Viral Post: 16 ಮಕ್ಕಳಿಗೆ ಜನ್ಮ ನೀಡಿ 17ನೇ ಮಗುವಿನ ನಿರೀಕ್ಷೆಯಲ್ಲಿರುವ ಮಹಾ ತಾಯಿ!

ಇಲ್ಲೊಬ್ಬ ತಾಯಿ ಸತತವಾಗಿ 14 ವರ್ಷಗಳಿಂದ ಗರ್ಭಿಣಿಯಾಗುತ್ತಿದ್ದು, 16 ಮಕ್ಕಳ ತಾಯಿ ಆಗಿ, ಈಗ 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನೋಡಿ. ಇವರು ತಮ್ಮ 16ನೇ ಮಗುವಿಗೆ ಜನ್ಮ ನೀಡಿದ ಒಂದು ವರ್ಷಕ್ಕೆ ತನ್ನ 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ ಎಂದು ಹೇಳಲಾಗುತ್ತಿದೆ.

ಕಾರ್ಲೋಸ್ ಕುಟುಂಬ

ಕಾರ್ಲೋಸ್ ಕುಟುಂಬ

  • Share this:

ಮೊದಲೆಲ್ಲಾ ಮನೆ ತುಂಬಾ ಮಕ್ಕಳಿರುತ್ತಿದ್ದವು (Children), ಎಲ್ಲಿ ನೋಡಿದರೂ ಅಲ್ಲಿ ಮಕ್ಕಳ ಗುಂಪು ಆಟವಾಡುವುದನ್ನು (Playing) ಮತ್ತು ಗಲಾಟೆ ಮಾಡುತ್ತಿರುವುದನ್ನು ನಾವು ನೋಡುತ್ತಿದ್ದೆವು. ಬೆಳಿಗ್ಗೆ ಮತ್ತು ಸಂಜೆ ಹೊತ್ತಿನಲ್ಲಿ, ಅದರಲ್ಲೂ ಭಾನುವಾರವಂತೂ ಆಟದ ಮೈದಾನಗಳು (Play Ground) ಮಕ್ಕಳಿಂದ ತುಂಬಿ ತುಳುಕುತ್ತಿದ್ದವು. ಆದರೆ ಈಗ ಅಂತಹ ದೊಡ್ಡ ಕುಟುಂಬಗಳು ಹೆಚ್ಚಾಗಿ ನೋಡಲು ಸಿಗುತ್ತಿಲ್ಲ, ಆದ್ದರಿಂದ ಒಂದು ಮನೆಯಲ್ಲಿ ಇಬ್ಬರು ಮಕ್ಕಳಿದ್ದರೆ ಅದೇ ಹೆಚ್ಚು. ಆದರೆ ಈಗಂತೂ ಮನೆಗೆ ಒಂದೇ ಮಗು (Baby) ಎಂಬಂತೆ ಆಗಿದೆ, ‘ಮಕ್ಕಳಿರಲಿ ಮನೆ ತುಂಬಾ’ ಅಂತ ಹೇಳುವ ಮಾತು ಈಗ ‘ಒಂದೇ ಮಗು ಸಾಕು’ ಎಂಬಂತೆ ಆಗಿದೆ. ತಪ್ಪೇನಿಲ್ಲಾ ಬಿಡಿ, ಈಗಿನ ಖರ್ಚುಗಳು ಮತ್ತು ಸಮಾಜದ ವಾತಾವರಣ, ಮಕ್ಕಳ ಗಮನ ಸೆಳೆಯುತ್ತಿರುವ ಅನೇಕ ಸಾಧನಗಳನ್ನೆಲ್ಲಾ ನೋಡುತ್ತಿದ್ದರೆ, ಸಾಕು ಒಂದೇ ಮಗು ಅಂತ ಅನೇಕ ಪೋಷಕರಿಗೆ (Parents) ಅನ್ನಿಸುತ್ತಿರುವುದು ತಪ್ಪು ಅಂತ ಹೇಳಲು ಆಗುವುದಿಲ್ಲ.


14 ವರ್ಷಗಳಿಂದ 16 ಮಕ್ಕಳಿಗೆ ಜನ್ಮ ನೀಡಿದ ತಾಯಿ 
ಇದೆಲ್ಲಾ ಈಗೇಕೆ ನಾವು ಹೇಳುತ್ತಿದ್ದೇವೆ ಅಂತ ನಿಮಗೆ ಸ್ವಲ್ಪ ಆಶ್ಚರ್ಯವಾಗಬಹುದು. ಇಲ್ಲೊಬ್ಬ ತಾಯಿ ಸತತವಾಗಿ 14 ವರ್ಷಗಳಿಂದ ಗರ್ಭಿಣಿಯಾಗುತ್ತಿದ್ದು, 16 ಮಕ್ಕಳ ತಾಯಿ ಆಗಿ, ಈಗ 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾರೆ ನೋಡಿ. ಇವರು ತಮ್ಮ 16ನೇ ಮಗುವಿಗೆ ಜನ್ಮ ನೀಡಿದ ಒಂದು ವರ್ಷಕ್ಕೆ ತನ್ನ 17ನೇ ಮಗುವಿನ ನಿರೀಕ್ಷೆಯಲ್ಲಿದ್ದಾಳೆ ಎಂದು ಹೇಳಲಾಗುತ್ತಿದೆ.



ಇದು ನಡೆದದ್ದು ನಮ್ಮ ದೇಶದಲ್ಲಿ ಅಲ್ಲ ಬಿಡಿ, ಇದು ನಡೆದಿದ್ದು ಅಮೆರಿಕದ ನಾರ್ತ್ ಕೆರೊಲಿನಾದಲ್ಲಿ.  ನಾರ್ತ್ ಕೆರೊಲಿನಾದಲ್ಲಿ ವಾಸಿಸುತ್ತಿರುವ ಪಾಟಿ ಹೆರ್ನಾಂಡೆಜ್ ಮತ್ತು ಅವರ ಪತಿ ಕಾರ್ಲೋಸ್ ಅವರು ತಂದೆಯನ್ನು ಗೌರವಿಸಲು ತಮ್ಮ ಎಲ್ಲಾ ಮಕ್ಕಳಿಗೆ 'ಸಿ' ಯಿಂದ ಪ್ರಾರಂಭವಾಗುವ ಹೆಸರುಗಳನ್ನು ಆಯ್ಕೆ ಮಾಡಿರುವುದು ಇನ್ನೂ ವಿಶೇಷವೆಂದು ಹೇಳಬಹುದು.


ಎಲ್ಲಾ ಮಕ್ಕಳಿಗೆ 'ಸಿ' ಯಿಂದ ಪ್ರಾರಂಭವಾಗುವ ಹೆಸರುಗಳ ಆಯ್ಕೆ
ಈ ದಂಪತಿಗಳಿಗೆ ಆರು ಗಂಡು ಮಕ್ಕಳು ಮತ್ತು ಹತ್ತು ಹೆಣ್ಣು ಮಕ್ಕಳು ಇದ್ದಾರೆ, ಅವರಲ್ಲಿ ಮೂರು ಜೋಡಿಗಳು ಅವಳಿ ಮಕ್ಕಳ ಜೋಡಿ ಎಂದು ಹೇಳಲಾಗುತ್ತಿದೆ. ಕಾರ್ಲೋಸ್ ಜೂನಿಯರ್ (14), ಕ್ರಿಸ್ಟೋಫರ್ (13), ಕಾರ್ಲಾ (11), ಕೈಟ್ಲಿನ್ (11), ಕ್ರಿಸ್ಟಿಯನ್ (10), ಸೆಲೆಸ್ಟೆ (10), ಕ್ರಿಸ್ಟಿನಾ (9), ಕ್ಯಾಲ್ವಿನ್ (7), ಕ್ಯಾಥರೀನ್ (7), ಕ್ಯಾಲೆಬ್ (5), ಕ್ಯಾರೋಲಿನ್ (5), ಕ್ಯಾಮಿಲ್ಲಾ (4), ಕ್ಯಾರೋಲಿನ್ (4), ಕ್ಯಾಮಲ್ (4), ಕ್ರಿಸ್ಟಲ್ (2) ಮತ್ತು ಕ್ಲೇಟನ್ ಕೇವಲ ಒಂದು ವರ್ಷದ ಮಗು.




ಇದನ್ನೂ ಓದಿ:  Viral Story: ಐದೇ ವರ್ಷಕ್ಕೆ ಮಗುವಿಗೆ ಅಮ್ಮನಾದ ಕಂದಮ್ಮ! ಸಣ್ಣ ವಯಸ್ಸಿನಲ್ಲೇ ತಾಯಿಯಾದ ಹೆಣ್ಣು ಮಕ್ಕಳ ನೋವಿನ ಕಥೆ ಇಲ್ಲಿದೆ

17ನೇ ಮಗುವನ್ನು ಮಾರ್ಚ್ ನಲ್ಲಿ ಸ್ವಾಗತಿಸಲಿರುವ ದಂಪತಿಗಳು
ದಂಪತಿಯು ತಮ್ಮ 17ನೇ ಮಗುವನ್ನು ಮುಂದಿನ ವರ್ಷದ ಮಾರ್ಚ್ ತಿಂಗಳಲ್ಲಿ ಸ್ವಾಗತಿಸಲಿದ್ದಾರೆ ಎಂದು ಹೇಳಲಾಗುತ್ತಿದೆ. "ನಾನು 13 ವಾರಗಳ ಗರ್ಭಿಣಿ ಮತ್ತು ನನಗೆ ಗಂಡು ಮಗುವಿದೆ ಎಂದು ಈಗಷ್ಟೇ ತಿಳಿಯಿತು" ಎಂದು  ಪಾಟಿ ಹೆರ್ನಾಂಡೆಜ್ ಅವರು ತಿಳಿಸಿದ್ದಾರೆ.


ಈ ಬಗ್ಗೆ ಗರ್ಭಿಣಿ ಮಹಿಳೆ ಏನು ಹೇಳಿದ್ದಾರೆ ನೋಡಿ 
"ನಾನು 14 ವರ್ಷಗಳಿಂದ ಗರ್ಭಿಣಿಯಾಗಿದ್ದೇನೆ, ಆದ್ದರಿಂದ ನನ್ನ 17ನೇ ಮಗುವನ್ನು ಪಡೆಯುತ್ತಿರುವುದು ನಾನು ಒಂದು ರೀತಿಯಲ್ಲಿ ದೇವರಿಂದ ಆಶೀರ್ವದಿಸಲ್ಪಟ್ಟಿದ್ದೇನೆ ಅಂತ ಅನ್ನಿಸುತ್ತದೆ. ಒಟ್ಟಿನಲ್ಲಿ ನಾನು ತುಂಬಾನೇ ಸಂತೋಷವಾಗಿದ್ದೇನೆ ಮತ್ತು ಮಗುವನ್ನು ನೋಡಲು ಉತ್ಸುಕಳಾಗಿದ್ದೇನೆ" ಎಂದು ಅವರು ಹೇಳಿದರು.



ಪಾಟಿ ಕಳೆದ ವರ್ಷ ಮೇ ತಿಂಗಳಲ್ಲಿ ತನ್ನ ಕಿರಿಯ ಮಗು ಕ್ಲೇಟನ್ ಗೆ ಜನ್ಮ ನೀಡಿದ್ದಳು. ತನ್ನ ಕೊನೆಯ ಗರ್ಭಧಾರಣೆಯು ತನ್ನ ಅತ್ಯಂತ ಕಠಿಣವಾಗಿತ್ತು ಎಂದು ಅವಳು ಈ ಹಿಂದೆ ಹೇಳಿದಳು. ಪಾಟಿ 20 ಮಕ್ಕಳನ್ನು ಹೊಂದುವ ಭರವಸೆ ಹೊಂದಿದ್ದಾರೆ. ಅವಳು ಇನ್ನೂ 3 ಗಂಡು ಮಕ್ಕಳಿಗೆ ಜನ್ಮ ನೀಡಲು ಬಯಸುತ್ತಾಳೆ, ಹಾಗಾದಲ್ಲಿ ಈ ಕುಟುಂಬ 10 ಗಂಡು ಮಕ್ಕಳು ಮತ್ತು 10 ಹೆಣ್ಣು ಮಕ್ಕಳ ಕುಟುಂಬವಾಗುತ್ತದೆ.


ಇದನ್ನೂ ಓದಿ:  Baby Name: ಪಕೋಡಾ ಎಂದು ಮಗುವಿಗೆ ಹೆಸರಿಟ್ಟ ಬ್ರಿಟನ್ ದಂಪತಿ! ಭಾರತೀಯ ತಿಂಡಿ ಅಂದ್ರೆ ಅಷ್ಟೆಲ್ಲ ಇಷ್ಟವಂತೆ!

"18ನೇ ಮಗುವನ್ನು ನೀಡುವ ಇಚ್ಛೆ ಆ ದೇವರದ್ದಾಗಿದ್ದರೆ, ನಾವು ಅದನ್ನು ನಮಗೆ ನೀಡಲಿ ಅಂತ ಆ ದೇವರನ್ನು ಕೇಳುತ್ತಿದ್ದೇವೆ" ಎಂದು ಆ ತಾಯಿ ಹೇಳಿದರು. ಗರ್ಭನಿರೋಧಕವನ್ನು ಬಳಸಲು ಈ ದಂಪತಿಗಳು ನಿರಾಕರಿಸುತ್ತಾರೆ. ತನ್ನ ಮಕ್ಕಳನ್ನು ಹೆರುವ ಆಸ್ಪತ್ರೆಯಲ್ಲಿ ನರ್ಸ್ ಗಳು ಅವಳನ್ನು ಯಾವಾಗಲೂ ಗುರುತಿಸುತ್ತಾರೆ ಎಂದು ಪಾಟಿ ಹೇಳಿದರು. "ನೀವು ಕಳೆದ ವರ್ಷ ಇಲ್ಲಿಗೆ ಬಂದಿದ್ದೀರಿ, ನಾವು ಪ್ರತಿ ವರ್ಷ ನಿಮ್ಮನ್ನು ನೋಡುತ್ತೇವೆ" ಅಂತ ಅಲ್ಲಿನ ನರ್ಸ್ ಹೇಳುತ್ತಾರೆ” ಎಂದು ಅವರು ಹೇಳಿದರು.

Published by:Ashwini Prabhu
First published: