ನವಜಾತ ಶಿಶುಗಳಿಗೆ (New Born baby) ಕನಿಷ್ಠ 6 ತಿಂಗಳು ಪ್ರತಿ ಎರಡು ಗಂಟೆಗೊಮ್ಮೆ ಹಾಲುಣಿಸಬೇಕು (Feeding Routine of Babies) ಎಂದು ಮನೆಯಲ್ಲಿರುವ ಹಿರಿಯರು ಹೇಳುತ್ತಿರುತ್ತಾರೆ. ವೈದ್ಯರು (Doctor) ಸಹ ಅಮ್ಮಂದಿರಿಗೆ (Mother) ಇದೇ ಸಲಹೆ ನೀಡುತ್ತಾರೆ. ಇನ್ನು ರಾತ್ರಿ ನವಜಾತ ಶಿಶುಗಳು ಎಚ್ಚರಗೊಂಡಾಗಲು ಸ್ತನಪಾನ (Feeding) ಮಾಡಿಸುತ್ತಿರಬೇಕು. ಇದರಿಂದ ಮಕ್ಕಳ ಬೆಳವಣಿಗೆ ಆಗುತ್ತದೆ. ಆರು ತಿಂಗಳ ನಂತರ ಮಗುವಿಗೆ ಹೊರಗಿನ ಆಹಾರ (Food) ನೀಡಲು ಪ್ರಾರಂಭಿಸಬಹುದು. ಇದು ಮಕ್ಕಳ ಉತ್ತಮ ಆರೋಗ್ಯಕ್ಕೆ (Children Health) ಒಳ್ಳೆಯದಾಗಿದೆ. ಆದರೆ ಇಲ್ಲೊಬ್ಬ ತಾಯಿ, ತನ್ನ ಹಸುಗೂಸಿಗೆ ಡಯಟ್ (Diet)ಮಾಡಿಸುತ್ತಿದ್ದಾರೆ. ತನ್ನ ಈ ಕಷ್ಟದ ಕಥೆಯನ್ನು ಮಹಿಳೆ ಟಿಕ್ ಟಾಕ್ (Tiktok) ನಲ್ಲಿ ಶೇರ್ ಮಾಡಿಕೊಂಡಿದ್ದಾರೆ. ವಿಡಿಯೋ ನೋಡಿದ ನೆಟ್ಟಿಗರು ತಾಯಿಯ ಕಷ್ಟ ನೋಡಿ ಮರುಕಪಡುತ್ತಿದ್ದಾರೆ.
ಹೌದು, ಕೆಲ್ಲಿ ಹೆಸರಿನ ಮಹಿಳೆ ತನ್ನ ಮಗುವಿಗೆ ಹೊಟ್ಟೆ ತುಂಬಾ ಊಟ ನೀಡಲಾರದ ಸಂಕಷ್ಟಕ್ಕೆ ಸಿಲುಕಿದ್ದಾರೆ. ಮಗುವಿನ ತೂಕ ಕಡಿಮೆ ಮಾಡಲು ವೈದ್ಯರ ಸಲಹೆಯ ಮೇರೆಗೆ ಕಂದಮ್ಮನಿಗೆ ಪಥ್ಯ ಮಾಡಿಸಲಾಗುತ್ತಿದೆ. ರಾತ್ರಿ ಮಗುವಿಗೆ ಹೊಟ್ಟೆ ಪೂರ್ತಿ ಹಾಲು ನೀಡಲ್ಲ ಎಂದು ಕೆಲ್ಲಿ ಹೇಳಿಕೊಂಡಿದ್ದಾರೆ.
ಅದೇಕೆ ಕೆಲ್ಲಿ ತನ್ನ ಮಗಳು ಸಮೀನಾಗೆ ಯಾಕೆ ಪೂರ್ಣವಾಗಿ ಹಾಲು ನೀಡಲ್ಲ ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ. ಸಮೀನಾಗೆ ಹಗಲಿನಲ್ಲಿ ಸರಿಯಾಗಿ ಆಹಾರ ನೀಡಲಾಗುತ್ತದೆ. ಆದ್ರೆ ರಾತ್ರಿ ಮಾತ್ರ ಮಗುವಿನ ಆರೋಗ್ಯಕ್ಕಾಗಿ ಡಯಟ್ ಪಾಲನೆ ಮಾಡಲಾಗುತ್ತದೆ. ಡಯಟ್ ಕುರಿತು ಕೆಲ್ಲಿ ವೈದ್ಯರ ಅನುಮತಿ ಪಡೆದುಕೊಂಡಿದ್ದಾರೆ.
ಇದನ್ನೂ ಓದಿ: Viral News: ಹಾಯ್ ಹಾಯ್ ಅಂತಿದೆ ಈ ಹಸುಗೂಸು, 2 ತಿಂಗಳಿಗೇ ಮಾತು ಆರಂಭಿಸಿದ ಮಗುವನ್ನು ನೋಡಿ ಪೋಷಕರು ಶಾಕ್
ಅತಿಯಾದ ತೂಕ ಹೊಂದಿರುವ ಮಗು
ಕೆಲ್ಲಿ ಟಿಕ್ ಟಾಕ್ ನಲ್ಲಿ ತನ್ನ ವಿಚಿತ್ರ ಕಥೆಯನ್ನು ಹಂಚಿಕೊಂಡಿದ್ದಾರೆ. ಮಗಳನ್ನು ತಪಾಸಣೆಗಾಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಆಕೆಯ ತೂಕ ನೋಡಿ ವೈದ್ಯರು ಶಾಕ್ ಆಗಿದ್ದರು. ಅಂದರೆ ಸಮೀನಾಳ ತೂಕ ಸಾಮಾನ್ಯ ಮಕ್ಕಳಿಗಿಂತ 93 ಸೆಂಟಿಲ್ಸ್ ಹೆಚ್ಚಾಗಿತ್ತು. ಸಮೀನಾಳ ತೂಕ 10 ಕೆಜಿ ಆಗಿತ್ತು.
ಸಮೀನಾಳ ಆರೋಗ್ಯ ದೃಷ್ಟಿಯಿಂದ ಆಕೆ ಎಲ್ಲರಂತೆ ಆಗಲು ವೈದ್ಯರು ನಾರ್ಮಲ್ ಡಯಟ್ ಮಾಡಲು ತಾಯಿ ಕೆಲ್ಲಿಗೆ ಸೂಚಿಸಿದ್ದಾರೆ. ಸಮೀನಾಳ ತಲೆ ಆಕೆಯ ದೇಹದ ಭಾಗಗಿಂತ ಹೆಚ್ಚು ದೊಡ್ಡದಾಗಿದೆ. ಇದರಿಂದ ಸಮೀನಾಳ ಬೆಳವಣಿಗೆ ಅಂದ್ರೆ ಎತ್ತರ ಕಡಿಮೆಯಾಗಿದೆ. ತೂಕ ಇಳಿಕೆ ಅನಿವಾರ್ಯ ಎಂದು ಮನಗಂಡಿರುವ ವೈದ್ಯರು ಕ್ರಮಬದ್ಧವಾದ ಡಯಟ್ ಚಾರ್ಟ್ ನೀಡಿದ್ದಾರೆ.
ರಾತ್ರಿ ಸ್ತನಪಾನ ಕಡಿಮೆ ಮಾಡಲು ಸಲಹೆ
ಕೆಲ್ಲಿ ಪ್ರಕಾರ, ವೈದ್ಯರು ತನ್ನ ಮಗುವಿನ ರಾತ್ರಿ ಆಹಾರವನ್ನು ಕಡಿಮೆ ಮಾಡಲು ಸಲಹೆ ನೀಡಿದ್ದಾರೆ. ರಾತ್ರಿ ಪ್ರತಿ 2 ಗಂಟೆಗಳ ನಂತರ ಮಗು ಆಹಾರಕ್ಕಾಗಿ ಎಚ್ಚರಗೊಳ್ಳುತ್ತದೆ. ಆಗ ತಾಯಂದಿರು ಹಾಲುಣಿಸುತ್ತಾರೆ. ಆದ್ರೆ ಕೆಲ್ಲಿ ಈ ಸಮಯವನ್ನು ಪ್ರತಿ ಗಂಟೆಗೆ ವಿಸ್ತರಿಸಿಕೊಂಡಿದ್ದಾರೆ. ಪ್ರತಿ 5 ಗಂಟೆಯ ನಂತರ ಮಗಳಿಗೆ ಕೆಲ್ಲಿ ಸ್ತನಪಾನ ಮಾಡಿಸುತ್ತಾರೆ.
ಮಗು ದಿನಕ್ಕೆ 55 ಔನ್ಸ್ ಹಾಲನ್ನು ಕುಡಿಯುತ್ತದೆ, ವೈದ್ಯರು ಅದನ್ನು 30 ಔನ್ಸ್ ಗೆ ಇಳಿಸಲು ಸೂಚಿಸಿದ್ದಾರೆ. ಸಮೀನಾಳ ಬಾಟೆಲ್ ಹಾಲು ಕುಡಿಯಲು ಇಷ್ಟಪಡಲ್ಲ. ಆದ್ದರಿಂದ ಕೆಲ್ಲಿ ಡಯಟ್ ಚಾರ್ಟ್ ಫಾಲೋ ಮಾಡುತ್ತಿದ್ದಾರೆ. ಇದುವರೆಗೂ ಕೆಲ್ಲಿ ಅವರ ಈ ವಿಡಿಯೋವನ್ನು 5 ಲಕ್ಷಕ್ಕೂ ಅಧಿಕ ಜನರು ವೀಕ್ಷಣೆ ಮಾಡಿದ್ದಾರೆ.
ಇದನ್ನೂ ಓದಿ: Viral Video: ಮೊದಲ ಬಾರಿಗೆ ಟಿವಿಯಲ್ಲಿ ಡೈನೋಸಾರ್ ನೋಡಿದ ಮಗುವಿನ Reaction ನೋಡಿ
ಮಗುವಿನ ಗುಣಮುಖಕ್ಕೆ ನೆಟ್ಟಿಗರು ಪ್ರಾರ್ಥನೆ
ವಿಡಿಯೋ ನೋಡಿದ ನೆಟ್ಟಿಗರು ಮಗು ಬೇಗ ಗುಣಮುಖವಾಗಲಿ ಎಂದು ಹಾರೈಸಿದ್ದಾರೆ. ಅದರ ಜೊತೆ ಮಗುವಿಗೆ ಹೊಟ್ಟೆ ತುಂಬಾ ಹಾಲು ನೀಡಲಾಗದ ಸ್ಥಿತಿಯಲ್ಲಿರುವ ಕೆಲ್ಲಿ ಬಗ್ಗೆ ಮರುಕುಪಟ್ಟಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ