Viral Video: ತಾಯಿ ಹಕ್ಕಿ ತನ್ನ ಮೊಟ್ಟೆಗಳನ್ನು ರಕ್ಷಿಸಿಕೊಂಡ ಬಗೆಗೆ ನೆಟ್ಟಿಗರು ಫಿದಾ..!

ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ (Mother) ಅಂತ ಹೇಳಿದರೆ ಅತಿಶಯೋಕ್ತಿಯಲ್ಲ, ಏಕೆಂದರೆ ಮಕ್ಕಳು ಕಷ್ಟದಲ್ಲಿ ಇದ್ದಾರೆ ಎಂಬ ಸುದ್ದಿ (News) ತಿಳಿಯುವುದು ಹಾಗಿರಲಿ, ತನ್ನ ಮನಸ್ಸಿಗೆ ಸ್ವಲ್ಪ ಅನ್ನಿಸಿದರೆ ಸಾಕು, ಆ ತಾಯಿ ತನ್ನ ಮಕ್ಕಳನ್ನು ರಕ್ಷಿಸಲು ತನ್ನ ಪ್ರಾಣ ತ್ಯಾಗ ಮಾಡಲು ಸಹ ಸಿದ್ದಳಾಗಿರುತ್ತಾಳೆ ಎಂದು ಹೇಳಬಹುದು.

ಹಕ್ಕಿ ತಾಯಿ

ಹಕ್ಕಿ ತಾಯಿ

  • Share this:
ತ್ಯಾಗಕ್ಕೆ ಇನ್ನೊಂದು ಹೆಸರೇ ತಾಯಿ (Mother) ಅಂತ ಹೇಳಿದರೆ ಅತಿಶಯೋಕ್ತಿಯಲ್ಲ, ಏಕೆಂದರೆ ಮಕ್ಕಳು ಕಷ್ಟದಲ್ಲಿ ಇದ್ದಾರೆ ಎಂಬ ಸುದ್ದಿ (News) ತಿಳಿಯುವುದು ಹಾಗಿರಲಿ, ತನ್ನ ಮನಸ್ಸಿಗೆ ಸ್ವಲ್ಪ ಅನ್ನಿಸಿದರೆ ಸಾಕು, ಆ ತಾಯಿ ತನ್ನ ಮಕ್ಕಳನ್ನು ರಕ್ಷಿಸಲು ತನ್ನ ಪ್ರಾಣ ತ್ಯಾಗ ಮಾಡಲು ಸಹ ಸಿದ್ದಳಾಗಿರುತ್ತಾಳೆ ಎಂದು ಹೇಳಬಹುದು. ವಿಸ್ಮಯ ಎಂದರೆ ನಾವು ಇಲ್ಲಿ ಹೇಳುತ್ತಿರುವುದು ಬರೀ ಮನುಷ್ಯರಿಗೆ ಸಂಬಂಧ ಪಟ್ಟಿದ್ದು ಅಂತ ನೀವು ಅಂದು ಕೊಂಡರೆ ಅದು ತಪ್ಪು. ಏಕೆಂದರೆ ಈ ಪ್ರಾಣಿ ಮತ್ತು ಪಕ್ಷಿಗಳಲ್ಲಿಯೂ (Birds) ಸಹ ಈ ತಾಯ್ತನ ಎನ್ನುವುದನ್ನು ನಾವು ಅನೇಕ ಸಂದರ್ಭಗಳಲ್ಲಿ ನೋಡಬಹುದು.

ಉದಾಹರಣೆಗೆ ಹೆಣ್ಣು ನಾಯಿ ತನ್ನ ಮರಿಗಳ ಹತ್ತಿರಕ್ಕೂ ಯಾರಾದರೂ ಬಂದರೆ ಗುರ್ ಅಂತ ಮೈಮೇಲೆ ಹಾರಿ ಬರುವುದನ್ನು ನೋಡಿರುತ್ತೇವೆ. ಪಕ್ಷಿಗಳು ಸಹ ತನ್ನ ಮರಿಗಳು ಇನ್ನೂ ಮೊಟ್ಟೆಯಲ್ಲಿರುವಾಗಲೇ ಅವುಗಳನ್ನು ಒಂದು ಜೋಪಾನವಾದ ಗೂಡಿನಲ್ಲಿ ಇರಿಸಿ ತುಂಬಾನೇ ಕಾಳಜಿಯಿಂದ ನೋಡಿ ಕೊಳ್ಳುತ್ತವೆ. ಆ ಗೂಡಿನ ಹತ್ತಿರಕ್ಕೆ ಯಾವುದಾದರೂ ಬೇರೆ ಪಕ್ಷಿ ಬಂದರೂ ಸಹ ತಾಯಿ ಹಕ್ಕಿ ವೇಗವಾಗಿ ಗೂಡಿನ ಕಡೆಗೆ ಓಡಿ ಬರುವುದನ್ನು ನಾವು ನೋಡಿರುತ್ತೇವೆ.

ತಾಯಿಯ ಬೇಷರತ್ತಾದ ಪ್ರೀತಿಯು ಆಗಾಗ್ಗೆ ಸಂತಾನವನ್ನು ಅಪಾಯಗಳಿಂದ ರಕ್ಷಿಸುತ್ತದೆ. ಇತ್ತೀಚೆಗೆ ಆನ್‌ಲೈನ್ ನಲ್ಲಿ ಕಾಣಿಸಿಕೊಂಡ ಒಂದು ವೀಡಿಯೋದಲ್ಲಿ ಸಹ ತಾಯಿ ಹಕ್ಕಿಯೊಂದು ತನ್ನ ಮೊಟ್ಟೆಗಳ ಸಮೀಪ ಬರುತ್ತಿರುವ ಉತ್ಖನನಕಾರದಿಂದ (ಎಕ್ಸಕವೇಟರ್) ರಕ್ಷಿಸುತ್ತಿರುವುದನ್ನು ತೋರಿಸಿದೆ ನೋಡಿ.

ಇದನ್ನೂ ಓದಿ: Liquor Storage: ಮದ್ಯ ಬಹಳ ಕಾಲ ಬಾಟಲಿಯಲ್ಲೇ ಇದ್ದರೆ ಹಾಳಾಗುತ್ತದೆಯೇ?

ಮರಿಗಳನ್ನು ರಕ್ಷಿಸಿಕೊಂಡ ತಾಯಿ ಹಕ್ಕಿ:

ಈ ಕ್ಲಿಪ್ ನಲ್ಲಿ ತಾಯಿ ಪಕ್ಷಿಯು ಆತುರಾತುರವಾಗಿ ತನ್ನ ಮೊಟ್ಟೆಗಳ ಕಡೆಗೆ ಹೋಗುವುದನ್ನು ಮತ್ತು ಸಂತಾನೋತ್ಪತ್ತಿ ಮಾಡುವುದನ್ನು ಕಾಣಬಹುದು. ಇನ್ನೊಂದು ಬದಿಯಲ್ಲಿ ಮಣ್ಣಿನ ರಸ್ತೆಯ ಮೂಲಕ ಉತ್ಖನನ ಯಂತ್ರವು ಹಾದು ಹೋಗುವುದನ್ನು ಕಾಣಬಹುದು. ನಂತರ, ಉತ್ಖನನ ಯಂತ್ರವು ಹಿಮ್ಮುಖವಾಗಿ ಪಕ್ಷಿಯ ಕಡೆಗೆ ಚಲಿಸುತ್ತದೆ. ರಕ್ಷಣಾತ್ಮಕ ಹಕ್ಕಿ ಜೋರಾಗಿ ಚಿಲಿಪಿಲಿ ಗುಟ್ಟುತ್ತದೆ ಮತ್ತು ಮೊಟ್ಟೆಗಳನ್ನು ರಕ್ಷಿಸಲು ತನ್ನ ರೆಕ್ಕೆಗಳನ್ನು ವಿಸ್ತರಿಸುತ್ತದೆ. ಹಕ್ಕಿ ಚಿಲಿಪಿಲಿಗುಟ್ಟುತ್ತಲೇ ಇದ್ದರೂ ಸಹ ಉತ್ಖನನಕಾರನ ಆ ಮುಂಬದಿಯ ಬಕೆಟ್ ಪಕ್ಷಿಯ ಬಳಿ ಕಂಡು ಬರುತ್ತದೆ.

ಉತ್ಖನನಕಾರನು ಹಿಂದಕ್ಕೆ ಚಲಿಸುತ್ತಾನೆ, ಹಕ್ಕಿಗೆ ಸ್ವಲ್ಪ ಸಮಯ ವಿಶ್ರಾಂತಿ ನೀಡಿದಂತಾಗುತ್ತದೆ. ಮತ್ತೆ, ಉತ್ಖನನಕಾರನು ಮುಂದೆ ಬರುತ್ತಾನೆ ಮತ್ತು ಪಕ್ಷಿ ಜೋರಾಗಿ ಕೂಗುತ್ತದೆ. ಉತ್ಖನನಕಾರನು ಹಿಂದಕ್ಕೆ ಸರಿಯುವವರೆಗೂ ಹಕ್ಕಿ ತನ್ನ ಉತ್ಸಾಹವನ್ನು ಕಳೆದು ಕೊಳ್ಳುವುದಿಲ್ಲ ಮತ್ತು ತನ್ನ ಮರಿಗಳಿರುವ ಮೊಟ್ಟೆಗಳನ್ನು ರಕ್ಷಿಸಿಕೊಳ್ಳಲು ಜೀವದ ಹಂಗು ತೊರೆದು ಹೋರಾಡುತ್ತದೆ.

ಇದೀಗ ಈ ವಿಡಿಯೋ ಎಲ್ಲಡೆ ವೈರಲ್:

ಈ ಹೃದಯಸ್ಪರ್ಶಿ ಕ್ಲಿಪ್ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ನಲ್ಲಿ 10 ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ. ಭಾರತೀಯ ಆಡಳಿತ ಸೇವೆಯ ಅಧಿಕಾರಿ ಅವನೀಶ್ ಶರಣ್ ಅವರು ಸೋಮವಾರ ಈ ಕ್ಲಿಪ್ ಅನ್ನು ಹಂಚಿ ಕೊಂಡಿದ್ದಾರೆ. ಈ ಕ್ಲಿಪ್ ನೆಟ್ಟಿಗರು ತಮ್ಮ ತಾಯಿಯ ಪ್ರೀತಿಯ ಬಗ್ಗೆ ಮಾತನಾಡುವಂತೆ ಮಾಡಿತು. "ಯಾವುದೇ ಜೀವಿಯಾದರೂ ತಾಯಿಯ ಪ್ರೀತಿಯೇ ಹೆಚ್ಚು" ಎಂದು ಬಳಕೆದಾರರೊಬ್ಬರು ಕಾಮೆಂಟ್ ಮಾಡಿದ್ದಾರೆ. ಏತನ್ಮಧ್ಯೆ, ಕೆಲವು ಬಳಕೆದಾರರು ವೀಡಿಯೋವನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಹೇಳಿದರು.

ಇದನ್ನೂ ಓದಿ: Golden Tortoise Beetle: ಇಂಟರ್ನೆಟ್‌ನಲ್ಲಿ ಗಮನ ಸೆಳೆದ ಗೋಲ್ಡನ್ ಆಮೆ ಜೀರುಂಡೆ, ಎಷ್ಟು ಮುದ್ದಾಗಿದೆ ಗೊತ್ತಾ ಈ ಪುಟ್ಟ ಕೀಟ

ತಾಯಿ ಹಕ್ಕಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ ನೆಟ್ಟಿಗರು:

ಈ ಕ್ಲಿಪ್ ನೋಡಿದ ಸಾಮಾಜಿಕ ಮಾಧ್ಯಮ ಬಳಕೆದಾರರೊಬ್ಬರು “ಅತ್ಯಂತ ಕಷ್ಟದ ಸಮಯದಲ್ಲಿ ನಮ್ಮೊಂದಿಗೆ ಇರುವವರು ಪೋಷಕರು ಮಾತ್ರ.. ಅವರು ಮಾತ್ರ ನಿಮ್ಮನ್ನು ಉತ್ತಮವಾಗಿ ಬೆಂಬಲಿಸುತ್ತಾರೆ. ಅವರು ಯಾವಾಗಲೂ ನೀವು ಈ ಕೆಲಸವನ್ನು ಮಾಡಬಹುದು ಎಂದು ಹೇಳುತ್ತಾರೆ .. ಕೆಲವೊಮ್ಮೆ ನಾನು ತುಂಬಾ ಅದೃಷ್ಟಶಾಲಿ ಎಂದುsave ಭಾವಿಸುತ್ತೇನೆ, ನಾನು ಒಳ್ಳೆಯ ಪೋಷಕರನ್ನು ಪಡೆದಿದ್ದೇನೆ” ಎಂದು ಬರೆದಿದ್ದಾರೆ.

ಇನ್ನೊಬ್ಬರು “ತಾಯಿ ಯಾವಾಗಲೂ ಚಿಂತೆ ಮಾಡುವವಳು, ತಾಯ್ತನದ ಭಾವನೆ, ನಿಜವಾಗಿಯೂ ಹೃದಯವನ್ನು ಸ್ಪರ್ಶಿಸುವುದು, ಅರಿವಿಲ್ಲದೆ ಕಣ್ಣೀರು ಬೀಳುವುದು.. ಒಬ್ಬ ಮನುಷ್ಯನಾಗಿ ನಾವು ಎಂದಿಗೂ ಮುಗ್ಧ ಪಕ್ಷಿಗಳನ್ನು ಮತ್ತು ಪ್ರಾಣಿಗಳ ಕುಟುಂಬವನ್ನು ನಾಶಪಡಿಸಬಾರದು” ಎಂದು ಹೇಳಿದ್ದಾರೆ.
Published by:shrikrishna bhat
First published: