Monster Pumpkin| ಯುರೋಪಿಯನ್ ಚಾಂಪಿಯನ್‌ಶಿಪ್‌ನಲ್ಲಿ ಪ್ರಥಮ ಬಹುಮಾನ ಗೆದ್ದ ಇಟಲಿಯ ದೈತ್ಯ ಕುಂಬಳಕಾಯಿ..!

DW ನ್ಯೂಸ್ ಮಾಡಿದ ಟ್ವೀಟ್ ಪ್ರಕಾರ, ಈ ದೈತ್ಯ ಕುಂಬಳಕಾಯಿ 1,217.5 ಕಿಲೋ ತೂಕ ಹೊಂದಿದ್ದು ಇಟಲಿಯ ಟಸ್ಕನಿ ಪ್ರಾಂತ್ಯದ್ದಾಗಿದೆ. ಜೊತೆಗೆ ಈ ಬಾರಿ ಲುಡ್ವಿಗ್ಸ್‌ಬರ್ಗ್‌ನಲ್ಲಿ ನಡೆದ ಯುರೋಪಿಯನ್ ಕುಂಬಳಕಾಯಿ ಚಾಂಪಿಯನ್‌ಶಿಪ್ ಅನ್ನು ಈ ದೈತ್ಯ ಕುಂಬಳಕಾಯಿ ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ.

ಇಟಲಿಯ ದೈತ್ಯ ಕುಂಬಳಕಾಯಿ..!.

ಇಟಲಿಯ ದೈತ್ಯ ಕುಂಬಳಕಾಯಿ..!.

  • Share this:
ಅಕ್ಟೋಬರ್ ತಿಂಗಳು ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ (Western Nations) ಶರತ್ಕಾಲದ ಆರಂಭವನ್ನು ಸೂಚಿಸುತ್ತದೆ. ಅಂದರೆ ಈ ಋತುಮಾನದಲ್ಲಿ ಕುಂಬಳಕಾಯಿ (Pumpkin) ಸಾಕಷ್ಟು ಪ್ರಮಾಣದಲ್ಲಿ ಉತ್ಪಾದನೆಯಾಗಿ ಕುಂಬಳಕಾಯಿಯಿಂದ ವಿಧ ವಿಧವಾದ ಪಾನೀಯ, ಸೂಪ್‌ಗಳ ತಯಾರಿಗೆ ಪ್ರಚೋದನೆ ನೀಡುತ್ತದೆ. ಕುಂಬಳ ಕಾಯಿ ಸೀಸನ್ ಎಂದೇ ಈ ಋತುಮಾನವನ್ನು ಪಶ್ಚಿಮದಲ್ಲಿ ಕರೆಯಲಾಗುತ್ತದೆ. ಭೂಖಂಡಗಳಲ್ಲಿ ಬೆಳೆದ ವೈವಿಧ್ಯಮಯ ಕುಂಬಳಕಾಯಿಗಳನ್ನು ಗುರುತಿಸುವ ಸಲುವಾಗಿ ಯುರೋಪಿಯನ್ ಕುಂಬಳಕಾಯಿ ತೂಕಮಾಡುವ ಚಾಂಪಿಯನ್‌ಶಿಪ್ (European Pumpkin Weighing Championship) ಅನ್ನು ಅಕ್ಟೋಬರ್ ತಿಂಗಳಿನಲ್ಲಿ ನಡೆಸಲಾಗುತ್ತದೆ. ಈ ಬಾರಿ ಈ ಸ್ಪರ್ಧೆಯಲ್ಲಿ ವಿಜಯಿಗಳಾದವರು ಇಟಲಿಯ ಟಸ್ಕನಿ ಪ್ರದೇಶದಿಂದ ಬಂದವರಾಗಿದ್ದು ಇವರು ಬೆಳೆದ ಕುಂಬಳಕಾಯಿ ಬರೋಬ್ಬರಿ 1,217.5 ಕಿಲೋಗ್ರಾಂಗಳಷ್ಟು ತೂಕ ಹೊಂದಿತ್ತು.

DW ನ್ಯೂಸ್ ಮಾಡಿದ ಟ್ವೀಟ್ ಪ್ರಕಾರ, ಈ ದೈತ್ಯ ಕುಂಬಳಕಾಯಿ 1,217.5 ಕಿಲೋ ತೂಕ ಹೊಂದಿದ್ದು ಇಟಲಿಯ ಟಸ್ಕನಿ ಪ್ರಾಂತ್ಯದ್ದಾಗಿದೆ. ಜೊತೆಗೆ ಈ ಬಾರಿ ಲುಡ್ವಿಗ್ಸ್‌ಬರ್ಗ್‌ನಲ್ಲಿ ನಡೆದ ಯುರೋಪಿಯನ್ ಕುಂಬಳಕಾಯಿ ಚಾಂಪಿಯನ್‌ಶಿಪ್ ಅನ್ನು ಈ ದೈತ್ಯ ಕುಂಬಳಕಾಯಿ ತನ್ನದಾಗಿಸಿಕೊಂಡಿದೆ ಎಂದು ತಿಳಿಸಿದೆ. ಇದೇ ಕುಂಬಳಕಾಯಿ ಸಪ್ಟೆಂಬರ್‌ನಲ್ಲಿ 1,226 ಕಿಲೋ ತೂಕ ಹೊಂದುವ ಮೂಲಕ ವಿಶ್ವದ ಅತ್ಯಂತ ಭಾರವಾದ ಕುಂಬಳಕಾಯಿ ಎಂಬ ದಾಖಲೆಯನ್ನು ಮುರಿದಿದೆ ಎಂಬುದಾಗಿ ಟ್ವೀಟ್ ಉಲ್ಲೇಖಿಸಿದೆ.

ಸಾಮಾಜಿಕ ತಾಣದಲ್ಲಿ ಈ ದೈತ್ಯ ಕುಂಬಳಕಾಯಿಯ ಕುರಿತು ವಿಮರ್ಶೆ, ಮೆಚ್ಚುಗೆಗಳು ಹರಿದಾಡುತ್ತಿದ್ದು ಆಶ್ಚರ್ಯ ವ್ಯಕ್ತಪಡಿಸುತ್ತಿದ್ದಾರೆ. ಒಬ್ಬ ಬಳಕೆದಾರರಂತೂ ಆ ಪ್ರದೇಶದಲ್ಲಿ ಹ್ಯಾಲೋವೀನ್ ಅತ್ಯಂತ ಉಗ್ರ ರೂಪದ್ದಾಗಿರಬಹುದು ಎಂಬುದಾಗಿ ಟ್ವೀಟ್ ಮಾಡಿದ್ದಾರೆ. ಅಕ್ಟೋಬರ್ 31ರಂದು ಆಚರಿಸಲಾಗುವ ಹ್ಯಾಲೋವೀನ್‌ನೊಂದಿಗೆ ಕುಂಬಳಕಾಯಿ ಅವಿನಾಭಾವ ಸಂಬಂಧ ಹೊಂದಿದೆ. ತರಕಾರಿಗಳ ಸೀಸನ್ ಇದೇ ಸಂದರ್ಭದಲ್ಲಿ ಜೊತೆಯಾಗಿ ನಡೆಯುವುದರಿಂದ ಕುಂಬಳಕಾಯಿ ಲ್ಯಾಂಟರ್ನ್‌ಗಳು ಹ್ಯಾಲೋವೀನ್‌ಗೆ ಸಮಾನಾರ್ಥಕವಾಗಿವೆ.

ಬರೇ ಒಂದು ಕುಂಬಳಕಾಯಿ ನೀಡಿರುವ ಉತ್ಪನ್ನ ಪ್ರಮಾಣ ನೋಡಿ ಬಳಕೆದಾರರೊಬ್ಬರು ಆಶ್ಚರ್ಯಭರಿತರಾಗಿ ಮೆಚ್ಚುಗೆ ವ್ಯಕ್ತಪಡಿಸಿದ್ದರೆ, ಅದು ಸಾಕಷ್ಟು ಪ್ರಮಾಣದಲ್ಲಿ ಕ್ಯಾಂಡಿ ಸಿರಪ್ ಮತ್ತು ಬೇರೇನನ್ನಾದರೂ ಉತ್ಪಾದಿಸಬಹುದು ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: Student Suicide: ಪಿಜ್ಜಾ ತರಿಸಲು ತಡ ಮಾಡಿದ ತಾಯಿ; ಅಷ್ಟಕ್ಕೇ ನೇಣು ಬಿಗಿದುಕೊಂಡು ಮಗಳು ಆತ್ಮಹತ್ಯೆ

ಯುರೋಪಿಯನ್ ಕುಂಬಳಕಾಯಿ ತೂಗುವ ಸ್ಪರ್ಧೆಯಲ್ಲಿ ಇತ್ತೀಚಿನ ವಿಜಯವನ್ನು ಇಟಲಿ ಪಡೆದುಕೊಂಡ ನಂತರ ಕೆಲವೊಬ್ಬರು ಇಟಲಿಯನ್ನರು ಯುರೋ ಕಪ್ 2020, 4×100 ಮೀಟರ್ ಪುರುಷರ ಓಟದಲ್ಲಿ ಚಿನ್ನದ ಪದಕ, ಪ್ಯಾರಿಸ್-ರೌಬೈಕ್ಸ್ ಸೈಕ್ಲಿಂಗ್ ಸೇರಿದಂತೆ ಮತ್ತಷ್ಟು ಸ್ಪರ್ಧೆಗಳಲ್ಲಿ ಚಾಂಪಿಯನ್ ಎನ್ನಿಸಿಕೊಂಡಿದ್ದಾರೆ.

ಜಾರ್ಜ್ ಲ್ಯೂಕಾಸ್ ರಚಿಸಿದ ಸ್ಟಾರ್ ವಾರ್ಸ್ ಫ್ರ್ಯಾಂಚೈಸ್‌ನ ಕಾಲ್ಪನಿಕ ಪಾತ್ರವಾದ ಜಬ್ಬಾ ದ ಹಟ್ ಪಾತ್ರವನ್ನು ಕೆಲವು ಬಳಕೆದಾರರು ನೆನಪಿಸಿಕೊಂಡರು. ಅದರಲ್ಲೊಬ್ಬ ಬಳಕೆದಾರರು, ವಾಹ್! ಇದು ಅತ್ಯದ್ಭುತ. ನಾನು ಇದನ್ನು ಜಬ್ಬಾ ದ ಪಂಪ್ಕಿನ್ (ಕುಂಬಳಕಾಯಿ) ಅಥವಾ ಹೀಗೆಯೇ ಬೇರೆ ಇನ್ನೇನಾದರೂ ಹೆಸರಿನಿಂದ ಕರೆಯಲು ಬಯಸುತ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ.

ಇದನ್ನೂ ಓದಿ: ಗೆಳತಿಯನ್ನು ಭೇಟಿ ಮಾಡೋಕೆ ಹೋದ, ದಾರಿಯಲ್ಲಿ ಏನೋ ಆಗಿ ಖಾಸಗಿ ಅಂಗವೇ ಕಟ್! ಆಗಿದ್ದೇನು?

ಜಬ್ಬಾವನ್ನು ಭೂಮಿಯಿಂದ ಹೊರಗಿರುವ ಸ್ಥೂಲಕಾಯದ ಜೀವಿ ಎಂದು ಕರೆಯಲಾಗಿದ್ದು ರಾಜಕೀಯ ಮತ್ತು ಕ್ರಿಮಿನಲ್ ಭೂಗತ ಎರಡರಲ್ಲೂ ವ್ಯಾಪಕ ಪ್ರಭಾವ ಹೊಂದಿರುವ ಸೌರವ್ಯೂಹದ ದರೋಡೆಕೋರ ಎಂದೆನಿಸಿದೆ.
Published by:MAshok Kumar
First published: