ಇಂದಿನ ಕಾಲದಲ್ಲಿ ಜಗತ್ತಿನ ಯಾವುದೇ ಮೂಲೆಯಲ್ಲಿ ಒಂದು ಸಣ್ಣ ಇಂಟ್ರೆಸ್ಟಿಂಗ್ ಸ್ಟೋರಿ (Interesting Story) ನಡಿತು ಅಂದ್ರೆ ಮುಗಿತು..ಅದು ಕ್ಷಣ ಮಾತ್ರದಲ್ಲಿ ಇಡೀ ಜಗತ್ತಿಗೆ ಗೊತ್ತಾಗಿರುತ್ತದೆ. ಯಾವುದೋ ಪೋಟೋ ಅಥವಾ ವಿಡಿಯೋ ಹೀಗೆ ಎಲ್ಲವೂ ಒಂದೇ ನಿಮಿಷದಲ್ಲಿ ವೈರಲ್ ಆಗಿ ಜಗತ್ತಿನ ಮೂಲೆ ಮೂಲೆಯಲ್ಲಿನ ಜನ ಆ ವಿಷಯದ ಕುರಿತೇ ಮಾತನಾಡ್ತಾ ಇರ್ತಾರೆ. ಆ ಕಂಟೆಂಟ್ ಎಲ್ಲ ಸೋಷಿಯಲ್ ಮೀಡಿಯಾದಲ್ಲಿ (Social Media) ವೈರಲ್ ಆಗುತ್ತೆ. ಮೊನ್ನೆ ಮೊನ್ನೆ ತಾನೇ ಎಲ್ಲರೂ ತಮ್ಮ ತಮ್ಮ ತಾಯಂದಿರುಗಳಿಗೆ ಸೋಷಿಯಲ್ ಮೀಡಿಯಾದಲ್ಲಿ 'ಹ್ಯಾಪಿ ಮದರ್ಸ್ ಡೇ' (Happy Mothers Day) ಅಂತ ವಿಷ್ ಮಾಡಿ ತಮ್ಮ ಪ್ರೀತಿ ಮತ್ತು ಅಮ್ಮಂದಿರ ಕುರಿತು ಇರೋ ಗ್ರಾಟಿಟ್ಯೂಡ್ ತೋರಿಸಿದ್ದಾರೆ.
ಇದಕ್ಕೆ ಪೂರಕವೆಂಬಂತೆ ಈಗ ವಿಡಿಯೋವೊಂದು ಸೋಷಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗ್ತಿದೆ. ಮದರ್ಸ್ ಗಳಿಗೆ ವಿಷ್ ಮಾಡ್ತಿರೋದು ಮನುಷ್ಯರು ಮಾತ್ರವಾ ಎಂದು ನೀವು ಪ್ರಶ್ನೆ ಕೇಳ್ತಿದ್ದರೆ ಅದ್ಕೆ ನಮ್ಮ ಉತ್ತರ ಇಲ್ಲ ಎಂಬುದೇ ಆಗಿರುತ್ತೆ. ಇದಕ್ಕೆ ಕಾರಣಾನೂ ಇದೆ. ಅದನ್ನು ಮುಂದೆ ತಿಳಿಯೋಣ ಬನ್ನಿ.
ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿರೋ ಈ ವಿಡಿಯೋದ ಸ್ಪೆಷಲ್ ಇದು
ಈಗ ಟ್ವಿಟ್ಟರ್‌ನಲ್ಲಿ ವೈರಲ್ ಆಗುತ್ತಿರುವ ವಿಡಿಯೋ ತನ್ನ ಮರಿಗಳಿಗೆ ಆಹಾರ ನೀಡಲು ಸಹಾಯ ಮಾಡಿದ್ದಕ್ಕಾಗಿ ತಾಯಿ ನಾಯಿಯು ಮಹಿಳೆಗೆ ಹೇಗೆ ಧನ್ಯವಾದ ತಿಳಿಸುತ್ತಿದೆ ಎಂಬುದನ್ನು ತೋರಿಸುತ್ತಿದೆ. ಪ್ರಾಣಿಗಳಿಗೂ ಎಷ್ಟೊಂದು ಅಂತಃಕರಣವಿರುತ್ತದೆ ಎಂಬುದರ ಸಂಕೇತ ಈ ವಿಡಿಯೋದ್ದು ಆಗಿದೆ.
ಇದನ್ನೂ ಓದಿ: ಈ ದೇಶದ ಪ್ರಧಾನಿಯೇ ಖುದ್ದು ಮೋದಿ ಕಾಲಿಗೆ ಬಿದ್ರು! ಇದೇ ಮೊದಲ ಬಾರಿಗೆ ಸಂಪ್ರದಾಯ ಬದಲಿಸಿಕೊಂಡ ದ್ವೀಪರಾಷ್ಟ್ರ
ಹಾಗಿದ್ರೆ ಈ ವಿಡಿಯೋ ಕ್ಲಿಪ್‌ನಲ್ಲಿರುವ ವಿಶೇಷತೆ ಏನು?
ಒಂದು ಕಟ್ಟಡದ ಕೆಳಗೆ ವಾಸಿಸುವ ಎಳೆಯ ಮರಿಗಳಿಗೆ ಮಹಿಳೆಯೊಬ್ಬಳು ಆಹಾರವನ್ನು ನೀಡುತ್ತಿರುವುದನ್ನು ಕಂಡ ತಾಯಿ ನಾಯಿಯು ಕುಣಿದಾಡುತ್ತಿರುವುದು ಈ ವಿಡಿಯೋದಲ್ಲಿ ತೋರುತ್ತಿದೆ. ಆ ಮಹಿಳೆಯು ತನ್ನ ಕೈಯಲ್ಲಿ ತಿನ್ನಲು ಒಂದು ಬಟ್ಟಲನ್ನು ಹೊಂದಿರುವುದರ ಜೊತೆಗೆ, ಎಳೆ ನಾಯಿಗಳಿಗೆ ಚಳಿಯಾಗಬಾರದೆಂದು ಅವುಗಳಿಗೆ ಹೊದಿಸುವ ಹೊದಿಕೆಗಳನ್ನು ಸಹ ತಂದಿರುವುದು ವಿಡಿಯೋದಲ್ಲಿ ಕಾಣುತ್ತದೆ.
Mama dog shows gratitude to a woman for feeding her puppies.🙏❤️#MothersDay2023 pic.twitter.com/kDP9l4qrOf
— 𝕐o̴g̴ (@Yoda4ever) May 14, 2023
ತಾಯಿ ನಾಯಿಯು ಆ ಮಹಿಳೆಗೆ ತನ್ನ ಎಳೆ ಮರಿಗಳಿಗೆ ಆಹಾರ ನೀಡಲು ಹೇಗೆ ದಾರಿ ಮಾಡಿಕೊಡುತ್ತದೆ ಎಂಬ ಮನ ಮಿಡಿಯುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗುತ್ತದೆ. ಆಗ ಆ ತಾಯಿ ನಾಯಿಯನ್ನು ಮಹಿಳೆಯು ಬೆನ್ನು ತಟ್ಟಿ ಸಮಾಧಾನ ಮಾಡಿ ಪ್ರೀತಿಯ ಅಪ್ಪುಗೆಯನ್ನು ನೀಡುತ್ತಾಳೆ. ಇದನ್ನು ಆ ತಾಯಿ ನಾಯಿಯು ಎಷ್ಟೊಂದು ಎಂಜಾಯ್ ಮಾಡ್ತಿತ್ತು ಎಂಬುದು ವಿಡಿಯೋದಲ್ಲಿ ಸೆರೆ ಆಗಿದೆ.
ಮನ ಮಿಡಿಯೋ ಈ ವಿಡಿಯೋ ಬಗ್ಗೆ ನೆಟಿಜನ್ ಗಳು ಏನ್ ಹೇಳ್ತಿದಾರೆ?
ಮಹಿಳೆಯೊಬ್ಬಳು ಎಳೆ ನಾಯಿ ಮರಿಗಳಿಗೆ ಆಹಾರ ನೀಡುತ್ತಿರುವುದಕ್ಕೆ ಅವುಗಳ ತಾಯಿ ನಾಯಿಯು ಮಹಿಳೆಗೆ ಹೇಗೆ ಥ್ಯಾಂಕ್ಸ್ ಹೇಳ್ತಿದೆ ಎಂಬ ವಿಡಿಯೋಗೆ ಇಂಟರ್ ನೆಟ್ ಅಲ್ಲಿ ಸಾಕಷ್ಟು ಉತ್ತಮ ಪ್ರತಿಕ್ರಿಯೆಗಳು ಬಂದಿವೆ. ಅವುಗಳಲ್ಲಿ ಮುಖ್ಯವಾಗಿ ಸೋಷಿಯಲ್ ಮೀಡಿಯಾ ಬಳಕೆದಾರರೊಬ್ಬರು " ಒಂದು ಪ್ರಾಣಿಯು ನಿಮಗೆ ಕೃತಜ್ಞತೆಯನ್ನು ವ್ಯಕ್ತಪಡಿಸಿದಾಗ, ನೀವು ಮಾನವ ಔದಾರ್ಯದ ಪರಾಕಾಷ್ಠೆಯನ್ನು ತಲುಪಿದ್ದೀರಿ ಎಂಬುದು ಇದರ ಅರ್ಥವಾಗಿದೆ" ಎಂದು ಕಮೆಂಟ್ ಮಾಡಿದ್ದಾರೆ.
ಈ ವಿಡಿಯೋ ಬಗ್ಗೆ ಮತ್ತೊಬ್ಬ ಬಳಕೆದಾರರು " ಪ್ರಾಣಿಗಳ ಜೀವನದಲ್ಲಿ ಬದಲಾವಣೆಯನ್ನು ಮಾಡಲು ನಾವೆಲ್ಲರೂ ಪ್ರತಿದಿನವೂ ಇಂತಹ ಮಾರ್ಗಗಳನ್ನು ಕಂಡುಕೊಳ್ಳಬಹುದು! ಇದು ಬೆಸ್ಟ್ ವೀಡಿಯೊ! " ಎಂದಿದ್ದಾರೆ. ಮತ್ತೊಬ್ಬರು "ಜಗತ್ತಿನಲ್ಲಿ ಇನ್ನು ಅಸಹಾಯಕ ಪ್ರಾಣಿಗಳು ಮತ್ತು ಜನರ ಬಗ್ಗೆ ಕಾಳಜಿ ವಹಿಸುವ ಕೆಲವು ಜನರು ಇದ್ದಾರೆ ಎಂಬುದು ಸಂತಸದ ವಿಷಯವಾಗಿದೆ" ಎಂದು ವಿಡಿಯೊ ಬಗ್ಗೆ ಕಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ