• Home
 • »
 • News
 • »
 • trend
 • »
 • Police Constable Exam: ಪೊಲೀಸ್​ ಎಕ್ಸಾಂಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು: ಸ್ಟೇಡಿಯಂನಲ್ಲೇ ಪರೀಕ್ಷೆ, ಫುಲ್ ವೈರಲ್

Police Constable Exam: ಪೊಲೀಸ್​ ಎಕ್ಸಾಂಗೆ 30 ಸಾವಿರಕ್ಕೂ ಹೆಚ್ಚು ಅಭ್ಯರ್ಥಿಗಳು: ಸ್ಟೇಡಿಯಂನಲ್ಲೇ ಪರೀಕ್ಷೆ, ಫುಲ್ ವೈರಲ್

ಪಾಕಿಸ್ತಾನದಲ್ಲಿ ಪೊಲೀಸ್​ ಎಕ್ಸಾಂಗೆ ಬಂದಿರುವ ಜನರು

ಪಾಕಿಸ್ತಾನದಲ್ಲಿ ಪೊಲೀಸ್​ ಎಕ್ಸಾಂಗೆ ಬಂದಿರುವ ಜನರು

ಇಸ್ಲಾಮಾಬಾದ್​ನಲ್ಲಿ ಪೊಲೀಸ್​ ಕಾನ್​​ಸ್ಟೇಬಲ್​ ಹುದ್ದೆಗೆ ಲಿಖಿತ ನೇಮಕಾತಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾಗಿದ್ದ ಜನರ ಸಂಖ್ಯೆ ಕೇಳಿದ್ರೆ ಅಚ್ಚರಿಯಾಗುತ್ತೆ. ಅಂದ ಹಾಗೆ ಪೊಲೀಸ್ ಕಾನ್​ಸ್ಟೇಬಲ್​ ಎಕ್ಸಾಂಗೆ ಹಾಜರಾದ ಜನರು ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು.

ಮುಂದೆ ಓದಿ ...
 • Share this:

  ಪಾಕಿಸ್ತಾನವು (Pakistan) ಇತ್ತೀಚೆಗೆ ಎದುರಿಸುತ್ತಿರುವ ದೊಡ್ಡ ಸಮಸ್ಯೆಯೆಂದರೆ ನಿರುದ್ಯೋಗ ಸಮಸ್ಯೆ. ಇದರ ಜೊತೆಗೆ ಪಾಕಿಸ್ತಾನ ಆರ್ಥಿಕ ಸಂಕಷ್ದ ಪರಿಸ್ಥಿತಿಯಲ್ಲೂ ಇದೆ. ಕೆಲವೊಂದು ದೇಶಗಳು ಕಳೆದ ಎರಡು ವರ್ಷಗಳಿಂದ ಬಹಳಷ್ಟು ಆರ್ಥಿಕ ಸಮಸ್ಯೆಗಳನ್ನು (Financial Problem) ಎದುರಿಸುತ್ತಿದೆ. ಇದಕ್ಕೆ ಮುಖ್ಯ ಕಾರಣ ಕೊರೊನಾ ಎಂಬ ಸಾಂಕ್ರಾಮಿಕ ರೋಗ ಎಂದು ಹೇಳಬಹುದು. ಇದು ನಿರುದ್ಯೋಗ ಸಮಸ್ಯೆಯನ್ನು (Unemployement Problem) ಹುಟ್ಟುಹಾಕುವಲ್ಲಿ ಮುಖ್ಯವಾಗಿ ಕಾರಣವಾದ ಅಂಶ ಅಂತಾನೂ ಹೇಳ್ಬಹುದು. ಇದೀಗ ಸೋಶಿಯಲ್​ ಮೀಡಿಯಾದಲ್ಲಿ ಒಂದು ಚಿತ್ರ ಮಾತ್ರ ಬಹಳಷ್ಟು ಹರಿದಾಟುತ್ತಿದೆ. ಪಾಕಿಸ್ತಾನದ ಇಸ್ಲಾಮಾಬಾದ್​ನಲ್ಲಿ ಪೊಲೀಸ್ ಕಾನ್​ಸ್ಟೇಬಲ್​ (Police Constable) ಹುದ್ದೆಯ ನೇಮಕಾತಿ ಲಿಖಿತ ಪರೀಕ್ಷೆಗೆ ನೆರೆದಿರುವ ಚಿತ್ರವಾಗಿದೆ. ಈ ಚಿತ್ರದಲ್ಲಿ ನಾವು ಎಕ್ಸಾಂಗೆ ಕುಳಿತಂತಹ ಸಾವಿರಾರು ಜನರ ಫೋಟೋವನ್ನು ನೋಡಬಹುದು.


  ಹೌದು, ಇಸ್ಲಾಮಾಬಾದ್​ನಲ್ಲಿ ಪೊಲೀಸ್​ ಕಾನ್​​ಸ್ಟೇಬಲ್​ ಹುದ್ದೆಗೆ ಲಿಖಿತ ನೇಮಕಾತಿ ಪರೀಕ್ಷೆಯನ್ನು ನಡೆಸಲಾಗಿತ್ತು. ಈ ಪರೀಕ್ಷೆಗೆ ಹಾಜರಾಗಿದ್ದ ಜನರ ಸಂಖ್ಯೆ ಕೇಳಿದ್ರೆ ಅಚ್ಚರಿಯಾಗುತ್ತೆ. ಅಂದ ಹಾಗೆ ಪೊಲೀಸ್ ಕಾನ್​ಸ್ಟೇಬಲ್​ ಎಕ್ಸಾಂಗೆ ಹಾಜರಾದ ಜನರು ಬರೋಬ್ಬರಿ 30 ಸಾವಿರಕ್ಕೂ ಹೆಚ್ಚು.


  2022ರ ಅಂತ್ಯದ ದಿನದಂದು ಪರೀಕ್ಷೆ


  ಶನಿವಾರ ಇಸ್ಲಾಮಾಬಾದ್‌ನ ಸ್ಪೋರ್ಟ್ಸ್ ಕಾಂಪ್ಲೆಕ್ಸ್‌ನಲ್ಲಿ ನಡೆದ ಲಿಖಿತ ಪರೀಕ್ಷೆಗೆ ಕನಿಷ್ಠ 32,000 ಅಭ್ಯರ್ಥಿಗಳನ್ನು ಮೈದಾನದಲ್ಲಿ ಕುಳಿತುಕೊಳ್ಳುವಂತೆ ಸಿದ್ಧತೆ ಮಾಡಲಾಯಿತು.


  ಇದನ್ನೂ ಓದಿ: ಆಹಾರ ಹುಡುಕುತ್ತಾ ಬಂದ ಕರಡಿಗೆ ಕಾದಿತ್ತು ಬಿಗ್​ ಶಾಕ್​! ಕಳ್ಳನಂತೆ ಎಸ್ಕೇಪ್​ ಆಗೇಬಿಡ್ತು!​


  ವರದಿಗಳ ಪ್ರಕಾರ


  ಇಸ್ಲಾಮಾಬಾದ್ ಪೊಲೀಸರ ಪ್ರಕಾರ, ಪೊಲೀಸ್​ ಕಾನ್​​ಸ್ಟೇಬಲ್​ ಹುದ್ದೆಗೆ 1667 ಹುದ್ದೆಗಳು ಖಾಲಿ ಇದೆ, ಜೊತೆಗೆ ಎಕ್ಸಾಂ ಬಗ್ಗೆ ಜಾಹೀರಾತನ್ನು ನೀಡಿದ್ದರು. ಈ ಜಾಹೀರಾತು ನೋಡಿ ಪಾಕಿಸ್ತಾನದಾದ್ಯಂತ 30 ಸಾವಿರಕ್ಕೂ ಹೆಚ್ಚು ಪುರುಷ ಹಾಗೂ ಮಹಿಳಾ ಅಭ್ಯರ್ಥಿಗಳು ಪೊಲೀಸ್ ಕಾನ್​​ಸ್ಟೇಬಲ್ ಲಿಖಿತ ಪರೀಕ್ಷೆಗೆ ಭಾಗವಹಿಸಿದ್ದಾರೆಂದು ವರದಿಯಾಗಿದೆ. ಕಳೆದ 5 ವರ್ಷಗಳಿಂದ ಪೊಲೀಸ್​ ಪೇದೆಗಳ ಹುದ್ದೆಗಳು ಹಾಗೇ ಖಾಲಿ ಉಳಿದಿವೆ ಎಂದು ಹೇಳಿದ್ದಾರೆ.


  ಪಾಕಿಸ್ತಾನದಲ್ಲಿ ಪೊಲೀಸ್​ ಎಕ್ಸಾಂಗೆ ಬಂದಿರುವ ಜನರು


  ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ಏರಿಕೆ 


  ಇಸ್ಲಾಮಾಬಾದ್ ಪೊಲೀಸ್ ನೇಮಕಾತಿಯಲ್ಲಿ  ಭಾಗವಹಿಸಿದ ಜನರು ದೇಶದಲ್ಲಿ ಉದ್ಯೋಗವನ್ನು ಹೆಚ್ಚಿಸುವ ವಿಷಯದ ಬಗ್ಗೆ ಹೊಸ ಚರ್ಚೆಯನ್ನು ಹುಟ್ಟುಹಾಕಿದ್ದಾರೆ. ಪಾಕಿಸ್ತಾನದಲ್ಲಿ ನಿರುದ್ಯೋಗ ಸಮಸ್ಯೆ ಉತ್ತುಂಗಕ್ಕೇರಿದೆ. ಸರ್ಕಾರಿ ಹುದ್ದೆಗೆ ಆಯ್ಕೆ ಆಗುವವರ ಸಂಖ್ಯೆ ಬಹಳಷ್ಟು ಕಡಿಮೆಯಾದ್ದರಿಂದ ಅಲ್ಲಿ ನಿರುದ್ಯೋಗ ಸಮಸ್ಯೆ ಕೂಡ ಹೆಚ್ಚಾಗಿದೆ. ಆದರೂ ಹೆಚ್ಚಿನ ಜನರು ಸರ್ಕಾರಿ ಹುದ್ದೆಯನ್ನು ಪಡೆಯುವ ನಿಟ್ಟಿನಿಂದ ಪರೀಕ್ಷೆಗಳನ್ನು ಎದುರಿಸುತ್ತಲೇ ಇದ್ದಾರೆ.


  ನಿರುದ್ಯೋಗ ವರದಿ

  2022 ರಲ್ಲಿ ಪಾಕಿಸ್ತಾನ್ ಇನ್‌ಸ್ಟಿಟ್ಯೂಟ್ ಆಫ್ ಡೆವಲಪ್‌ಮೆಂಟ್ ಎಕನಾಮಿಕ್ಸ್ (PIDE) ಬಿಡುಗಡೆ ಮಾಡಿದ ವರದಿಯ ಪ್ರಕಾರ, ದೇಶದ 31% ಕ್ಕಿಂತ ಹೆಚ್ಚು ಯುವಕರು ಪ್ರಸ್ತುತ ನಿರುದ್ಯೋಗಿಗಳಾಗಿದ್ದಾರೆ. ಇದರಲ್ಲಿ, 51% ಮಹಿಳೆಯರು ಮತ್ತು 16% ಪುರುಷರು ಎಂದು ಹೇಳಬಹುದು. ಅವರಲ್ಲಿ ಹಲವರು ವೃತ್ತಿಪರ ಪದವಿಗಳನ್ನು ಹೊಂದಿದ್ದಾರೆ. ಪಾಕಿಸ್ತಾನದ ಜನಸಂಖ್ಯೆಯ ಸುಮಾರು 60% ಶೇಕಡಾದಲ್ಲಿ 30 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರೆ, ಪ್ರಸ್ತುತ ನಿರುದ್ಯೋಗ ದರವು 6.9% ಆಗಿದೆ ಎಂದು ವರದಿ ಮಾಡಿದ್ದಾರೆ.


  ಪಾಕಿಸ್ತಾನದ ಆರ್ಥಿಕ ಸ್ಥಿತಿ
  ಪಾಕಿಸ್ತಾನದ ಆರ್ಥಿಕ ಸ್ಥಿತಿಯು ಬಹಳಷ್ಟು ಕಸಿತವನ್ನು ಕಂಡಿದೆ ಅಂತಾನೇ ಹೇಳ್ಬಹುದು. ಯಾಕೆಂದರೆ ಕಳೆದ ವರ್ಷ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಅವರನ್ನು ಪದಚ್ಯುತಗೊಳಿಸಿದ ನಂತರ ರಾಷ್ಟ್ರವನ್ನು ರಾಜಕೀಯದ ಕೆಲವೊಂದು ಪರಿಣಾಮಗಳು ಈ ಆರ್ಥಿಕತೆ ಕುಸಿತಕ್ಕೆ ಮತ್ತಷ್ಟು ಕಾರಣವಾಯಿತು ಎಂದು ಹೇಳಬಹುದು.


  ಪಾಕಿಸ್ತಾನದಲ್ಲಿ ಪೊಲೀಸ್​ ಎಕ್ಸಾಂಗೆ ಬಂದಿರುವ ಜನರು


  ಜೊತೆಗೆ ಪಾಕಿಸ್ತಾನದಲ್ಲಿ ಬಂದಂತಹ ಪ್ರವಾಹವು ಆರ್ಥಿಕ ಸಮಸ್ಯೆ ಬರಲು ಮತ್ತಷ್ಟು ಕಾರಣವಾಯಿತು. ಈ ದೇಶದಲ್ಲಿ ವಾಸಿಸುವ ಲಕ್ಷಾಂತರ ಜನರಲ್ಲಿ ಮುಖ್ಯವಾಗಿ ಮೂರನೇ ಒಂದು ಭಾಗದಷ್ಟು ಜನರಿಗೆ ಇದರ ಪ್ರಭಾವ ಬೀರಿದೆ ಎಂದು ಹೇಳಬಹುದು.


  ಪಾಕಿಸ್ತಾನದ ಈ ಆರ್ಥಿಕ ಸಂಕಷ್ಟದಿಂದ ಹಲವಾರು ದೊಡ್ಡಮಟ್ಟದ ಕಂಪನಿಗಳ ಜೊತೆ ನೆರವು ಕೇಳಬೇಕಾಯಿತು.


  Published by:Prajwal B
  First published: