• Home
  • »
  • News
  • »
  • trend
  • »
  • Monkeys: ಕೋತಿಗಳು ಮನುಷ್ಯರಂತೆ ಸ್ಮಾರ್ಟ್​ ಆಗ್ತಿರೋದು ಜೀವವೈವಿಧ್ಯಕ್ಕೆ ಅಪಾಯವಂತೆ- ತಜ್ಞರ ಎಚ್ಚರಿಕೆ

Monkeys: ಕೋತಿಗಳು ಮನುಷ್ಯರಂತೆ ಸ್ಮಾರ್ಟ್​ ಆಗ್ತಿರೋದು ಜೀವವೈವಿಧ್ಯಕ್ಕೆ ಅಪಾಯವಂತೆ- ತಜ್ಞರ ಎಚ್ಚರಿಕೆ

ಕೋತಿಗಳು

ಕೋತಿಗಳು

ಪ್ರಾಣಿಗಳು ವಾಸವಿರುವಲ್ಲಿ ಮಾನವರು ಭೇಟಿ ನೀಡುವುದು ಹಾಗೂ ಅವುಗಳಿಗೆ ಆಹಾರ ನೀಡುವುದು ಕೋತಿಗಳ ತೀವ್ರ ಚಟುವಟಿಕೆಗಳಿಗೆ ಕಾರಣವಾಗಿದೆ. ಇದು ಜೀವಿಗಳ ವ್ಯವಸ್ಥೆಯನ್ನೇ ಬದಲಾಯಿಸುವಷ್ಟು ಪರಿಣಾಮಕಾರಿಯಾಗಿದೆ ಎಂದು ತಜ್ಞರು ತಿಳಿಸುತ್ತಾರೆ.

  • Share this:

ಕೋತಿಗಳ(Monkeys) ಚೇಷ್ಟೆ ಯಾರಿಗಾರೂ ಮನಸ್ಸಿಗೆ ಹಿತಕಾರಿ ಹಾಗೂ ತಮಾಷೆಯಿಂದ ಕೂಡಿರುತ್ತದೆ. ತಿನ್ನುವ ವಸ್ತುಗಳು ಕಂಡೊಡನೆ ಅವು ಮರದಿಂದ ಛಂಗನೆ ಜಿಗಿದು ಆ ವಸ್ತುವನ್ನು ಕ್ಷಣಮಾತ್ರದಲ್ಲಿ ಕೊಂಡೊಯ್ದು ಬಿಡುತ್ತವೆ. ಕಣ್ಮುಚ್ಚಿ ತೆರೆಯುವಷ್ಟರಲ್ಲಿ ಆ ವಸ್ತು(Thing) ಅಲ್ಲಿ ಇರುವುದೇ ಇಲ್ಲ. ಇನ್ನು ಕೆಲವೊಮ್ಮೆ ಸಣ್ಣ ಮಕ್ಕಳ(Children) ತುಂಟಾಟವನ್ನು ನೋಡಿ ಕಪಿಚೇಷ್ಟೆ ಎಂದು ಗದರಿದ್ದೂ ಇದ್ದೇ ಇದೆ.


ಮಾನವ ನೀಡುವ ಆಹಾರವನ್ನೇ ಆಶ್ರಯಿಸಿಕೊಂಡಿದೆ


ದೇವಸ್ಥಾನ, ಉದ್ಯಾನವನ, ರಸ್ತೆಬದಿಗಳಲ್ಲಿ ಈಗೀಗ ಹೆಚ್ಚಾಗಿಯೇ ಕಂಡುಬರುವ ಕೋತಿಗಳು ಮಾನವ ನೀಡುವ ಆಹಾರವನ್ನೇ ಹೆಚ್ಚು ಅವಲಂಬಿಸಿರುವಂತೆ ಕಂಡುಬರುತ್ತಿದೆ. ಅಳಿದುಳಿದ ಕೋಕ್ ಪೆಪ್ಸಿ ಬಾಟಲಿಗಳನ್ನು ರಸ್ತೆ ಬದಿಯಲ್ಲಿ ಎಸೆದು ನಾವು ಮುಂದುವರಿಯುತ್ತೇವೆ, ಆದರೆ ಈ ಕೋತಿಗಳು ಆಹಾರದ ಆಸೆಗೆ ಅದೇ ಬಾಟಲಿಗಳ ಮುಚ್ಚಳವನ್ನು ತೆಗೆದು ಅದನ್ನು ಸೇವಿಸುತ್ತದೆ.


ಕೋತಿ ಚೇಷ್ಟೆ ಮೋಜಾದರೂ ಅಪಾಯಕಾರಿ ಹೇಗೆ?


ಹೀಗೆ ಬಾಟಲಿಗಳ ಮುಚ್ಚಳ ತೆಗೆಯುವ ಕೋತಿಗಳ ವಿಡಿಯೋ ಸಾಮಾಜಿಕ ತಾಣದಲ್ಲಿ ವೈರಲ್ ಆಗುತ್ತಿದೆ ಹಾಗೂ ಇದೊಂದು ರೀತಿಯಲ್ಲಿ ತಮಾಷೆಯಾಗಿಯೂ ಕಾಣುತ್ತದೆ. ಆದರೆ ಕೋತಿಗಳ ಇಂತಹ ಕೌಶಲ್ಯಗಳು ನೈಸರ್ಗಿಕ ಸಂರಕ್ಷಣೆಗೆ ಅಡ್ಡಿಯನ್ನುಂಟು ಮಾಡಿವೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಇದನ್ನೂ ಓದಿ: Viral Video: ನೀರಿನೊಳಗೆ ಮೀನು ಇದ್ರೂ ಕೂಡ ವಿಲವಿಲನೇ ಒದ್ದಾಡುತ್ತೆ, ಕಾರಣ ಏನು?


ಕೋತಿಗಳ ವಾಸಸ್ಥಳಗಳಲ್ಲಿ ಮಾನವರ ಅಸ್ತಿತ್ವ


ದಕ್ಷಿಣ ಭಾರತದಲ್ಲಿ ಹೆಚ್ಚು ಕಂಡುಬರುವ ಕೋತಿಗಳು ಆಹಾರಕ್ಕಾಗಿ ಮಾನವರನ್ನೇ ಹೆಚ್ಚು ಆಶ್ರಯಿಸಿಕೊಳ್ಳುತ್ತಿದೆ. ಇದಕ್ಕೆ ಕಾರಣ ಅವುಗಳು ವಾಸಮಾಡುವಲ್ಲಿ ಮನುಷ್ಯರು ಹಸ್ತಕ್ಷೇಪ ಮಾಡುವುದಾಗಿದೆ ಎಂಬುದು ತಜ್ಞರ ಅಭಿಪ್ರಾಯವಾಗಿದೆ.


ಅವುಗಳ ಸ್ಥಳದಲ್ಲಿ ಮಾನವನ ಇರುವಿಕೆಯು ಕೋತಿಗಳ ನೈಸರ್ಗಿಕ ನಡವಳಿಕೆಗೆ ಅಡ್ಡಿಯನ್ನುಂಟು ಮಾಡಿವೆ ಹಾಗೂ ಅವುಗಳಿಗೂ ಅಪಾಯಕಾರಿಯಾಗಿವೆ ಎಂಬುದು ತಜ್ಞರ ಹೇಳಿಕೆಯಾಗಿದೆ.


ಪ್ರವಾಸಿಗರ ಮೇಲೆ ಮುಗಿಬೀಳುವ ಕೋತಿಗಳು


ನಾಲ್ಕು ಗುಂಪುಗಳಿಗೆ ಸೇರಿದ 137 ಸ್ವತಂತ್ರ ಕೋತಿಗಳ ಅಧ್ಯಯನವನ್ನು ತಜ್ಞರ ತಂಡವು ನಡೆಸಿದ್ದು, ಅವುಗಳ ಜೀವನ ಶೈಲಿ, ಒಡನಾಟ, ಚುರುಕುತನ ಮೊದಲಾದವುಗಳ ಬಗ್ಗೆ ಮಾಹಿತಿ ಕಲೆಹಾಕಿದೆ.


ಚಾಮುಂಡಿ ಬೆಟ್ಟದ ವಿವಿಧ ಭಾಗಗಳಲ್ಲಿರುವ ಈ ಕೋತಿಗಳು ಒಮ್ಮೊಮ್ಮೆ ಆಹಾರಕ್ಕಾಗಿ ಜನರ ಮೇಲೆ ಮುಗಿಬೀಳುತ್ತವೆ. ಬದುಕಲು ಪ್ರವಾಸಿಗರು ಮತ್ತು ಅಲ್ಲಿ ವಾಸಿಸುವ ಜನರನ್ನು ಆಧರಿಸಿವೆ.


ಪೆಪ್ಸಿ ಕೋಕ್‌ ಬಾಟಲಿಗಳ ಮುಚ್ಚಳ ತೆಗೆಯುವ ತಂತ್ರ


ಕೋಕ್, ಪೆಪ್ಸಿ ಮೊದಲಾದ ಜ್ಯೂಸ್ ಬಾಟಲಿಗಳ ಮುಚ್ಚಳವನ್ನು ತೆರೆಯುವ ತಂತ್ರಗಾರಿಕೆ ಕೋತಿಗಳಿಗೆ ತಿಳಿದದ್ದು ಹೇಗೆ ಎಂಬುದನ್ನು ಸಂಶೋಧಿಸಿರುವ ತಂಡವು, ನಾಲ್ಕು ಕೋತಿಗಳ ಗುಂಪು 11 ರಿಂದ 17 ನವೀನ ತಂತ್ರಗಳನ್ನು ಕಲಿತುಕೊಂಡಿರುವುದನ್ನು ಪತ್ತೆಹಚ್ಚಿದೆ.


ಬಾಟಲಿ ಮುಚ್ಚಳ ತೆರೆಯುವುದು ಹಾಗೂ ಜ್ಯೂಸ್ ಮೊದಲಾದ ಪಾನೀಯಗಳನ್ನು ಸೇವಿಸುವುದು ಈ ತಂತ್ರದಲ್ಲಿ ಸೇರಿದೆ ಎಂದು ತಂಡವು ತಿಳಿಸಿದೆ.


ಇದನ್ನೂ ಓದಿ: Viral Video: ಹುಲಿಯನ್ನು ಕೆಣುಕುತ್ತಿರುವ ವ್ಯಕ್ತಿ! ಆತನ ಅದೃಷ್ಟ ಚೆನ್ನಾಗಿತ್ತು ಅನ್ಸುತ್ತೆ!


ಅಧ್ಯಯನ ತಂಡದವರು ಇಂತಹ ಪ್ಲಾಸ್ಟಿಕ್ ಬಾಟಲಿಗಳು, ಅವುಗಳ ಮುಚ್ಚಳ ಹಾಗೂ ತಿರಸ್ಕರಿಸಿ ಬಾಟಲಿಗಳಿಂದ ನಿಸರ್ಗದ ಮೇಲೆ ಉಂಟಾಗುವ ಪರಿಣಾಮವನ್ನು ಅವಲೋಕಿಸಲು ಮಾಹಿತಿಗಳನ್ನು ಸಂಗ್ರಹಿಸಿದ್ದಾರೆ.


ಮಾನವನ ಬೇಜಾವಾಬ್ದಾರಿಯೇ ಇದಕ್ಕೆ ಕಾರಣ


ಕೋತಿಗಳು ಈ ರೀತಿ ಮಾಡುವುದಕ್ಕೆ ಪ್ರಮುಖ ಕಾರಣ ಮಾನವನ ಬೇಜಾವಾಬ್ದಾರಿಯಾಗಿದೆ ಎಂದು ಅಧ್ಯಯನ ಪ್ರಮುಖ ಲೇಖಕರಾದ ಅರಿಜಿತ್ ಪಾಲ್ ಅಭಿಮತವಾಗಿದೆ.


ಎಲ್ಲೆಂದರದಲ್ಲಿ ಪ್ಲಾಸ್ಟಿಕ್ ಬಾಟಲಿಗಳ ಎಸೆತ, ತೆರೆದ ಕವರ್‌ನಲ್ಲಿ ಆಹಾರಗಳನ್ನು ಸಾಗಿಸುವುದು, ಕಸವನ್ನು ಸಿಕ್ಕಸಿಕ್ಕಲ್ಲಿ ಎಸೆಯುವುದು ಮೊದಲಾದ ಉದಾಹರಣೆಗಳನ್ನು ನೀಡಿದ್ದಾರೆ.


ನಕಾರಾತ್ಮಕ ಅಂಶಕ್ಕೆ ಕಾರಣ


ಮಾನವರ ಆಹಾರಗಳನ್ನು ಕೋತಿಗಳು ಸೇವಿಸುವುದರಿಂದ ಅವುಗಳ ನಕಾರಾತ್ಮಕ ಸಂವಹನ ಹಾಗೂ ಕ್ರಿಯೆಗೆ ಇದು ಕಾರಣವಾಗಬಹುದು ಎಂದು ಸಂಶೋಧಕರು ಎಚ್ಚರಿಸಿದ್ದಾರೆ.


ಪ್ರಾಣಿಗಳು ವಾಸವಿರುವಲ್ಲಿ ಮಾನವರು ಭೇಟಿ ನೀಡುವುದು ಹಾಗೂ ಅವುಗಳಿಗೆ ಆಹಾರ ನೀಡುವುದು ಕೋತಿಗಳ ತೀವ್ರ ಚಟುವಟಿಕೆಗಳಿಗೆ ಕಾರಣವಾಗಿದೆ. ಇದು ಜೀವಿಗಳ ವ್ಯವಸ್ಥೆಯನ್ನೇ ಬದಲಾಯಿಸುವಷ್ಟು ಪರಿಣಾಮಕಾರಿಯಾಗಿದೆ ಎಂದು ತಜ್ಞರು ತಿಳಿಸುತ್ತಾರೆ.


ಕೋತಿಗಳಲ್ಲಿ ಹೆಚ್ಚಾಗುತ್ತಿರುವ ಹಿಂಸೆ, ಕೋಪ


ಆಹಾರವನ್ನು ಕಸಿದುಕೊಳ್ಳುವುದು, ಕೋಪ ತೋರಿಸುವುದು, ಆಹಾರಕ್ಕಾಗಿ ಕೋತಿಗಳು ಪರಸ್ಪರ ಹೊಡೆದಾಡುವುದು ಮೊದಲಾದ ನೆಗೆಟಿವ್ ಅಂಶಗಳು ಕೋತಿಗಳಲ್ಲಿ ಕಂಡುಬರುವುದಕ್ಕೆ ಮಾನವರು ಅವುಗಳಿಗೆ ನೀಡುವ ಆಹಾರವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

Published by:Latha CG
First published: