3.56 ಕೋಟಿ ರೂಪಾಯಿ ಬೆಲೆಯ ಕಾದಂಬರಿ ಚಿಟಿಕೆ ಹೊಡೆಯುವಷ್ಟರಲ್ಲಿ ಸೇಲ್! ಯಾವುದು ಆ ಪುಸ್ತಕ? ಕೊಂಡವರಾರು?

Expensive: ಈ ಪುಸ್ತಕವನ್ನು ಅಮೇರಿಕನ್ ಕಲೆಕ್ಟರ್ ಮಾರಾಟ ಮಾಡಿದ್ದು ಅವರು ಯಾರು ಎನ್ನುವುದನ್ನು ಬಹಿರಂಗಪಡಿಸಲಾಗಿಲ್ಲ. ಬ್ರಿಟಿಷ್ ಲೇಖಕಿ ಜೆ.ಕೆ. ರೌಲಿಂಗ್ ಅವರು ಅನಾಥ ಹುಡುಗ ಮಾಂತ್ರಿಕನ ಸಾಹಸಗಳ ಬಗ್ಗೆ ಇನ್ನೂ ಆರು ಪುಸ್ತಕಗಳನ್ನು ಬರೆದಿದ್ದಾರೆ.

ಹ್ಯಾರಿ ಪಾಟರ್ ಕಾದಂಬರಿ

ಹ್ಯಾರಿ ಪಾಟರ್ ಕಾದಂಬರಿ

  • Share this:
ನಾವೆಲ್ಲಾ ಸ್ಪುರದ್ರೂಪಿ ಅನಾಥ (orphaned boy)ಹುಡುಗನ ಸುತ್ತಲೂ ಸುತ್ತುವ ಕಥಾ ಹಂದರವಿರುವ ಒಂದು ಕಾಲ್ಪನಿಕ(Fictional) ಹಾಲಿವುಡ್ (Hollywood movie) ಚಿತ್ರ ಹ್ಯಾರಿ ಪಾಟರ್ (Harry Potter) ಒಮ್ಮೆ ಆದರೂ ಮಿಸ್ ಮಾಡದೆಯೇ ನೋಡಿರುತ್ತೇವೆ. ಅದರಲ್ಲಿರುವಂತಹ ರೋಚಕ ಕಥೆಗಳು (Thrilling) ನಿಮ್ಮನ್ನು ನಂತರದಲ್ಲಿ ಬಂದಂತಹ ಆ ಚಿತ್ರದ ಎಂಟು ಭಾಗಗಳನ್ನು(Eight parts) ಸಹ ನೀವು ತಪ್ಪದೇ ನೋಡಲು ಆಸಕ್ತಿ ಹುಟ್ಟಿಸಿರುವುದಂತೂ ನಿಜವಾದ ಸಂಗತಿಯಾಗಿರುತ್ತದೆ.

ವಿಶ್ವ ದಾಖಲೆ
ಆದರೆ ಈಗೇಕೆ ನಾವು ಇದರ ಬಗ್ಗೆ ಮಾತಾಡುತ್ತಿದ್ದೇವೆ ಎಂದು ನೀವು ಅಂದುಕೊಳ್ಳಬಹುದು. ಸುದ್ದಿ ಏನೆಂದರೆ ಹ್ಯಾರಿ ಪಾಟರ್ ಕಾದಂಬರಿಯ ಮೊದಲ ಆವೃತ್ತಿಯು ಗುರುವಾರದಂದು ಯುನೈಟೆಡ್ ಸ್ಟೇಟ್ಸ್ ನಲ್ಲಿ 471,000 ಡಾಲರ್ ಎಂದರೆ ಭಾರತೀಯ ಮೌಲ್ಯದಲ್ಲಿ ಸರಿ ಸುಮಾರು 3.56 ಕೋಟಿ ರೂಪಾಯಿಗೆ ಮಾರಾಟ ಮಾಡಿದ್ದರಿಂದ ವಿಶ್ವ ದಾಖಲೆಯನ್ನು ಸೃಷ್ಟಿಸಿದೆ ಎಂದು ಹೇಳಬಹುದು.

ಇದನ್ನೂ ಓದಿ: Brain Health: ಹೆಚ್ಚು ಓದುವುದರಿಂದ ನಿಮ್ಮ ಮೆದುಳಿಗೆ ಏನಾಗತ್ತೆ ಗೊತ್ತಾ? ನರ ವಿಜ್ಞಾನ ಹೇಳೋದೇನು ?

20ನೇ ಶತಮಾನದ ಕಾಲ್ಪನಿಕ ಕೃತಿ
ರಾಯಿಟರ್ಸ್ ವರದಿ ಮಾಡಿರುವ 20ನೇ ಶತಮಾನದ ಕಾಲ್ಪನಿಕ ಕೃತಿಗೆ ಇದು ವಿಶ್ವ ದಾಖಲೆಯ ಬೆಲೆಯಾಗಿದೆ ಎಂದು ಹರಾಜುದಾರರು ತಿಳಿಸಿದ್ದಾರೆ. ಬ್ರಿಟಿಷ್ ಲೇಖಕಿ ಜೆ.ಕೆ.ರೌಲಿಂಗ್‌‍ ರ ಅವಾಸ್ತವ ಕಲ್ಪನೆಯುಳ್ಳ ಕಾದಂಬರಿಯ ಏಳು ಪುಸ್ತಕಗಳ ಸರಣಿ ಇದಾಗಿದ್ದು. ಈ ಪುಸ್ತಕಗಳು ಮಾಟ ಮತ್ತು ಮಾಂತ್ರಿಕ ವಿದ್ಯೆಯ ಶಾಲೆಯಲ್ಲಿ ಕಲಿಯುತ್ತಿರುವ ಹ್ಯಾರಿ ಪಾಟರ್ ಎಂಬ ಹುಡುಗನ ಮತ್ತು ಅವನ ಸ್ನೇಹಿತರಾದ ರಾನ್ ವೆಸ್ಲೆ ಮತ್ತು ಹರ್ಮಿಯನ್‌ರ ಜೊತೆಗಿನ ಸಾಹಸಗಳ ಘಟನೆಗಳನ್ನು ಈ ಕಾದಂಬರಿಯೂ ವಿವರಿಸುತ್ತದೆ.

ಹ್ಯಾರಿ ಪಾಟರ್ ಅಂಡ್ ದಿ ಸೊರ್ಸೇರರ್ಸ್ ಸ್ಟೋನ್ ಪುಸ್ತಕ
1997 ರ ಬ್ರಿಟಿಷ್ ಆವೃತ್ತಿಯಾದ ಹ್ಯಾರಿ ಪಾಟರ್ ಅಂಡ್ ದಿ ಫಿಲಾಸಫರ್ಸ್ ಸ್ಟೋನ್, ಮುಖಪುಟದಲ್ಲಿ ಒಂದು ಬಣ್ಣದ ದೃಷ್ಟಾಂತವನ್ನು ಹೊಂದಿದೆ. “ಹ್ಯಾರಿ ಪಾಟರ್ ಅಂಡ್ ದಿ ಸೊರ್ಸೇರರ್ಸ್ ಸ್ಟೋನ್" ಎಂಬ ಹೆಸರಿನ ಪುಸ್ತಕವನ್ನು ಯುನೈಟೆಡ್ ಸ್ಟೇಟ್ಸ್‌ನಲ್ಲಿ ಪ್ರಕಟಿಸಲಾಯಿತು. ನಿರ್ದಿಷ್ಟ ಬೈಂಡಿಂಗ್ ಹೊಂದಿರುವ ಕೇವಲ 500 ಪ್ರತಿಗಳನ್ನು ಮಾತ್ರ ಮುದ್ರಿಸಲಾಗಿದೆ ಎಂದು ಡಲ್ಲಾಸ್ ಹರಾಜು ಸಂಸ್ಥೆ ತಿಳಿಸಿದೆ. ಅಂತಿಮ ಬೆಲೆ 70,000 ಡಾಲರ್ ಆಗಿದ್ದು, ಮಾರಾಟದ ಮುಂಚೆ ಅಂದಾಜಿಸಲಾದ ಬೆಲೆಗಿಂತಲೂ ಆರು ಪಟ್ಟು ಹೆಚ್ಚಾಗಿತ್ತು ಎಂದು ಹೇಳಲಾಗುತ್ತಿದೆ.

ಅತ್ಯಂತ ದುಬಾರಿ ಕಾದಂಬರಿ
ಹ್ಯಾರಿ ಪಾಟರ್ ಕಾದಂಬರಿಯ ಮೊದಲ ಆವೃತ್ತಿಯ ಹರಾಜು ಬೆಲೆಗಳು ಈ ಹಿಂದೆ ಸುಮಾರು 110,000 ರಿಂದ 138,000 ಡಾಲರ್ ವರೆಗೆ ಇದ್ದವು ಎಂದು ಹೇಳಲಾಗುತ್ತಿದೆ.
ಇದು ಇದುವರೆಗೆ ಮಾರಾಟವಾದ ಅತ್ಯಂತ ದುಬಾರಿ ಹ್ಯಾರಿ ಪಾಟರ್ ಕಾದಂಬರಿ ಮಾತ್ರವಲ್ಲದೇ, ಇದು ವಾಣಿಜ್ಯಿಕವಾಗಿ ಪ್ರಕಟವಾದ 20 ನೇ ಶತಮಾನದ ಕಾದಂಬರಿಗಳಲ್ಲಿ ಅತ್ಯಂತ ದುಬಾರಿ ಬೆಲೆಯ ಕೃತಿಯಾಗಿದೆ" ಎಂದು ಹೆರಿಟೇಜ್ ಹರಾಜು ಕಾರ್ಯನಿರ್ವಾಹಕ ಉಪಾಧ್ಯಕ್ಷ ಜೋ ಮಡ್ಡಲೇನಾ ಅವರು ರಾಯಿಟರ್ಸ್ ಉಲ್ಲೇಖಿಸಿದ ಹೇಳಿಕೆಯಲ್ಲಿ ತಿಳಿಸಿದ್ದಾರೆ.

500 ಮಿಲಿಯನ್ ಪ್ರತಿ
ಈ ಪುಸ್ತಕವನ್ನು ಅಮೇರಿಕನ್ ಕಲೆಕ್ಟರ್ ಮಾರಾಟ ಮಾಡಿದ್ದು ಅವರು ಯಾರು ಎನ್ನುವುದನ್ನು ಬಹಿರಂಗಪಡಿಸಲಾಗಿಲ್ಲ. ಬ್ರಿಟಿಷ್ ಲೇಖಕಿ ಜೆ.ಕೆ. ರೌಲಿಂಗ್ ಅವರು ಅನಾಥ ಹುಡುಗ ಮಾಂತ್ರಿಕನ ಸಾಹಸಗಳ ಬಗ್ಗೆ ಇನ್ನೂ ಆರು ಪುಸ್ತಕಗಳನ್ನು ಬರೆದಿದ್ದಾರೆ.

ಇದನ್ನೂ ಓದಿ: Digital Library: ಈ ಊರಿನ ಗ್ರಂಥಾಲಯ ಈಗ ಸಂಪೂರ್ಣ ಹೈಟೆಕ್, ಎಲ್ಲರೂ ತಂತಮ್ಮ ಫೋನಲ್ಲೇ ಲೈಬ್ರರಿಯ ಪುಸ್ತಕ ಓದಬಹುದು!

ಅದು ಯುಎಸ್ ಪ್ರಕಾಶಕ ಸ್ಕಾಲಸ್ಟಿಕ್ ಪ್ರಕಾರ ವಿಶ್ವದಾದ್ಯಂತ 80 ಭಾಷೆಗಳಲ್ಲಿ ಸುಮಾರು 500 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿದೆ. ಎಂಟು ಚಲನಚಿತ್ರಗಳನ್ನು ತಯಾರಿಸಲಾಗಿದೆ, ಇದು ಒಟ್ಟಾರೆಯಾಗಿ ಜಾಗತಿಕ ಗಲ್ಲಾಪೆಟ್ಟಿಗೆಯಲ್ಲಿ 7.8 ಬಿಲಿಯನ್ ಡಾಲರ್ ಹಣ ಗಳಿಸಿದೆ.
Published by:vanithasanjevani vanithasanjevani
First published: