• Home
  • »
  • News
  • »
  • trend
  • »
  • Viral Video: ತುತ್ತು ಅನ್ನ ಕೊಟ್ಟವ ಸತ್ತು ಮಲಗಿದಾಗ ಮರುಗಿದ ಮಂಗ! ಶವದ ಮುಂದೆ ಕೋತಿ ಗೋಳಾಟ

Viral Video: ತುತ್ತು ಅನ್ನ ಕೊಟ್ಟವ ಸತ್ತು ಮಲಗಿದಾಗ ಮರುಗಿದ ಮಂಗ! ಶವದ ಮುಂದೆ ಕೋತಿ ಗೋಳಾಟ

ಮಂಗನ ಗೋಳಾಟ

ಮಂಗನ ಗೋಳಾಟ

Emotional video: ಪ್ರಾಣಿಗಳಿಗೂ ಭಾವನೆ ಇರುತ್ತದೆ. ಅವುಗಳನ್ನು ಸಾಕಿ ಸಲಹಿದರೆ ಮಾತ್ರ ಮನುಷ್ಯನನ್ನು ಅವಲಂಬಿಸುವುದಲ್ಲ. ಒಂದು ಬಾರಿ ಒಂದು ಹಿಡಿ ಅನ್ನ ಹಾಕಿದ್ದರೂ ಅವುಗಳ ಜೀವನ ಪರ್ಯಂತ ನೆನಪಿಟ್ಟುಕೊಂಡಿರುತ್ತದೆ.

  • Share this:

ಮಾನವನಿಗೆ ಮಾನವನೇ ಶತ್ರು (Enemy) ಎಂಬ ಮಾತಿದೆ. ಅಂದರೆ ಅದೆಷ್ಟೇ ಜೊತೆಗಿದ್ದರೂ, ಪ್ರತಿಯೊಂದೂ ಹೇಳಿಕೊಂಡರೂ ಎಂದಾದರೂ ಅದರಿಂದ ಪ್ರತಿಫಲವನ್ನು ನಿರೀಕ್ಷಿಸುತ್ತಾನೆ. ಇದಕ್ಕಾಗಿ ಹಲವಾರು ಉದಾಹರಣೆಗಳು ಈಗಾಗಲೇ ನಿಮ್ಮ ಜೀವನದಲ್ಲಿಯೂ ನಡೆದಿರಬಹುದು. ಹೀಗಾಗಿ ಅದೆಷ್ಟೋ ಜನ ಮನುಷ್ಯರಿಗಿಂತ ಪ್ರಾಣಿಗಳೇ (Animal) ವಾಸಿ ಎಂದು ಹೇಳುವ ಮಾತಿದೆ. ಅತಿಯಾಗಿ ಪ್ರಾಣಿಗಳನ್ನು ಸಾಕಲು ಕಾರಣಗಳು ಕೂಡ ಇದೇ ಇರುತ್ತದೆ. ಯಾಕೆ ಈ ಮಾತು ಬಂತೆಂದರೆ ಪ್ರಾಣಿಗಳಿಗೆ ಒಂದು ದಿನ, ಒಂದು ಕ್ಷಣ ನಾವು ಅವುಗಳಿಗೆ ಸಹಾಯ ಮಾಡಿದ್ದರೆ ಸಾಕು ಅಥವಾ ಆಹಾರವನ್ನು (Food) ನೀಡಿದರೆ ಸಾಕು ಜೀವನ ಪರ್ಯಂತ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ.


ಯಾವುದೇ ಸಹಾಯ ಬೇಕೆಂದರೂ ಕೂಡ ಮಾಡಿಕೊಡುತ್ತದೆ. ಪ್ರಾಣಿಗಳಿಗೂ ಮನುಷ್ಯನ ಮೇಲೆ ಭಾವನಾತ್ಮಕವಾಗಿ ನಂಟಿದೆ ಎಂದು ಹೇಳಿದರೂ ತಪ್ಪಾಗಲಾರದು. ಅದೇ ಮನುಷ್ಯನು ಯಾವ ರೀತಿಯಲ್ಲಿ ಪ್ರಾಣಿಗಳೊಡನೆ ಪ್ರತಿಕ್ರಿಯಿಸುತ್ತಾನೆ ಎಂಬುದು ಮುಖ್ಯವಾಗುತ್ತದೆ. ಅವುಗಳಿಗೆ ರೇಗಲೂ ಗೊತ್ತು ಅಷ್ಟೇ ಸಮಾಧಾನ ಮಾಡಲೂ ಗೊತ್ತು. ಇದೀಗ ಇಂತಹದ್ದೇ ವಿಷಯಕ್ಕೆ ಸಂಬಂಧ ಪಟ್ಟ ಹೃದಯ ವಿದ್ರಾವಕ ವಿಡಿಯೋ ವೈರಲ್​ ಆಗಿದೆ.


ಕೇವಲ 45 ಸೆಕೆಂಡುಗಳ ಕಾಲ ಇರುವ ಈ ವಿಡಿಯೋ ನೋಡ್ತಾ ಇದ್ರೆ ಎಂಥವರಿಗಾದರೂ ಮನಸ್ಸು ಕರಗುತ್ತೆ. ಪ್ರತಿನಿತ್ಯ ಮನೆಗೆ ಬಂದವನು ಮನೆಯ ಮರದಲ್ಲಿ ಇದ್ದ ಒಂದು ಕೋತಿಗೆ ಆಹಾರವನ್ನು ನೀಡುತ್ತಿದ್ದ. ಅದು ಕೂಡ ಸಂತೋಷದಿಂದ ಸೇವಿಸುತ್ತಿತ್ತು. ಹೇಗಿರುವಾಗ ಒಂದು ದಿನ ಆಹಾರ ಕೊಡುವವನು ಸಾಯುತ್ತಾನೆ. ಶವವನ್ನು ಮನೆಯ ಮುಂದೆ ಇಟ್ಟ ಸಮಯದಲ್ಲಿ ಪ್ರತಿಯೊಬ್ಬರೂ ದುಖಃದಲ್ಲಿ ಇರುತ್ತಾರೆ. ಆಗ ಆ ಕೋತಿಯು ಆಗಮಿಸಿ ಶವದ ಪಕ್ಕದಲ್ಲಿ ಕುಳಿತು ಆತನನ್ನು ಎಬ್ಬಿಸಲು ಪ್ರಯತ್ನ ಪಡುತ್ತದೆ. ಅದಕ್ಕೆ ಏನು ಮಾಡಬೇಕೆಂದು ತಿಳಿಯದೇ ಆಚೆ ಈಚೆ ನೋಡುತ್ತದೆ, ಅವನ ಎದೆಗೆ ತಟ್ಟಿ ಕರೆಯುತ್ತದೆ, ಹೀಗೆ ಎದ್ದೇಳಿಸಲು ಹರಸಾಹಸನೇ ಪಡುತ್ತದೆ ಆ ಕೋತಿ.


ಇದನ್ನೂ ಓದಿ: ಸೊಳ್ಳೆಗಳು ನಿಮಗೇ ಹೆಚ್ಚು ಕಚ್ಚುತ್ತಾ? ಈ ಕುರಿತು ಸಂಶೋಧನೆ ತಿಳಿಸಿದ ಸತ್ಯ ಇದು!


ಶವದ ಮನೆಯಲ್ಲಿ ನೆರೆದಿದ್ದ ಯಾರೊಬ್ಬರೂ ಆ ಕೋತಿಯನ್ನು ಓಡಿಸಲು ಪ್ರಯತ್ನ ಮಾಡುವುದಿಲ್ಲ. ಅದರ ಭಾವನೆಯನ್ನು ನೆರೆದಿದ್ದವರು ಅರ್ಥಮಾಡಿಕೊಂಡಿದ್ದರು. ಮೊದಲೇ ಎಲ್ಲರೂ ದುಖಃದಲ್ಲಿ ಇದ್ದರು. ಅಂತಹ ಸಮಯದಲ್ಲಿ ಈ ಕೋತಿಯು ಈ ಕಾರ್ಯವನ್ನು ಮಾಡುವುದನ್ನು ನೋಡಿ ನೆರೆದಿದ್ದವರೆಲ್ಲರಿಗೂ ಬಿಕ್ಕಳಿಸಿ ಅಳುವ ಹಾಗೆ ಆಗುತ್ತದೆ.ಈ ವಿಡಿಯೋವನ್ನು ಟ್ವಿಟ್ಟರ್​ ಬಳಕೆದಾರರಾದ ಅಸ್ಲಾವ್​ ಸಿಸಿ ಅವರು ಮೈಕ್ರೋಬ್ಲಾಗಿಂಗ್​ ಸೈಟ್​ ಟ್ವಿಟರ್​​ನಲ್ಲಿ ಹಂಚಿಕೊಂಡಿದ್ದಾರೆ. ಸದ್ಯಕ್ಕೆ 1,000 ವೀಕ್ಷಣೆಗಳು ಮತ್ತು 67 ಲೈಕ್​ಗಳನ್ನು ಪಡೆದುಕೊಂಡಿದೆ.


ಇದನ್ಣು ಓದಿ: ಭಾರತದ ನಾಯಿಯನ್ನು ದತ್ತು ಪಡೆದ ಕೆನಡಾ ದಂಪತಿ! ವಿದೇಶಕ್ಕೆ ಪ್ರಯಾಣ ಬೆಳಸಿದ ಶ್ವಾನ


ಕಾಮೆಂಟ್​ಗಳ ಮೂಲಕ ಟ್ವಿಟ್ಟರ್​ ಬಳಕೆದಾರರು ತಮ್ಮ ಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಈ ವಿಡಿಯೋವನ್ನು ನೋಡಿದರೆ ನಿಜಕ್ಕೂ ಕಲ್ಲು ಮನಸ್ಸಿನವನಿಗೂ ಕರಗುತ್ತದೆ. ಇದಕ್ಕೆ ಸಂಬಂಧ ಪಟ್ಟಂತೆ ಸಾಮಾಜಿಕ ಮಾಧ್ಯಮಗಳಲ್ಲಿ ಮಾನವರು ಮತ್ತು ಪ್ರಾಣಿಗಳು ವಿಶೇಷ ಬಂಧವನ್ನು ಹಂಚಿಕೊಳ್ಳುವುದನ್ನು ತೋರಿಸುವ ಹಲವಾರು ಕ್ಲಿಪ್​ಗಳಿವೆ. ಒಟ್ಟಿನಲ್ಲಿ  ಪ್ರಾಣಿಗಳು ಮಾನವನ ಜೊತೆ ಸಂಬಂಧವನ್ನು ಬೆಳೆಸಲು  ಆತ ಸಾಕಲೇಬೇಕು ಅಂತೇನು ಇಲ್ಲ. ಮಾತನಾಡಿಸುತ್ತಾ, ಆಹಾರವನ್ನು ಆಗಾಗ ಕೊಟ್ಟರೂ ನೆನಪಿನಲ್ಲಿ ಇಟ್ಟುಕೊಂಡಿರುತ್ತದೆ ಎಂದು ಹೇಳಲು ಈ ವಿಡಿಯೋನೇ ಸಾಕ್ಷಿಯಾಗಿದೆ.

First published: