• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Valentines Day: ಪ್ರಿಯಕರನ ಜೊತೆಯಲ್ಲಿದ್ದಾಗ ಅಮ್ಮನ ಕೈಗೆ ತಗ್ಲಾಕೊಂಡ್ಳು; ಮುಂದೆ ನಡೆದಿದ್ದು ಹೈವೋಲ್ಟೇಜ್ ಡ್ರಾಮಾ

Valentines Day: ಪ್ರಿಯಕರನ ಜೊತೆಯಲ್ಲಿದ್ದಾಗ ಅಮ್ಮನ ಕೈಗೆ ತಗ್ಲಾಕೊಂಡ್ಳು; ಮುಂದೆ ನಡೆದಿದ್ದು ಹೈವೋಲ್ಟೇಜ್ ಡ್ರಾಮಾ

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

ಸಾಮಾಜಿಕ ಮಾಧ್ಯಮದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ  ವಿಡಿಯೋದ ಆರಂಭದಲ್ಲಿ ಒಂದು ರೆಸ್ಟೋರೆಂಟ್ ನಲ್ಲಿ ತನ್ನ ಗೆಳೆಯನೊಂದಿಗೆ ಇದ್ದಾಗ ಹುಡುಗಿಯೊಬ್ಬಳು ತನ್ನ ತಾಯಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದನ್ನು ವಿಡಿಯೋ ತೋರಿಸುತ್ತದೆ.

  • Trending Desk
  • 4-MIN READ
  • Last Updated :
  • Share this:

ಫೆಬ್ರುವರಿ 14 ರಂದೇ ವ್ಯಾಲೆಂಟೈನ್ಸ್ ಡೇ (Valentine's Day) ಮುಗಿದಿದ್ದರೂ ಸಹ ಆ ದಿನ ಹೈ ವೋಲ್ಟೆಜ್ ಡ್ರಾಮಾ ಸೃಷ್ಟಿಸಿದ ಅನೇಕ ಘಟನೆಗಳು ಒಂದೊಂದಾಗಿ ಈಗ ಬೆಳಕಿಗೆ ಬರುತ್ತಿವೆ ನೋಡಿ. ಹೌದು, ಪ್ರೇಮಿಗಳ ದಿನದಂದು ಜೋಡಿಗಳು (Couple) ಯಾವ ಪಾರ್ಕ್ ಗೆ  (Park) ಸುತ್ತಾಡಲು ಹೋಗಿದ್ದರು ಮತ್ತು ಯಾವ ಉದ್ಯಾನವನದ ಬೆಂಚ್ ಮೇಲೆ ಕುಳಿತು ಪ್ರೀತಿಯ (Love Talk) ಪಿಸುಮಾತುಗಳನ್ನು ಆಡುತ್ತಿದ್ದರು ಅಂತ ಲೆಕ್ಕ ಇಡುವುದೇ ಕಷ್ಟ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಅಷ್ಟರ ಮಟ್ಟಿಗೆ ಆ ದಿನ ಎಲ್ಲೆ ನೋಡಿದರೂ ಯುವ ಪ್ರೇಮಿಗಳದ್ದೇ (lovers) ಹವಾ ಅಂತ ಹೇಳಬಹುದು.


ಎಷ್ಟೋ ಜನ ಮಕ್ಕಳು ತಮ್ಮ ಪೋಷಕರಿಗೆ ತಾವು ಒಬ್ಬರ ಜೊತೆ ಪ್ರೀತಿಯಲ್ಲಿ ಇದ್ದೇವೆ ಅಂತ ಹೇಳುವುದೇ ಇಲ್ಲ. ಮುಚ್ಚು ಮರೆಯಾಗಿ ತಾವು ಪ್ರೀತಿಸಿದವರನ್ನು ಭೇಟಿ ಆಗುವುದು, ಯಾರು ಇಲ್ಲದ ಸಮಯ ನೋಡಿಕೊಂಡು ತಮ್ಮ ಪ್ರಿಯಕರ ಅಥವಾ ಪ್ರಿಯತಮೆಯ ಜೊತೆಗೆ ಫೋನ್ ನಲ್ಲಿ ಗಂಟೆಗಟ್ಟಲೆ ಹರಟೆ ಹೊಡೆಯುತ್ತಾ ಇರುತ್ತಾರೆ.


ವರ್ಷಗಳಿಂದ ಹೀಗೆ ಯಾರಿಗೂ ಗೊತ್ತಾಗದಂತೆ ಕಾಪಾಡಿಕೊಂಡು ಬಂದಂತಹ ಪ್ರೀತಿ ಪ್ರೇಮದ ಕಥೆಗಳು ಪ್ರೇಮಿಗಳ ದಿನದಂದು ಮನೆಯವರಿಗೆ ಗೊತ್ತಾದರೆ ಅವರಿಗೆ ಎಷ್ಟು ಕೋಪ ಬರಲಿಕ್ಕಿಲ್ಲ ನೀವೇ ಹೇಳಿ? ಇಲ್ಲಿಯೂ ಸಹ ಅಂತಹದೇ ಒಂದು ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ ನೋಡಿ.


Mother Catches Daughter With Boyfriend on Valentine s Day stg mrq
ಸಾಂದರ್ಭಿಕ ಚಿತ್ರ


ಪ್ರೇಮಿಗಳ ದಿನದಂದು ಪ್ರಪಂಚದಾದ್ಯಂತ ಹಲವಾರು ಲವ್ ಬರ್ಡ್ಸ್ ಪ್ರೇಮಿಗಳ ದಿನ ಮತ್ತು 'ಲವ್ ವೀಕ್' ಅನ್ನು ಹೆಚ್ಚು ಉತ್ಸಾಹದಿಂದ ಆಚರಿಸುತ್ತಿರುತ್ತಾರೆ. ಆದರೆ ಎಲ್ಲರ ಆಚರಣೆಗಳು ಒಂದೇ ರೀತಿ ಆಗಿರಬೇಕು ಅಂತಿಲ್ಲ, ಅದೇ ರೀತಿ ಎಲ್ಲರಿಗೂ ಆ ದಿನ ತುಂಬಾನೇ ಖುಷಿ ಖುಷಿಯಾಗಿ ಕಳೆಯಲು ಸಾಧ್ಯವಾಗಿರಲಿಕ್ಕಿಲ್ಲ.


ತಾಯಿ ಕೈಗೆ ಸಿಕ್ಕ ಮಗಳು ಮತ್ತು ಆಕೆಯ ಪ್ರಿಯಕರ


ಇಲ್ಲೊಂದು ಜೋಡಿ ಕದ್ದು ಮುಚ್ಚಿ ಪ್ರೇಮಿಗಳ ದಿನದಂದು ಹೊಟೇಲ್ ನಲ್ಲಿ ಭೇಟಿ ಆಗುವ ವಿಷಯವನ್ನು ಮೊದಲೇ ತಾಯಿಯೊಬ್ಬಳು ತಿಳಿದುಕೊಂಡು ತನ್ನ ಮಗಳು ಪ್ರಿಯಕರನ ಜೊತೆಗೆ ಕುಳಿತಾಗ ರೆಡ್ ಹ್ಯಾಂಡ್ ಆಗಿ ಹಿಡಿದಿದ್ದಾಳೆ. ಅಷ್ಟೇ ಅಲ್ಲದೆ ಆ ತಾಯಿ ಅಷ್ಟಕ್ಕೇ ಸುಮ್ಮನಿರದೆ ತನ್ನ ಕಾಲಿನಲ್ಲಿದ್ದ ಚಪ್ಪಲಿ ಕೈಗೆ ತೆಗೆದುಕೊಂಡು ಅವರಿಬ್ಬರಿಗೂ ಹಿಗ್ಗಾಮುಗ್ಗಾ ಥಳಿಸಿದ್ದಾಳೆ ನೋಡಿ.
ಸಾಮಾಜಿಕ ಮಾಧ್ಯಮದಲ್ಲಿ ಈಗ ಸಿಕ್ಕಾಪಟ್ಟೆ ವೈರಲ್ ಆಗಿರುವ ಈ  ವಿಡಿಯೋದ ಆರಂಭದಲ್ಲಿ ಒಂದು ರೆಸ್ಟೋರೆಂಟ್ ನಲ್ಲಿ ತನ್ನ ಗೆಳೆಯನೊಂದಿಗೆ ಇದ್ದಾಗ ಹುಡುಗಿಯೊಬ್ಬಳು ತನ್ನ ತಾಯಿಗೆ ರೆಡ್ ಹ್ಯಾಂಡ್ ಆಗಿ ಸಿಕ್ಕಿಬಿದ್ದಿರುವುದನ್ನು ವಿಡಿಯೋ ತೋರಿಸುತ್ತದೆ.


ವಿಡಿಯೋ ಹಾಗೆ ಮುಂದುವರೆದಂತೆ, ಮಹಿಳೆಯೊಬ್ಬಳು ಹುಡುಗನ ಮೇಲೆ ಕಿರುಚುವಾಗ ತನ್ನ ಚಪ್ಪಲಿಯಿಂದ ಹೊಡೆಯಲು ಶುರು ಮಾಡುತ್ತಾಳೆ.


ಪ್ರಿಯಕರನಿಗೆ ಹೊಡೆಯಬೇಡ ಅಂದಿದ್ದಕ್ಕೆ ಮಗಳಿಗೆ ಬಿದ್ವು ಚಪ್ಪಲಿ ಏಟು


ಏತನ್ಮಧ್ಯೆ, ಹುಡುಗನ ಮುಂದೆ ಕುಳಿತಿದ್ದ ಹುಡುಗಿ ಎದ್ದು ನಿಂತು ಮಹಿಳೆಯನ್ನು ತಡೆಯಲು ಪ್ರಯತ್ನಿಸುತ್ತಾಳೆ. ಮಹಿಳೆ ಕೋಪದಿಂದ ತನ್ನ ಮಗಳನ್ನು ಹುಡುಗನಿಗೆ ಹೊಡೆಯುವುದನ್ನು ತಡೆಯಲು ಪ್ರಯತ್ನಿಸಿದ್ದಕ್ಕೆ ಅವಳನ್ನು ಹೊಡೆಯಲು ಪ್ರಾರಂಭಿಸುತ್ತಾಳೆ.


Mother Catches Daughter With Boyfriend on Valentine s Day stg mrq
ಸಾಂದರ್ಭಿಕ ಚಿತ್ರ


ಇದನ್ನೂ ಓದಿ:  Online Shopping: 12 ಸಾವಿರ ಮೌಲ್ಯದ ಬ್ರಷ್‌ ಆರ್ಡರ್‌ ಮಾಡಿದ ಮಹಿಳೆಗೆ ಕೊನೆಗೆ ಕಾದಿತ್ತು ಬಿಗ್​ ಶಾಕ್​!


ಮುಂದೆ, ಹುಡುಗ ಕೂಡ ತನ್ನ ಸ್ಥಳದಿಂದ ಎದ್ದು ನಿಂತು ಅವಳನ್ನು ತಡೆಯಲು ಪ್ರಯತ್ನಿಸುತ್ತಾನೆ. ಹುಡುಗಿಗೆ ಹೊಡೆಯದಂತೆ ಹುಡುಗ ಆ ಮಹಿಳೆಯನ್ನು ವಿನಂತಿಸುತ್ತಾನೆ. ಆದರೆ, ಕೋಪಗೊಂಡ ಮಹಿಳೆ ಯಾರ ಮಾತನ್ನು ಕೇಳುವ ಮನಸ್ಥಿತಿಯಲ್ಲಿರುವುದಿಲ್ಲ ಅಂತ ತೋರುತ್ತದೆ.
ವಿಡಿಯೋ ವೈರಲ್ ಫನ್ನಿ ಕಮೆಂಟ್


ಅರ್ಜೂ ಕಾಜ್ಮಿ ಶೇರ್ ಮಾಡಿರುವ ಈ ವಿಡಿಯೋವನ್ನು ಈಗಾಗಲೇ ಸಾವಿರಾರು ಬಾರಿ ವೀಕ್ಷಿಸಲಾಗಿದೆ. ವಿಡಿಯೋವನ್ನು ನೋಡಿದ ನಂತರ, ನೆಟ್ಟಿಗರು ಈ ವಿಡಿಯೋದ ಬಗ್ಗೆ ತಮ್ಮ ಕಾಮೆಂಟ್ ಗಳನ್ನು ಸಹ ಹಾಕಿದ್ದಾರೆ.


ಕೆಲವರು ಫನ್ನಿ ಕಾಮೆಂಟ್ ಗಳನ್ನು ಹಂಚಿಕೊಂಡರೆ, ಇತರರು ಇದೇ ರೀತಿಯ ಪರಿಸ್ಥಿತಿಯಲ್ಲಿ ತಮ್ಮ ವೈಯಕ್ತಿಕ ಜೀವನದ ಅನುಭವಗಳನ್ನು ಸಹ ಹಂಚಿಕೊಂಡರು.

Published by:Mahmadrafik K
First published: