HOME » NEWS » Trend » MOTHER LEFT RS 100 WORTH HARRY POTTER HARDBACK FOR DAUGHTERS AS INHERITANCE BOOK NOW WORTH RS 30 LAKH STG HG

100 ರೂಪಾಯಿಗೆ ಅಮ್ಮ ಮಕ್ಕಳಿಗೆ ಖರೀದಿಸಿದ ಹ್ಯಾರಿ ಪಾಟರ್​ ಪುಸ್ತಕಕ್ಕೆ ಇಂದು 30 ಲಕ್ಷ ರೂ. ಮೌಲ್ಯ!

ಸುಮಾರು 20 ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಹ್ಯಾರಿ ಪಾಟರ್​ನ ಹಾರ್ಡ್​ಬ್ಯಾಕ್​ ಪ್ರತಿಯನ್ನು ಖರೀದಿ ಮಾಡಿದ್ದರು. 1 ಪೌಂಡ್​​ (ಅಂದಾಜು 100 ರೂ) ಕೊಟ್ಟು ಈ ಪುಸ್ತಕ ಖರೀದಿ ಮಾಡಿದ್ದರು. ಈ ಹ್ಯಾರಿ ಪಾಟರ್​ ಬುಕ್ 1997ರಲ್ಲಿ ಮೊದಲ ಬಾರಿಗೆ ಮುದ್ರಣ ಕಂಡಿದ್ದ ಪುಸ್ತಕವಾಗಿತ್ತು.

news18-kannada
Updated:April 2, 2021, 12:07 PM IST
100 ರೂಪಾಯಿಗೆ ಅಮ್ಮ ಮಕ್ಕಳಿಗೆ ಖರೀದಿಸಿದ ಹ್ಯಾರಿ ಪಾಟರ್​ ಪುಸ್ತಕಕ್ಕೆ ಇಂದು 30 ಲಕ್ಷ ರೂ. ಮೌಲ್ಯ!
ಹ್ಯಾರಿ ಪಾಟರ್
  • Share this:
ಪುಸ್ತಕ ಲೋಕದಲ್ಲೇ ಮ್ಯಾಜಿಕ್ ಕ್ರಿಯೆಟ್ ಮಾಡಿದ್ದ ಹ್ಯಾರಿ ಪಾಟರ್​  ಪುಸ್ತಕ ಅದರ ಲೇಖಕಿ ಜೆ ಕೆ ರೌಲಿಂಗ್ ಬದುಕನ್ನು ಸಹ ಮ್ಯಾಜಿಕ್​ನಂತೆ ಬದಲಿಸಿತು. ಕಡು ಬಡತನದಲ್ಲಿ ಕಂಬನಿ ಹರಿಸುತ್ತಿದ್ದ ಲೇಖಕಿಯನ್ನು ವಿಶ್ವದ ಶ್ರೀಮಂತರ ಪಟ್ಟಿಗೆ ಸೇರಿಸಿತು. ಇಡೀ ವಿಶ್ವದಲ್ಲೇ ದೊಡ್ಡದೊಂದು ಮ್ಯಾಜಿಕ್ ಹರಿಸಿತ್ತು. ಈಗ ಹ್ಯಾರಿ ಪಾಟರ್​ ಪುಸ್ತಕ ಮತ್ತೊಂದು ಚಮತ್ಕಾರಕ್ಕೆ ಸಾಕ್ಷಿಯಾಗಿದೆ. ಅಷ್ಟೇ ಅಲ್ಲದೇ ಇಂದಿಗೂ ಅದರ ಶ್ರೇಷ್ಠತೆಯನ್ನು ಹೆಚ್ಚಿಸಿಕೊಳ್ಳುತ್ತಲೇ ಸಾಗಿದೆ. 20 ವರ್ಷಗಳ ಹಿಂದೆ ಹ್ಯಾರಿ ಪಾಟರ್​ ಪುಸ್ತಕವು ಮೊದಲ ಮುದ್ರಣವನ್ನು ಕಂಡಿತು. ಕೇವಲ 500 ಪ್ರತಿಗಳನ್ನು ಮಾತ್ರವೇ ಆ ವೇಳೆ ಮುದ್ರಿಸಲಾಗಿತ್ತು. ಆದರೆ 20 ವರ್ಷದ ನಂತರ ಆ ಪ್ರತಿಗಳಿಗೆ ಈಗ ಬಂಪರ್​ ಬೆಲೆ ಬಂದಿದ್ದು, ಅಗಲಿದ ಶಿಕ್ಷಕಿಯ ಮಕ್ಕಳನ್ನು ಸಿರಿವಂತರನ್ನಾಗಿಸಿದೆ. ಆ ಕುತೂಹಲಭರಿತ ಕಥೆ ಇಲ್ಲಿದೆ.

ಸುಮಾರು 20 ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕಿಯೊಬ್ಬರು ಹ್ಯಾರಿ ಪಾಟರ್​ನ ಹಾರ್ಡ್​ಬ್ಯಾಕ್​ ಪ್ರತಿಯನ್ನು ಖರೀದಿ ಮಾಡಿದ್ದರು. 1 ಪೌಂಡ್​​ (ಅಂದಾಜು 100 ರೂ) ಕೊಟ್ಟು ಈ ಪುಸ್ತಕ ಖರೀದಿ ಮಾಡಿದ್ದರು. ಈ ಹ್ಯಾರಿ ಪಾಟರ್​ ಬುಕ್ 1997ರಲ್ಲಿ ಮೊದಲ ಬಾರಿಗೆ ಮುದ್ರಣ ಕಂಡಿದ್ದ ಪುಸ್ತಕವಾಗಿತ್ತು. ಕಾಲ ಸರಿದಂತೆ ಆ ಶಿಕ್ಷಕಿಗೆ 45 ವರ್ಷವಾದಾಗ ಸ್ತನ ಕ್ಯಾನ್ಸರ್​​ನಿಂದ 2005 ರಲ್ಲಿ ತೀರಿಕೊಂಡರು. ಆದರೆ ಆಕೆ ತಾನು ಖರೀದಿ ಮಾಡಿದ್ದ ಹ್ಯಾರಿ ಪಾಟರ್ ಪುಸ್ತಕವನ್ನು ತನ್ನ ಮಕ್ಕಳಿಗೆ ಬಳುವಳಿಯಾಗಿ ನೀಡಿದ್ದರು. ಮಕ್ಕಳು ಓದಿನ ಖುಷಿ ಅನುಭವಿಸಲಿ ಎನ್ನುವುದು ಆಕೆಯ ಆಶಯವಾಗಿತ್ತು. ಆದರೆ ಇದೆಲ್ಲವೂ ನಡೆದು 16 ವರ್ಷಗಳೇ ಕಳೆದು ಹೋದವು. ಹೀಗಿರುವಾಗ ಒಂದು ದಿನ ಶಿಕ್ಷಕಿಯ 4 ಜನ ಹೆಣ್ಣು ಮಕ್ಕಳಿಗೆ ಒಂದು ಸಂಗತಿ ಅರಿವಾಗಿದೆ. ಮೊದಲ ಮುದ್ರಣದ ಈ ಹ್ಯಾರಿ ಪಾಟರ್ ಪುಸ್ತಕ ಬಹಳ ಅಪರೂಪದ್ದಾಗಿದ್ದು, ಮೊದಲ ಮುದ್ರಣದ ಪುಸ್ತಕದ ಬೆಲೆ ಈಗ 30,000 ಪೌಂಡ್​ (30 ಲಕ್ಷ ರೂಪಾಯಿ) ಇದೆ ಎಂದು ತಿಳಿದು ಬಂದಿದೆ.

ಈ ಹ್ಯಾರಿಪಾಟರ್​ ಪುಸ್ತಕದಲ್ಲಿ ಅಲ್ಟಿಮೇಟ್​ ಪಾಟರ್​ ಕಲೆಕ್ಷನ್ಸ್​ ಐಟಮ್​ ಎಂದು ವಿವರಿಸಲಾಗಿದೆ. ಈ ಪುಸ್ತಕ ಕೇವಲ 500 ಪ್ರತಿಗಳ ಮುದ್ರಣವನ್ನು ಮಾತ್ರ ಕಂಡಿತ್ತು. ಈ ಅಪರೂಪದ ಪುಸ್ತಕಕ್ಕೆ ಹೆಚ್ಚು ಬೇಡಿಕೆ ಇತ್ತು. ಒಂದು ಷರತ್ತಿನ ಆಧಾರದ ಮೇಲೆ ಹಿಂದೆ 69,000 ಪೌಂಡ್​(ಅಂದಾಜು 68 ಲಕ್ಷ)ಕ್ಕೆ ಇನ್ನೊಂದು ಪುಸ್ತಕ ಮಾರಾಟವಾಗಿತ್ತು.

ಬರ್ಮಿಂಗ್​ಹ್ಯಾಮ್​ ಮೇಲ್​ ನಲ್ಲಿ ಬರ್ಟನ್​ ಅಪಾನ್​ ಟ್ರೆಂಟ್​​ನ ಕೌನ್ಸಿಲ್​ ವರ್ಕರ್​​ ಸಿಬ್ಬಂದಿ 'ಧೂಳು ತುಂಬಿಕೊಂಡು ವರ್ಷಾನುಗಟ್ಟಲೇ ಕಪಾಟಿನಲ್ಲಿರುವ ಈ ಪುಸ್ತಕವು ಹ್ಯಾರಿ ಪಾಟರ್​ನ ಮೊದಲ ಮುದ್ರಣವಾಗಿದೆ' ಎಂದು ಖಚಿತಪಡಿಸಿದ್ದಾರೆ.

ದಿವಂಗತ ಶಾಲಾ ಶಿಕ್ಷಕಿಗೆ ಓದುವುದರಲ್ಲಿ ಬಹಳ ಆಸಕ್ತಿ ಇತ್ತು. ಆದ್ದರಿಂದ ಮಕ್ಕಳಲ್ಲಿ ಓದುವ ಅಭಿರುಚಿ ಹೆಚ್ಚಾಗಲಿ ಎನ್ನುವ ಕಾರಣಕ್ಕೆ ಮನೆಯಲ್ಲಿ ಹೆಚ್ಚು ಪುಸ್ತಕಗಳನ್ನು ಸಂಗ್ರಹಿಸಿದ್ದರು. ಒಂದು ವರದಿಯ ಪ್ರಕಾರ ಹ್ಯಾರಿ ಪಾಟರ್ ಪುಸ್ತಕವು ಸ್ಟ್ಯಾಫರ್ಡ್​ಶಿರ್ ನ ಹ್ಯಾನ್ಸನ್​ ಹರಾಜಿನಲ್ಲಿ 4 ಜನ ಅಕ್ಕ ತಂಗಿಯರಿಗೆ ದೊಡ್ಡ ಮೊತ್ತದ ಹಣವನ್ನು ನೀಡಲಿದೆ ಎನ್ನುವ ನಿರೀಕ್ಷೆಗಳಿವೆ. ಹ್ಯಾನ್ಸನ್ ಹರಾಜಿನ ಮಾಲೀಕರಾದ ಚಾರ್ಲ್ಸ್​​ ಹ್ಯಾನ್ಸನ್​ ಪ್ರಕಾರ 'ತಾಯಿಯ ಪ್ರೀತಿಯೂ ಶಾಶ್ವತವಾಗಿರುತ್ತದೆ. ಅವರ ತಾಯಿಯೇ ಸ್ವರ್ಗದಿಂದ ಈ ಹೆಣ್ಣು ಮಕ್ಕಳಿಗೆ ಈ ಉಡುಗೊರೆಯನ್ನು ಕಳುಹಿಸಿದ್ದಾರೆ' ಎಂದಿದ್ದಾರೆ.

ಹೆಸರು ಹೇಳಲಿಚ್ಚಿಸದ ಶಿಕ್ಷಕಿಯವರ 31 ವರ್ಷದ ಹಿರಿಯ ಮಗಳು ಬರ್ಮಿಂಗ್ ಹ್ಯಾಮ್​ ಮೇಲ್​ನಲ್ಲಿ ಅವರ ತಾಯಿ ತೀರಿಕೊಂಡ ದಿನದಿಂದ ಅಂದರೆ 16 ವರ್ಷದಿಂದಲೂ ಪುಸ್ತಕದ ಕಪಾಟಿನಲ್ಲಿ ಈ ಹ್ಯಾರಿ ಪಾಟರ್ ಪುಸ್ತಕ ಧೂಳು ಕುಡಿಯುತ್ತಾ ಕೂತಿದೆ. ಹರಾಜಿನಲ್ಲಿ ಬಂದ ಹಣವನ್ನು ತಮ್ಮ ತಾಯಿಯವರ ಬಳುವಳಿ ಎನ್ನುವಂತೆ ಸಮನಾಗಿ ಹಂಚಿಕೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.
First published: April 2, 2021, 12:04 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories