್ನು ಕೂಡ ಹಂಚಿಕೊಳ್ಳಲಾಗಿದೆ.

ರಟ್ಜರ್ಸ್‍ನಿಂದ ಪತ್ರಿಕೋದ್ಯಮ ಪದವಿ
ಈ ಮಹಿಳೆ ಸೋಮವಾರ, ತನ್ನ ತೋಳಲ್ಲಿ ಮಗುವನ್ನು ಎತ್ತಿಕೊಂಡೇ, ರಟ್ಜರ್ಸ್‍ನಿಂದ ಪತ್ರಿಕೋದ್ಯಮ ಪದವಿಯನ್ನು ಪಡೆದರು. ‘ಆಕೆಯ ಜೊತೆಗೆ ವೇದಿಕೆಯನ್ನು ದಾಟುವುದನ್ನು, ನಾನು ಅವಳನ್ನು ಹೊಟ್ಟೆಯಲ್ಲಿ ಹೊತ್ತುಕೊಂಡು ತರಗತಿಗಳಿಗೆ ಹೋಗುತ್ತಿದ್ದಾಗಲೆ ಕಲ್ಪಿಸಿಕೊಂಡಿದ್ದೆ.

ಇದನ್ನೂ ಓದಿ:  Kidney Stone: ಅತಿಯಾದ ಬಿಸಿಲು! ವ್ಯಕ್ತಿಯ ಕಿಡ್ನಿಯಿಂದ 206 ಕಲ್ಲುಗಳನ್ನು ತೆಗೆದ ವೈದ್ಯರು!

ಅಂತಿಮವಾಗಿ ಅದನ್ನು ಮಾಡುತ್ತಿರುವುದು, ನನ್ನ ಜೀವನದ ಅತ್ಯಂತ ಹೆಮ್ಮೆಯ ಕ್ಷಣಗಳಲ್ಲಿ ಒಂದು ಮತ್ತು ಅವಳನ್ನು ಎತ್ತಿಕೊಂಡು ವೇದಿಕೆಯನ್ನು ದಾಟಿದ್ದು ನನ್ನ ಪಾಲಿಗೆ ತುಂಬಾ ವಿಶೇಷವಾಗಿತ್ತು’ ಎಂದು ಕ್ಯಾಸಿ ಗುಡ್ ನ್ಯೂಸ್ ಮೂಮೆಂಟ್‍ಗೆ ಹೇಳಿದ್ದಾರೆ. ಅವರು ತಮ್ಮ ಮಗಳು ಲೂನಾ ಜೊತೆ ವಿಶ್ವದಾದ್ಯಂತ ವರದಿ ಮಾಡುವ ಯೋಜನೆಯಲ್ಲಿದ್ದಾರೆ” ಎಂದು ಅಡಿಬರಹದಲ್ಲಿ ಬರೆಯಲಾಗಿದೆ.

15 ಗಂಟೆಗಳ ಒಳಗೆ, 35,000 ಕ್ಕೂ ಹೆಚ್ಚು ಮೆಚ್ಚುಗೆ
ಈ ವಿಡಿಯೋವನ್ನು ಪೋಸ್ಟ್ ಮಾಡಿದ, 15 ಗಂಟೆಗಳ ಒಳಗೆ, 35,000 ಕ್ಕೂ ಹೆಚ್ಚು ಮೆಚ್ಚುಗೆಗಳನ್ನು ಗಳಿಸಿದೆ. ಆ ಸಂಖ್ಯೆ ಹೆಚ್ಚುತ್ತಲೇ ಹೋಗುತ್ತಿದೆ. ಈ ವಿಡಿಯೋವನ್ನು ಹೊಗಳಿ ಸಾಕಷ್ಟು ಪ್ರತಿಕ್ರಿಯೆಗಳು ಕೂಡ ಹರಿದು ಬಂದಿವೆ.

“ಶುಭಾಶಯಗಳು ಅಮ್ಮ! ಮುದ್ದು ಪುಟಾಣಿಗೆ ತುಂಬಾ ಹೆಮ್ಮೆ ಆಗುತ್ತಿರಬಹುದು! ಶ್ರಮದ ಕೆಲಸ! “ ಎಂದು ಇನ್‍ಸ್ಟಾಗ್ರಾಂ ಬಳಕೆದಾರರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ. “ಆಕೆಯ ಪುಟ್ಟ ಮಗು ಕೂಡ ಒಂದು ಗೌನ್ ಹಾಕಿದ್ದು ನನಗೆ ಖುಷಿ ನೀಡಿತು” ಎಂದು ಮತ್ತೊಬ್ಬರು ಪ್ರತಿಕ್ರಿಯಿಸಿದ್ದಾರೆ. “ಈ ಮಹಿಳೆ ಒಬ್ಬ ಬಾಸ್! ಅದು ಎಷ್ಟು ಕೂಲ್ ಆಗಿದೆಯಲ್ಲವೇ?” ಎಂದು ಇನ್ನೊಬ್ಬ ಬಳಕೆದಾರ ಪ್ರತಿಕ್ರಿಯಿಸಿದ್ದರೆ, “ಹಂಚಿಕೊಂಡದ್ದಕ್ಕಾಗಿ ಧನ್ಯವಾದಗಳು!!” ಎಂದು ಮತ್ತೊಬ್ಬರು ಬರೆದಿದ್ದಾರೆ.

ಇದನ್ನೂ ಓದಿ: Weird Greeting: ಈ ದೇಶದ ಜನರು ನಾಲಗೆ ಹೊರಹಾಕಿ ಸ್ವಾಗತ ಮಾಡುತ್ತಾರಂತೆ! ತಪ್ಪು ತಿಳ್ಕೋಬೇಡಿ ಪ್ಲೀಸ್​ 

“ಅಮೂಲ್ಯವಾದ ಕ್ಷಣ” ಎಂದು ಇನ್ನೊಬ್ಬ ನೆಟ್ಟಿಗ ಪ್ರತಿಕ್ರಿಯೆ ನೀಡಿದ್ದಾರೆ. ಸಾಕಷ್ಟು ಇನ್‍ಸ್ಟಾಗ್ರಾಂ ಬಳಕೆದಾರರು ಚಪ್ಪಾಳೆ ಮತ್ತು ಇಮೋಜಿಗಳನ್ನು ಹಾಕುವ ಮೂಲಕ ಹರ್ಷ ವ್ಯಕ್ತಪಡಿಸಿದ್ದಾರೆ. ಕೆಲವು ದಿನಗಳ ಹಿಂದೆ, ಪದವಿ ಪ್ರದಾನ ಸಮಾರಂಭವೊದರಲ್ಲಿ, ಆರು ವರ್ಷದ ಪುಟಾಣಿಯೊಬ್ಬಳು, ಆಗಷ್ಟೇ ಪದವಿ ಸ್ವೀಕಾರ ಮಾಡಿದ ತನ್ನ ತಂದೆಯ ಪೋಟೋವನ್ನು ಕ್ಲಿಕ್ಕಿಸುತ್ತಿದ್ದ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿ, ನೆಟ್ಟಿಗರ ಮೆಚ್ಚುಗೆ ಗಳಿಸಿತ್ತು.
Published by:Ashwini Prabhu
First published: