• ಹೋಂ
 • »
 • ನ್ಯೂಸ್
 • »
 • ಟ್ರೆಂಡ್
 • »
 • Viral News: ಪರಿಸರ ಸ್ನೇಹಿ ಮನೆ ನಿರ್ಮಿಸಿಕೊಂಡ ಅತ್ತೆ-ಸೊಸೆಯ ಸಾಧನೆಗೆ ನೀವು ಚಪ್ಪಾಳೆ ತಟ್ಟಲೇಬೇಕು!

Viral News: ಪರಿಸರ ಸ್ನೇಹಿ ಮನೆ ನಿರ್ಮಿಸಿಕೊಂಡ ಅತ್ತೆ-ಸೊಸೆಯ ಸಾಧನೆಗೆ ನೀವು ಚಪ್ಪಾಳೆ ತಟ್ಟಲೇಬೇಕು!

ಪರಿಸರ ಸ್ನೇಹಿ ಮನೆ

ಪರಿಸರ ಸ್ನೇಹಿ ಮನೆ

ಮನೆ ಕಟ್ಟುವ ಸಂಪೂರ್ಣ ಯೋಜನೆಯೇ ಒಂದು ಪ್ರಯೋಗವಾಗಿತ್ತು ಎಂದು ತಿಳಿಸುವ ಶಿಪ್ರಾ, ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವೆ ಎಂದು ತಿಳಿಸಿದ್ದಾರೆ. ಹವಾಮಾನವನ್ನು ಕೇಂದ್ರೀಕರಿಸಿ ಮನೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸುತ್ತಾರೆ.

 • Share this:

ಅತ್ತೆ - ಸೊಸೆ (Daughter in Law and Mother in Law) ಎಂದರೆ ಹಾವು ಮುಂಗುಸಿಯಂತೆ ಜಗಳವಾಡುವ ಈ ಕಾಲದಲ್ಲಿ ಜೊತೆಯಾಗಿ ಸೇರಿ ಪರಿಸರ ಸ್ನೇಹಿ (Nature Friendly) ಮನೆಕಟ್ಟುವುದು ಎಂದರೆ ಅದೊಂದು ಸಾಧನೆಯೇ ಸರಿ. ಮುಂಬೈನ (Mumbai) ಶಿಪ್ರಾ ಸಿಂಘಾನಿಯಾ ಹಾಗೂ ಆಕೆಯ ಅತ್ತೆ ರಾಜಸ್ಥಾನದವರಾದ ಸುನೀತಾ ಸಿಂಘಿ ಇಬ್ಬರಿಗೂ ಪರಿಸರ ಹಾಗೂ ಭೂತಾಯಿ ಎಂದರೆ ಎಲ್ಲಿಲ್ಲದ ಪ್ರೀತಿ ಹಾಗೂ ಗೌರವ. ಇಬ್ಬರೂ ಜೊತೆಯಾಗಿ ರಾಜಸ್ಥಾನದ ಅಲ್ವಾರ್‌ನಲ್ಲಿರುವ ಬಾರ್ಹ್ ಕೇಶರಪುರ್ ಗ್ರಾಮದಲ್ಲಿ ಅತ್ತೆ ಸೊಸೆ ಜೊತೆಯಾಗಿ ಪರಿಸರ ಸ್ನೇಹಿ ಹಾಗೂ ಮಿತದರದ ಉತ್ಪನ್ನಗಳನ್ನು (Low Cost Products) ಬಳಸಿ ಸುಂದರವಾದ ಮನೆ ನಿರ್ಮಿಸಿದ್ದು ಇವರಿಬ್ಬರೂ ಪ್ರಕೃತಿಯನ್ನು ಎಷ್ಟು ಪ್ರೀತಿಸುತ್ತಾರೆ ಎಂಬುದಕ್ಕೆ ಜ್ವಲಂತ ಸಾಕ್ಷಿಯಾಗಿದೆ.


ಮಿತದರದಲ್ಲಿ ಸುಸ್ಥಿರ ಮನೆ


ಮಿತದರದಲ್ಲಿ ಸುಂದರ ಮನೆ ಎಂಬ ಅಂಶಕ್ಕೆ ಒತ್ತು ನೀಡುವ ಮೂಲಕ ಅತ್ತೆಸೊಸೆ ಈ ಮನೆಯನ್ನು ನಿರ್ಮಿಸಿದ್ದು ಪರಿಸರಕ್ಕೆ ಸ್ನೇಹಪೂರಕವಾಗಿರುವ ವಸ್ತುಗಳನ್ನೇ ಬಳಸಿ ಮನೆಯನ್ನು ರೂಪಿಸಿದ್ದಾರೆ.


ಮನೆಯಲ್ಲಿ ವಾಸಮಾಡುವ ಸದಸ್ಯರು ಪ್ರಕೃತಿಯೊಂದಿಗೆ ಜೋಡಣೆಗೊಳ್ಳುವುದು ಮಾತ್ರವಲ್ಲದೆ ಗಿಜಿಗಿಡುವ ನಗರ ಜೀವನದಿಂದ ಶಾಂತಿಯುತ ಪರಿಸರವನ್ನು ಆಸ್ವಾದಿಸಬಹುದು.


Mother in law and daughter in law built nature friendly house stg mrq
ಪರಿಸರ ಸ್ನೇಹಿ ಮನೆ


ಈ ಬಗ್ಗೆ ಸುದ್ದಿಮಾಧ್ಯಮಕ್ಕೆ ಪ್ರತಿಕ್ರಿಯೆ ನೀಡಿರುವ ಶಿಪ್ರಾ, ಪ್ರತಿಯೊಂದು ಏನಾದರೊಂದು ಕಾರಣವಿದ್ದೇ ನಡೆಯುತ್ತದೆ ಎಂದು ತಿಳಿಸಿದ್ದಾರೆ. ಮನೆಯನ್ನು ನೋಡಿ ಮೆಚ್ಚಿಕೊಂಡಿರುವ ಹಲವಾರು ಸಂಸ್ಥೆಗಳು ಇವರನ್ನು ಹುಡುಕಿಕೊಂಡು ಬರುತ್ತಿದ್ದು ಇಂತಹುದೇ ನಿರ್ಮಾಣಗಳನ್ನು ಮಾಡಲು ಮುಗಿಬೀಳುತ್ತಿವೆ ಎಂಬ ಮಾಹಿತಿ ಕೂಡ ದೊರಕಿದೆ.


ಪ್ರಕೃತಿ ಸ್ನೇಹಿ ಉತ್ಪನ್ನಗಳಿಂದ ಸಜ್ಜಾದ ಮನೆ


ಶಿಪ್ರಾ ಹಾಗೂ ಅವರ ಅತ್ತೆ ನೈಸರ್ಗಿಕ ಅಂಶಗಳಿಗೆ ಹಾನಿಯಾಗದಂತೆ ಜೊತೆಗೆ ಪರಿಸರ ಸ್ನೇಹಿ ಉತ್ಪನ್ನಗಳನ್ನು ಬಳಸಿಕೊಂಡು ಮನೆಯನ್ನು ನಿರ್ಮಿಸಿದ್ದಾರೆ. ಸ್ಥಳೀಯವಾಗಿ ದೊರೆಯುವ ಮರಳುಗಲ್ಲುಗಳನ್ನೇ ಬಳಸಿ ಗಟ್ಟಿಮುಟ್ಟಾದ ಸುಂದರವಾದ ಮನೆಯನ್ನು ನಿರ್ಮಿಸಿದ್ದಾರೆ.


ಸ್ವಯಂ ವಾಸ್ತುಶಿಲ್ಪಿಯಾಗಿರುವ ಶಿಪ್ರಾ, ಈ ಮನೆ ತಮ್ಮ ಮೊದಲ ಪ್ರಾಜೆಕ್ಟ್ ಎಂದು ತಿಳಿಸಿದ್ದು ನಾನು ಬಹಳಷ್ಟು ವಿಷಯಗಳನ್ನು ಅರಿತುಕೊಂಡು ನಿರ್ಮಾಣ ಕೆಲಸಕ್ಕೆ ಮುಂದಾಗಿರುವೆ ಎಂದು ತಿಳಿಸಿದ್ದಾರೆ.


ಸಿಮೆಂಟ್ ಬಳಸದೇ ಮನೆ ನಿರ್ಮಾಣ


ನೈಸರ್ಗಿಕ ಕಟ್ಟಡ ಸಾಮಾಗ್ರಿಗಳ ಬಗ್ಗೆ ತಿಳಿದುಕೊಳ್ಳಲು ಹಾಗೂ ನೆರವು ಪಡೆಯಲು ಇವರು ತಮ್ಮ ಇತರ ಆರ್ಕಿಟೆಕ್ಚರ್ ಸ್ನೇಹಿತರನ್ನು ಸಂಪರ್ಕಿಸಿದ್ದಾರೆ.


ಮನೆಯ ಸಂಪೂರ್ಣ ನಿರ್ಮಾಣದಲ್ಲಿ ನೈಸರ್ಗಿಕ ವಸ್ತುಗಳನ್ನೇ ಹೆಚ್ಚಾಗಿ ಬಳಸಲಾಗಿದ್ದು ತುಂಬಾ ಅಸ್ಥೆ ಹಾಗೂ ಕಾಳಜಿಯಿಂದ ಮನೆ ನಿರ್ಮಾಣವಾಗಿದೆ ಎಂಬುದು ಮೊದಲ ನೋಟದಲ್ಲಿಯೇ ತಿಳಿಯುತ್ತದೆ. ಸಿಮೆಂಟ್ ಅನ್ನು ಮನೆಯ ನಿರ್ಮಾಣದಲ್ಲಿ ಬಳಸೇ ಇಲ್ಲ ಎಂದರೆ ಇವರ ಪರಿಸರ ಪ್ರೇಮ ಎಂಥಾದ್ದು ಎಂಬುದು ಅರಿವಿಗೆ ಬರಬಹುದು.


Mother in law and daughter in law built nature friendly house stg mrq
ಪರಿಸರ ಸ್ನೇಹಿ ಮನೆ


ಹವಾಮಾನಕ್ಕನುಗುಣವಾಗಿ ಗೋಡೆಗಳ ನಿರ್ಮಾಣ


ರಾಜಸ್ಥಾನದಲ್ಲಿ ವಿಪರೀತ ಹವಾಮಾನ ಬದಲಾವಣೆಗಳಾಗುವುದರಿಂದ ಅದಕ್ಕೆ ಅನುಗುಣವಾಗಿ ಮನೆ ನಿರ್ಮಿಸಿದ್ದಾರೆ. ಮನೆಯ ದಕ್ಷಿಣ ಹಾಗೂ ಪಶ್ಚಿಮದ ಗೋಡೆಗಳನ್ನು ಮಣ್ಣಿನಿಂದ ತಯಾರಿಸಲಾಗಿದೆ ಎಂದು ತಿಳಿಸುವ ಶಿಪ್ರಾ, ಹೆಚ್ಚಿನ ಶಾಖದಿಂದ ರಕ್ಷಿಸುತ್ತದೆ ಎಂದು ತಿಳಿಸುತ್ತಾರೆ.


ಮನೆಯ ಉತ್ತರ ಮತ್ತು ಪೂರ್ವದ ಗೋಡೆಗಳನ್ನು ಕಲ್ಲಿನಿಂದ ಮಾಡಲಾಗಿದೆ. ಅದೇ ರೀತಿ ಛಾವಣಿಯನ್ನು ಹುಲ್ಲಿನಿಂದ ನಿರ್ಮಿಸಲಾಗಿದೆ ಎಂದು ಶಿಪ್ರಾ ತಿಳಿಸುತ್ತಾರೆ.
ನಂಬಲಾಗದೇ ಇರುವ ನಿರ್ಮಾಣ


ಇಂತಹ ಮನೆ ಕಟ್ಟುವ ಯೋಚನೆ ಹೇಗೆ ಮೂಡಿತು ಎಂಬುದಾಗಿ ಶಿಪ್ರಾರನ್ನು ಕೇಳಿದಾಗ ಕೋವಿಡ್-19 ಗಿಂತ ಮೊದಲು ಆಕೆ ದಕ್ಷಿಣ ಭಾರತದಲ್ಲಿ ಭಾಗವಹಿಸಿದ ಸುಸ್ಥಿರ ವಾಸ್ತುಶಿಲ್ಪದ ಕುರಿತು 10 ದಿನಗಳ ಕಾರ್ಯಾಗಾರವೇ ನನಗೆ ಸ್ಫೂರ್ತಿ ಎಂದು ತಿಳಿಸಿದ್ದಾರೆ.


ತಮ್ಮದೇ ಸ್ವಂತ ಮನೆಯಲ್ಲಿ ಸುಸ್ಥಿರ ವಾಸ್ತುಶಿಲ್ಪ ತಂತ್ರವನ್ನು ಅಳವಡಿಸಲು ಸಾಧ್ಯವಿಲ್ಲದುದರಿಂದ ಆಕೆ ಹೊಸ ಮನೆಯನ್ನೇ ಕಟ್ಟಿದರು.


ಇದನ್ನೂ ಓದಿ: Own Business: ಶಾಲೆಯಲ್ಲಿ ಬ್ರೆಡ್ ಮಾರಿ ಐಫೋನ್ ಖರೀದಿಸಿದ ಹುಡುಗಿ! 12ರ ಬಾಲಕಿಯ ಛಲಕ್ಕೆ ನೀವೇನಂತೀರಿ?


ಹವಾಮಾನ ಕೇಂದ್ರಿಕರಿಸಿ ಮನೆ ನಿರ್ಮಾಣ

top videos


  ಮನೆ ಕಟ್ಟುವ ಸಂಪೂರ್ಣ ಯೋಜನೆಯೇ ಒಂದು ಪ್ರಯೋಗವಾಗಿತ್ತು ಎಂದು ತಿಳಿಸುವ ಶಿಪ್ರಾ, ಇದಕ್ಕಾಗಿ ಸಾಕಷ್ಟು ಶ್ರಮ ಪಟ್ಟಿರುವೆ ಎಂದು ತಿಳಿಸಿದ್ದಾರೆ. ಹವಾಮಾನವನ್ನು ಕೇಂದ್ರೀಕರಿಸಿ ಮನೆಯನ್ನು ನಿರ್ಮಿಸಲಾಗಿದೆ ಎಂದು ತಿಳಿಸುತ್ತಾರೆ. ಮನೆಯ ನಿರ್ಮಾಣಕ್ಕೆ ಬೆಲ್ಲ, ಬೇವು ಹಾಗೂ ಮೆಂತೆಯನ್ನು ಬಳಸಿದ್ದಾರೆ.

  First published: