Weekend Planner: ಸಿನಿರಸಿಕರಿಗೆ ಈ ವಾರ OTT ಕಿಕ್, 20ಕ್ಕೂ ಹೆಚ್ಚು ಸಿನಿಮಾ, ಸೀರಿಸ್​ ರಿಲೀಸ್..ಮನೆಯಲ್ಲೇ ಮಸ್ತ್ ಮಜಾ ಮಾಡಿ!

New Movies on OTT this Weekend: ಪ್ರತೀ ವಾರ ಒಂದಷ್ಟು ಸಿನಿಮಾಗಳು, ಸೀರೀಸ್​ಗಳು ರಿಲೀಸ್ ಆಗ್ತಲೇ ಇರುತ್ತವೆ. ಆದ್ರೆ ಇದು ಹಬ್ಬದ ವೀಕೆಂಡ್..ಸಾಲು ಸಾಲು ರಜೆಗಳು, ಮನೆಮಂದಿಯೆಲ್ಲಾ ಒಟ್ಟಾಗಿರ್ತಾರೆ. ಈ ಟೈಮಲ್ಲಿ ಎಲ್ಲಾ ಒಟಿಟಿ ವೇದಿಕೆಗಳಲ್ಲೂ ಸಾಲು ಸಾಲು ಚಿತ್ರಗಳು ಬಿಡುಗಡೆಯಾಗುತ್ತಿವೆ. ಎಲ್ಲೆಲ್ಲಿ ಯಾವ್ಯಾವ ಸಿನಿಮಾ-ಸೀರೀಸ್? ಫುಲ್ ಲಿಸ್ಟ್ ಇಲ್ಲಿದೆ...

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

 • Share this:
  ​Weekend Movies on OTT: ಕ್ರೂರಿ ಕೊರೋನಾದಿಂದ ಕೊಂಚ ಮಟ್ಟಿಗೆ ರಿಲ್ಯಾಕ್ಸ್​ ಸಿಕ್ಕಿದೆ. ಅಕ್ಟೋಬರ್​ 2021ರ ಮೂರನೇ ವಾರಕ್ಕೆ ಕಾಲಿಡುತಿದ್ದೇವೆ. ಅದು ಹಬ್ಬದ ಸಾಲು ಸಾಲು ರಜೆ ಬೇರೆ ಇದೆ. ಎಲ್ಲಿ ಹೋಗುವುದು, ಮನೆಯಲ್ಲೇ ಕೂತು ಒಳ್ಳೆ ಸಿನಿಮಾ (Movies at Home) ನೋಡೋಣ ಅಂದುಕೊಂಡಿದ್ದೀರಾ? ಹಾಗಿದ್ರೆ ನಿಮಗಾಗಿ ಎಂದೇ ಈ ವಾರ ಒಟಿಟಿಯಲ್ಲಿ ಸಖತ್​ ಇಂಟ್ರೆಸ್ಟಿಂಗ್​, ಥ್ರಿಲ್ಲಿಂಗ್​ ಕಂಟೆಂಟ್​ ಹೊಂದಿರುವ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಈ ವೀಕೆಂಡ್​​ನಲ್ಲಿ ಏನಪ್ಪಾ ಮಾಡೋದು ಅಂತ ಯೋಚನೆ ಮಾಡುತ್ತಿದ್ದವರಿಗೆ, ಈ ಸಿನಿಮಾ, ಸೀರಿಸ್​ಗಳು (Series) ಸಖತ್​ ಕಿಕ್​ ನೀಡಲಿವೆ. ಡಿಸ್ನಿ+ ಹಾಟ್‌ಸ್ಟಾರ್(Disney+Hotstar), ZEE5, ಅಮೆಜಾನ್ ಪ್ರೈಮ್ ವಿಡಿಯೋ (Amazon Prime Video) ಮತ್ತು ನೆಟ್‌ಫ್ಲಿಕ್ಸ್‌ (Netflix)ನಂತಹ OTT ಪ್ಲಾಟ್‌ಫಾರ್ಮ್‌ಗಳಲ್ಲಿ ಹಲವಾರು ಇಂಟ್ರೆಸ್ಟಿಂಗ್ ಚಲನಚಿತ್ರಗಳು ಮತ್ತು ಸರಣಿಗಳು ಈ ವಾರ ಬಿಡುಗಡೆಯಾಗುತ್ತಿವೆ. ಯಾವ ಸಿನಿಮಾ- ಸೀರಿಸ್, ಯಾವ ಪ್ಲಾಟ್​ಫಾರ್ಮ್​ನಲ್ಲಿ ರಿಲೀಸ್​ ಅಂತ ಇಲ್ಲಿದೆ ಕಂಪ್ಲೀಟ್​ ಡಿಟೇಲ್ಸ್​..

  ವಾರದ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ!

  ಈ ವಾರದ ಮೋಸ್ಟ್​ ಎಕ್ಸ್​​ಪೆಕ್ಟೆಡ್ ಸಿನಿಮಾ​ ಅಂದರೆ ತಾಪ್ಸಿ ಪನ್ನು ಅಭಿನಿಯದ ’ರಶ್ಮಿ ರಾಕೆಟ್​’ ಸಿನಿಮಾ. ಅಕ್ಟೋಬರ್​ 15ರಂದು ಜೀ5 ನಲ್ಲಿ ರಿಲೀಸ್​ ಆಗಲಿದೆ. ಆಕರ್ಷ್​ ಖುರಾನ್​​ ನಿದೇಶನದಲ್ಲಿ ಈ ಸಿನಿಮಾ ಮೂಡಿ ಬಂದಿದೆ. ಈ ಚಿತ್ರವು ಎಲ್ಲಾ ಸಾಮಾಜಿಕ ಅಡೆತಡೆಗಳನ್ನು ಮೀರಿದ ಸಣ್ಣ ಪಟ್ಟಣದ ಹುಡುಗಿಯ ಸ್ಫೂರ್ತಿದಾಯಕ ಕಥೆಯನ್ನು ಹೊಂದಿದೆ. ರಾಷ್ಟ್ರೀಯ ಮಟ್ಟದ ಕ್ರೀಡಾಪಟುವಾಗಲು ಹೊರಟಾಕೆಗೆ ಲಿಂಗ ಪರೀಕ್ಷೆಗೆ ಒಳಗಾಗಲು ಕೇಳಿದಾಗ ಆಕೆಯ ಸ್ವಾಭಿಮಾನಕ್ಕೆ ಧಕ್ಕೆಯಾಗುತ್ತದೆ. ಕ್ರೀಡಾ ಕಥಾಹಂದರ ಹೊಂದಿರುವ ಈ ಚಿತ್ರದಲ್ಲಿ ತಾಪ್ಸಿ ಪನ್ನು, ಪ್ರಿಯಾಂಶು ಪೈನ್ಯುಲಿ ಮತ್ತು ಅಭಿಷೇಕ್ ಬ್ಯಾನರ್ಜಿ ನಟಿಸಿದ್ದಾರೆ.

  ಗೆಟ್​ ರೆಡಿ ಫಾರ್​ ’ಸರ್ದಾರ್​ ಉಧಮ್​​’

  ಬಾಲಿವುಡ್​​ನ ಮೋಸ್ಟ್​ ಎಕ್ಸ್​ಪೆಕ್ಟೆಡ್​ ಸಿನಿಮಾ ‘ಸರ್ದಾರ್​ ಉಧಮ್​’ ಕೂಡ ಇದೇ ವಾರ ಒಟಿಟಿಯಲ್ಲಿ ಬಿಡುಗಡೆಯಾಗಲಿದೆ. ಅಕ್ಟೋಬರ್​ 16ರಂದು ಅಮೆಜಾನ್​ ಪ್ರೈಮ್​ ವಿಡಿಯೋದಲ್ಲಿ ಕಾಣಸಿಗಲಿದೆ. 1919ಕ್ಕೆ ಲಂಡನ್​ನಲ್ಲಿ ಮೈಕಲ್​​ ಒಡಾಯರ್​ ಹತ್ಯೆಗೆ ಸೇಡು ತೀರಿಸಿಕೊಳ್ಳಲು ಹೆಸರವಾಸಿಯಾದ ಕ್ರಾಂತಿಕಾರಿ ಸ್ವಾತಂತ್ರ್ಯ ಹೋರಾಟಗಾರ ಉದಮ್​ ಸಿಂಗ್​ ಜೀವನಾಧಾರಿತ ಸಿನಿಮಾ ಇದಾಗಿದೆ. ಜಲಿಯನ್ ವಾಲಾಬಾಗ್ ಹತ್ಯಾಕಾಂಡ ಕಥಾಹಂದರ ಹೊಂದಿದ್ದು, ಈ ಚಿತ್ರದಲ್ಲಿ ವಿಕ್ಕಿ ಕೌಶಲ್ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ.

  ಇದನ್ನೂ ಓದಿ: ಜ್ಯೋತಿಕಾ ಅಭಿನಯದ Udanpirappe ಇಂದು ಅಮೆಜಾನ್ ಪ್ರೈಮ್‍ನಲ್ಲಿ ಬಿಡುಗಡೆ

  ಇನ್ನೂ ಈ ವಾರ ಒಟಿಟಿಯಲ್ಲಿ ಯಾವ ಸಿನಿಮಾ, ಸೀರಿಸಗಳು ಬಿಡುಗಡೆಯಾಗುತ್ತಿದೆ ಅಂತ ಇಲ್ಲಿದೆ ಡಿಟೇಲ್ಸ್​

  ನೆಟ್​​ಫ್ಲಿಕ್ಸ್​ (Netflix)

  1. ಅನದರ್​ ಲೈಫ್​ (Another Life) S2 : ಅಕ್ಟೋಬರ್​ 14
  2. ಲಿಟಲ್​ ಥಿಂಗ್ಸ್​​ ( little Things) S4 : ಅಕ್ಟೋಬರ್​ 15
  3. ಯು (U) S3 : ಅಕ್ಟೋಬರ್​ 15
  4. ಕರ್ಮಾಸ್​ ವರ್ಲ್ಡ್​( Karma's World) : ಅಕ್ಟೋಬರ್​ 15
  5. ಕನ್​ವರ್ಗೆನ್ಸ್​( Convergence - Courage in Crisis): ಅಕ್ಟೋಬರ್ 12
  6. ದಿ ಮೂವೀಸ್​​ ದಟ್​ ಮೇಡ್​ ಅಸ್​ (The Movies That Made Us) S3: ಅಕ್ಟೋಬರ್ 12
  7. ದಿ ಫರ್​ಗಾಟ್ಟನ್​ ಬ್ಯಾಟೆಲ್​(The Forgotten Battlle): ಅಕ್ಟೋಬರ್ 15,
  8. ದಿ ಫೋರ್​ ಆಫ್​ ಅಸ್​ (The Four of Us): ಅಕ್ಟೋಬರ್ 15
  9. ದಿ ಟ್ರಿಪ್​(The Trip) : ಅಕ್ಟೋಬರ್ 15

  ಅಮೆಜಾನ್ ಪ್ರೈಮ್ ವಿಡಿಯೋ(Amazon Prime Video)

  1. ಐ ನೋ ವಾಟ್​ ಯು ಡಿಡ್​ ಲಾಸ್ಟ್​ ಸಮ್ಮರ್​ (I Know What You Did Last Summer): ಅಕ್ಟೋಬರ್​ 15
  2. ಉದನ್ಫಿರಾಪ್ಪೆ(Udanpirappe): ಅಕ್ಟೋಬರ್ 14 - ತಮಿಳು
  3. ಫ್ರೆಂಡ್​ಶಿಪ್​ (Friendship): ಅಕ್ಟೋಬರ್ 15 - ತಮಿಳು
  4. ಸರ್ದಾರ್ ಉಧಮ್(Sardar Udham): ಅಕ್ಟೋಬರ್ 16 - ಹಿಂದಿ

  ಇದನ್ನೂ ಓದಿ: ಡಾಲಿ ಧನಂಜಯ ಅಭಿನಯದ Rathnan Prapancha ಸಿನಿಮಾ ಒಟಿಟಿಯಲ್ಲಿ ರಿಲೀಸ್​: ದಿನಾಂಕ ಪ್ರಕಟಿಸಿದ ಚಿತ್ರತಂಡ

  ಡಿಸ್ನಿ+ ಹಾಟ್ ಸ್ಟಾರ್ (Disney + Hotstar)

  1 .ಜಸ್ಟ್​ ಬಿಯಾಂಡ್​ (Just Beyond): ಅಕ್ಟೋಬರ್​ 13
  2. ಸಕ್ಸೆಶನ್​ (Succession) S3: ಅಕ್ಟೋಬರ್​ 18
  3. ಸನಕ್​ ( Sanak) : ಅಕ್ಟೋಬರ್ 15
  4. ಸೀಟಿಮಾರ್ (Seetimaarr): ಅಕ್ಟೋಬರ್ 15 -ತೆಲುಗು

  ಜೀ5 ( Zee 5)

  1. ಜಿನ್ನೆ ಜಮ್ಮೆ ಸಾರೇ ನಿಕಮ್ಮೆ(Jinne Jamme Saare Nikamme) : ಅಕ್ಟೋಬರ್ 14 - ಪಂಜಾಬಿ
  2. ರಶ್ಮಿ ರಾಕೆಟ್(Rashmi Rocket) : ಅಕ್ಟೋಬರ್ 15

  (ವರದಿ: ವಾಸುದೇವ ಎಂ)
  Published by:Soumya KN
  First published: