ಮದುವೆಯು (Marriage) ಅನೇಕರಿಗೆ ಜೀವನದ ಅತ್ಯಂತ ಸಂತೋಷದಾಯಕ ಮತ್ತು ಮರೆಯಲಾಗದ ಕ್ಷಣಗಳಲ್ಲಿ ಒಂದಾಗಿರುತ್ತದೆ. ಒಂದ ಕಾಲದಲ್ಲಿ ಮದುವೆಯ ದಿನವೇ ಗಂಡು ಹೆಣ್ಣು ಕಲ್ಯಾಣ ಮಂಟಪದಲ್ಲಿ ಮುಖ ನೋಡಿಕೊಳ್ಳುತ್ತಾ ಇದ್ದವರು ಇದೀಗ ಪ್ರೀ ವೆಡ್ಡಿಂಗ್ (Pre Wedding) ಹೆಸ್ರಲ್ಲಿ ಒಂದು ಸಿನಿಮಾ, ಆಲ್ಬಮ್ ಸಾಂಗ್ನೇ ಮಾಡಿ ಬಿಡ್ತಾರೆ. ವೆಡ್ಡಿಂಗ್ ಫೋಟೋಶೂಟ್, ಪ್ರಿ ವೆಡ್ಡಿಂಗ್ ಫೋಟೋಶೂಟ್ (Photoshoot) ಮಾಡುವ ಮೂಲಕ ಆ ಕ್ಷಣಗಳನ್ನು ಆನಂದಿಸುತ್ತಾರೆ. ಅದಕ್ಕಾಗಿಯೇ ಬೇರೆ ಬೇರೆ ಜಾಗಗಳಿಗೆ ಹೋಗುತ್ತಾರೆ, ಅದುವೇ ಒಂದು ಚಿಕ್ಕ ಹನಿಮೂನ್ ಅಂತ ಹೇಳಿದ್ರೂ ತಪ್ಪಾಗಲಾರದು. ಯಾಕಂದ್ರೆ ಈಗಿನ ಪ್ರಿ ವೆಡ್ಡಿಂಗ್ ಶೂಟ್ ಯಾವ್ ಯಾವ್ ತರ ಇರುತ್ತೆ ಅಂದ್ರೆ ಹೇಳಲು ಅಸಾಧ್ಯ ಬಿಡಿ. ರೊಮಾಂಟಿಕ್ (Romantic) ಇಂದ ಹಿಡಿದು ವಿಚಿತ್ರವಾದ ಬಟ್ಟೆಗಳವರೆಗೂ ಏನು ಕಡಿಮೆ ಇರೋಲ್ಲ. ಫೋಟೋಶೂಟ್ ಸಮಯದಲ್ಲಿ ಕೆಲವು ಆಸಕ್ತಿದಾಯಕ ಘಟನೆಗಳು (Situation) ಸಹ ನಡೆಯುತ್ತವೆ.
ಇದೀಗ ಇಂತದ್ದೇ ಒಂದು ಫೋಟೋ ಶೂಟ್ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗ್ತಾ ಇದೆ. ವಿಡಿಯೋ ನೋಡಿದ್ರೆ ನೀವು ಕೋಡ ಹೊಟ್ಟೆ ತುಂಬಾ ನಗ್ತೀರಾ.
ಇದನ್ನೂ ಓದಿ: ವಿಷದ ಹಾವನ್ನೂ ತಿಂತಾರೆ, ಜೇಡವನ್ನೂ ಹುರಿದು ಟೇಸ್ಟ್ ಮಾಡ್ತಾರೆ! ಕಣ್ಣಿಗೆ ಕಂಡಿದ್ದೆಲ್ಲಾ ಗುಳುಂ ಸ್ವಾಹಾ!
ಇತ್ತೀಚೆಗೆ ಕೇರಳದಲ್ಲಿ ಫೋಟೋ ಶೂಟ್ ಮಾಡುತ್ತಿದ್ದ ದಂಪತಿಯನ್ನು ಓಡಿಸಲು ಹಿಂದೆ ನಿಂತಿದ್ದ ಆನೆಯೊಂದು ತೆಂಗಿನ ಮರದ ಗರಿಯನ್ನು ಎಸೆದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ನೋಡಿದ್ದೇವೆ. ಅದಂತೂ ಸಖತ್ ವೈರಲ್ ಆಗಿತ್ತು. ಪಾಪ ಆ ಗಂಡನಿಗೆ ಎಷ್ಟು ದೂರದಿಂದ ಆ ತೆಂಗಿನ ಗರಿಯು ಆನೆ ಎಸೆದಿದೆ ಅಂದ್ರೆ ಅಬ್ಬಬ್ಬಾ, ಸಖತ್ ನೋವು ಆಗಿರಬಹುದು ಪಾಪ. ಇದೀಗ ಅದೇ ತರದಾದ ವಿಡಿಯೋ ವೈರಲ್ ಆಗಿದೆ.
ಏನಿದೆ ವಿಡಿಯೋದಲ್ಲಿ?
ಪಾರ್ಕ್ನಲ್ಲಿ ದಂಪತಿಗಳ ಫೋಟೋ ಶೂಟ್ ನಡೆಯುತ್ತಿತ್ತು. ಮದುಮಗನು ತನ್ನ ಸಂಗಾತಿಯೊಂದಿಗೆ ಕಿಸ್ ಕೊಡುವ ವೆಡ್ಡಿಂಗ್ ಶೂಟ್ ನಡೀತಾ ಇತ್ತು. ಆ ಕೋತಿಗೆ ಏನು ಅನಿಸ್ತೋ ಏನೋ? ಅದು ಮತ್ತು ಅದರ ಮರಿಯನ್ನು ಕರೆದುಕೊಂಡು ಬಂದು ಗಂಡು ಮತ್ತು ಹೆಣ್ಣಿನ ಮಧ್ಯೆ ಬಂದು ನಂತಿತು. ಇದಾದ ಬಳಿಕ ಗಂಡಿನ ಕೈ ಮೇಲೆ ಎಷ್ಟು ಚೆಂದ ಕುಳಿತಕೊಂಡಿದೆ ನೋಡಿ. ವಿಡಿಯೋದಲ್ಲಿ ಕೋತಿಯು ತನ್ನ ಮರಿಯನ್ನು ಹೊತ್ತುಕೊಂಡು ಅವರ ಬಳಿಗೆ ಬಂದಿತು. ಇದರಿಂದ ಗಾಬರಿಗೊಂಡ ವಧು ಹಿಂದೆ ಸರಿದರು, ವರನ ಸೊಂಟದ ಮೇಲೆ ಮರಿ ಹಾಕಿಕೊಂಡ ಕೋತಿ ಫೋಟೋಗೆ ಪೋಸ್ ನೀಡಲಾರಂಭಿಸಿದೆ. ಸ್ವಲ್ಪ ಸಮಯದಲ್ಲೇ ಇಬ್ಬರೂ ಒಬ್ಬರನ್ನೊಬ್ಬರು ಪ್ರೀತಿಸತೊಡಗಿದರು. ಮಂಗ ಹೋದ ನಂತರ ಮತ್ತೆ ಇಬ್ಬರು ಫೋಟೋ ಶೂಟ್ ಮುಂದುವರೆಸಿದ್ದಾರೆ. ಆದರೆ, ಈ ಮಂಗ ಮತ್ತು ಅದರ ಮರಿ ಒಟ್ಟಿಗೆ ಅವರಿಬ್ಬರನ್ನೇ ನೊಡುತ್ತಾ ಇತ್ತು.
View this post on Instagram
ಬ್ರೇಕಿಂಗ್ ನ್ಯೂಸ್ ಎಲ್ಲರಿಗಿಂತ ಮೊದಲು ನ್ಯೂಸ್ 18 ಕನ್ನಡದಲ್ಲೇ ಓದಿ. ಪ್ರತಿದಿನದ ತಾಜಾ ಸುದ್ದಿ, ಲೈವ್ ನ್ಯೂಸ್ ಅಪ್ಡೇಟ್ ನಂಬಿಕೆಯುಳ್ಳ ನ್ಯೂಸ್ 18 ಕನ್ನಡದಲ್ಲೇ ಪಡೆಯಿರಿ