Hubli : ಹೋಟೆಲ್​ಗೆ ಬಂದ ವಾನರ! ಗಡದ್ದಾಗಿ ಕುಳಿತು ಪೂರಿ ತಿನ್ನೋ ಮಜಾ ನೋಡಿ

ಇಲ್ಲೊಂದು ವಾನರ ವಾಣಿಜ್ಯ ನಗರಿದೆ ಬಂದಿದೆ. ಉದ್ಯಾನವನದಲ್ಲಿ ಹಾಯಾಗಿ ಸುತ್ತಿಕೊಂಡಿರೋ ಈ ವಾನರ ತನಗೆ ತಿನ್ನಬೇಕೆನಿಸಿದಾಗ ನೇರವಾಗಿ ಹೋಟೆಲ್ ಗೆ ಹೋಗುತ್ತೆ. ಯಾರಿಗೂ ಏನೂ ತೊಂದರೆ ಕೊಡದ ಈ ಮಂಗ ಕಳೆದ ಒಂದು ವಾರದಿಂದಲೂ ಇಲ್ಲಿಯೇ ಬೀಡು ಬಿಟ್ಟಿದ್ದು, ಜನ ಒಂದಷ್ಟು ತಿಂಡಿ ಕೊಟ್ಟು ಹೋಗ್ತಿದಾರೆ.

ಸಾಂದರ್ಭಿಕ ಚಿತ್ರ

ಸಾಂದರ್ಭಿಕ ಚಿತ್ರ

  • Share this:
ಹುಬ್ಬಳ್ಳಿ(ಜು.03): ಕಪ್ಪಗಿರೋ ಮೂಷ್ಯಾ ಗಳು ಒಂದಷ್ಟು ಡೇಂಜರ್ (Danger). ಅವು ಕಚ್ಚೋಕೆ ಆರಂಭಿಸಿದ್ವು ಅಂದ್ರೆ, ಮನುಷ್ಯನ (Human) ಜೀವವನ್ನೂ ಬಲಿಪಡಿಯೋಷ್ಟು ಶಕ್ತಿ (Power) ಅವಕ್ಕಿವೆ. ಆದ್ರೆ ಇಲ್ಲೊಂದು ಕರಿ ಮಂಗ (Monkey) ಕಾಡು (Forest) ಬಿಟ್ಟು ನಾಡು ಸೇರಿಕೊಂಡಿದೆ. ವಾಣಿಜ್ಯ ನಗರಿ ಹುಬ್ಬಳ್ಳಿಗೆ (Hubballi) ಬಂದಿರೋ ಈ ಮಂಗ ಹೋಟೆಲ್ (Hotel) ಮಾಲೀಕನಂತೆಯೇ (Owner) ವರ್ತಿಸ್ತಿದೆ. ಹೋಟೆಲ್ ನ ಕೌಂಟರ್ (Counter) ಬಳಿ ಕೂಡೋದು, ಅಡುಗೆ ಮನೆಯಲ್ಲಿ ಕೆಲಸ ಮಾಡೋದ್ರ ಪರಿಶೀಲನೆ ಮಾಡೋದು ಎಲ್ಲಾನೂ ಮಾಡುತ್ತಿದೆ ಈ ಕೋತಿ. ಹೋಟೆಲ್ ನಲ್ಲಿ ಕೊಡೋ ಪೂರಿ ಮತ್ತಿತರ ತಿಂಡಿಯನ್ನೂ (Food) ಕುಳಿತು ಹಾಯಾಗಿ ಸೇವಿಸುತ್ತೆ. ನೀರು (Water) ಬೇಕಿದ್ರೆ ಟ್ಯಾಂಕ್ ಗೆ (Tank) ಮುಟ್ಟಿ ತೋರಿಸುತ್ತೆ ಈ ಕೋತಿ. ಅದನ್ನು ಅರ್ಥ ಮಾಡಿಕೊಂಡು ಜನಾನೇ ಗ್ಲಾಸ್ ನಲ್ಲಿ ನೀರು ಕೊಡುತ್ತಾರೆ.

ಉದ್ಯಾನದಲ್ಲಿ ಬೀಡುಬಿಟ್ಟ ವಾನರ

ಹುಬ್ಬಳ್ಳಿಯ ಮಹಾನಗರ ಪಾಲಿಕೆ ಆವರಣದಲ್ಲಿನ ಉದ್ಯಾನವದದಲ್ಲಿ ಈ ವಾನರ ಬೀಡು ಬಿಟ್ಟಿದೆ. ಹೋಟೆಲ್, ಅಂಗಡಿ ಇತ್ಯಾದಿಗಳ ಕಡೆ ಹೋಗಿ ತನಗೆ ಬೇಕಾದ್ದನ್ನು ಪಡೆದು ತಿಂದುಕೊಂಡು ಬರ್ತಿದೆ. ಜನ ಏನೇ ಕೊಟ್ಟರೂ ತನಗೆ ಬೇಕಾದ್ದನ್ನು ಮಾತ್ರ ತಿಂದು ಉಳಿದದ್ದನ್ನು ಅಲ್ಲಿಯೇ ಬಿಟ್ಟು ಹೋಗ್ತಿದೆ.ಹಳ್ಳಿಯಲ್ಲಿ ಮಂಗನ ದಾಂಧಲೆ

ಒಂದು ತಿಂಗಳ ಹಿಂದೆ ಇಂಥದ್ದೇ ಮಂಗನೊಂದು ಹುಬ್ಬಳ್ಳಿ ತಾಲೂಕಿನ ಕೆಲ ಹಳ್ಳಿಗಳಲ್ಲಿ ದಾಂಧಲೆ ಮಾಡಿತ್ತು. ಕಂಡವರನ್ನು ಕಚ್ಚಿ ಎಸ್ಕೇಪ್ ಆಗುತ್ತಿತ್ತು. ಐದುಕ್ಕೂ ಹೆಚ್ಚು ಜನ ಗಾಯಗೊಂಡು ಆಸ್ಪತ್ರೆ ಪಾಲಾಗಿದ್ದರು. ಅರಣ್ಯ ಇಲಾಖೆ ಸಿಬ್ಬಂದಿ ಬೋನ್ ಹಾಕಿ ಕೊನೆಗೂ ಮಂಗನನ್ನು ಹಿಡಿದು ಮುಂಡಗೋಡ ಅರಣ್ಯ ಪ್ರದೇಶದಲ್ಲಿ ಬಿಟ್ಟು ಬಂದಿತ್ತು.

ಇದನ್ನೂ ಓದಿ: ಮೊಸಳೆ ಜೊತೆ ಮೇಯರ್ ಮದುವೆ! ಅದ್ಧೂರಿ ಕಲ್ಯಾಣೋತ್ಸವಕ್ಕೆ ಸಾಕ್ಷಿಯಾದ ಜನ

ಊರಿಗೆ ಬಂದ ಕರಿ ಮಂಗ, ಸೆಲ್ಫಿಗೆ ಪೋಸ್

ಅದಾದ ಕೆಲ ದಿನಗಳ ನಂತರ ಈ ಕಪ್ಪು ಮಂಗ ಹುಬ್ಬಳ್ಳಿಗೆ ಬಂದಿದೆ. ಕಳೆದ ಒಂದು ವಾರದಿಂದಲೂ ಮಂಗ ಇಲ್ಲಿಯೇ ಠಿಕಾಣಿ ಹೂಡಿದೆ. ಆದರೆ ಯಾರಿಗೆ ಏನೂ ತೊಂದರೆ ಕೊಟ್ಟಿಲ್ಲ ಅಂತ ಹೇಳುತ್ತಿರೋ ನಾಗರೀಕರು ತಮಗನಿಸಿದ್ದನ್ನು ತಿನ್ನೋಕೆ ಕೊಟ್ಟು ಮುಂದೆ ಸಾಗುತ್ತಿದ್ದಾರೆ. ಕೆಲವೊಬ್ಬರಂತೂ ಅದ್ರ ಜೊತೆ ಸೆಲ್ಫೀನೂ ತಗೊಂಡ್ ಹೋಗುತ್ತಿದ್ದಾರೆ. ಯಾರಿಗೂ ತೊಂದರೆ ಮಾಡದ್ದರಿಂದ ಅದ್ರ ಬಗ್ಗೆ ಯಾರೂ ತಡೆಕೆಡಿಸಿಕೊಳ್ಳುತ್ತಿಲ್ಲ.

ವಿಚಾರಣಾಧೀನ ಕೈದಿ ಎಸ್ಕೇಪ್ ಗೆ ವಿಫಲ ಯತ್ನ

ವಿಚಾರಣಾಧೀನ ಕೈದಿಯೋರ್ವ ಜೈಲು ಗೋಡೆ ಹತ್ತಿ ತಪ್ಪಿಸಿಕೊಳ್ಳೋಕೆ ಯತ್ನಿಸಿದ ಘಟನೆ  ಹುಬ್ಬಳ್ಳಿ ಸಬ್ ಜೈಲ್ ನಲ್ಲಿ ನಡೆದಿದೆ. ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಪ್ರಕರಣವೊಂದರಲ್ಲಿ ಬಂಧನಕ್ಕೊಳಗಾಗಿದ್ದ ವಿಚಾರಣಾಧೀನ ಕೈದಿ ತಪ್ಪಿಸಿಕೊಳ್ಳೋಕೆ ಯತ್ನಿಸಿದ್ದಾನೆ. ಜೈಲಿನ ದೊಡ್ಡ ಗೋಡೆ ಹತ್ತಿ ಕೆಳಗೆ ಹಾರಿದ ಕೈದಿ, ನಂತರ ನೃಪತುಂಗ ಬೆಟ್ಟದ ಸಮೀಪ ಅಡಗಿಕೊಳ್ಳಲು ಯತ್ನಿಸಿದ್ದಾನೆ.

ಇದನ್ನೂ ಓದಿ: Gym Fail Photos: ದಯವಿಟ್ಟು ಜಿಮ್​​ನಲ್ಲಿ ಹಿಂಗೆಲ್ಲಾ ಮಾಡ್ಬೇಡಿ! ಸದ್ಯಕ್ಕೆ ಫೋಟೋಸ್​ ನೋಡಿ, ಎಂಜಾಯ್​ ಮಾಡಿ

ಅಲರ್ಟ್ ಆದ ಪೊಲೀಸರಿಂದ ಕೈದಿಯ ಪತ್ತೆ ಕಾರ್ಯ ನಡೆದಿದೆ. ಅಶೋಕ ನಗರ ಠಾಣೆ ಪೊಲೀಸರು ಓಡಿ ಹೋಗುತ್ತಿದ್ದ ಕೈದಿಯ ಬೆನ್ನು ಹತ್ತಿ ಬಂಧಿಸಿದ್ದಾರೆ. ನಂತರ ಜೈಲು ಅಧಿಕಾರಿಗೆ ಒಪ್ಪಿಸಿದ್ದಾರೆ. ಹುಬ್ಬಳ್ಳಿಯ ವಿಶ್ವೇಶ್ವರ ನಗರದಲ್ಲಿರೋ ಸಬ್ ಜೈಲ್ ನಿಂದ ಎಸ್ಕೇಪ್ ಆಗಲು ವಿಫಲ ಯತ್ನ ನಡೆಸಿದ್ದಾನೆ.
Published by:Divya D
First published: