ಈ ರೆಸ್ಟೋರೆಂಟ್​ ಮೆನುವಿನಲ್ಲಿ ಸಿಗೋದು ಕೋಬ್ರಾ ವೈನ್​, ಸ್ನೇಕ್ ಬಿರಿಯಾನಿ!

ಅಲ್ಲಿನ ಜನರ ಪ್ರಕಾರ ಹಾವನ್ನು ಸೇವಿಸುದರಿಂದ ಪುರುಷರ ಬಲ ಹಾಗೂ ವೀರ್ಯ ವೃದ್ಧಿಸುತ್ತದೆಯಂತೆ. ಹಾಗಾಗಿ ಲೇ ಮತ್​ ಪಟ್ಟಣದಲ್ಲಿರುವ ಎಲ್ಲಾ ರೆಸ್ಟೋರೆಂಟ್​ಗಳ ಮೆನುವಿನಲ್ಲಿ ಹಾವುಗಳಿಂದ ಸಿದ್ಧ ಪಡಿಸಿದ ಖಾದ್ಯಗಳು ಇರುತ್ತವೆ.

news18-kannada
Updated:June 24, 2020, 4:33 PM IST
ಈ ರೆಸ್ಟೋರೆಂಟ್​ ಮೆನುವಿನಲ್ಲಿ ಸಿಗೋದು ಕೋಬ್ರಾ ವೈನ್​, ಸ್ನೇಕ್ ಬಿರಿಯಾನಿ!
ಪ್ರಾತಿನಿಧಿಕ ಚಿತ್ರ
  • Share this:
ಯಾರಾದರೂ ಅಷ್ಟೇ.. ಯಾವುದಾದರು ರೆಸ್ಟೋರೆಂಟ್​ಗೆ ಹೋದಾಗ ಮೊದಲು ನೋಡುವುದು ಅಲ್ಲಿನ ಮೆನು. ಈ ರೆಸ್ಟೋರೆಂಟ್​ನಲ್ಲಿ ಯಾವ ಸ್ಪೆಷಲ್​ ಆಹಾರವನ್ನು ಸಿದ್ಧಪಡಿಸುತ್ತಾರೆಂದು ನೋಡುತ್ತಾರೆ. ಬೇರೆಲ್ಲೂ ಸಿಗದ ಸ್ಟೆಷಲ್​ ಫುಡ್​ಗಳು ಕೆಲವೊಂದು ರೆಸ್ಟೋರೆಂಟ್​ನಲ್ಲಿ ಸಿಗುತ್ತವೆ. ಹಾಗಾಗಿ ಅದರಿಂದ ಆ ರೆಸ್ಟೋರೆಂಟ್​ಗಳು ಹೆಚ್ಚಿನ ಜನಪ್ರಿಯತೆಯನ್ನು ಪಡೆದಿರುತ್ತವೆ.

ಆದರೆ ಇಲ್ಲೊಂದು ರೆಸ್ಟೋರೆಂಟ್​ ಇದೆ. ಜೋರಾಗಿ ಹಸಿವಾಯಿತೆಂದು ಈ ರೆಸ್ಟೋರೆಂಟ್​ಗೆ ತೆರಳಿ ಅಲ್ಲಿನ ಮೆನುವನ್ನು ನೋಡಿದರೆ ನಿಮ್ಮ ಹೊಟ್ಟೆ ಹಸಿವು ಅರ್ಧಕ್ಕೆ ನಿಲ್ಲಬಹುದು. ಕಾರಣ ಆ ರೆಸ್ಟೋರೆಂಟ್​ನಲ್ಲಿ ಹಾವುಗಳಿಂದ ತಯಾರಿಸಿದ ಸ್ಪೆಷಲ್​ ಆಹಾರಗಳು ಬಿಟ್ಟು ಬೇರೆನೂ ಸಿಗುವುದಿಲ್ಲ.

ಹಂಗ್​​ ರೆಸ್ಟೋರೆಂಟ್​​

ಹಾವುಗಳಿಂದ ಆಹಾರವನ್ನು ಸಿದ್ಧಪಡಿಸುವ ಈ ರೆಸ್ಟೋರೆಂಟ್​​ ಹೆಸರು ಹಂಗ್​. ಇದು ವಿಯೆಟ್ನಾಂ ಹನೋಯ್​​ನಿಂದ 5 ಕಿಲೋ ಮೀಟರ್​​​ ದೂರದಲಿರುವ ಲೇ ಮತ್​​ ಸ್ನೇಕ್​ ವಿಲೇಜ್​ನಲ್ಲಿದೆ.

ಹಲವಾರು ತಲೆಮಾರುಗಳಿಂದ ಲೇ ಮತ್​​ ಪಟ್ಟಣದಲ್ಲಿ ಹಾವು ಹಿಡಿಯುವುದು, ಹೊಡೆಯುವುದು, ಅದರಿಂದ ಆಹಾರ ತಯಾರಿಸುವುದು ಅಲ್ಲಿನ ಜನರು ರೂಢಿಸಿಕೊಂಡು ಬಂದಿದ್ದಾರೆ. ಇಲ್ಲಿ ಹಾವನ್ನು ಹುಡುಕಿ ಹಿಡಿಯುವುದು ಮಾತ್ರವಲ್ಲ, ಫಾರ್ಮ್​ನಲ್ಲಿ ಹಾವನ್ನು ಸಾಕುತ್ತಾರೆ.

ಅಲ್ಲಿನ ಜನರ ಪ್ರಕಾರ ಹಾವನ್ನು ಸೇವಿಸುದರಿಂದ ಪುರುಷರ ಬಲ ಹಾಗೂ ವೀರ್ಯ ವೃದ್ಧಿಸುತ್ತದೆಯಂತೆ. ಹಾಗಾಗಿ ಲೇ ಮತ್​ ಪಟ್ಟಣದಲ್ಲಿರುವ ಎಲ್ಲಾ ರೆಸ್ಟೋರೆಂಟ್​ಗಳ ಮೆನುವಿನಲ್ಲಿ ಹಾವುಗಳಿಂದ ಸಿದ್ಧ ಪಡಿಸಿದ ಖಾದ್ಯಗಳು ಇರುತ್ತವೆ. ಹಂಗ್​ ಹೊಟೇಲ್​ ಹೆಚ್ಚು ಜನಪ್ರಿಯವಾಗಿದೆ. ಎಲ್ಲಾ ತರಹದ ಹಾವುಗಳ ಆಹಾರ ಸಿಗುತ್ತವೆ. ಪ್ರವಾಸಿಗರು ಈ ರೆಸ್ಟೋರೆಂಟ್​ಗೆ ಹಾವಿನ್ನು ಸೇವಿಸಲು ಬರುತ್ತಾರೆ.

ಅಷ್ಟೇ ಅಲ್ಲ, ಹಂಗ್​ ರೆಸ್ಟೋರೆಂಟ್​ನಲ್ಲಿ ಹಾವಿನಿಂದ ತಯಾರಿಸದ ವೈನ್​ ಕೂಡ ಸಿಗುತ್ತದೆ. ಕೋಬ್ರಾ ವೈನ್​ ಜನಪ್ರಿಯವಾಗಿದೆ. ಇನ್ನು ಹಾವಿನ ರಕ್ತ ಹಾಗೂ ಬೈಲ್​ಜ್ಯೂಸನ್ನು ಕೂಡ ವೈನ್​ಗೆ ಮಿಕ್ಸ್​​ ಮಾಡಿ ಊಟದ ಜೊತೆಗೆ ಸೇವನೆಗೆ ನೀಡುತ್ತಾರೆ.ಮತ್ತೊಂದು ವಿಶೇಷವೆಂದರೆ ಈ ರೆಸ್ಟೋರೆಂಟ್​ಗೆ ತೆರಳಿ ನಿಮಗೆ ಬೇಕಾದ ಹಾವನ್ನು ಆಯ್ಕೆ ಮಾಡಬಹುದು. ಕೆಲವೇ ಕ್ಷಣದಲ್ಲಿ ಆ ಹಾವನ್ನು ಸಾಯಿಸಿ,  ಕ್ಲೀನ್​ ಮಾಡಿ ಅದರಿಂದ ಆಹಾರವನ್ನು ತಯಾರಿಸಿ ಕೊಡುತ್ತಾರೆ. ಹಾಗಾಘಿ ವಿಯೆಟ್ನಾಂನ  ಹಂಗ್​ ರೆಸ್ಟೋರೆಂಟ್​​ ಭಾರಿ ಜನಪ್ರಿಯತೆ ಪಡೆದಿದೆ.

ಗೋಲ್ಡನ್​ ಸ್ಟಾರ್​​ ಗಣೇಶ್​​​ ಹುಟ್ಟಹಬ್ಬಕ್ಕೆ ‘ಸಖತ್‘​ ಗಿಫ್ಟ್​​ ನೀಡಲು ಮುಂದಾದ ಸಿಂಪಲ್​ ಸುನಿ ತಂಡ
First published:June 24, 2020
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories

corona virus btn
corona virus btn
Loading