ನಾವು ಚಿಕ್ಕವರಿದ್ದಾಗ ಶಾಲೆಯಲ್ಲಿ (School) ಅನೇಕ ಕ್ರೀಡೆಗಳನ್ನು ಆಡಿಸಿರುತ್ತಾರೆ ಅಲ್ವಾ? ಇದರಲ್ಲಿ ವಿಜೇತರಾಗಿದ್ರೆ ಬಹುಮಾನವಾಗಿ ತಟ್ಟೆ, ಲೋಟ, ಚಮಚ, ಬೌಲ್ ಇಂತವುಗಳನ್ನೇ ನೀಡುತ್ತಾ ಇದ್ರು ಅಲ್ವಾ? ಆ ಕಾಲದಲ್ಲಿ ನಮಗೆ ಇವುಗಳೇ ಒಂದು ದೊಡ್ಡ ಗಿಫ್ಟ್ (Gift). ಯಾವ ಶೀಲ್ಡ್ ಆಗಲೀ, ಹಣವಾಗಲೀ ಬೇಕಾಗಿರೋಲ್ಲ. ಬರ್ತಾ ಬರ್ತಾ ಪ್ರಶಸ್ತಿಗಳನ್ನು ನೀಡುತ್ತಾ ಬಂದರು. ಆದರೆ ಈ ತಟ್ಟೆಯಾಗಲೀ, ಲೋಟಗಳಾಗಲೀ ನೀಡುತ್ತಾ ಇರ್ಲಿಲ್ಲ ಇವೆಲ್ಲಾ ಇಂದಿಗೂ ಮನೆಯ ಅಡುಗೆ ಮನೆಗಳಲ್ಲಿ ಜೀವಂತವಾಗಿದೆ ಅಂತಲೇ ಹೇಳಬಹುದು. ನಮಗಿಂತಲೂ ನಮ್ಮ ಪೋಷಕರಿಗೆ (Parents) ಈ ಬಹುಮಾನಗಳ ಮೇಲೆ ಅವಿನಾಭಾವ ಸಂಬಂಧವಿರುತ್ತದೆ. ನನ್ನ ಮಗ/ಮಗಳು ತೆಗೆದುಕೊಂಡ ಬಹುಮಾನ ಇದು ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಇದನ್ನೂ ಓದುವಾಗ ನೀವು ನಿಮ್ಮ ಶಾಲಾ ದಿನಗಳಲ್ಲಿ ಆಡಿದ ಕಪ್ಪೆ ಜಿಗಿತ ಅಥವಾ ರನ್ನಿಂಗ್ ರೇಸ್ನಲ್ಲಿ ವಿನ್ ಆದಾಗ ಸಿಕ್ಕ ಬಹುಮಾನ ನೆನಪಾಗ್ತಾ ಇದ್ಯಾ? ಅವುಗಳೆಲ್ಲಾ ಒಂದು ಸುಂದರ ನೆನಪು ಅಂತಲೇ ಹೇಳಬಹುದು. ಇದೇ ರೀತಿಯಾದ ಒಂದು ಸುದ್ಧಿ ಸಾಮಾಜಿಕ ಜಾಲತಾಣದಲ್ಲಿ ಸಖತ್ ವೈರಲ್ ಆಗ್ತಾ ಇದೆ.
ವೈರಲ್ ಆದ ಸುದ್ಧಿ ಏನು?
ವಿಕ್ರಮ್ ಎನ್ನುವ ಟ್ವಿಟರ್ ಖಾತೆದಾರರು ತಮ್ಮ ‘ಅಮ್ಮನ ತಟ್ಟೆ’ಯ ಹಿಂದೆ ಇರುವ ಕಥೆಯನ್ನು ಹಂಚಿಕೊಂಡಿದ್ದಾರೆ. ‘ಇದು ನನ್ನ ಅಮ್ಮನ ತಟ್ಟೆ. 20 ವರ್ಷಗಳಿಂದ ಅವರು ಇದರಲ್ಲಿ ಊಟ ಮಾಡುತ್ತಾ ಇದ್ದರು. ನನಗೆ ಮತ್ತು ನನ್ನ ಪುಟ್ಟ ಸೊಸೆಗೆ ಮಾತ್ರ ಇದರಲ್ಲಿ ಊಟ ಮಾಡಲು ನೀಡುತ್ತಿದ್ದರು. ಆದರೆ ಈ ತಟ್ಟೆಯ ಹಿಂದೆ ಒಂದು ಕಥೆಯೇ ಇದೆ ಎನ್ನುವುದು ಅವರ ನಿಧನದ ನಂತರವಷ್ಟೇ ಗೊತ್ತಾಯಿತು ಎಂದು ಹೇಳಿಕೊಂಡಿದ್ದಾರೆ.
ಆ ಕಥೆ ಏನು?
1997ರಲ್ಲಿ ಏಳನೇ ತರಗತಿಯಲ್ಲಿದ್ದಾಗ ಯಾವುದೋ ಸ್ಪರ್ಧೆಯಲ್ಲಿ ನನಗೆ ಬಂದ ಬಹುಮಾನ ಎಂದು ನನ್ನ ಸಹೋದರಿ ತಿಳಿಸಿದ್ದಾಳೆ. ಈ 24 ವರ್ಷಗಳ ತನಕವೂ ನನ್ನ ಅಮ್ಮ ಈ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದರು. ಎಂಥಹ ಮಧುರ ನೆನಪಿದು.’ ಎಂದು ಹೇಳಿಕೊಂಡಿದ್ದಾರೆ.
ಭಾವುಕರಾದ ನೆಟ್ಟಿಗರು!
ಹೌದು, ಈ ಸುದ್ಧಿಯನ್ನು ಕೇಳ್ತಾ ಇದ್ರೆ ಎಂಥವರಿಗಾದ್ರೂ ಭಾವುಕರಾಗುತ್ತಾರೆ. ಅದೇ ರೀತಿಯಾಗಿ ವಿಕ್ರಮ್ ಹಾಕಿರುವ ಈ ಪೋಸ್ಟ್ಗೆ ಹಲವಾರು ಲೈಕ್ಸ್ಗಳು ಕೂಡ ಬಂದಿದೆ. ಹಾಗೆಯೇ ವಿಕ್ರಮ್ ಅವರು ಹಾಕಿರುವ ಫೋಟೋಗಳು ಕೂಡ ಹಾಗೆಯೇ ಇದೆ. ಒಂದು ಖಾಲಿ ತಟ್ಟೆ ಮತ್ತು ಈ ಪ್ಲೇಟ್ ಫುಲ್ ತುಂಬಿದ ಅನ್ನದ ಫೋಟೋವನ್ನು ಹಂಚಿಕೊಂಡಿದ್ದಾರೆ.
This is Amma's plate.. she used to eat in this for the past 2 decades.. it's a small plate.. she allowed only myself and chulbuli (Sruthi, my niece) only to eat in this other than her.. after her demise only I came to know through my sister, that this plate was a prize won by me pic.twitter.com/pYs2vDEI3p
— Vikram S Buddhanesan (@vsb_dentist) January 19, 2023
ಇದನ್ನೂ ಓದಿ: ನೀವು ಜೊಮ್ಯಾಟೋದಲ್ಲಿ ಫುಡ್ ಆರ್ಡರ್ ಮಾಡ್ತೀರಾ? ಇನ್ನು ಮುಂದೆ ಹುಷಾರ್!
ನನ್ನ ಅಪ್ಪ ತೀರಿದಾಗ ಅವರಿಗೆ ಸಂಬಂಧಿಸಿದ ಸಾಮಾನುಗಳನ್ನು ಸಾಗಿಸುವಾಗ ಅವರ ಹಳೆಯ ಡೈರಿ ಸಿಕ್ಕಿತು. ಜರ್ಮನಿಯಲ್ಲಿ ಅವರು 20 ಯೂರೋಗಳನ್ನು ಕೊಟ್ಟು ಖರೀದಿಸಿದ ಡೈರಿಯಾಗಿತ್ತು. ಅದನ್ನು ಓದುತ್ತಾ ಹೋದಂತೆ ಎಂಥ ಅಮೂಲ್ಯವಾದದ್ದು ಇದು ಎನ್ನುವುದು ಅರಿವಿಗೆ ಬಂದಿತು ಎಂದು ಮಗದೊಬ್ಬರು ಹೇಳಿದ್ದಾರೆ.
ಶ್ರದ್ಧಾ ಮತ್ತು ಸ್ಟೇನ್ಲೆಸ್ ಸ್ಟೀಲ್ ಎಂಬ ಕನ್ನಡ ನಾಟಕವನ್ನು ಒಬ್ಬರು ನೆನಪಿಸಿಕೊಂಡಿದ್ದಾರೆ. ನಾನು ಕೂಡ ಐದಾರು ವರ್ಷಗಳ ಕಾಲ, ಬಹುಮಾನ ರೂಪದಲ್ಲಿ ಸಿಕ್ಕ ಸ್ಟೀಲ್ ತಟ್ಟೆಯಲ್ಲಿಯೇ ಊಟ ಮಾಡುತ್ತಿದ್ದೆ ಎಂದು ಮತ್ತೊಬ್ಬರು ಹೇಳಿದ್ದಾರೆ. ಇದೇ ರೀತಿಯಾಗಿ ಹಲವಾರು ಜನರು ನಾನಾರೀತಿಯಾಗಿ ಟ್ವೀಟ್ ಮಾಡಿದ್ದಾರೆ. ಒಟ್ಟಿನಲ್ಲಿ ಅಮ್ಮನ ಪ್ಲೇಟ್ ನಿಂದ ನೆನಪುಗಳು ಮರುಕಳಿಸಿತು.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ