• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral Video: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ

Viral Video: ಒಟ್ಟಿಗೆ ಆಕಾಶದಲ್ಲಿ ಹಾರಿದ ತಾಯಿ ಮಗಳು! ಇಲ್ಲಿದೆ ನೋಡಿ ಪೈಲೆಟ್ ಅಮ್ಮ ಮಗಳ ರೋಮಾಂಚಕ ಕಥೆ

ಪೈಲೆಟ್ ಆಗಿ ಒಂದೆ ಫ್ಲೈಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಯಿ ಮಗಳು

ಪೈಲೆಟ್ ಆಗಿ ಒಂದೆ ಫ್ಲೈಟ್ ನಲ್ಲಿ ಕಾರ್ಯನಿರ್ವಹಿಸುತ್ತಿರುವ ತಾಯಿ ಮಗಳು

ಸೌತ್ ವೆಸ್ಟ್ ಏರ್ ಲೈನ್ಸ್ ನ್ನಲ್ಲಿ ತಾಯಿ ಹಾಲಿ ಪೆಟಿಟ್ ಮತ್ತು ಅವರ ಮಗಳಾದ ಫರ್ಸ್ಟ್ ಆಫೀಸರ್ ಕೀಲಿ ಪೆಟಿಟ್ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರು ಒಟ್ಟಿಗೆ ಆಕಾಶದಲ್ಲಿ ಹಾರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

  • Share this:

ತಾಯಿಯಂತೆ ಮಗಳು, ನೂಲಿನಂತೆ ಸೀರೆ ಅನ್ನೋ ನಾಣ್ಣುಡಿ ಇದೆ. ಅಂದರೆ ಸಾಮಾನ್ಯವಾಗಿ ಮಗಳು ಹೆಚ್ಚಾಗಿ ತನ್ನ ತಾಯಿಯ ಗುಣಗಳನ್ನೆ ಪರಿಪಾಲಿಸುತ್ತಾಳೆ. ಹಾಗೆಯೇ ಪ್ರತಿಯೊಬ್ಬ ತಂದೆ ತಾಯಿಗೆ (Parents) ತಮ್ಮ ಮಕ್ಕಳು ಒಳ್ಳೆಯ ಉದ್ಯೋಗ ಪಡೆಯಬೇಕು, ಜೀವನದಲ್ಲಿ ಯಶಸ್ಸನ್ನು (Success) ಸಾಧಿಸಬೇಕೆಂಬ ಕನಸು (Dream) ಇದ್ದೇ ಇರುತ್ತದೆ. ಆ ಕನಸು ನನಸಾದಾಗ ಅವರು ತುಂಬಾ ಹೆಮ್ಮೆ ಪಡುತ್ತಾರೆ. ಅಮೇರಿಕಾದ(America) ಪೈಲೆಟ್ (Pilot) ತಾಯಿಯೊಬ್ಬಳು (Mother) ತನ್ನ ಮಗಳು (Daughter) ಸಹ ತನ್ನಂತೆ ಪೈಲೆಟ್ ಆಗಿದ್ದಕ್ಕೆ ತುಂಬಾ ಹೆಮ್ಮೆ ಪಟ್ಟಿದ್ದಾರೆ. ಈ ರೋಮಾಂಚಕ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. 


ಸೌತ್ ವೆಸ್ಟ್ ಏರ್ ಲೈನ್ಸ್ ನ್ನಲ್ಲಿ ತಾಯಿ ಹಾಲಿ ಪೆಟಿಟ್ ಮತ್ತು ಅವರ ಮಗಳಾದ ಫರ್ಸ್ಟ್ ಆಫೀಸರ್ ಕೀಲಿ ಪೆಟಿಟ್ ಒಟ್ಟಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಇದೀಗ ಅವರು ಒಟ್ಟಿಗೆ ಆಕಾಶದಲ್ಲಿ ಹಾರುವ ವೀಡಿಯೋ ವೈರಲ್ ಆಗುತ್ತಿದೆ.


ಇದನ್ನೂ ಓದಿ: Scooter Teacher: ಸ್ಕೂಟಿ ಟೀಚರ್ ಫೇಮಸ್! 85 ಮಕ್ಕಳನ್ನು ಒಬ್ಬರೇ ಪಿಕಪ್ ಮಾಡಿ ಡ್ರಾಪ್ ಕೂಡಾ ಮಾಡ್ತಾರೆ


ಒಟ್ಟಿಗೆ ಆಕಾಶದಲ್ಲಿ ಹಾರಿದ ಅಮ್ಮ ಮಗಳು
ಜುಲೈ 23 ರಂದು ಡೆನ್ವರ್ ನಿಂದ ಸೇಂಟ್ ಲೂಯಿಸ್​ಗೆ 3658 ಫ್ಲೈಟ್ ನಲ್ಲಿ ಒಟ್ಟಿಗೆ ಹಾರಿದರು. ಅಲ್ಲದೆ ಇವರು ನಮ್ಮ ಏರ್ ಲೈನ್ಸ್ ನ ಮೊದಲ ತಾಯಿ ಮಗಳು ಪೈಲೆಟ್ ಜೋಡಿ ಎಂದು ಸಂಸ್ಥೆ ಹೇಳಿಕೊಂಡಿದೆ. ವಿಮಾನದಲ್ಲಿ ತಾಯಿ ತನ್ನ ಮಗಳನ್ನು ಪರಿಚಯಿಸುತ್ತಿರುವ ದೃಶ್ಯ ಕ್ಯಾಮಾರದಲ್ಲಿ ಸೆರೆಯಾಗಿದೆ.


ಒಂದೇ ಫ್ಲೈಟ್ ನಲ್ಲಿ ಕಾರ್ಯ ನಿರ್ವಹಿಸುತ್ತಿರುವ ತಾಯಿ ಮಗಳು


ಕಾಲೇಜು ಮುಗಿಸಿದ ನಂತರ ತಾಯಿ ಹಾಲಿ ಆರಂಭದಲ್ಲಿ ಫ್ಲೈಟ್ ಅಟೆಂಡೆಂಟ್ ಆಗಿ ಕೆಲಸ ಆರಂಭಿಸಿದ್ದರು. ನಂತರ ಪೈಲಟ್ ಆಗಿ ಬಡ್ತಿ ಪಡೆದಿದ್ದರು. ಈಗ ಅವರ ಮಗಳು ಪೈಲೆಟ್ ಆಗಿದ್ದಾಳೆ.
14 ವರ್ಷದ ವಯಸ್ಸಿನಲ್ಲೆ ಆಕಾಶದಲ್ಲಿ ಹಾರುವ ಕನಸು ಕಂಡ ಮಗಳು
ಕೀಲಿ ಪೆಟಿಟ್ ತಾನು 14ನೇ ವಯಸ್ಸಿನ್ನಲ್ಲಿರುವಾಗಲೇ ತನ್ನ ಅಮ್ಮನಂತೆ ಆಕಾಶದಲ್ಲಿ ಹಾರಬೇಕು ಪೈಲೆಟ್ ಆಗಬೇಕೆಂಬ ಕನಸು ಕಂಡಿದ್ದಳು. ತಾಯಿಯನ್ನೆ ಅನುಸರಿಸಿದ ಕೀಲಿ 2017 ರಲ್ಲಿ ಸೌತ್ ವೆಸ್ಟ್ ಏರ್ ಲೈನ್ಸ್ ನಲ್ಲಿ ಇಂಟರ್ನ್ ಶಿಪ್ ಪಡೆದು ಅಲ್ಲಿ ಉದ್ಯೋಗ ಪಡೆದಳು. ಇದೀಗ ಅಲ್ಲಿಯೇ ಫರ್ಸ್ಟ್ ಆಫಿಸರ್ ಫೈಲೆಟ್ ಆಗಿ ಕಾರ್ಯ ನಿರ್ವಹಿಸುತ್ತಿದ್ದಾಳೆ.


ಈ ತಾಯಿ ಮಗಳ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್
ತಾಯಿ ಮಗಳು ಒಟ್ಟಾಗಿ ಒಂದೇ ಏರ್ ಲೈನ್ಸ್ ನಲ್ಲಿ ಕಾರ್ಯ ನಿರ್ವಹಿಸುವ ಹೃದಯ ಸ್ಪರ್ಶಿ ಕ್ಷಣಗಳು ಸೋಶಿಯಲ್ ಮೀಡಿಯಾದಲ್ಲಿ ಸಖತ್ ವೈರಲ್ ಆಗುತ್ತಿದೆ. ಸೌತ್ ವೆಸ್ಟ್ ಏರ್ ಈ ವೀಡಿಯೋ ವನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.


ಇವರ ಪೈಲೆಟ್ ಜೀವನವನ್ನು ತರೆದಿಟ್ಟ ವೀಡಿಯೋ
ಈ ವೀಡಿಯೋದಲ್ಲಿ ಮೊದಲಿಗೆ ತಾಯಿ ಮಗಳು ಒಂದು ಫೋಟೋ ಫ್ರೇಮ್ ಹಿಡಿದುಕೊಂಡು ನಿಂತಿರುವ ದೃಶ್ಯದಿಂದ ಆರಂಭವಾಗುತ್ತದೆ. ಅದರಲ್ಲಿ ತಾಯಿ ಮಗಳ ಫೋಟೊದೊಂದಿಗೆ ಅವರ ಇಡೀ ಪೈಲೆಟ್ ಜೀವನ ರೂಪುಗೊಂಡ ಬಗೆಯನ್ನು ತೋರಿಸುತ್ತದೆ. ಈ ವೀಡಿಯೋ 27,900ಕ್ಕಿಂತಲೂ ಅಧಿಕ ವೀಕ್ಷಣೆಯನ್ನು ಪಡೆದಿದೆ.


ತಾಯಿ ಮಗಳ ಪೈಲೆಟ್ ಜೋಡಿಯೊಂದು ನೋಡಿದ ನೆಟ್ಟಿಗರು ಬಹಳ ಸಂತೋಷವನ್ನು ಕಮೆಂಟ್ ಗಳ ಮೂಲಕ ಹಂಚಿಕೊಂಡಿದ್ದಾರೆ. ಇವರ ಜೀವನದ ಈ ಅದ್ಭುತ ಕ್ಷಣವನ್ನು ಶ್ಲಾಘಿಸಿದ್ದಾರೆ.


ಇದನ್ನೂ ಓದಿ: Viral Video: ಕರಾಟೆಯಲ್ಲಿ ಈ ನಾಯಿಯೇ ಚಾಂಪಿಯನ್! ಡಾಗ್‌ನ ಒಂದೇ ಹೊಡೆತಕ್ಕೆ ಬೆಕ್ಕು ಎಸ್ಕೇಪ್!


ಈ ಕುರಿತು ಬರೆದುಕೊಂಡ ತಾಯಿ ಹಾಲಿ ಇಂದು ನನ್ನ ಬುದೊಡ್ಡ ಕನಸು ನನಸಾಗಿದೆ. ನಾನು ನನ್ನ ಈ ವೃತ್ತಿಯನ್ನು ಪ್ರೀತಿಸುತ್ತಿದ್ದೆ. ಆದರೆ ಇದೀಗ ನನ್ನ ಮಗಳು ಈ ವೃತ್ತಿಯನ್ನು ನನ್ನ ಮಗಳು ಸಹ ಪ್ರೀತಿಸಿ ಇದೇ ವೃತ್ತಿಗೆ ಸೇರಿಕೊಂಡಿದ್ದಾಳೆ. ಈ ಕುರಿತು ಸಂತೋಷ ವ್ಯಕ್ತ ಪಡಿಸಿದ್ದಾರೆ.

First published: