Injured Monkey: ಚಿಕಿತ್ಸೆ ಪಡೆಯಲು ಕ್ಲಿನಿಕ್​ಗೆ ಬಂದ ಬುದ್ದಿವಂತ ಮಂಗ! ವೈದ್ಯರ ಸಹನೆ ಮೆಚ್ಚಿದ ಜನ

ಮನುಷ್ಯ ಮತ್ತು ಮಂಗನಿಗೆ ಹೆಚ್ಚಿನ ಸಾಮ್ಯತೆಯನ್ನು ಯಾವಾಗಲೂ ನೋವು ನೊಡುತ್ತೇವೆ. ಇಲ್ಲಿ ಕೂಡ ಥೇಟ್ ಮನುಷ್ಯನಂತೆ ಗಾಯಾಳು ಮಂಗವೊಂದು ಔಷಧಿ ತೆಗೆದುಕೊಳ್ಳಲು ವೈದ್ಯರ ಭೇಟಿಗೆ ಆಸ್ಪತ್ರೆಗೆ ಬಂದಿರುವ ಅಚ್ಚರಿ ಘಟನೆಯೊಂದು ನಡೆದಿದೆ.

ಚಿಕಿತ್ಸೆಗಾಗಿ ಕ್ಲಿನಿಕ್ ಗೆ ಬಂದ ಮಂಗ

ಚಿಕಿತ್ಸೆಗಾಗಿ ಕ್ಲಿನಿಕ್ ಗೆ ಬಂದ ಮಂಗ

  • Share this:
ಮನುಷ್ಯರಾದ ನಮಗೆ ಸಣ್ಣ ಪುಟ್ಟ ಗಾಯಗಳಾದರೂ (Injury) ವೈದ್ಯರನ್ನು ಕಾಣಲು ಆಸ್ಪತ್ರೆಗೆ (Hospital) ಓಡೋಡಿ ಹೋಗುತ್ತೇವೆ. ಏನಾಗಿದೆಯೋ ಅದಕ್ಕೆ ತಕ್ಕ ಔಷದೋಪಚಾರಗಳನ್ನು ತೆಗೆದುಕೊಂಡು ಬರುತ್ತೇವೆ. ಇಂತಹ ಸಂದರ್ಭದಲ್ಲಿ ಮಾನವರ ಸ್ಥಿತಿಯನ್ನು ಏನೂ ಅರಿಯದ ಮೂಖ ಪ್ರಾಣಿಗಳಿಗೆ (Animals) ಹೋಲಿಸಿಕೊಂಡರೆ ಪಾಪ ಅವುಗಳ ಗತಿ ಏನು ಅಂತಾ ಒಮ್ಮೊಮ್ಮೆ ಅನಿಸೋದು ಸಹಜ. ಆದರೆ ಕಾಲ ಬದಲಾಗಿದೆ ಸ್ವಾಮಿ ಈಗ. ಪ್ರಾಣಿಗಳಿಗೂ ಆಸ್ಪತ್ರೆಗಳ ಪರಿಚಯ ಇದೆ. ಗಾಯಗಳಂತಹ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಲು ಖುದ್ದಾಗಿ ಅವುಗಳೇ ಕ್ಲಿನಿಕ್ ಗೆ (Clinic) ಧಾವಿಸುತ್ತಿವೆ. ಈ ವಿಚಾರ ಕೇಳಿ ನಿಮಗೆ ಆಶ್ಚರ್ಯವಾಗಬಹುದು. ಆದರೆ ಇದು ನಿಜಕ್ಕೂ ನಡೆದಿರುವ ಘಟನೆಯೇ ಹೌದು.

ಚಿಕಿತ್ಸೆಗಾಗಿ ಕ್ಲಿನಿಕ್ ಗೆ ಬಂದ ಮಂಗ
ಮನುಷ್ಯ ಮತ್ತು ಮಂಗನಿಗೆ ಹೆಚ್ಚಿನ ಸಾಮ್ಯತೆಯನ್ನು ಯಾವಾಗಲೂ ನೋವು ನೊಡುತ್ತೇವೆ. ಇಲ್ಲಿ ಕೂಡ ಥೇಟ್ ಮನುಷ್ಯನಂತೆ ಗಾಯಾಳು ಮಂಗವೊಂದು ಔಷಧಿ ತೆಗೆದುಕೊಳ್ಳಲು ವೈದ್ಯರ ಭೇಟಿಗೆ ಆಸ್ಪತ್ರೆಗೆ ಬಂದಿರುವ ಅಚ್ಚರಿ ಘಟನೆಯೊಂದು ನಡೆದಿದೆ.

ಗಾಯಗೊಂಡ ಮಂಗವೊಂದು ತನಗೆ ಆದ ಗಾಯಗಳಿಗೆ ಚಿಕಿತ್ಸೆ ಪಡೆಯಲು ಬಿಹಾರದ ಸಸಾರಾಮ್‌ನಲ್ಲಿರುವ ಕ್ಲಿನಿಕ್‌ಗೆ ಭೇಟಿ ನೀಡಿದೆ. ವೈರಲ್ ಆಗಿರುವ ಘಟನೆಯ ವೀಡಿಯೊದಲ್ಲಿ ಕೋತಿ ತನ್ನ ಮಗುವನ್ನು ಎದೆಗವಚಿಕೊಂಡು ಕ್ಲಿನಿಕ್‌ನಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿರುವುದನ್ನು ನೋಡಬಹುದು.

ವೈದ್ಯರಿಗಾಗಿ ಕಾದು ಕುಳಿತ ಗಾಯಾಳು ಮಂಗ
ವೈದ್ಯರು ಕ್ಲಿನಿಕ್ ಗೆ ಬರುವ ಮುನ್ನವೇ ಅವರಿಗಾಗಿ ಕಾದು ಕುಳಿತಿದ್ದ ಕೋತಿಯು ವೈದ್ಯರನ್ನೇ ಎದುರು ನೋಡುತ್ತಿತ್ತು. ವೈದ್ಯರು ಬರುತ್ತಿದ್ದಂತೆ ಕ್ಲಿನಿಕ್ ಒಳಗೆ ನುಗ್ಗಿದ ಕೋತಿಯು ರೋಗಿಗಳ ಹಾಸಿಗೆ ಮೇಲೆ ಕುಳಿತುಕೊಂಡಿತು.

ಕೋತಿಯು ಮಧ್ಯಾಹ್ನದ ಸುಮಾರಿಗೆ ಸಸಾರಾಮ್‌ನ ಶಹಜಾಮಾ ಪ್ರದೇಶದಲ್ಲಿನ ಡಾ. ಎಸ್ ಎಂ ಅಹ್ಮದ್ ಅವರ ಮೆಡಿಕೋ ಕ್ಲಿನಿಕ್ ಗೆ ಧಾವಿಸಿ ಥೇಟ್ ಮನುಷ್ಯರಂತೆ ಚಿಕಿತ್ಸೆ ಪಡೆದುಕೊಳ್ಳಲು ಕಾಯುತ್ತಿತ್ತು. ಈ ಸುದ್ದಿ ಹರಡುತ್ತಿದ್ದಂತೆ ಕೋತಿ ಮತ್ತು ಅದರ ಮರಿಯನ್ನು ನೋಡಲು ಜನ ಕ್ಲಿನಿಕ್‌ ಮುಂದೆ ಜಮಾಯಿಸಿ ಬಿಟ್ಟರು.

ಇಬ್ಬರಿಗೂ ಸಹನೆಯಿಂದ ಚಿಕಿತ್ಸೆ ನೀಡಿದ ವೈದ್ಯರು
ಕೋತಿ ಮತ್ತು ಅದರ ಮರಿಯ ಭೇಟಿ ಖಂಡಿತ ವೈದ್ಯರಿಗೂ ಅನಿರೀಕ್ಷಿತ ರೋಗಿಗಳ ಭೇಟಿ ಎನ್ನಬಹುದು. ವೈದ್ಯರಾದ ಡಾ.ಅಹ್ಮದ್ ಕೂಡ ಯಾವುದೇ ರೀತಿಯ ಅಸಹನೆ ತೋರದೇ ಪಾಪ ಗಾಯಗೊಂಡ ಮರಿ ಮತ್ತು ತಾಯಿಯ ಆರೈಕೆ ಮಾಡಿದರು. ಆರಂಭದಲ್ಲಿ ಸ್ವಲ್ಪ ಭಯವಿತ್ತು, ಆದರೆ ಕೋತಿಯ ಮುಖ ನೋಡಿದಾಗ ಆಕೆ ಗಾಯಗೊಂಡಿರುವುದು ಅರ್ಥವಾಯಿತು, ಮತ್ತು ಮರಿಗೂ ಸಣ್ಣಪುಟ್ಟ ಗಾಯಗಳಾಗಿದ್ದವು. ಇಬ್ಬರಿಗೂ ಚಿಕಿತ್ಸೆ ನೀಡಲಾಯಿತು ಎಂದು ಡಾ.ಅಹ್ಮದ್ ಹೇಳಿದ್ದಾರೆ.

ಇದನ್ನೂ ಓದಿ: Deep Sea Fish: ಆಳ ಸಮುದ್ರದ ಮೀನಿನ ಫೋಟೋ ವೈರಲ್! ನೋಡಿ ನೆಟ್ಟಿಗರು ಹೆದರಿಕೊಂಡಿದ್ದೇಕೆ?

ವೈದ್ಯರು ಕೋತಿಗೆ ಟೆಟನಸ್‌ನ ಎಂಬ ಒಂದು ಚುಚ್ಚುಮದ್ದು ಕೊಟ್ಟು ಅದರ ಮುಖಕ್ಕೆ ಮುಲಾಮು ಹಚ್ಚಿದರು. ಸಂಪೂರ್ಣ ಚಿಕಿತ್ಸೆ ಪ್ರಕ್ರಿಯೆಯ ನಂತರ ಕೋತಿ ಮತ್ತು ಅದರ ಮರಿ ಹಾಸಿಗೆಯ ಮೇಲೆ ಆರಾಮವಾಗಿ ವಿಶ್ರಾಂತಿ ಪಡೆಯಿತು. ವೈದ್ಯರು ಕೋತಿಯನ್ನು ಕೂಲಂಕುಷವಾಗಿ ಪರಿಶೀಲಿಸಿದ ನಂತರ ವಿಶ್ರಾಂತಿ ತೆಗೆದುಕೊಳ್ಳುವಂತೆ ಸೂಚಿಸಿದರು. ವಿಡಿಯೋದಲ್ಲೂ ಸಹ ಕೋತಿ ಮತ್ತು ಅದರ ಮರಿ ಹಾಸಿಗೆ ಮೇಲೆ ಹಾಯಾಗಿ ಮಲಗಿರುವುದನ್ನು ಕಾಣಬಹುದು.ಆಕೆಯ ಗಾಯಗಳನ್ನು ಡ್ರೆಸ್ಸಿಂಗ್ ಮಾಡಿದ ನಂತರ, ವೈದ್ಯರು ಜನರ ಗುಂಪನ್ನು ಚದುರಿಸಲು ಕೇಳಿದರು. ಗಾಯಗಳಿಂದ ಬಳಲಿದ್ದ ಮಂಗವು ಜನರನ್ನು ನೋಡಿ ಮತ್ತೆ ಹೆದರಬಹುದು ಮತ್ತು ಕೋತಿಗಳು ಅಡೆತಡೆಯಿಲ್ಲದೆ ಹೊರಡಲು ವೈದ್ಯರು ಅನುವು ಮಾಡಿಕೊಡಲು ನೋಡುಗರನ್ನು ದೂರ ಸರಿಯಲು ಹೇಳಿದರು.

ಮಂಗನ ಬುದ್ದಿವಂತಿಕೆಗೆ ಆಶ್ಚರ್ಯಪಟ್ಟ ಜನರು
ಇನ್ನು ಮಂಗನ ಬುದ್ದಿವಂತಿಕೆಯನ್ನು ಕಂಡ ಅಲಿದ್ದ ಜನರು ನಿಜಕ್ಕೂ ಆಶ್ಚರ್ಯಚಕಿತರಾದರು. ಮತ್ತು ಈ ವಿಡಿಯೋ ಸಹ ಸಾಮಾಜಿಕ ಜಾಲತಾಣದಲ್ಲಿ ಹೆಚ್ಚು ವೀಕ್ಷಿಸಲ್ಪಟ್ಟಿದ್ದು ಮಂಗನ ಬುದ್ಧಿವಂತಿಕೆ ಮತ್ತು ವೈದ್ಯರ ತಾಳ್ಮೆಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ: Viral Video: ಈ ಆನೆ ಬಾಟಲಿಯಿಂದ ಹೇಗೆ ಹಾಲನ್ನು ಕುಡಿಯುತ್ತಿದೆ ನೋಡಿ; ನಗು ಬರಿಸೋದು ಗ್ಯಾರೆಂಟಿ

ಮನೀಶ್ ಎಂಬ ಟ್ವಿಟ್ಟರ್ ಬಳಕೆದಾರರು ಈ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಪೋಸ್ಟ್ ಮಾಡಿದ್ದರು. ಸದ್ಯ ವಿಡಿಯೋ ವೈರಲ್ ಆಗುತ್ತಿದ್ದು ನೆಟ್ಟಿಗರು ಕೂಡ ವೈದ್ಯರನ್ನು ಮೆಚ್ಚಿಕೊಂಡಿದ್ದು, ಕೋತಿಯ ಬುದ್ದಿಂತಿಕೆಯನ್ನು ಹೊಗಳಿದ್ದಾರೆ. ಇದು ನಮ್ಮ ಭಾರತದಲ್ಲಿ ಮಾತ್ರ ಕಾಣಲು ಸದ್ಯ, ವೈದ್ಯರು ಕೋತಿಗೆ ಉತ್ತಮವಾಗಿ ಚಿಕಿತ್ಸೆ ನೀಡಿದ್ದಾರೆ, ವಿಡಿಯೋ ನೋಡಲು ಖುಷಿಯಾಗುತ್ತಿದೆ ಎಂಬಿತ್ಯಾದಿ ಕಾಮೆಂಟ್ ಗಳು ಬಂದಿವೆ.
Published by:Ashwini Prabhu
First published: