• ಹೋಂ
  • »
  • ನ್ಯೂಸ್
  • »
  • ಟ್ರೆಂಡ್
  • »
  • Viral News: ಈ ಹುಳ ನಿಮ್ಮ ಜೀವವನ್ನು ಉಳಿಸುತ್ತಂತೆ, ಪುಟ್ಟ ಜೀವಿಯ ಬೆಲೆ ಕೋಟಿ ಕೋಟಿ ರೂಪಾಯಿ!

Viral News: ಈ ಹುಳ ನಿಮ್ಮ ಜೀವವನ್ನು ಉಳಿಸುತ್ತಂತೆ, ಪುಟ್ಟ ಜೀವಿಯ ಬೆಲೆ ಕೋಟಿ ಕೋಟಿ ರೂಪಾಯಿ!

ಕೀಟ

ಕೀಟ

ನೀವು ಮನೆಗಳಲ್ಲಿ ಪ್ರಾಣಿಗಳನ್ನು ಸಾಕುವುದನ್ನು ಕೇಳಿರುತ್ತೀರ. ಆದರೆ, ಇಲ್ಲೊಂದು ಕಡೆ ಹುಳವನ್ನು ಸಾಕ್ತಾ ಇದ್ದಾರಂತೆ.

  • Share this:

ಪ್ರಪಂಚದಲ್ಲಿ  (World) ಅನೇಕ ಜನರು ನಾನರೀತಿಯ ಪ್ರಾಣಿಗಳನ್ನು ಸಾಕುತ್ತಾರೆ. ಅವರ ಮನೆಯ ಸದಸ್ಯರಲ್ಲಿ ಆ ಪ್ರಾಣಿಯೂ ಒಂದು ಎನ್ನುವ ಹಾಗೆ ನೋಡಿಕೊಳ್ಳುತ್ತಾರೆ. ಅದಕ್ಕಾಗಿಯೇ ಸಾವಿರಾರು ರೂಪಾಯಿ ಖರ್ಚು ಮಾಡಲು ಹಿಂಜರಿಯುವುದಿಲ್ಲ. ಹೀಗೆ ಪ್ರಾಣಿಗಳನ್ನು ಸಾಕುವುದನ್ನು ಕೇಳಿರುತ್ತೇವೆ. ಆದರೆ, ಹುಳಗಳನ್ನು ಸಾಕುವುದನ್ನು ನೋಡಿದ್ದೀರಾ? ಅಥವಾ ಕೇಳಿದ್ದೀರಾ? ಅವುಗಳಿಗಾಗಿ ಸಾವಿರಾರು ರುಪಾಯಿಗಳನ್ನು ಖರ್ಚು ಮಾಡುತ್ತಾ ಇದ್ದಾರೆ ಅಂದ್ರೆ ನೀವು ನಂಬಲೇಬೇಕು. ಜೀರುಂಡೆ ಹುಳ ಕೇಳಿದ್ದೀರಾ? ಇದೀಗ ಆ ಹುಳವನ್ನು ಖರೀದಿಸಲು ಜನ ಮುಂದಾಗಿದ್ದಾರೆ. ಇದರ ರೇಟ್ (Rate)​ ಕೇಳಿದ್ರೆ ನಿಜಕ್ಕೂ ಶಾಕ್​ (Shock) ಆಗ್ತೀರ. ಐಷಾರಾಮಿ ಕಾರು ಅಥವಾ ಐಷಾರಾಮಿ ಮನೆ ಖರೀದಿಸಬಹುದು.


ನಿಜವಾಗಿಯು ಹೌದಾ ಅಂತ ಕೇಳ್ತಾ ಇದ್ರೆ, ಹೌದು. ಈ ಸುದ್ಧಿಯನ್ನು ಸಂಪೂರ್ಣವಾಗಿ ಓದಿ. ಈ ಹುಳದ ಬೆಲೆ ಲಕ್ಷಗಳಲ್ಲಿ ಅಲ್ಲ. ಕೋಟಿಗಟ್ಟಲೆ ಬೆಲೆಯಲ್ಲಿ. ಈ ಕೀಟವು ದುಬಾರಿ ಕಾರು ಅಥವಾ ದುಬಾರಿ ಫ್ಲಾಟ್‌ಗಿಂತ ಹೆಚ್ಚು ಮೌಲ್ಯದ್ದಾಗಿದೆ. ಜೀರುಂಡೆ ಕೇವಲ 2 ರಿಂದ 3 ಇಂಚುಗಳಷ್ಟು ಗಾತ್ರವನ್ನು ಹೊಂದಿರುವ ವಿಶ್ವದ ಅಪರೂಪದ ಜೀವಿಗಳಲ್ಲಿ ಒಂದಾಗಿದೆ. ಜೀರುಂಡೆ ಭೂಮಿಯ ಮೇಲೆ ಇರುವ ಅತ್ಯಂತ ಚಿಕ್ಕ, ವಿಚಿತ್ರ ಮತ್ತು ಅಪರೂಪದ ಜಾತಿಗಳಲ್ಲಿ ಒಂದಾಗಿದೆ.


ಇದನ್ನೂ ಓದಿ: ಒಂದೇ ಮರದಲ್ಲಿ 300 ಬಗೆಯ ಮಾವಿನ ಹಣ್ಣುಗಳು, ಈ ಮರ ಭಾರತದಲ್ಲಿಯೇ ಇದ್ಯಂತೆ!


ಈ ಕೀಟದ ಬೆಲೆ ಕೋಟಿಗಟ್ಟಲೆ ಇರುವಾಗ  ಯಾರಾದ್ರೂ ಕೊಂಡುಕೊಳ್ಳಲು ಮುಂದಾಗ್ತಾರಾ ಹೇಳಿ? ಜನರು ಇಟ್ಟುಕೊಳ್ಳುವ ಮತ್ತೊಂದು ಕೀಟವೆಂದರೆ ಸ್ಟ್ಯಾಗ್ ಜೀರುಂಡೆ, ಇದು ಭೂಮಿಯ ಮೇಲೆ ಕಂಡುಬರುವ ಅತಿದೊಡ್ಡ ಜೀರುಂಡೆ. ಇದು ಸುಮಾರು ಎಂಟೂವರೆ ಸೆಂಟಿಮೀಟರ್​ವರೆಗೆ ಬೆಳೆಯುತ್ತದೆ. ಅದನ್ನು ಖರೀದಿಸಲು ಜನರು ಒಂದು ಕೋಟಿಯವರೆಗೂ ಹಣ ನೀಡಲು ಸಿದ್ಧರಾಗಿದ್ದಾರೆ.


 ಒಂದು ಕೀಟಕ್ಕಾಗಿ ಇಷ್ಟೊಂದು ಬೆಲೆ? 


ಒಂದು ಕೀಟಕ್ಕಾಗಿ ಯಾಕೆ ಇಷ್ಟೊಂದು ಬೆಲೆ ಅಂತ ಯೋಚಿಸುತ್ತಾ ನೀವು ಇದ್ದೀರಾ? ಈ ಹುಳದಿಂದ ಒಂದು ರೀತಿಯ ಔಷಧಿಯನ್ನು ತಯಾರಿಸಲಾಗುತ್ತಂತೆ. ಹೀಗಾಗಿ ಒಂದು ಹುಳಕ್ಕೆ ಇಷ್ಟೊಂದು ಬೆಲೆ.


ಹೆಚ್ಚಿನ ಸಾರಂಗ ಜೀರುಂಡೆಗಳು ವಯಸ್ಕರಾದ ಕೆಲವೇ ವಾರಗಳಲ್ಲಿ ವಾಸಿಸುತ್ತವೆ, ಅನೇಕವು ಚಳಿಗಾಲದಲ್ಲಿ ಸಾಯುತ್ತವೆ. ಕಾಂಪೋಸ್ಟ್ ರಾಶಿಯನ್ನು ಈ ರೀತಿಯ ಉತ್ತಮ ಮತ್ತು ಬೆಚ್ಚಗಿನ ಸ್ಥಳದಲ್ಲಿ ಇರಿಸಿದರೆ, ಅವು ಬದುಕಬಲ್ಲವು. ಸಾರಂಗ ಜೀರುಂಡೆಗಳು ದೀರ್ಘ ಜೀವನ ಚಕ್ರವನ್ನು ಹೊಂದಿವೆ.


7 ವರ್ಷ ಹೆಚ್ಚು ಜಾಸ್ತಿ ಬದುಕಬೇಕು ಅಂದ್ರೆ ಮೊಟ್ಟೆಯನ್ನು ತಿನ್ಬೇಕಂತೆ. ಹಾಗೆಯೇ ಈ ಹುಳದ ಹೊಟ್ಟೆಯಲ್ಲಿ ಒಂದು ರೀತಿಯ ಲಿಕ್ವಿಡ್​ ಉತ್ಪತ್ತಿ ಆಗುತ್ತದೆ. ಆ  ಲಿಕ್ವಿಡ್​ ಕ್ಯಾನ್ಸರ್​ ರೋಗಿಗಳಿಗೆ ಕೊಟ್ರೆ ಕ್ಯೂರ್​ ಆಗುವ ಸಾಧ್ಯತೆ ಇರುತ್ತದೆ.
2 ರಿಂದ 3 ಇಂಚು ಇರುವ ಈ ಹುಳಕ್ಕೆ 50 ಸಾವಿರ ರುಪಾಯಿಯಿಂದ ಆರಂಭವಾಗುತ್ತದೆ. ಇದರಿಂದ ಅದೆಷ್ಟೋ ಜನರ ಪ್ರಾಣ ಉಳಿದಿದ್ಯಂತೆ. ಮೊದಲಿಗೆ ಈ ಹುಳದ ಔಷಧಿ ಆರಂಭವಾಗಿದ್ದು ಕೇರಳದಿಂದ, ತದನಂತರ ಇದು ವೈರಲ್​ ಆಗಲು ಆರಂಭವಾಯ್ತು.


ಹಲವಾರು ಸಂಶೋದಣೆಗಳನ್ನು ಮಾಡಿದಾಗ ಕೊನೆಯಲ್ಲಿ ತಿಳಿದು ಬಂದ ಸಂಶೋಧನೆಯೇ ಇದು.  ಇದಾದ ನಂತರ ಕೆಲವೊಂದು ಕಡೆಯಲ್ಲಿ ಈ ಜೀರುಂಡೆಯನ್ನು ಸಾಕಲು ಆರಂಭ ಮಾಡಿದ್ದಾರೆ.


ಈ ಜೀರುಂಡೆಗೆ ಇರುವಂತಹ ಬೆಲೆಯೇ ಬೇರೆ.  ಇದನ್ನು ಸಾಕುವಾಗ ಅದಕ್ಕೆ ಆಹಾರವಾಗಿ ಬೇರೆ ರೀತಿಯ ಕಾಳುಗಳನ್ನು ಕೊಡಬೇಕಾಗುತ್ತದೆಯಂತೆ. ತಿಳಿದು ಬಂದ ವಿಷಯದ ಪ್ರಕಾರ ಈ ಹುಳದಿಂದ ಅದೆಷ್ಟೋ ಜನರ ಜೀವ ಉಳಿದಿದ್ಯಂತೆ. ಈಗಲೂ ಕೂಡ ಈ ಜೀರುಂಡೆಯಿಂದ ಹಲವರ ಬದುಕು ಉಳಿದಿದೆ.

First published: