Skeletons: ಅಂಗಡಿ ಅಡಿಗಿತ್ತು 240ಕ್ಕೂ ಹೆಚ್ಚು ಅಸ್ಥಿಪಂಜರ!

 ಅಸ್ಥಿಪಂಜರ

ಅಸ್ಥಿಪಂಜರ

ಓಕಿ ವೈಟ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಅಡಿಯಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಮಹತ್ವದ ಆವಿಷ್ಕಾರವನ್ನು ನಡೆಸಿದ್ದಾರೆ. ಹೌದು, ಪ್ರಿಯರಿಯ ಅವಶೇಷಗಳ ಮೇಲೆ ಕೆಲಸ ಮಾಡುತ್ತಿರುವ ಪುರಾತತ್ತ್ವ ಶಾಸ್ತ್ರಜ್ಞರು ಮಕ್ಕಳು ಸೇರಿದಂತೆ 240 ಕ್ಕೂ ಹೆಚ್ಚು ಜನರ ಅವಶೇಷಗಳನ್ನು ಇಲ್ಲಿ ಪತ್ತೆ ಮಾಡಿದ್ದಾರೆ.

ಮುಂದೆ ಓದಿ ...
  • Share this:

ವೇಲ್ಸ್‌ನ (Whales) ಪೆಂಬ್ರೋಕ್‌ಷೈರ್‌ನ ಹ್ಯಾವರ್‌ಫೋರ್ಡ್‌ವೆಸ್ಟ್‌ನಲ್ಲಿರುವ ಹಳೆಯ ಓಕಿ ವೈಟ್ ಡಿಪಾರ್ಟ್‌ಮೆಂಟ್ ಸ್ಟೋರ್‌ನ ಅಡಿಯಲ್ಲಿ ಪುರಾತತ್ತ್ವ ಶಾಸ್ತ್ರಜ್ಞರು ಮಹತ್ವದ ಆವಿಷ್ಕಾರವನ್ನು (Invention) ನಡೆಸಿದ್ದಾರೆ. ಹೌದು, ಪ್ರಿಯರಿಯ ಅವಶೇಷಗಳ ಮೇಲೆ ಕೆಲಸ ಮಾಡುತ್ತಿರುವ ಪುರಾತತ್ತ್ವ ಶಾಸ್ತ್ರಜ್ಞರು ಮಕ್ಕಳು ಸೇರಿದಂತೆ 240 ಕ್ಕೂ ಹೆಚ್ಚು ಜನರ ಅವಶೇಷಗಳನ್ನು ಇಲ್ಲಿ ಪತ್ತೆ ಮಾಡಿದ್ದಾರೆ. 1256 ರಲ್ಲಿ ಡೊಮಿನಿಕನ್ ಸನ್ಯಾಸಿಗಳ ಆದೇಶದಿಂದ ಸ್ಥಾಪಿಸಲಾಗಿದೆ ಎಂದು ನಂಬಲಾದ ಸೇಂಟ್ ಸೇವಿಯರ್ಸ್ ಪ್ರಿಯರಿಯ ನಿವಾಸಿಗಳ ಅವಶೇಷಗಳು ಎಂದು ಹೇಳಿರುವ ತಜ್ಞರು (Experts) ಈ ಆವಿಷ್ಕಾರವನ್ನು ಮಧ್ಯಕಾಲೀನ ಹ್ಯಾವರ್‌ಫೋರ್ಡ್‌ವೆಸ್ಟ್ ಮಹತ್ವದ ಉತ್ಖನನ ಎಂದಿದ್ದಾರೆ ಎಂದು ಬಿಬಿಸಿ ವರದಿ ಮಾಡಿದೆ.


ಆಗಿನ ಸಮಾಧಿ ಸ್ಥಳ ಆಗಿತ್ತಾ ಈ ಜಾಗ?
ಸೈಟ್ ಮೇಲ್ವಿಚಾರಕ ಆಂಡ್ರ್ಯೂ ಶೋಬ್ರೂಕ್ ಅವರು ಪ್ರಿಯರಿಯನ್ನು ಡಾರ್ಮಿಟರಿಗಳು, ಸ್ಕ್ರಿಪ್ಟೋರಿಯಮ್‌ಗಳು (ಅಥವಾ ಮಧ್ಯಕಾಲೀನ ಯುರೋಪಿಯನ್ ಮಠಗಳಲ್ಲಿ ಬರವಣಿಗೆಗೆ ಮೀಸಲಾದ ಕೊಠಡಿಗಳು), ಅಶ್ವಶಾಲೆಗಳು ಮತ್ತು ಆಸ್ಪತ್ರೆಯನ್ನು ಹೊಂದಿರುವ ಕಟ್ಟಡಗಳ ಗಮನಾರ್ಹ ಸಂಕೀರ್ಣ ಎಂದು ವಿವರಿಸಿದ್ದಾರೆ ಎಂದು ಬಿಬಿಸಿ ಉಲ್ಲೇಖ ಮಾಡಿದೆ. ಈ ಜಾಗ ಆಗಿನ ಸ್ಮಶಾನ ಸ್ಥಳವಾಗಿರಬಹುದು ಎಂದು ಮಾಹಿತಿ ನೀಡಿರುವ ಪುರಾತತ್ತ್ವ ಶಾಸ್ತ್ರಜ್ಞರು ಸ್ಮಶಾನಗಳು 18ನೇ ಶತಮಾನದವರೆಗೂ ಬಳಕೆಯಲ್ಲಿದ್ದಿರಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.


ಮಕ್ಕಳ ಮರಣ ದರ ಸೂಚಿಸಿದ ಅಸ್ಥಿಪಂಜರಗಳು
ಪತ್ತೆಯಾದ 240 ಕ್ಕೂ ಹೆಚ್ಚು ಜನರ ಅವಶೇಷಗಳಲ್ಲಿ ಸುಮಾರು 100 ಅವಶೇಷಗಳು ಮಕ್ಕಳದ್ದಾಗಿದೆ ಎಂದಿರುವ ತಜ್ಞರು ಇದು ಆಗಿನ ಕಾಲದಲ್ಲಿ ಮಕ್ಕಳ ಹೆಚ್ಚಿನ ಪ್ರಮಾಣವನ್ನು ಸೂಚಿಸುತ್ತದೆ ಎಂದೂ ಸಹ ಹೇಳಿದ್ದಾರೆ. ಆಗಿನ ಸಂದರ್ಭದಲ್ಲಿ ಸರಿಯಾದ ಚಿಕಿತ್ಸೆ, ಶುಶ್ರೂಷೆ ಇಲ್ಲದೇ ಹೆಚ್ಚಿನ ಪ್ರಮಾಣದಲ್ಲಿ ಶಿಶುಗಳ ಮರಣ ಸಂಭವಿಸುತ್ತಿತ್ತು. ಈಗ ಸಿಕ್ಕಿರುವ ಮಕ್ಕಳ ಅವಶೇಷಗಳು ಇದಕ್ಕೆ ನಿದರ್ಶನ ಎನ್ನುವಂತಿದೆ.


ಇದನ್ನೂ ಓದಿ: Baby Carrier: 10,000 ವರ್ಷಗಳ ಹಿಂದೆ ಮಕ್ಕಳನ್ನು ಹೇಗೆ ಸಾಗಿಸುತ್ತಿದ್ದರು? ಇದಕ್ಕೆ ಸಾಕ್ಷಿಯಾಯ್ತು ಮಗುವಿನ ಸಮಾಧಿ

ಯುದ್ಧದಲ್ಲಿ ಸಾವನ್ನಪ್ಪಿರುವ ಬಗ್ಗೆ ಕುರುಹು
ಪತ್ತೆಯಾದ ಇನ್ನು ಕೆಲ ಅಸ್ಥಿಪಂಜರಗಳಲ್ಲಿ ಹಿಂಸಾತ್ಮಕ ಗಾಯಗಳನ್ನು ಗುರುತು ಮಾಡಲಾಗಿದೆ. ಡೈಫೆಡ್ ಆರ್ಕಿಯಲಾಜಿಕಲ್ ಟ್ರಸ್ಟ್‌ನ ಸೈಟ್ ಮೇಲ್ವಿಚಾರಕ ಆಂಡ್ರ್ಯೂ ಶೋಬ್ರೂಕ್ ಕೆಲವು ಅವಶೇಷಗಳಲ್ಲಿ ತಲೆಯ ಗಾಯಗಳೊಂದಿಗೆ ಬಾಣಗಳು ಅಥವಾ ಮಸ್ಕೆಟ್ ಬಾಲ್‌ಗಳಿಂದ ಉಂಟಾದ ಗಾಯಗಳನ್ನು ಸಹ ಪತ್ತೆ ಹಚ್ಚಿದ್ದಾರೆ.


ಈ ಗಾಯಗಳು ಯುದ್ಧದಲ್ಲಿ ಜನರ ಪಾಲ್ಗೊಳ್ಳುವಿಕೆಯನ್ನು ಸೂಚಿಸುತ್ತದೆ ಎಂದು ಶೋಬ್ರೂಕ್ ಹೇಳಿದ್ದಾರೆ. ಮಾತು ಮುಂದುವರಿಸಿದ ಶೋಬ್ರೂಕ್ "1405 ರಲ್ಲಿ ಓವೈನ್ ಗ್ಲಿಂಡರ್ ಈ ಪಟ್ಟಣದ ಮೇಲೆ ಮುತ್ತಿಗೆ ಹಾಕಿದರು.ಪ್ರಿನ್ಸ್ ಆಫ್ ವೇಲ್ಸ್ ಎಂಬ ಬಿರುದನ್ನು ಹೊಂದಿರುವ ಕೊನೆಯ ಸ್ಥಳೀಯ ವೇಲ್ಸ್ ವ್ಯಕ್ತಿ. ಇದು ವೇಲ್ಸ್ ಮತ್ತು ಫ್ರೆಂಚ್ ಪಡೆಗಳ ಜಂಟಿ ಆಕ್ರಮಣವಾಗಿತ್ತು. ಈ ಸಂಘರ್ಷದಲ್ಲಿ ಇವರು ಬಲಿಯಾಗಿರಬಹುದು ಎಂದು ಮೆಲ್ನೋಟಕ್ಕೆ ತಿಳಿದು ಬಂದಿದೆ" ಎಂದು ಶೋಬ್ರೂಕ್ ವಿವರಿಸಿದರು.


ಇದನ್ನೂ ಓದಿ: Viral Video: ಸಖತ್‌ ವೈರಲ್‌ ಆಗ್ತಿರೋ ನೂತನ ಕೊಡಲಿ ವಿನ್ಯಾಸದ ವಿಡಿಯೋ, ನೀವು ನೋಡಿ ಬೆರಗಾಗ್ತಿರಾ!

ಸದ್ಯ ದೊರೆತಿರುವ ಎಲ್ಲಾ ಅವಶೇಷಗಳನ್ನು ಮತ್ತೆ ಮಣ್ಣು ಮಾಡುವ ಮುನ್ನ ಹೆಚ್ಚಿನ ವಿವರಗಳಿಗಾಗಿ ತಜ್ಞರಿಂದ ವಿಶ್ಲೇಷಿಸಲಾಗುತ್ತದೆ ಎಂದು ಮೂಲಗಳು ತಿಳಿಸಿವೆ. ಮತ್ತೆ ಇಲ್ಲಿ ದೊರೆತಿರುವ ಇತರೆ ವಸ್ತುಗಳನ್ನು ಸ್ವಚ್ಛಗೊಳಿಸಿ ಸಂಗ್ರಹಿಸಿಡಲಾಗುತ್ತದೆ ಎನ್ನಲಾಗಿದೆ.
ಆವಿಷ್ಕಾರದ ಕುರಿತು ಪುರಾತತ್ವಶಾಸ್ತ್ರಜ್ಞ ಗೇಬಿ ಲೆಸ್ಟರ್ ಮಾತನಾಡಿ "ನನ್ನ ಹುಚ್ಚು ಕನಸುಗಳಲ್ಲಿ ನಾನು ಇಷ್ಟು ದೊಡ್ಡ ಆವಿಷ್ಕಾರದಲ್ಲಿ ತೊಡಗಿಸಿಕೊಳ್ಳುತ್ತೇನೆ ಎಂದು ನಾನು ಭಾವಿಸಿರಲಿಲ್ಲ" ಎಂದು ತಿಳಿಸಿದರು.


ಪುನರ್‌ ಅಭಿವೃದ್ಧಿ ಕಾಣಲು ಸಜ್ಜಾಗಿದೆ ಸ್ಥಳ
ಈ ಸೈಟ್ ಹ್ಯಾವರ್‌ಫೋರ್ಡ್‌ವೆಸ್ಟ್ ಮತ್ತು ಪೆಂಬ್ರೋಕ್‌ಶೈರ್‌ನ ಇತಿಹಾಸದ ಬೃಹತ್ ಭಾಗವಾಗಿದೆ. ಈ ಜಾಗವನ್ನು ಆಹಾರ ಎಂಪೋರಿಯಮ್, ಬಾರ್ ಮತ್ತು ಮೇಲ್ಛಾವಣಿಯ ಟೆರೇಸ್ ಆಗಿ ಮರುಅಭಿವೃದ್ಧಿ ಮಾಡಲಾಗುತ್ತಿದೆ ಎಂದು ಬಿಬಿಸಿ ವರದಿ ಮಾಡಿದೆ.

top videos
    First published: