HOME » NEWS » Trend » MONKEY STEALS BAG WITH RS 4 LAKH THROWS CURRENCY NOTES OUTSIDE REGISTRY OFFICE IN UTTAR PRADESH HG

4 ಲಕ್ಷವಿದ್ದ ಹಣದ ಬ್ಯಾಗ್​ ಹಿಡಿದು ಮರವೇರಿದ ಮಂಗ; ಮುಂದೇನಾಯ್ತು ಗೊತ್ತಾ?

ಲಕ್ಷಾಂತರ ನೋಟುಗಳು ಗಾಳಿಗೆ ಹಾರುತ್ತಾ ನೋಂದಣಿ ಕಚೇರಿ ಸುತ್ತಮುತ್ತ ಬಿದ್ದಿದೆ. ಗಾಳಿಗೆ ಬೀಳುತ್ತಿರುವ ನೋಟುಗಳನ್ನು ಕಂಡು ಅಚ್ಚರಿಗೊಂಡ ಜನರಿಗೆ ಮರದಲ್ಲಿದ್ದ ಕಪಿಯ ಚೇಷ್ಟೆ ಕಣ್ಣೆದುರಿಗೆ ಕಂಡಿದೆ.

news18-kannada
Updated:December 23, 2020, 4:34 PM IST
4 ಲಕ್ಷವಿದ್ದ ಹಣದ ಬ್ಯಾಗ್​ ಹಿಡಿದು ಮರವೇರಿದ ಮಂಗ; ಮುಂದೇನಾಯ್ತು ಗೊತ್ತಾ?
ಮಂಗ
  • Share this:
ಚೇಷ್ಟೆ ಮಾಡುವುದರಲ್ಲಿ ಕಪಿಗಳು ಎತ್ತಿದ ಕೈ. ಮಲೆನಾಡಿನಲ್ಲಂತೂ ಅಡಿಕೆ, ತೆಂಗಿನ ಮರಗಳ ಮೇಲೆ ಜಿಗಿಯುತ್ತಾ ತೆಂಗಿನಕಾಯಿ ಕಿತ್ತು ಬೀಸಾಕುತ್ತಾ ಉಪಟಳ ಮಾಡುತ್ತಿರುತ್ತದೆ. ಆದರಂತೆ ಉತ್ತರ ಪ್ರದೇಶದಲ್ಲೊಂದು ಕಪಿ ಏನು ಮಾಡಿದೆ ಗೊತ್ತಾ? 4 ಲಕ್ಷ ಬೆಲೆಯ ಬ್ಯಾಗ್​ ಎತ್ತಿಕೊಂಡು ಮರವೇರಿದೆ!

ಉತ್ತರ ಪ್ರದೇಶದ ಸೀತಾಪುರ್​ ಎಂಬಲ್ಲಿ ಈ ಘಟನೆ ನಡೆದಿದೆ. ಇಲ್ಲಿನ ವಿಕಾಸ್​​ ಭವನದ ರಿಜಿಸ್ಟಾರ್​ ಕಚೇರಿ (ನೋಂದಣಿ ಕಚೇರಿ) ಬಳಿ ಇದ್ದ ಕೋತಿಯೊಂದು ಹಣ ತುಂಬಿದ್ದ ಬ್ಯಾಗ್​ ಅನ್ನು ಎತ್ತಿಕೊಂಡು ಮರವೇರಿದೆ. ನಂತರ ನೋಟುಗಳನ್ನು ಎಸೆಯುತ್ತ ಕುಳಿತಿದೆ.

ಹೀಗೆ ಲಕ್ಷಾಂತರ ನೋಟುಗಳು ಗಾಳಿಗೆ ಹಾರುತ್ತಾ ನೋಂದಣಿ ಕಚೇರಿ ಸುತ್ತಮುತ್ತ ಬಿದ್ದಿದೆ. ಗಾಳಿಗೆ ಬೀಳುತ್ತಿರುವ ನೋಟುಗಳನ್ನು ಕಂಡು ಅಚ್ಚರಿಗೊಂಡ ಜನರಿಗೆ ಮರದಲ್ಲಿದ್ದ ಕಪಿಯ ಚೇಷ್ಟೆ ಕಣ್ಣೆದುರಿಗೆ ಕಂಡಿದೆ.

ಹಿರಿಯ ವ್ಯಕ್ತಿಯೊಬ್ಬರು 4 ಲಕ್ಷ ರೂ ಹಣವಿದ್ದ ಬ್ಯಾಗ್​ ಅನ್ನು ಸೀತಾಪುರ್​ ವಿಕಾಸ್​ ಭವನ ಬಳಿ ಇಟ್ಟುಕೊಂಡು ಕುಳಿತಿದ್ದರು. ಈ ವೇಳೆ ಮಂಗವೊಂದು ಬಂದು ಬ್ಯಾಗ್​ ಎತ್ತಿಕೊಂಡು ಮರ ಏಳಿ ಕುಳಿತಿದೆ. ಅಷ್ಟು ಮಾತ್ರವಲ್ಲದೆ, 10, 12 ಸಾವಿರ ರೂ. ನೋಟುಗಳನ್ನು ಕಿತ್ತೆಸೆದಿದೆ.

ಹೀಗೆ ಚೇಷ್ಟೆ ಮಾಡಿದ್ದ ಮಂಗ ಕೊನೆಗೆ ಹಣದ ಬ್ಯಾಗ್​ ಅನ್ನು ಕೆಳಕ್ಕೆ ಎಸೆದಿದೆ ಎಂದು ತಿಳಿದು ಬಂದಿದೆ.
Published by: Harshith AS
First published: December 23, 2020, 4:30 PM IST
ಮತ್ತಷ್ಟು ಓದಿರಿ
ಮುಂದಿನ ಸುದ್ದಿ

Top Stories