news18-kannada Updated:February 20, 2021, 12:20 PM IST
ಫೋಟೋ: ಟ್ವಿಟ್ಟರ್
ಮಂಗನಿಂದ ಮಾನವ ಎಂಬ ವಿಚಾರ ಗೊತ್ತೇ ಇದೆ. ಹಾಗಾಗಿ ಮಂಗನಿಗೂ ಕೂಡ ಮಾನವನಂತೆ ಬುದ್ದಿಯಿದೆ. ಕೆಲವೊಮ್ಮೆ ಮನುಷ್ಯ ಮಾಡಿದಂತೆ ಮಂಗವೂ ಮಾಡಿ ತೋರಿಸುತ್ತದೆ. ಅಷ್ಟೇ ಏಕೆ ಮಾನವನೊಂದಿಗೆ ಸ್ನೇಹಿತನಾಗಿಯೂ ಇರುತ್ತದೆ. ಕೆಲವೊಮ್ಮ ಆತನಿಗೆ ಸಹಾಯ ಕೂಡ ಮಾಡುತ್ತದೆ. ಅದರಂತೆ ಇಲ್ಲೊಂದು ಮಂಗವಿದೆ. ಅದು ಏನು ಮಾಡುತ್ತಿದೆ ನೋಡಿ.
ಮಂಗವೊಂದು ತರಕಾರಿ ಕಟ್ ಮಾಡುತ್ತಿರುವ ದೃಶ್ಯ ಇದಾಗಿದೆ. ಸದ್ಯ ಸಾಮಾಜಿಕ ಜಾಲತಾಣದಲ್ಲಿ ಈ ದೃಶ್ಯ ವೈರಲ್ ಆಗಿದೆ. ಅನೇಕರು ಮಂಗನ ಸಹಾಯವನ್ನು ನೋಡಿ ಅಚ್ಚರಿ ವ್ಯಕ್ತಿ ಪಡಿಸಿದ್ದಾರೆ.
ಮಹಿಳೆಯೊಬ್ಬರು ತರಕಾರಿ ಹುಡುಕಿ ಕತ್ತರಿಯಲ್ಲಿ ಕಟ್ ಮಾಡಿ ಪಾತ್ರಕ್ಕೆ ಹಾಕುತ್ತಿದ್ದಾರೆ. ಅಲ್ಲೇ ಕುಳಿತ ಮಂಗ ಆ ತರಕಾರಿಯನ್ನ ಚೆನ್ನಾಗಿ ತುಂಡರಿಸಿ ಮಹಿಳೆಗೆ ಸಹಾಯ ಮಾಡುತ್ತಿದೆ.
ಅಂದಹಾಗೆಯೇ ಈ ವಿಡಿಯೋವನ್ನು ಐಆರ್ಎಸ್ ಅಮನ್ ಪ್ರೀತ್ ಎಂಬವರು ಟ್ವಿಟ್ಟರ್ನಲ್ಲಿ ಶೇರ್ ಮಾಡಿದ್ದಾರೆ. ಈಗಾಗಲೇ ದೃಶ್ಯವು 170 ಬಾರಿ ರಿಟ್ವೀಟ್ ಆಗಿದೆ.1.1 ಸಾವಿರ ಜನರು ವಿಡಿಯೋವನ್ನು ವೀಕ್ಷಿಸಿ ಲೈಕ್ ಮಾಡಿದ್ದಾರೆ.
First published:
February 20, 2021, 12:16 PM IST