Breast milk: ಎದೆ ಹಾಲು ಮಾರಿ ಲಕ್ಷಾಂತರ ಹಣ ಗಳಿಸುತ್ತಿದ್ದಾಳೆ ಈ ತಾಯಿ! 30 ml ಹಾಲಿನ ಬೆಲೆ ಎಷ್ಟು ಗೊತ್ತಾ?

Breast milk: ಬ್ರಿಟನ್‌ನಲ್ಲಿ ತಾಯಿಯೊಬ್ಬಳು ಹಣ ಸಂಪಾದಿಸುವುದಕ್ಕಿಂತ ಹೆಚ್ಚಾಗಿ ಮಕ್ಕಳಿಗಾಗಿ ತನ್ನ ಎದೆಹಾಲನ್ನು ಮಾರಾಟ ಮಾಡುತ್ತಿದ್ದಾಳೆ (Woman Sells Her Breast Milk). ಮಹಿಳೆಯು ಈ ಎದೆ ಹಾಲುನಿಂದ ಹಣಣವನ್ನೂ ಗಳಿಸುತ್ತಿದ್ದಾಳೆ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿದ್ದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
    ತಾಯಂದಿರು ನೀಡುವ ಎದೆಹಾಲು (Breast Milk) ಮಕ್ಕಳ ಬೆಳವಣಿಗೆಗೆ (Growth) ಕಾರಣವಾಗುತ್ತದೆ. ಜೊತೆಗೆ ಹಸಿವು ನೀಗಿಸುತ್ತದೆ. ಒಂದು ಹಂತದವರೆಗೆ ತಾಯಂದಿರು (Mother) ಮಕ್ಕಳಿಗೆ ಎದೆಹಾಲನ್ನು ನೀಡುತ್ತಾ ಬರುತ್ತಾರೆ. ಆ ಬಳಿಕ ಎದೆ ಹಾಲನ್ನು ನೀಡುವುದನ್ನು ನಿಲ್ಲಿಸಿ ಬೆಳವಣಿಗೆಗೆಂದು ಮೃದುವಾದ ಆಹಾರವನ್ನು (Soft food) ನೀಡಲು ಪ್ರಾರಂಭಿಸುತ್ತಾರೆ. ಆ ಮೂಲಕ ಮಗುವಿನ ಬೆಳವಣಿಗೆಗೆ ಬಗ್ಗೆ ಹೆಚ್ಚು ತಲೆ ಕೆಡಿಸಿಕೊಳ್ಳುತ್ತಾರೆ. ತಾಯಿಯ ಎದೆಹಾಲು ಮಗುವಿನ ಬೆಳವಣಿಗೆಯ ಮೇಲೆ ಪರಿಣಾಮ ಬೀರುವುದಂತೂ ನಿಜ. ಆದರೆ ಕೆಲವು ಮಕ್ಕಳು ತಾಯಂದಿರ ಎದೆಹಾಲಿನಿಂದ ವಂಚಿತರಾಗುತ್ತಾರೆ. ಆದರೆ ಜಗತ್ತಿನಲ್ಲಿ ತಾಯಿಯ ಎದೆ ಹಾಲಿಗೂ ಬೇಡಿಕೆ (Dimond) ಇದೆ ಎಂಬುದು ಬಹುತೇಕರಿಗೆ ತಿಳಿದಿಲ್ಲ. ಭಾರತ ಮಾತ್ರವಲ್ಲದೆ ವಿದೇಶದಲ್ಲೂ (Foreign) ತಾಯಂದಿರ ಎದೆ ಹಾಲಿಗೆ ಬೇಡಿಕೆ ಇದೆ. ಅದಕ್ಕೆಂದೇ ಮಾರುಕಟ್ಟೆಯಿದೆ (Market). ಎದೆ ಹಾಲು ಮಾರುವ ಅದೆಷ್ಟೋ ತಾಯಂದಿರು ಇದ್ದಾರೆ. ಅದರಂತೆ ಇಲ್ಲೊಬ್ಬಳು ತಾಯಿ ತನ್ನ ಎದೆ ಹಾಲು ಮಾಡಿ ಲಕ್ಷಾಂತರ (Lakh) ರೂಪಾಯಿ ಗಳಿಸುತ್ತಿದ್ದಾಳೆ.

    ಬ್ರಿಟನ್‌ನಲ್ಲಿ ತಾಯಿಯೊಬ್ಬಳು ಹಣ ಸಂಪಾದಿಸುವುದಕ್ಕಿಂತ ಹೆಚ್ಚಾಗಿ ಮಕ್ಕಳಿಗಾಗಿ ತನ್ನ ಎದೆಹಾಲನ್ನು ಮಾರಾಟ ಮಾಡುತ್ತಿದ್ದಾಳೆ (Woman Sells Her Breast Milk). ಮಹಿಳೆಯು ಈ ಎದೆ ಹಾಲುನಿಂದ ಹಣಣವನ್ನೂ ಗಳಿಸುತ್ತಿದ್ದಾಳೆ ಮತ್ತು ಮಾರುಕಟ್ಟೆಯಲ್ಲಿ ಬೇಡಿಕೆಯನ್ನು ಸೃಷ್ಟಿಸಿದ್ದಾರೆ.

    ಮಿಲಾ ಡೆಬ್ರಿಟೊ ಎಂಬ ಮಹಿಳೆ ಎದೆಹಾಲು ಮಾರುತ್ತಿರುವ ತಾಯಿ. ಈಕೆ ಲಕ್ಷಾಂತರ ರೂಪಾಯಿ ಸಂಪಾದಿಸುರುವ ವಿಷಯವನ್ನು ಸ್ವತಃ ಸಾಮಾಜಿಕ ಜಾಲತಾಣಗಳ ಮೂಲಕ ಜನರಿಗೆ ತಿಳಿಸಿದ್ದಾಳೆ. ಅಷ್ಟೇ ಅಲ್ಲ, ತಾಯಿಯ ಹಾಲಿಗಿರುವ ಬೇಡಿಕೆ ಮತ್ತು ಅದರ ಅವಶ್ಯಕತೆಯನ್ನು ಅರಿತುಕೊಂಡಿರುವ ಈಕೆ ದ್ರವರೂಪದ ಚಿನ್ನ ಎಂದು ಕರೆಯುತ್ತಾಳೆ.

    ಬಾಡಿಬಿಲ್ಡರ್‌ಗಳು ಎದೆಹಾಲಿನ ಗ್ರಾಹಕರು

    ಈ ವಿಚಾರ ಕೇಳಲು ವಿಚಿತ್ರವೆನಿಸಬಹುದು. ಆದರೆ ನಿಜ ಸಂಗತಿ ಎಂರೆ ಬಾಡಿ ಬಿಲ್ಡರ್​ಗಳು ಎದೆಹಾಳು ಖರೀದಿಸುತ್ತಿದ್ದಾರೆ.. ಇದು ಸ್ನಾಯುಗಳಿಗೆ ತುಂಬಾ ಪ್ರಯೋಜನಕಾರಿ ಎಂದು ಅವರು ನಂಬುತ್ತಾರೆ.

    ತಾಯಿ ಮಿಲಾ ಡೆಬ್ರಿಟೊ ತಮ್ಮ ಗ್ರಾಹಕರ ತೃಪ್ತಿಗಾಗಿ, ಸಿಗರೇಟ್ ಮತ್ತು ಮದ್ಯವನ್ನು ಸೇವಿಸುವುದಿಲ್ಲ ಎಂದು ಹೇಳಿಕೊಂಡಿದ್ದಾರೆ. ಮಾತ್ರವಲ್ಲದೆ ಗ್ರಾಹಕರು ಖಚಿತಪಡಿಸಿಕೊಳ್ಳಲು ತಾನು ಪರೀಕ್ಷೆಗಳಿಗೆ ಒಳಗಾಗಿರುವುದನ್ನು ಸಂಗತಿಯನ್ನು ಹಂಚಿಕೊಂಡಿದ್ದಾರೆ.

    ಇದನ್ನು ಓದಿ- Bengaluru Theft: ಟ್ರಾಫಿಕ್ ಲೈಟ್​ಗಳ ಬ್ಯಾಟರಿ ಕದಿಯೋ ಬೆಂಗಳೂರಿನ ಖತರ್ನಾಕ್ ಜೋಡಿ!

    ಗ್ರಾಹಕರು ಮಿಲಾ ಡೆಬ್ರಿಟೊ ಅವರು ಯಾವುದೇ ಕೆಟ್ಟಚಟವಿಲ್ಲವೆಂದು ಅರಿತ ನಂತರವೇ ಅವರು ಎದೆ ಹಾಲು ಖರೀದಿಸುತ್ತಾರೆ. ಪುರುಷರು ಎದು ಹಾಲು ಖರೀದಿಸಿ ಏನು ಮಾಡುತ್ತಾರೆಂದು ತನಗೆ ತಿಳಿದಿಲ್ಲ ಆದರೆ ತನ್ನ ಗ್ರಾಹಕರ ಪ್ರಕಾರ ಅವರು ಅದನ್ನು ಕುಡಿಯುತ್ತಾರೆ ಎಂದು ಮಿಲಾ ಹೇಳಿದ್ದಾಳೆ. ಮಿಲಾ ಅವರ ಈ ವಿಡಿಯೋ ಸಾಕಷ್ಟು ವೈರಲ್ ಆಗಿದ್ದು, ಜನರು ಇದಕ್ಕೆ ವಿಭಿನ್ನ ಪ್ರತಿಕ್ರಿಯೆಗಳನ್ನು ನೀಡುದ್ದಾರೆ.

    ಇದನ್ನು ಓದಿ- Viral Video: ಈ ಅಜ್ಜಿ ಮಾತಾಡೋ ಇಂಗ್ಲೀಷ್​​ ಕೇಳಿ ಫಿದಾ ಆದ ನೆಟ್ಟಿಗರು, ನೀವೂ ಒಮ್ಮೆ ನೋಡಿ

    30 ಮಿಲಿ ಹಾಲಿನ ಬೆಲೆ 100 ರೂ.

    ಮಿಲಾ ಡೆಬ್ರಿಟೊ ತನ್ನ ದೇಹದ ಹೆಚ್ಚುವರಿ ಹಾಲನ್ನು ಸಹ ಮಾರಾಟ ಮಾಡುತ್ತಾಳೆ ಏಕೆಂದರೆ ಅವಳು ಅದಕ್ಕೆ ಉತ್ತಮ ಬೆಲೆಯನ್ನು ಪಡೆಯುತ್ತಾಳೆ. 29.5 ಎಂಎಲ್ ಹಾಲಿನ ಬೆಲೆ 100 ರೂ.ಗಿಂತ ಹೆಚ್ಚು. ಲೀಟರ್​​​ ಗಟ್ಟಲೆ ಹಾಲು ಮಾರಾಟ ಮಾಡುವ ಮೂಲಕ ಮಿಲಾ ಇದುವರೆಗೆ 10 ಲಕ್ಷ ರೂಪಾಯಿ ಗಳಿಸಿದ್ದಾರೆ. ಅವರ ಈ ವಿಚಿತ್ರ ವ್ಯವಹಾರ ಮಾದರಿಗೆ ಜನ ಮಿಶ್ರ ಪ್ರತಿಕ್ರಿಯೆಗಳನ್ನು ನೀಡಿದ್ದಾರೆ. ಆದರೆ ಇನ್ನು ಕೆಲವರು ಎದೆ ಹಾಲನ್ನು ನಿರ್ಗತಿಕ ಮಕ್ಕಳಿಗೆ ನೀಡುವಂತೆ ಮನವಿ ಮಾಡಿದ್ದಾರೆ. ದೇಹದಾಡ್ಯರು ಕೂಡ ಮಹಿಳೆಯರ ಎದೆ ಹಾಲಿಗೆ ಬೆಲೆ ನೀಡಿ ಖರೀದಿಸುತ್ತಾರೆ. ಒಟ್ಟಿನಲ್ಲಿ ಮಿಲಾ ಡೆಬ್ರಿಟೊ ಎದೆ ಹಾಳು ಮಾರಿ ಉತ್ತಮ ಲಾಭವನ್ನು ಗಳಿಸುತ್ತಿದ್ದಾರೆ ಎಂಬುದು ನಿಜ.
    Published by:Harshith AS
    First published: