• Home
  • »
  • News
  • »
  • trend
  • »
  • Monkey's Video: ಟ್ರಿಪ್​ ಹೋದ ಹುಡುಗಿ ಮೇಲೆ ಮಂಗಗಳ ಅಟ್ಯಾಕ್​; ಗರ್ಲ್ ಶಾಕ್​, ಮಂಕಿ ರಾಕ್​!

Monkey's Video: ಟ್ರಿಪ್​ ಹೋದ ಹುಡುಗಿ ಮೇಲೆ ಮಂಗಗಳ ಅಟ್ಯಾಕ್​; ಗರ್ಲ್ ಶಾಕ್​, ಮಂಕಿ ರಾಕ್​!

ವೈರಲ್​ ಆದ ವಿಡಿಯೋ

ವೈರಲ್​ ಆದ ವಿಡಿಯೋ

ಮಂಗನ ದಾಳಿಗೆ ಒಳಗಾಗುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಉತ್ತರವು "ಇಲ್ಲ" ಆಗಿರಬಹುದು. ನೀವು ಪ್ರಾಣಿಗಳಿಂದ ಆದಷ್ಟು ಹುಷಾರಾಗಿರಬೇಕು.

  • Share this:

ಪ್ರವಾಸಕ್ಕೆ (Trip) ಹೋಗುವುದು ಅಂದ್ರೆ ಯಾರಿಗೆ ತಾನೆ ಇಷ್ಟ ಇಲ್ಲ ಹೇಳಿ? ಅದ್ರಲ್ಲೂ ಝೂಗಳಿಗೆ ಹೋಗುವುದು ಅಂದ್ರೆ ಇನ್ನೂ ಸಂತೋಷ ಬಿಡಿ. ಅಲ್ಲಿನ ನಾನಾ ರೀತಿಯ ಪ್ರಾಣಿಗಳನ್ನು ನೋಡುವುದು, ಖುಷಿ ಪಡುವುದು ಹೀಗೆ ಅನೇಕ ದೃಶ್ಯಗಳನ್ನು ನಾವು ಕಾಣುತ್ತೇವೆ. ಆದರೆ ಮಂಗಗಳ (Monkey) ತಂಟೆಗೆ ಹೋಗಿಲ್ಲ ಅಂದ್ರೂ ಕೂಡ, ಅವುಗಳು ಯಾವಾಗ ಹೇಗೆ ಇರ್ತಾವೆ ಎಂದು ಹೇಳಲು ಅಸಾಧ್ಯ. ಇದೀಗ ಇದೆ ತೆರೆನಾದ ವಿಡಿಯೋ ಸಖತ್​ ವೈರಲ್ (Viral)​ ಆಗ್ತಾ ಇದೆ. ಮಂಗನ ದಾಳಿಗೆ ಒಳಗಾಗುವ ಬಗ್ಗೆ ನೀವು ಎಂದಾದರೂ ಯೋಚಿಸಿದ್ದೀರಾ? ಉತ್ತರವು "ಇಲ್ಲ" ಆಗಿರಬಹುದು. ಅದೇ ರೀತಿ, ಈ ಮಹಿಳೆಗಯು ತನ್ನ ಪ್ರವಾಸದ ಸಮಯದಲ್ಲಿ ಮಂಗಗಳ ಗುಂಪೊಂದು ಆಕೆಯ ಮೇಲೆ ದಾಳಿ ಮಾಡುತ್ತದೆ ಎಂದು ಕನಸಲ್ಲೂ ಅಂದುಕೊಂಡಿರುವು ಬಹುಶಃ ಅನುಮಾನ.


ಕೋತಿಗಳ ಕಾಟದಿಂದ ತನ್ನನ್ನು ತಾನು ಬಿಡಿಸಿಕೊಳ್ಳಲು ಮಹಿಳೆ ಕಷ್ಟಪಟ್ಟು ಹೋರಾಡುತ್ತಿರುವುದನ್ನು Instagram ರೀಲ್ ತೋರಿಸುತ್ತದೆ. ಸಖತ್​ ಮೇಕಪ್​ ಮತ್ತು ಒಟ್ಟಾರೆ ಬಟ್ಟೆಯನ್ನು ಧರಿಸಿರುವ ಮಹಿಳೆಗೆ ಅದೃಷ್ಟವಷಾತ್ ಯಾವುದೇ ಗಾಯವಾಗಿಲ್ಲ. ರೀಲ್‌ಗೆ "ಬಂದರ್ ಭಯ್ಯಾ" ಅಂದ್ರೆ, ಮಂಗನಿಗೆ ಸಾಕು ಅಣ್ಣಾ ಎಂದು ಶೀರ್ಷಿಕೆ ನೀಡಲಾಗಿದೆ.


ಈ ರೀಲ್ ಅನ್ನು ನೋಡಿದ ನಂತರ ಸಾಮಾಜಿಕ ಮಾಧ್ಯಮ ಬಳಕೆದಾರರು ಶಾಕ್​ ಆಗಿದ್ದಾರೆ. ಒಬ್ಬ ಬಳಕೆದಾರನು "ದೀದಿ ಮಂಕಿ ಮೇ ಫಾಸ್ ಗೈ (ದಿದಿ ಕೋತಿಗಳಿಂದ ಸಿಕ್ಕಿಬಿದ್ದಿದ್ದಾರೆ)" ಎಂದು ಬರೆದಿದ್ದಾರೆ. ಮತ್ತೊಬ್ಬರು, “ಅರೆ ಫಾಸ್ ಗೈ ರಜಿಯಾ (ರಜಿಯಾ ಸಿಕ್ಕಿಬಿದ್ದಿದ್ದಾಳೆ)” ಎಂದು ಕಾಮೆಂಟ್ ಮಾಡಿದ್ದಾರೆ. ಈ ರೀಲ್‌ನ ಹಾಸ್ಯದ ಅಂಶವು ರಜಿಯಾ ಗುಂಡೋ ಮೇ ಫಾಸ್ ಗಯಿ ಹಾಡಿನ ಮೂಲಕ ಸಿಕ್ಕಿ ಬಿದ್ದಿದ್ದು ಎದ್ದು ಕಾಣುತ್ತದೆ, ಇದು ರೀಲ್‌ನ ವಿಷಯಕ್ಕೆ ಸಾಕಷ್ಟು ಸಾಪೇಕ್ಷವಾಗಿದೆ. ಈ ಹಾಡು 2011 ರ ರೊಮ್ಯಾಂಟಿಕ್ ಕಾಮಿಡಿ ಥ್ಯಾಂಕ್ ಯೂ ನಿಂದ ಬಂದಿದ್ದು, ಅನೀಸ್ ಬಾಜ್ಮೀ ಬರೆದು ನಿರ್ದೇಶಿಸಿದ್ದಾರೆ.


ಇದನ್ನೂ ಓದಿ: ಈ ವ್ಯಕ್ತಿ ಪಾಪ್​ಕಾರ್ನ್​ ಮಾಡೋ ರೀತಿ ಯಾರೂ ಮಾಡಲ್ಲ, ಡೌಟ್ ಇದ್ರೆ ಈ ವಿಡಿಯೋ ನೋಡಿ!


ಕಳೆದ ವರ್ಷ ಇದೇ ರೀತಿಯ ಕೋತಿ ದಾಳಿಯ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ಕಾಣಿಸಿಕೊಂಡಿತು, ಇದರಲ್ಲಿ ಎರಡು ವರ್ಷದ ಪೌಲಿನಾ ಎಂದು ಗುರುತಿಸಲಾದ ಮಗುವನ್ನು ಮಂಗವು ಕ್ರೂರವಾಗಿ ಆಕ್ರಮಣ ಮಾಡಿತು. ವರದಿಗಳ ಪ್ರಕಾರ, ಹುಡುಗಿ ಉಕ್ರೇನ್‌ನಿಂದ ನಿರಾಶ್ರಿತಳು ಎಂದು ವರದಿಯಾಗಿದೆ. ರಷ್ಯಾದ ಟೆರ್ಪಿಗೊರಿವೊ ಗ್ರಾಮದಲ್ಲಿ ಆ ದಾಳಿ ನಡೆದಿದೆ ಎಂದು ವರದಿಗಳು ವಿವರಿಸಿವೆ. ಅಲ್ಲಿ ಅವಳು ನೆರೆಹೊರೆಯವರು ಮತ್ತು ಕುಟುಂಬ ಸ್ನೇಹಿತನಿಂದ ಆಶ್ರಯ ಪಡೆದ ನಂತರ ತನ್ನ ಹೆತ್ತವರೊಂದಿಗೆ ವಾಸಿಸುತ್ತಿದ್ದಳು.
ಮಂಗಗಳು ಒಂದಾದ ಮೇಲೊಂದು ಮೈ ಮೇಲೆ ದಾಳಿ ಮಾಡುತ್ತನೇ ಇತ್ತು. ಇದರಿಂದ ಹುಡುಗಿಗೆ ಏನು ಮಾಡಬೇಕು ಅಂತ ಗೊತ್ತಾಗುವುದಿಲ್ಲ. ಆಕೆಗೆ ಸಧ್ಯ ಯಾವುದೇ ಹಾನಿಯಾಗಿಲ್ಲ ಎಂಬುದು ಸಂತೋಷದ ಸಂಗತಿ. ಹೀಗಾಗಿ ನೀವು ಕೋತಿಗಳಿಂದ ಆದಷ್ಟು ದೂರವಿರಿ. ಯಾವುದೇ ಕಾರಣಕ್ಕೂ ಕೋತಿಗಳ ಚೇಷ್ಟೆಗೆ ಹೋಗಲೇಬೇಡಿ.


ಈ ಹಿಂದೆಯೂ ಕೂಡ ಈ ಕೋತಿಗಳು, ಝೂಗೆ ಬಂದ ಪ್ರವಾಸಿಗರಿಗೆ ಹಾನಿ ಮಾಡಿತ್ತಂತೆ. ಆದ್ರೆ ಯಾವುದೇ ಮುಂಜಾಗೃತ ಕ್ರಮಗಳನ್ನು ತೆಗೆದುಕೊಳ್ಳಲು ಸಾಧ್ಯವಾಗುವುದಿಲ್ಲ ಎಂದು ಝೂ ನ ಮಾಲಿಕರು ತಿಳಿಸಿದ್ದಾರೆ.

First published: