ಈ ಹಿಂದೆ ಒಂದು ಕೋತಿಗಳ ವೀಡಿಯೋ ಸಾಮಾಜಿಕ ಮಾಧ್ಯಮದಲ್ಲಿ(Social Media) ತುಂಬಾನೇ ಜೋರಾಗಿ ಹರಿದಾಡಿ, ಸಿಕ್ಕಾಪಟ್ಟೆ ವೈರಲ್ ಆಗಿತ್ತು. ಆ ವೀಡಿಯೋದಲ್ಲಿ ಕೋತಿಗಳು ಕಣ್ಣು ಮಿಟುಕಿಸದೆ ಮೊಬೈಲ್ ಫೋನ್ ಅನ್ನು ನೋಡುತ್ತಾ ಕುಳಿತ್ತಿದ್ದವು. ಅದನ್ನ ನೋಡಿದವರು ‘ಅಬ್ಬಬ್ಬಾ.. ಏನ್ ಬುದ್ದಿವಂತ ಪ್ರಾಣಿ ಈ ಕೋತಿಗಳು’ ಅಂತ ಒಮ್ಮೆಯಾದರೂ ಅಂದು ಕೊಂಡಿರುತ್ತಾರೆ. ಹೌದು, ಇತ್ತೀಚೆಗೆ ಬಂದ ಒಂದು ವೀಡಿಯೋದಲ್ಲಿ ಸಹ ಕೋತಿಗಳು ಬಾಟಲಿಗಳ ಕ್ಯಾಪ್ ಅನ್ನು ಹಲ್ಲುಗಳಿಂದ ತೆಗೆಯುತ್ತಿದ್ದವು. ಈಗ ಬಂದಿರುವ ಹೊಸ ವೀಡಿಯೋದಲ್ಲಿ ಕೋತಿಗಳು ಕುಳಿತು ಸ್ಮಾರ್ಟ್‌ಫೋನ್ (Smart Phone) ಗಳನ್ನು ಸ್ಕ್ರಾಲ್ ಮಾಡುತ್ತಿವೆ. ಸ್ಮಾರ್ಟ್‌ಫೋನ್ ಹಿಡಿದುಕೊಂಡು ಸ್ಕ್ರಾಲ್ ಮಾಡುತ್ತಿರುವ ಕೋತಿಗಳ ವೀಡಿಯೋ ಕ್ಲಿಪ್ ಇತ್ತೀಚಿನ ವೈರಲ್ (Viral) ವೀಡಿಯೋವಾಗಿದ್ದು, ಇದು ಸಾಮಾಜಿಕ ಮಾಧ್ಯಮದಲ್ಲಿ ಸಂಚಲನವನ್ನು ಸೃಷ್ಟಿಸಿದೆ ಅಂತಾನೆ ಹೇಳಬಹುದು.
ಈ ಸ್ಮಾರ್ಟ್ ಕೋತಿಗಳ ವೀಡಿಯೋ ಹಂಚಿಕೊಂಡಿದ್ದು ಕಿರಣ್ ರಿಜಿಜು
ಕೇಂದ್ರ ಸಚಿವ ಕಿರಣ್ ರಿಜಿಜು ಅವರು ತಮ್ಮ ಸಾಮಾಜಿಕ ಮಾಧ್ಯಮವಾದ ಟ್ವಿಟ್ಟರ್ ಖಾತೆಯ ಪುಟದಲ್ಲಿ ಹಂಚಿಕೊಂಡಿರುವ ಈ ಕ್ಲಿಪ್ ನಲ್ಲಿ ಒಬ್ಬ ವ್ಯಕ್ತಿಯು ಕಾಡಿನಲ್ಲಿ ಕುಳಿತಿರುವ ಕೋತಿಗಳ ಮುಂದೆ ಸ್ಮಾರ್ಟ್‌ಫೋನ್ ಅನ್ನು ಹಿಡಿದಿರುವುದನ್ನು ತೋರಿಸುತ್ತದೆ ಮತ್ತು ಮೂರು ಕೋತಿಗಳು ಕುತೂಹಲದಿಂದ ಅದನ್ನು ನೋಡುತ್ತಾ ಅದನ್ನು ಸ್ಕ್ರಾಲ್ ಮಾಡುತ್ತಿರುವುದನ್ನು ಸಹ ನಾವು ಇದರಲ್ಲಿ ನೋಡಬಹುದು.
ಆ ಕೋತಿಗಳು ಆ ಮನುಷ್ಯ ತೋರಿಸಿದ ಸ್ಮಾರ್ಟ್‌ಫೋನ್ ಅನ್ನು ತುಂಬಾನೇ ಇಷ್ಟಪಟ್ಟಿದ್ದು, ಆ ಸ್ಮಾರ್ಟ್‌ಫೋನ್ ನ ಸ್ಕ್ರೀನ್ ಮೇಲೆ ಏನೆಲ್ಲಾ ಬರುತ್ತೆ ಅಂತ ಕುತೂಹಲದಿಂದ ನೋಡುತ್ತಿರುವುದನ್ನು ನಾವು ನೋಡಬಹುದು.
ಮರಿ ಕೋತಿ ಏನು ಮಾಡಿದೆ ನೋಡಿ?
ಏತನ್ಮಧ್ಯೆ, ಆ ಕೋತಿಗಳಲ್ಲಿ ಒಂದು ಮರಿ ಕೋತಿಯೊಂದು ಸ್ಮಾರ್ಟ್‌ಫೋನ್ ನೋಡುತ್ತಾ ಮತ್ತು ಸ್ಕ್ರಾಲ್ ಮಾಡುತ್ತಾ ಕುಳಿತಿರುವ ಕೋತಿಗಳ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳಲು ಮೆತ್ತಗೆ ಕೈ ಹಿಡಿದು ತನ್ನತ್ತ ಕರೆಯುತ್ತಿರುವುದನ್ನು ಸಹ ನಾವು ಈ ವೀಡಿಯೋ ಕ್ಲಿಪ್ ನಲ್ಲಿ ನೋಡಬಹುದು.
ವೀಡಿಯೋಗೆ ಏನಂತ ಶೀರ್ಷಿಕೆಯನ್ನ ಬರೆದಿದ್ದಾರೆ ನೋಡಿ..
"ನಂಬಲಾಗದ ಮಟ್ಟವನ್ನು ತಲುಪಿದ ಡಿಜಿಟಲ್ ಸಾಕ್ಷರತೆಯ ಜಾಗೃತಿಯ ಯಶಸ್ಸನ್ನು ನೋಡಿ!" ಎಂದು ಆಂಧ್ರಪ್ರದೇಶದ ಸಚಿವ ಕಿರಣ್ ರಿಜಿಜು ತಮ್ಮ ಟ್ವಿಟ್ಟರ್ ನಲ್ಲಿ ಹಂಚಿಕೊಂಡ ವೀಡಿಯೋ ಪೋಸ್ಟ್ ನ ಶೀರ್ಷಿಕೆಯಲ್ಲಿ ಬರೆದಿದ್ದಾರೆ. ಕೆಲವು ಗಂಟೆಗಳ ಹಿಂದೆ ಈ ವೀಡಿಯೋವನ್ನು ಹಂಚಿಕೊಳ್ಳಲಾಗಿದ್ದು, ಈ ವೀಡಿಯೋ ಒಂದು ಲಕ್ಷಕ್ಕೂ ಹೆಚ್ಚು ವೀಕ್ಷಣೆಗಳನ್ನು ಗಳಿಸಿದೆ ಮತ್ತು ಈ ಸಂಖ್ಯೆ ಇನ್ನೂ ಹಾಗೆ ಹೆಚ್ಚುತ್ತಿವೆ ಅಂತ ಹೇಳಬಹುದು.
ಇದನ್ನೂ ಓದಿ: ಈತ ಜಗತ್ತಿನಲ್ಲೇ ಅತೀ ಸುಂದರ ಹೀರೋ ಅಂತೆ! ಅರೆರೇ, ಯಾರು ಗೊತ್ತಾ ಹುಡುಗಿಯರ ಹೃದಯಚೋರ?
ಈ ಹಂಚಿಕೆಯು ಕಾಮೆಂಟ್ ವಿಭಾಗದಲ್ಲಿ ತಮ್ಮ ಆಲೋಚನೆಗಳನ್ನು ಪೋಸ್ಟ್ ಮಾಡಲು ಅನೇಕರನ್ನು ಪ್ರೇರೇಪಿಸಿದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ.
ಈ ವೀಡಿಯೋ ಪೋಸ್ಟ್ ಗೆ ಜನರು ಹೇಗೆ ಪ್ರತಿಕ್ರಿಯಿಸಿದರು ಗೊತ್ತೇ?
"ಈ ವೀಡಿಯೋ ನಿಜಕ್ಕೂ ಅದ್ಭುತವಾಗಿದೆ" ಎಂದು ವ್ಯಕ್ತಿಯೊಬ್ಬರು ಈ ವೀಡಿಯೋ ಪೋಸ್ಟ್ಗೆ ಕಾಮೆಂಟ್ ಮಾಡಿದ್ದಾರೆ. "ಎಂತಹ ಅದ್ಭುತ ಸನ್ನಿವೇಶ ಇದು" ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹಂಚಿಕೊಂಡಿದ್ದಾರೆ.
Look at the success of digital literacy awareness reaching an unbelievable level! pic.twitter.com/VEpjxsOZa3
— Kiren Rijiju (@KirenRijiju) January 19, 2023
ನಾಲ್ಕನೆಯ ಬಳಕೆದಾರರು "ಕೋತಿಗಳ ನಡವಳಿಕೆ ತುಂಬಾ ಚೆನ್ನಾಗಿದೆ. ಸಾಮಾನ್ಯವಾಗಿ ಅವುಗಳು ಕಣ್ಣಿಗೆ ಕಾಣಿಸಿದ ವಸ್ತುಗಳನ್ನು ಬೇಗನೆ ವ್ಯಕ್ತಿಗಳ ಕೈಯಿಂದ ಕಸಿದುಕೊಳ್ಳುತ್ತವೆ. ಆದರೆ ಇಲ್ಲಿ ಗಮನವಿಟ್ಟು ತುಂಬಾನೇ ಕುತೂಹಲದಿಂದ ಆಶ್ಚರ್ಯಚಕಿತರಾಗಿ ಸ್ಮಾರ್ಟ್‌ಫೋನ್ ನ ಸ್ಕ್ರೀನ್ ಅನ್ನು ನೋಡುತ್ತಿವೆ. ಒಟ್ಟಾರೆ ಇದು ತುಂಬಾನೇ ಮುದ್ದಾಗಿದೆ" ಎಂದು ಕಾಮೆಂಟ್ ಮಾಡಿದ್ದಾರೆ.
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ