Viral News: ಮಾರ್ಜಾಲಕ್ಕೂ ಬೇಕು ಸ್ಪಾ, ಕೋತಿಗೂ ಬೇಕು ಹೇರ್ ಟ್ರಿಮ್!

Monkey and Cat: ಸಾಮಾನ್ಯವಾಗಿ ಮನುಷ್ಯರು ಮಾಡಿದಂತೆ ಮಾಡುವ ಪ್ರಾಣಿಗಳಲ್ಲಿ ಕೋತಿ ಕೂಡ ಒಂದು.. ಮನುಷ್ಯನ ಪೂರ್ವಜರು ಅಂತ ಕರೆಸಿಕೊಳ್ಳುವ ಕೋತಿಗಳು ಮನುಷ್ಯನನ್ನು ಬಹಳಷ್ಟು ಸಮಯ ಅನುಕರಣೆ ಮಾಡುತ್ತವೆ.. ಮನುಷ್ಯನ ರೀತಿ ಆಹಾರ ಸೇವನೆ ಇಂದ ಹಿಡಿದು ಹಾವಭಾವದ ವರೆಗೂ ಕೋತಿಗಳು ಬಹುತೇಕ ಮನುಷ್ಯನನ್ನೇ ಅನುಕರಿಸುತ್ತವೆ

ಮಾರ್ಜಾಲ

ಮಾರ್ಜಾಲ

  • Share this:
    ಇತ್ತೀಚಿನ ದಿನಗಳಲ್ಲಿ ಸೌಂದರ್ಯಕ್ಕೆ(Beauty) ಬೆಲೆಕೊಡದ ವ್ಯಕ್ತಿಗಳಿಲ್ಲ.. ಇದಕ್ಕಾಗಿ ಜನರು ಮಾಡದ ಪ್ರಯತ್ನಗಳೇ ಇಲ್ಲ.. ಮಹಿಳೆಯರಾಗಿರಲಿ(Women) ಪುರುಷರೇ(Men) ಆಗಿರಲಿ ಪ್ರತಿಯೊಬ್ಬರಿಗೂ ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ಇದ್ದೇ ಇರುತ್ತದೆ.. ಹೀಗಾಗಿ ಸ್ಪಾ(Spa) ಬ್ಯೂಟಿ ಪಾರ್ಲರ್(Beauty parlour), ಹೋಮ್ ರಿಮಿಡಿಸ್(Home remedies) ಅಂತೇಲ್ಲ ನಾನಾ ಪ್ರಯತ್ನ ಮಾಡಿ ತಮ್ಮ ಸೌಂದರ್ಯ ಕಾಪಾಡಿಕೊಳ್ಳಲು ಬಯಸುತ್ತಾರೆ.. ವಿಚಿತ್ರ ಅಂದ್ರೆ ಈ ದೇಹ(Body) ಸೌಂದರ್ಯದ ಕಾಳಜಿ ಕೇವಲ ಮನುಷ್ಯರಿಗೆ(Human) ಮಾತ್ರವಲ್ಲ ಪ್ರಾಣಿಗಳಿಗೂ(Animals) ಕೂಡ ಹೆಚ್ಚಾಗಿದೆ. ಇದಕ್ಕೆ ಉತ್ತಮ ಉದಾಹರಣೆ ಅಂದ್ರೆ ಮನುಷ್ಯರು ತಮ್ಮ ಸಾಕು ನಾಯಿಗಳನ್ನು ಕರೆದುಕೊಂಡು ಹೋಗಿ ಅವುಗಳಿಗೆ, ಪಾರ್ಲರ್ ಗಳಲ್ಲಿ ಚಂದವಾಗಿ ಅಲಂಕಾರ ಮಾಡಿಸುವುದರ ಜೊತೆಗೆ ರೂಗಳಿಗೆ ವಿವಿಧ ಬಗೆಯ ಹೇರ್ ಸ್ಟೈಲ್ ಗಳನ್ನು ಮಾಡಿಸುತ್ತಾರೆ.. ಆದರೆ ಇದು ಸ್ವಲ್ಪ ಹಳೆಯ ವಿಷಯ. ಬ್ರೇಕ್ ಈಗಿನ ಹೊಸ ವಿಷಯ ಏನಪ್ಪಾ ಅಂದ್ರೆ ಮಂಗಗಳಿಗೂ ಕೂಡ ಸೌಂದರ್ಯದ ಕಾಳಜಿ ಹೆಚ್ಚಾಗಿದೆ.. ಹೀಗಾಗಿ ಇತ್ತೀಚಿನ ದಿನಗಳಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಪ್ರಾಣಿಗಳು ತಮ್ಮ ಸೌಂದರ್ಯದ ಬಗ್ಗೆ ಕಾಳಜಿ ವಹಿಸುತ್ತಿರುವ ವಿಡಿಯೋಗಳು ಸಾಕಷ್ಟು ವೈರಲ್ ಆಗುತ್ತಿದೆ..

    ಪಾರ್ಲರ್ ಗೆ ಬಂದು ಟ್ರೀಮ್ ಮಾಡಿಸಿಕೊಂಡ ಮಂಗ

    ಐಪಿಎಸ್ ಅಧಿಕಾರಿ ರೂಪಿನ್ ಶರ್ಮಾ ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ವಿಡಿಯೋ ಒಂದರಲ್ಲಿ ಕೋತಿಯೊಂದು ಪಾರ್ಲರ್ ಗೆ ಬಂದು ಟ್ರೀಮ್ ಮಾಡಿಸಿಕೊಂಡಿದೆ..

    ಇದನ್ನೂ ಓದಿ: ಯಾಕೆ ಬಂದಿದ್ದೀಯಾ? ನಿನ್ನ ನೋಡೋಕೆ! ಸಿದ್ದರಾಮಯ್ಯರ ಜೊತೆ ಪುಟಾಣಿ ಪೋರಿ ಮಾತುಕತೆ: ವಿಡಿಯೋ ನೋಡಿ

    ವಿಡಿಯೋದಲ್ಲಿ ಏನಿದೆ..?

    ಸಾಮಾನ್ಯವಾಗಿ ಮನುಷ್ಯರು ಮಾಡಿದಂತೆ ಮಾಡುವ ಪ್ರಾಣಿಗಳಲ್ಲಿ ಕೋತಿ ಕೂಡ ಒಂದು.. ಮನುಷ್ಯನ ಪೂರ್ವಜರು ಅಂತ ಕರೆಸಿಕೊಳ್ಳುವ ಕೋತಿಗಳು ಮನುಷ್ಯನನ್ನು ಬಹಳಷ್ಟು ಸಮಯ ಅನುಕರಣೆ ಮಾಡುತ್ತವೆ.. ಮನುಷ್ಯನ ರೀತಿ ಆಹಾರ ಸೇವನೆ ಇಂದ ಹಿಡಿದು ಹಾವಭಾವದ ವರೆಗೂ ಕೋತಿಗಳು ಬಹುತೇಕ ಮನುಷ್ಯನನ್ನೇ ಅನುಕರಿಸುತ್ತವೆ.. ಅದೇ ರೀತಿ ಈಗ ಕೋತಿಯೊಂದು ಪಾರ್ಲರ್ ಗೆ ಬಂದು ಮನುಷ್ಯರಂತೆಯೇ ತನ್ನ ಸೌಂದರ್ಯದ ಬಗ್ಗೆಯೂ ಕಾಳಜಿ ವಹಿಸಿದೆ.



    ವಿಡಿಯೋದಲ್ಲಿ ಕೋತಿಯು ತನ್ನ ಕೇಶ ವಿನ್ಯಾಸಕ್ಕೆ ಕುರ್ಚಿಯ ಮೇಲೆ ಕುಳಿತಿದ್ದು, ಕ್ಷೌರಿಕ ಕೋತಿಯ ಮುಖದತ್ತ ಟ್ರಿಮ್ಮರ್‌ ತರುತ್ತಿದ್ದಂತೆ ಅದರ ಪ್ರತಿಕ್ರಿಯೆಗೆ ಸದ್ಯ ನೆಟ್ಟಿಗರು ಹಾಸ್ಯಲೋಕದಲ್ಲಿಯೇ ತೆಲುವಂತೆ ಮಾಡಿದೆ. ಕ್ಷೌರಿಕನ ಮಾತನ್ನು ಚಾಚು ತಪ್ಪದೆ ಕೇಳುತ್ತಿದ್ದ ಕೋತಿಯನ್ನು ಕಂಡು ಎಲ್ಲರೂ ಅಚ್ಚರಿಗೊಂಡಿದ್ದಾರೆ ಮತ್ತು ವಿಡಿಯೋವನ್ನು ರಿಪೋಸ್ಟ್ ಮಾಡಿ ಖುಷಿಪಟ್ಟಿದ್ದಾರೆ.

    ಇದನ್ನೂ ಓದಿ: ಕೇವಲ ರಬ್ಬರ್ ಬ್ಯಾಂಡ್​ನಿಂದ ಗಟ್ಟಿ ಮುಚ್ಚಳ ತೆಗೆದ ಮಹಿಳೆ- ವೈರಲ್ ಆಯ್ತು ಟಿಕ್ ಟಾಕ್ ವಿಡಿಯೋ

    ಓನರ್ ಜೊತೆಗೆ ಸ್ಪಾ ಎಂಜಾಯ್ ಮಾಡಿದ ಬೆಕ್ಕು..

    ಇನ್ನು ಕೋತಿ ಮಾತ್ರವಲ್ಲದೆ ಬೆಕ್ಕುಗಳಿಗೂ ಕೂಡ ಸೌಂದರ್ಯ ಪ್ರಜ್ಞೆ ಇದೆ ಅನ್ನೋದು ನಿಮಗೆ ಗೊತ್ತಿರಲಿ. ಸಾಮಾನ್ಯವಾಗಿ ಮನೆಯಲ್ಲಿ ಸಾಕುವ ಬೆಕ್ಕುಗಳು ರಾಜಾ ವೈಭೋಗದಿಂದ ಬದುಕುತ್ತವೆ.. ಮಾಲೀಕರು ಆ ಬೆಕ್ಕುಗಳನ್ನು ಕರೆದುಕೊಂಡು ಹೋಗಿ ಬೆಕ್ಕು ಗಳಿಗೂ ವಿವಿಧ ರೀತಿಯ ಅಲಂಕಾರಗಳನ್ನು ಪಾರ್ಲರ್ ಗಳಲ್ಲಿ ಮಾಡಿಸುವುದು ಸಹಜ.. ಇತ್ತೀಚಿಗೆ ವೈರಲ್ ಆದ ವಿಡಿಯೋ ಒಂದರಲ್ಲಿ ಮಹಾರಾಜನ ರೀತಿ ಮಾಲೀಕನ ಜೊತೆ ಸೇರಿಕೊಂಡು ಬೆಕ್ಕೊಂದು ಸ್ಪಾ ಎಂಜಾಯ್ ಮಾಡಿದೆ..



    ವಿಡಿಯೋದಲ್ಲಿ ಏನಿದೆ..?

    ಟಿಕ್ ಟಾಕ್ ನಲ್ಲಿ ವೈರಲ್ ಆಗಿರುವ ಈ ವಿಡಿಯೋದಲ್ಲಿ, ಬೆಕ್ಕೊಂದು ಮುಖಕ್ಕೆ ಫೇಸ್ ಪ್ಯಾಕ್ ಹಾಕಿಕೊಂಡು, ಕಣ್ಣಿನ ಮೇಲೆ ಸೌತೆಕಾಯಿ ಇಟ್ಟು ಮಲಗಿರುವ ಮಾಲೀಕನ ಪಕ್ಕಾ ತಾನು ಸಹ ಕಣ್ಣಿನ ಮೇಲೆ ಸೌತೆಕಾಯಿ ಇಟ್ಟುಕೊಂಡು ಸ್ಪಾ ಎಂಜಾಯ್ ಮಾಡಿದೆ.. ಈ ವೇಳೆ ಅಲ್ಲಿಗೆ ಬಂದ ಮಾಲಕಿ ಬೆಕ್ಕಿನ ಕಣ್ಣಿನ ಮೇಲೆ ಇದ್ದ ಸೌತೆಕಾಯಿ ತೆಗೆದಿದ್ದಾಳೆ.. ಈ ವೇಳೆ ಬೆಕ್ಕು ಪುಟ್ಟ ಮಗುವಿನಂತೆ ಹಠ ಮಾಡಿದೆ..ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗುತ್ತಿದೆ..
    Published by:ranjumbkgowda1 ranjumbkgowda1
    First published: