news18-kannada Updated:February 26, 2021, 3:30 PM IST
ಟಿಶ್ಯೂ ಪೇಪರ್ನಿಂದ ಮಾಡಿರುವ ಹೂವಿನ ದಿಂಡು
ತಾಯಿ ಕಣ್ಣಿಗೆ ಕಾಣುವ ಮೊದಲ ದೇವರು ಎಂದು ಹೇಳುತ್ತಾರೆ. ಮಕ್ಕಳಿಗಾಗಿ ತಾಯಿ ಯಾವುದೇ ತ್ಯಾಗ ಮತ್ತು ಹೋರಾಟಕ್ಕೆ ಕ್ಷಣವು ಕೂಡ ಯೋಚನೆ ಮಾಡದೇ ಸಿದ್ಧಳಾಗುತ್ತಾಳೆ. ಅಂತಹ ಮಹಾನ್ ತಾಯಿ ತನ್ನ ಮಕ್ಕಳಿಗೆ ಪ್ರೀತಿ ನೀಡಲು ಕೂಡ ಮೊದಲ ಸ್ಥಾನದಲ್ಲಿರುತ್ತಾರೆ. ಹೌದು, ತನ್ನ ಮಗಳಿಗೆ ತಾಯಿಯೊಬ್ಬರು ಟಿಶ್ಯೂ ಪೇಪರ್ ಮೂಲಕ ಮಲ್ಲಿಗೆ ಹೂವಿನಂತೆ ಮಾಡಿ, ಅದನ್ನು ಪೋಣಿಸಿ ತನ್ನ ಮಗಳಿಗೆ ನೀಡಿ ಹೃದಯ ಗೆದ್ದಿದ್ದಾಳೆ.
ಹೌದು, ತಾಯಿ ತನ್ನ ಮಗಳಿಗಾಗಿ ಗಂಟೆಗಟ್ಟಲೇ ಕುಳಿತುಕೊಂಡು ತೆಳುವಾದ ಕಾಗದ ಮೂಲಕ ಮಲ್ಲಿಗೆ ಹೂವು ರೀತಿಯ ಹೂವಿನ ಮಾಲೆ ರಚಿಸಿದ್ದಾರೆ. ಛಲ ಬಿಡದೇ ತಮ್ಮ ಮಗಳನ್ನು ಖುಷಿಪಡಿಸಿದ್ದಾರೆ.
ಇನ್ನು, ಮಗಳಿಗಾಗಿ ರಚಿಸಿದ್ದ ಮಲ್ಲಿಗೆ ಹೂವನ್ನು ಮಗಳು ಸುರೇಖಾ ತನ್ನ ತಾಯಿ ಮುಡಿಗೆ ಮುಡಿಸಿದ್ದಾಳೆ. ಬಳಿಕ ಟ್ವಿಟ್ಟರ್ ಮೂಲಕ ಈ ಪೋಟೋಗಳನ್ನು ಹಂಚಿಕೊಂಡಿದ್ದು, ನೋಡಲು ಮಲ್ಲಿಗೆ ಹೂವಿನಿಂತೆ ಕಾಣಿಸುತ್ತದೆ. ಆದರೆ, ಇದು ಟಿಶ್ಯೂ ಪೇಪರ್ನಿಂದ ನನ್ನ ಅಮ್ಮ ರಚಿಸಿದ ಹೂ ಎಂದು ಬರೆದುಕೊಂಡಿದ್ದಾಳೆ.
ಸುರೇಖಾ ವಿಡಿಯೋವನ್ನು ಕೂಡ ಹಂಚಿಕೊಂಡಿದ್ದು, ವಿಡಿಯೋದಲ್ಲಿ ನನ್ನ ತಾಯಿ ನನಗಾಗಿ ರಚಿಸಿದ ಮಲ್ಲಿಗೆ ಹೂ ಮಾಲೆ ಧರಿಸಿದ್ದಾರೆ. ನೋಡಲು ಎಷ್ಟು ಸುಂದರವಾಗಿ ಕಾಣಸುತ್ತಿದ್ದಾರೆ. ಅಷ್ಟೇ ಅಲ್ಲ, ಎಲ್ಲಾ ಹೂಗಿಂತಲೂ ನಮ್ಮ ತಾಯಿ ರಚಿಸಿದ ಹೂವಿನ ಸುವಾಸನೆ ಪ್ರೀತಿಯಿಂದ ಕೂಡಿದೆ ಎಂದು ಬರೆದುಕೊಂಡಿದ್ದಾರೆ.
ಜೋಳ ಬೆಳೆಗೆ ಪ್ರೋತ್ಸಾಹ ನೀಡಿ, ತೊಗರಿ ಜೊತೆ ಕಡಲೆ ಖರೀದಿಗೂ ಕ್ರಮ ಕೈಗೊಳ್ಳಿ; ಕೆಡಿಪಿ ಸಭೆಯಲ್ಲಿ ಸಚಿವೆ ಶಶಿಕಲಾ ಜೊಲ್ಲೆ ಖಡಕ್ ಸೂಚನೆ
ನೆಟ್ಟಿಗರ ಪ್ರತಿಕ್ರಿಯೆ ಹೇಗಿತ್ತು ಗೊತ್ತಾ?
ಬಿಳಿ ಮಲ್ಲಿಗೆ ಹೂವು ಎಂದುಕೊಂಡಿದ್ದ ಟ್ವಿಟ್ಟರ್ ಬಳಕೆದಾರ, ಟಿಶ್ಯೂ ಪೇಪರ್ನಿಂದ ಈ ರೀತಿಯ ಅದ್ಭುತ ಹೂ ರಚಿಸಿದ ನಿಮ್ಮ ತಾಯಿಯ ಕೈಗಳಲ್ಲಿ ಚಮತ್ಕಾರವಿದೆ ಎಂದು ಆಶ್ಚರ್ಯ ವ್ಯಕ್ತಪಡಿಸಿದ್ದನು. ಇದಕ್ಕೆ ಪ್ರತಿಕ್ರಿಯಿಸಿದ ಸುರೇಖಾ, ನಮ್ಮ ತಾಯಿಯ ಕ್ರಿಯೆಟಿವಿಟಿಯಿಂದ ನಮ್ಮ ಜೀವನ ಆನಂದಮಯವಾಗಿದೆ ಎಂದು ಪ್ರತ್ಯುತ್ತರ ಕೊಟ್ಟಿದ್ದಾರೆ.ಮತ್ತೊಬ್ಬ ಟ್ವಿಟ್ಟರ್ ಬಳಕೆದಾರರಾದ ಡಾ.ದೀಪಾ ಶರ್ಮಾ ಅವರು ಸುರೇಖಾ ಅವರ ಟ್ವಿಟ್ಟರ್ ಪೋಸ್ಟ್ಗೆ ಪ್ರತಿಕ್ರಿಯಿಸಿ, ಒಂದು ವೇಳೆ ನೀವು ಇದು ಟಿಶ್ಯೂ ಪೇಪರ್ನಿಂದ ರಚಿಸಿದ ಮಲ್ಲಿಗೆ ಹೂವು ಎಂದು ಹೇಳದಿದ್ದರೆ ನಮಗೆ ಇದನ್ನು ಗಮನಿಸಲು ಸಾಧ್ಯವಾಗುತ್ತಿರಲಿಲ್ಲ. ನಿಮ್ಮ ತಾಯಿ ಅದ್ಭುತ ಕಲಾವಿದೆ ಎಂದು ಹೊಗಳಿದ್ದಾರೆ.
ಇನ್ನು, ಸುರೇಖಾ ಅವರು ಟ್ವಿಟ್ಟರ್ನಲ್ಲಿ ಹಂಚಿಕೊಂಡ ಮಲ್ಲಿಗೆ ಹೂವಿನ ಪೋಸ್ಟ್ಗೆ 1,600 ಕ್ಕೂ ಜನರು ಲೈಕ್ ಮಾಡಿದ್ದಾರೆ. ಹಲವು ಮಂದಿ ಕಾಮೆಂಟ್ಸ್ ಮಾಡಿ ಸುರೇಖಾ ತಾಯಿಯನ್ನು ಹೊಗಳಿದ್ದಾರೆ.
Published by:
Latha CG
First published:
February 26, 2021, 3:30 PM IST