ಮಾಸ್ಕ್‌ ಧರಿಸುತ್ತಿರುವ ಜಾಣ ಕೋತಿ: ವಿಡಿಯೋ ವೈರಲ್‌

ಕೋತಿ

ಕೋತಿ

Face Mask: ನಾವು ಇಷ್ಟು ದಿನಗಳ ಕಾಲ ಮಾಸ್ಕ್ ಧರಿಸಿದ್ದು ಈಗ ನಮ್ಮ ಸುತ್ತಮುತ್ತಲಿನಲ್ಲಿರುವಂತಹ ಪ್ರಾಣಿಗಳಿಗೂ ಸಹ ಈ ವೈರಸ್ ಬಗ್ಗೆ ಅರಿವಾದಂತಿದೆ. ಏಕೆಂದರೆ ಒಂದು ವೀಡಿಯೋ ತುಣುಕಿನಲ್ಲಿ ಕೋತಿಯೊಂದು ಮಾಸ್ಕ್‌ ಹಿಡಿದುಕೊಂಡು ಅಡ್ಡಾಡುತ್ತಿರುವುದನ್ನು ನೋಡಿದರೆ ನೀವು ದಂಗಾಗುವುದು ಗ್ಯಾರಂಟಿ.

ಮುಂದೆ ಓದಿ ...
  • Share this:

ಈಗಂತೂ ನಾವೆಲ್ಲಾ ಮನೆಯಿಂದ ಹೊರಗೆ ಕಾಲಿಟ್ಟರೆ ಸಾಕು, ಮೂಗು ಮತ್ತು ಬಾಯಿ ಮುಚ್ಚಿಕೊಳ್ಳುವಂತೆ ಮಾಸ್ಕ್ ಹಾಕಿಕೊಂಡು ಹೋಗುವುದು ಅಭ್ಯಾಸವಾಗಿದೆ ಎಂದರೆ ತಪ್ಪಾಗಲಾರದು.ಆದರೂ ಈ ಕೋವಿಡ್-19 ವೈರಸ್ ಹಾವಳಿಂದಾಗಿ ಈ ಮಾಸ್ಕ್ ಒಂದೂವರೆ ವರ್ಷದಿಂದ ನಮ್ಮ ಜೀವನಕ್ಕೆ ಅಂಟಿಕೊಂಡಿದೆ. ನಾವು ಇಷ್ಟು ದಿನಗಳ ಕಾಲ ಮಾಸ್ಕ್ ಧರಿಸಿದ್ದು ಈಗ ನಮ್ಮ ಸುತ್ತಮುತ್ತಲಿನಲ್ಲಿರುವಂತಹ ಪ್ರಾಣಿಗಳಿಗೂ ಸಹ ಈ ವೈರಸ್ ಬಗ್ಗೆ ಅರಿವಾದಂತಿದೆ. ಏಕೆಂದರೆ ಒಂದು ವೀಡಿಯೋ ತುಣುಕಿನಲ್ಲಿ ಕೋತಿಯೊಂದು ಮಾಸ್ಕ್‌ ಹಿಡಿದುಕೊಂಡು ಅಡ್ಡಾಡುತ್ತಿರುವುದನ್ನು ನೋಡಿದರೆ ನೀವು ದಂಗಾಗುವುದು ಗ್ಯಾರಂಟಿ.


ಈ 22 ಸೆಕೆಂಡುಗಳ ವೀಡಿಯೋ ತುಣುಕಿನಲ್ಲಿ ಜಾಣ ಕೋತಿಯೊಂದು ತನಗೆ ಸಿಕ್ಕಂತಹ ಒಂದು ಕಪ್ಪು ಬಣ್ಣದ ಮಾಸ್ಕ್ ಅನ್ನು ತನ್ನ ಮುಖಕ್ಕೆ ಹಾಕಿಕೊಳ್ಳಲು ಪ್ರಯತ್ನಿಸಿದ್ದು, ನಂತರ ಆ ಮಾಸ್ಕ್‌ನಿಂದ ತನ್ನ ಮುಖವನ್ನು ಸಂಪೂರ್ಣವಾಗಿ ಮುಚ್ಚಿಕೊಂಡು ಮುಂದೆ ಹೆಜ್ಜೆ ಇಟ್ಟಿದ್ದು, ಸ್ವಲ್ಪ ದೂರ ನಡೆದ ಮೇಲೆ ಅದರ ಮಾಸ್ಕ್ ಕೆಳಕ್ಕೆ ಕಳಚಿ ಬೀಳುತ್ತದೆ. ಮತ್ತೆ ಅದನ್ನು ಹೇಗೆ ಧರಿಸಬೇಕು ಎಂಬ ಗೊಂದಲದಲ್ಲಿ ಕೋತಿ ಇರುವುದನ್ನು ನಾವು ಈ ವೈರಲ್ ವಿಡಿಯೋದಲ್ಲಿ ಕಾಣಬಹುದಾಗಿದೆ.


“ಪ್ರತಿಯೊಬ್ಬರು ಮಾಸ್ಕ್ ಧರಿಸಲು ಬಯಸುತ್ತಾರೆ” ಎಂದು ಈ ವಿಡಿಯೋವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿನ ಪುಟದಲ್ಲಿ ಹಾಕಿಕೊಂಡು ಭಾರತೀಯ ಅರಣ್ಯ ಸೇವಾ ಅಧಿಕಾರಿಯಾದ ಸುಶಾಂತ್ ನಂದಾ ಶೀರ್ಷಿಕೆಯನ್ನು ಸಹ ಬರೆದಿದ್ದಾರೆ.


International Dog day | ಸಾಕು ನಾಯಿ ಜೊತೆ ನಿದ್ರೆ ಮಾಡಿದರೆ ಆರೋಗ್ಯಕ್ಕೆ ಒಳಿತಂತೆ; ಸಂಶೋಧನೆಯಿಂದ ಬಹಿರಂಗ

ಈ ವಿಡಿಯೋವನ್ನು ಎಲ್ಲಿ ಮತ್ತು ಯಾರು ಸೆರೆಹಿಡಿದಿದ್ದಾರೆ ಎಂದು ತಿಳಿಯದೆ ಇದ್ದರೂ, ವಿಡಿಯೋ ತುಂಬಾ ವೈರಲ್ ಆದದ್ದು ಮಾತ್ರ ಅಮೆರಿಕದ ಮಾಜಿ ಬಾಸ್ಕೆಟ್‌ಬಾಲ್‌ ಆಟಗಾರರಾದ ರೆಕ್ಸ್ ಚಾಪ್ಮನ್ ತಮ್ಮ ಟ್ವಿಟ್ಟರ್ ಖಾತೆಯ ಪುಟದಲ್ಲಿ ಮರು ಹಂಚಿಕೊಂಡ ನಂತರವೇ ಎಂದರೆ ಅತಿಶಯೋಕ್ತಿಯಲ್ಲ.


ಈ ಮಾಜಿ ಆಟಗಾರರಾದ ರೆಕ್ಸ್ ಈ ವಿಡಿಯೋವನ್ನು ಮರು ಹಂಚಿಕೊಂಡ ನಂತರ ಇದನ್ನು ಸುಮಾರು 2 ಮಿಲಿಯನ್ ಜನರು ವೀಕ್ಷಿಸಿದ್ದು, ನೆಟ್ಟಿಗರಿಂದ ಅನೇಕ ಪ್ರತಿಕ್ರಿಯೆಗಳನ್ನು ಪಡೆದಿದೆ.


Read Also: ಸಿನಿಮಾ ರಂಗದಲ್ಲಿ ಮಿಂಚಿ ಕೊನೆಗೆ ಸನ್ಯಾಸತ್ವ ಸ್ವೀಕರಿಸಿದ ಟಾಪ್ ನಟಿಯರಿವರು!

ಕೆಲವು ನೆಟ್ಟಿಗರು ಈ ಪ್ರಾಣಿಗಿರುವ ಅರಿವನ್ನು ಶ್ಲಾಘಿಸಿದರೆ, ಇತರರು “ಹೀಗೆ ನಾವು ಉಪಯೋಗಿಸಿ ಬೇಜವಾಬ್ದಾರಿಯಿಂದ ಬಿಸಾಡಿದ ಮಾಸ್ಕ್ ಕೆಲವೊಮ್ಮೆ ತುಂಬಾ ಗಂಭೀರವಾದ ಸಮಸ್ಯೆ ತಂದೊಡ್ಡಬಹುದು ಎಂದು ಬರೆದಿದ್ದಾರೆ. ಕೆಲವರು ಹೆಚ್ಚಿನ ಮನುಷ್ಯರಿಗೆ ಮಾಸ್ಕ್ ಧರಿಸಿ ಅಂತಾ ಸಾವಿರ ಬಾರಿ ಹೇಳಿದರೂ ಹಾಕಿಕೊಳ್ಳುವುದಿಲ್ಲ, “ಮನುಷ್ಯರಿಗಿಂತ ಈ ಪ್ರಾಣಿಗಳಿಗೆ ಮಾಸ್ಕ್‌ ಅವಶ್ಯಕತೆ ಬಗ್ಗೆ ತಿಳಿದಂತಿದೆ” ಎಂದು ಹಾಸ್ಯ ಮಾಡಿದ್ದಾರೆ.





ವಿಡಿಯೋಗೆ ಪ್ರತಿಕ್ರಿಯಿಸಿದ ವೈದ್ಯರೊಬ್ಬರು “ಮಾಸ್ಕ್ ಧರಿಸುವುದರ ಬಗ್ಗೆ ಪ್ರಾಣಿಗೂ ತಿಳಿದಿದೆ. ಆದರೆ ನಮ್ಮಲ್ಲಿ ಅನೇಕರು ಇದನ್ನು ಧರಿಸದೆ ಬೇಕಾಬಿಟ್ಟಿ ಅಡ್ಡಾಡುತ್ತಾರೆ” ಎಂದು ಹೇಳಿದ್ದಾರೆ.


“ನಾವು ಹಾಕಿಕೊಂಡು ಬಿಸಾಡಿದ ಮಾಸ್ಕ್ ಅನ್ನು ಈ ರೀತಿಯಾಗಿ ಪ್ರಾಣಿಗಳು ಧರಿಸಿದರೆ ನಮಗೆ ಸೋಂಕಿದ್ದರೆ ಅದು ಪ್ರಾಣಿಗಳಿಗೂ ಹರಡುತ್ತದೆ” ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಬರೆದಿದ್ದಾರೆ.

First published: