• Home
  • »
  • News
  • »
  • trend
  • »
  • Viral Video: 3 ವರ್ಷದ ಪುಟ್ಟ ಮಗುವಿಗೆ ಐಬ್ರೋ ಮಾಡಿದ ತಾಯಿ, ವೈರಲ್ ಆಯ್ತು ವಿಡಿಯೋ

Viral Video: 3 ವರ್ಷದ ಪುಟ್ಟ ಮಗುವಿಗೆ ಐಬ್ರೋ ಮಾಡಿದ ತಾಯಿ, ವೈರಲ್ ಆಯ್ತು ವಿಡಿಯೋ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

Viral Video: ದೊಡ್ಡವರಾದ ನಮಗೆ ಈ ಐಬ್ರೋ ವ್ಯಾಕ್ಸಿಂಗ್‌ ಇಷ್ಟು ನೋವು ಆಗಬೇಕಾದರೆ ಪಾಪ ಇಲ್ಲೊಂದು ಮಗುವಿಗೆ ಹೇಗಾಗಿರಬಾರದು ನೋಡಿ.

  • Share this:

ಈಗಿನ ಯುವತಿಯರು ಅಂದವಾಗಿ ಕಾಣಲು ಐಬ್ರೋ (Eyebrow), ಫೇಶಿಯಲ್‌, ವ್ಯಾಕ್ಸಿಂಗ್‌ ಅಂತಾ ಹಲವಾರು ವಿಧಾನಗಳ ಮೊರೆ ಹೋಗುತ್ತಾರೆ. ಮುಖದ ಮೇಲಿನ ಕೂದಲುಗಳು ಅಷ್ಟಾಗಿ ಚೆನ್ನಾಗಿ ಕಾಣುವುದಿಲ್ಲ ಎಂದು ಈ ವ್ಯಾಕ್ಸಿಂಗ್‌, ಐಬ್ರೋ, ಥ್ರೆಡ್ಡಿಂಗ್‌ ಮಾಡಿಸಿಕೊಳ್ಳಲು ಗಂಟೆಗಟ್ಟಲೆ ಪಾರ್ಲರ್‌ನಲ್ಲಿ (Beauty Parlour) ಸಮಯ ಕಳೆಯುತ್ತಾರೆ. ಕೆಲವರು ಈ ವಿಧಾನಗಳನ್ನು (Method) ಮನೆಯಲ್ಲಿಯೂ ಸಹ ಅನುಸರಿಸುತ್ತಾರೆ. ಇವೆಲ್ಲಾ ನಮ್ಮ ಅಂದ ಹೆಚ್ಚಿಸುತ್ತವೆಯಾದರೂ, ಸಾಕಷ್ಟು ನೋವಿನ ಕೆಲಸವಾಗಿದೆ. ಹೆಣ್ಣು ಮಕ್ಕಳಿಗೆ ಇದರ ಅನುಭವ (Experience)  ಚೆನ್ನಾಗಿಯೇ ಇರುತ್ತದೆ. ವ್ಯಾಕ್ಸ್‌ ಮಾಡುವಾಗ, ಹುಬ್ಬುಗಳನ್ನು ದಾರದಿಂದ ಎಳೆಯುವಾಗ ಅದೆಷ್ಟೋ ಯುವತಿಯರು ಪಾರ್ಲರ್‌ನಲ್ಲಿ ಕಣ್ಣೀರು ಹಾಕುವುದು ಕೂಡ ಇದೆ.


ದೊಡ್ಡವರಾದ ನಮಗೆ ಈ ಐಬ್ರೋ, ವ್ಯಾಕ್ಸಿಂಗ್‌ ಇಷ್ಟು ನೋವು ಆಗಬೇಕಾದರೆ, ಪಾಪ ಇಲ್ಲೊಂದು ಮಗುವಿಗೆ ಹೇಗಾಗಿರಬಾರದು ನೋಡಿ. ಮಗುವಿಗೆ ಐಬ್ರೋನಾ ಅಂತಾ ಶಾಕ್‌ ಆಗಿದ್ದರೆ, ಮುಂದೆ ಈ ಸ್ಟೋರಿ ಓದಿ ನಿಮಗೆ ಎಲ್ಲಾ ತಿಳಿಯುತ್ತೆ.


3 ವರ್ಷದ ಮಗಳ ಹುಬ್ಬಿಗೆ ವ್ಯಾಕ್ಸ್‌ ಮಾಡಿದ ತಾಯಿ
ಹೌದು, ಟೆಕ್ಸಾಸ್‌ನಲ್ಲಿ ತಾಯಿಯೊಬ್ಬಳು ತನ್ನ 3 ವರ್ಷದ ಮಗಳ ಹುಬ್ಬಿಗೆ ವ್ಯಾಕ್ಸ್ ಮಾಡಿದ ವಿಡಿಯೋ ವೈರಲ್ ಆಗಿದೆ. ನಮ್ಮ ಎರಡೂ ಹುಬ್ಬುಗಳ ಮಧ್ಯ ಭಾಗದಲ್ಲಿ ಸ್ವಲ್ಪ ಕೂದಲು ಇರುತ್ತದೆ. ಇದನ್ನು ಯುನಿಬ್ರೋ ಎನ್ನುತ್ತಾರೆ. ಕೆಲವರಿಗೆ ಈ ಜಾಗದಲ್ಲಿ ಸಾಕಷ್ಟು ಕೂದಲಿದ್ದು ಎರಡೂ ಹುಬ್ಬುಗಳು ಸೇರಿಕೊಂಡಿರುತ್ತವೆ. ಈ ಚಿಕ್ಕ ಹುಡುಗಿಯ ಕಥೆಯೂ ಅದೇ ಆಗಿತ್ತು. ಅದಕ್ಕಾಗಿ ತಾಯಿ ಲೇಹ್ ಗಾರ್ಸಿಯಾ ತನ್ನ ಮಗಳ ಯುನಿಬ್ರೋವನ್ನು ವ್ಯಾಕ್ಸ್‌ ಮೂಲಕ ತೆಗೆದು ಹಾಕಿದ್ದಾಳೆ.


31 ವರ್ಷದ ಲೇಹ್ ಗಾರ್ಸಿಯಾ ಮುಂದೆ ಅವಳು ಈ ರೀತಿಯಾ ಪರಿಸ್ಥಿತಿಯನ್ನು ಎದುರಿಸಬೇಕಾಗುತ್ತದೆ, ಅದಕ್ಕಾಗಿ ಈಗಿನಿಂದಲೇ ನನ್ನ ಮಗಳನ್ನು ಸಜ್ಜು ಮಾಡುತ್ತಿದ್ದೇನೆ ಎಂದು ಈ ತನ್ನ ಕೆಲಸವನ್ನು ಸಮರ್ಥಿಸಿಕೊಂಡಿದ್ದಾಳೆ.
ಕ್ಲಿಪ್ ಅನ್ನು ಮೂಲತಃ ಟಿಕ್ ಟಾಕ್‌ನಲ್ಲಿ ಪೋಸ್ಟ್‌ ಮಾಡಲಾಗಿದ್ದು, ಇಂಟರ್‌ನೆಟ್‌ ತುಂಬಾ ಈ ವಿಡಿಯೋ ವೈರಲ್‌ ಆಗಿದೆ.


ಇದನ್ನೂ ಓದಿ: ನೋರಾ ಫತೇಹಿಯಂತೆ ರಸ್ತೆ ನಡುವಿನಲ್ಲಿ ದಿಲ್ಬರ್​ ಹಾಡಿಗೆ ಹೆಜ್ಜೆ ಹಾಕಿದ ಯುವತಿ! ವಿಡಿಯೋ ಇಲ್ಲಿದೆ


ಗಾರ್ಸಿಯಾ ನನ್ನ ಮಗಳ ಹುಬ್ಬಿನ ಮಧ್ಯ ಭಾಗದಲ್ಲಿ ವ್ಯಾಕ್ಸ್‌ ಸ್ಟ್ರಿಪ್ಸ್‌ ಅನ್ನು ಹಚ್ಚಿ ಎಳೆದಿದ್ದಾಳೆ. ತಾಯಿ ಹೀಗೆ ಎಳೆಯುತ್ತಿದ್ದಂತೆ ಆ ಪುಟ್ಟ ಮಗು "ಓಹ್, ಅಮ್ಮ, ಇದು ನನಗೆ ತುಂಬಾ ನೋವು ಆಯಿತು" ಎನ್ನುತ್ತಾಳೆ. ಇದಕ್ಕೆ ಉತ್ತರಿಸಿದ ಗಾರ್ಸಿಯಾ ನೋಡು ಈಗನಿನಗೆ ಎರಡು ಹುಬ್ಬುಗಳು ಸಿಕ್ಕಿವೆ ಎನ್ನುತ್ತಾಳೆ.


ಈ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ತಾಯಿ ತನ್ನ ಮಗಳ ಮೇಲೆ ಅಭದ್ರತೆಯನ್ನು ತೋರಿಸುತ್ತಿದ್ದಾರೆ ಎಂದು ಸಾಮಾಜಿಕ ಮಾಧ್ಯಮದಲ್ಲಿ ಜನರು ಹೇಳಿದ್ದಾರೆ. ಸುದ್ದಿ ಮಾಧ್ಯಮಗಳಿಗೆ ನೀಡಿದ ಸಂದರ್ಶನದಲ್ಲಿ, ಗಾರ್ಸಿಯಾ ತನ್ನ ಮಗಳ ಯುನಿಬ್ರೊವನ್ನು ವ್ಯಾಕ್ಸಿಂಗ್ ಮಾಡಬೇಕೆಂದು ತುಂಬಾ ದಿನದಿಂದ ಅಂದುಕೊಳ್ಳುತ್ತಿದೆ. ಈಗ ಅವುಗಳನ್ನು ತೆಗೆದು ನನ್ನ ಮಗಳಿಗೆ ನಿನಗೂ ಸಹ ಎರಡು ಹುಬ್ಬು ಇದೆ ಎಂದು ತೋರಿಸಿದ್ದೇನೆ ಎಂಬ ಉತ್ತರ ನೀಡಿದ್ದಾರೆ.


"ಬಾಲ್ಯದಲ್ಲಿ, ನಾನು ತುಂಬಾ ದಪ್ಪ ಮತ್ತು ಕಪ್ಪು ಹುಬ್ಬುಗಳನ್ನು ಹೊಂದಿದ್ದೆ. ನನ್ನ ಪೋಷಕರಿಗೆ ತಿಳಿಯದಂತೆ ಅವುಗಳನ್ನು ವ್ಯಾಕ್ಸ್‌ ಮಾಡಿಕೊಳ್ಳುತ್ತಿದ್ದೆ. ಇದರ ಬಗ್ಗೆ ನನ್ನ ಪೋಷಕರಿಗೆ ಕಾಳಜಿ ಇರಲಿಲ್ಲ.
ನನ್ನ ಬಾಲ್ಯದಲ್ಲಿ ನನಗೆ ಬೇರೆ ಮಕ್ಕಳು ನಿನ್ನ ಹುಬ್ಬುಗಳು ಏಕೆ ದೊಡ್ಡದಾಗಿವೆ? ಎಂದು ಕೇಳುತ್ತಿದ್ದರು ಎಂದು ಹೇಳಿದ್ದಾರೆ.


ಇದನ್ನೂ ಓದಿ: ಈ ನಾಯಿ ಮನುಷ್ಯರೊಂದಿಗೆ ಹೇಗೆ ವಾಲಿಬಾಲ್ ಆಡ್ತಿದೆ ನೋಡಿ


ನೆಟ್ಟಿಗರಿಂದ ಟೀಕೆ
ತನ್ನ ಪುಟ್ಟ ಮಗಳಿಗೆ ವ್ಯಾಕ್ಸಿಂಗ್‌ ಮಾಡುವ ಮೂಲಕ ನೋವುಂಟು ಮಾಡಿದ ಗಾರ್ಸಿಯಾ ಅವರ ಕ್ರಮವನ್ನು ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಟೀಕೆ ಮಾಡಿದ್ದಾರೆ. ಪಾಪ ಆ ಪುಟ್ಟ ಹುಡುಗಿಗೆ ನೋವುಂಟು ಮಾಡಿ ಐಬ್ರೋ ಮಾಡುವ ಅಗತ್ಯ ಇರಲಿಲ್ಲ ಎಂದಿದ್ದಾರೆ. ಇನ್ನು ಕೆಲ ನೆಟ್ಟಿಗರು "ಅದ್ಭುತ ತಾಯಿ" ಎಂದು ಗಾರ್ಸಿಯಾಳನ್ನು ಹೊಗಳಿದ್ದಾರೆ. ಈ ವಿಡಿಯೋವನ್ನು ಟ್ವಿಟರ್​​ನಿಂದ ಡಿಲೀಟ್ ಮಾಡಲಾಗಿದೆ.

First published: