Money Saving: ದಿನಕ್ಕೆ 416 ರೂ ಉಳಿತಾಯ ಮಾಡಿದ್ರೆ 10 ವರ್ಷಗಳಲ್ಲಿ ನೀವು ಕೋಟ್ಯಧಿಪತಿಯಾಗುತ್ತೀರಾ ! ಸರ್ಕಾರದ ಈ ಸೇವಿಂಗ್ ಸ್ಕೀಮ್ ಬಗ್ಗೆ ಗೊತ್ತಾ?

ಸರಿಯಾಗಿ ಪ್ಲಾನ್ ಮಾಡಿದ್ರೆ ಪ್ರತಿದಿನ ಕೇವಲ 416 ರೂಪಾಯಿ ಉಳಿಸಿಬಿಟ್ಟರೆ ಸಾಕು, 10 ವರ್ಷ ಕಳೆಯುವಷ್ಟರಲ್ಲಿ ನಿಮ್ಮ ಖಾತೆಯಲ್ಲಿ 1 ಕೋಟಿ ರೂಪಾಯಿ ಇರುವುದು ಗ್ಯಾರಂಟಿ. ಇದನ್ನು ಹೇಗೆ ಮಾಡೋದು, ಲೆಕ್ಕಾಚಾರಗಳೇನು? ಇಲ್ಲಿದೆ ಪೂರ್ಣ ವಿವರ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:
Money Saving Tips: ದುಡ್ಡು ಎಷ್ಟೇ ಉಳಿಸೋಕೆ ಟ್ರೈ ಮಾಡಿದ್ರೂ ಯಾಕೋ ಕೈಯಲ್ಲಿ ಉಳಿಯುತ್ತಲೇ ಇಲ್ಲ ಅನ್ನೋದು ಬಹು ಜನರ ಕೊರಗು. ಯಾವ ರೀತಿ ದುಡ್ಡಿನ ಉಳಿತಾಯ ಮಾಡಿದ್ರೆ ಭವಿಷ್ಯದಲ್ಲಿ ನಿಶ್ಚಿಂತೆಯಿಂದ ಕಾಲ ಕಳೆಯಬಹುದು ಎಂದು ಎಲ್ಲರೂ ಚಿಂತಿಸ್ತಾರೆ. ಆದ್ರೆ ಹಾಗಂತ ಕಡಿಮೆ ಸಮಯದಲ್ಲಿ ಹೆಚ್ಚು ಬಡ್ಡಿಯ ಆಸೆಗೆ ಎಲ್ಲೆಲ್ಲೋ ಹೂಡಿಕೆ ಮಾಡಲು ಹೋಗಿ ಕೈಸುಟ್ಟುಕೊಂಡವರೇ ಜಾಸ್ತಿ. ಹಾಗೆಲ್ಲಾ ಅಡ್ಡದಾರಿಗಳನ್ನು ನಂಬದೆ ಕೇಂದ್ರ ಸರ್ಕಾರದ ಅತ್ಯಂತ ನಂಬಿಕಸ್ಥ ಹಣ ಹೂಡಿಕೆ ಯೋಜನೆಯಾದ PPF (Public Provident Fund) ಪಿಪಿಎಫ್ ಮೂಲಕವೇ ಕಡಿಮೆ ಹಣದಲ್ಲಿ ಹೆಚ್ಚು ಲಾಭ ಪಡೆಯುವ ಮಾರ್ಗವಿದೆ. ಸರಿಯಾಗಿ ಪ್ಲಾನ್ ಮಾಡಿದ್ರೆ ಪ್ರತಿದಿನ ಕೇವಲ 416 ರೂಪಾಯಿ ಉಳಿಸಿಬಿಟ್ಟರೆ ಸಾಕು, 10 ವರ್ಷ ಕಳೆಯುವಷ್ಟರಲ್ಲಿ ನಿಮ್ಮ ಖಾತೆಯಲ್ಲಿ 1 ಕೋಟಿ ರೂಪಾಯಿ ಇರುವುದು ಗ್ಯಾರಂಟಿ. ಇದನ್ನು ಹೇಗೆ ಮಾಡೋದು, ಲೆಕ್ಕಾಚಾರಗಳೇನು? ಇಲ್ಲಿದೆ ಪೂರ್ಣ ವಿವರ.

ಅತ್ಯಂತ ಸುರಕ್ಷಿತ ಹೂಡಿಕೆಗಳಲ್ಲಿ ಒಂದಾದ ಸಾರ್ವಜನಿಕ ಪ್ರಾವಿಡೆಂಟ್ ನಿಧಿ (Public Provident Fund - PPF) ನಿಮಗೆ ಒಳ್ಳೆ ರಿಟರ್ನ್ಸ್ ಕೊಡುತ್ತದೆ. ಈ ಸ್ಕೀಂನಲ್ಲಿ ನಿಮ್ಮ ಹೂಡಿಕೆಯನ್ನು ಕೊಂಚ ದೊಡ್ಡದಾಗಿ ಪ್ಲಾನ್ ಮಾಡಿದರೆ, ನಿಮ್ಮ ಪುಟ್ಟ ಹೂಡಿಕೆಗಳನ್ನು ಸುದೀರ್ಘಾವಧಿಯ ಯೋಜನೆಯೊಂದರ ಮೂಲಕ ಕೋಟಿಯ ಮಟ್ಟದಲ್ಲಿ ಬೆಳೆಸಬಹುದಾಗಿದೆ. ಈಗಾಗಲೇ ಅನೇಕರು ಈ ರೀತಿಯ ಪಕ್ಕಾ ಲೆಕ್ಕಾಚಾರಗಳೊಂದಿಗೆ ಪಿಪಿಎಫ್ ಮೂಲಕ ತಮ್ಮ ಭವಿಷ್ಯ ಭದ್ರ ಮಾಡಿಕೊಳ್ಳುವುದು ಮಾತ್ರವಲ್ಲ, ತಮ್ಮ ಕಾಲಾನಂತರ ತಮ್ಮ ಕುಟುಂಬಕ್ಕೂ ಆರ್ಥಿಕ ಸಬಲತೆ ಕೊಟ್ಟಿರುವ ಸಾಕಷ್ಟು ನಿದರ್ಶನಗಳಿವೆ.

ಪ್ರತಿ ದಿನ 416 ರೂಪಾಯಿ ಅಂದರೆ ಪ್ರತಿ ತಿಂಗಳು ಸುಮಾರು 12,500 ರೂಪಾಯಿಯಷ್ಟನ್ನು ನಾವು ಪಿಪಿಎಫ್ ಖಾತೆಯಲ್ಲಿ ಜಮಾ ಮಾಡಬೇಕು. ಅಂದರೆ ಇಷ್ಟು ಹಣವನ್ನು ಹೂಡಿಕೆದಾರರು ಹೂಡಿಕೆ ಮಾಡಿದಲ್ಲಿ, ಮುಂದಿನ ಅನೇಕ ವರ್ಷಗಳಲ್ಲಿ ನೀವು ಕೋಟ್ಯಾಧೀಶರಾಗುವ ಅವಕಾಶವನ್ನು ಸರ್ಕಾರ ಕೊಡುತ್ತಿದೆ. ಸದ್ಯಕ್ಕೆ ಪಿಪಿಎಫ್ ಖಾತೆಗಳ ಮೇಲೆ 7.1% ವಾರ್ಷಿಕ ಬಡ್ಡಿಯನ್ನು ಸರ್ಕಾರ ಕೊಡುತ್ತಿದೆ.

ಇದನ್ನೂ ಓದಿ: Weekly Horoscope: ಈ ವಾರವಿಡೀ ನಿಮ್ಮ ರಾಶಿಗಳ ಭವಿಷ್ಯ ಹೇಗಿದೆ? ಯಾರಿಗೆ ಲಾಭ, ಯಾರಿಗೆ ನಷ್ಟ? ಇಲ್ಲಿದೆ ವಾರ ಭವಿಷ್ಯ

ಮುಂದಿನ 15 ವರ್ಷಗಳ ಮಟ್ಟಿಗೆ ನೀವು 12,500 ರೂಪಾಯಿ ಪ್ರತಿ ತಿಂಗಳಿನಂತೆ ಹೂಡಿಕೆ ಮಾಡುತ್ತಾ ಹೋಗಬೇಕು. ಪಿಪಿಎಫ್ ಖಾತೆಗಳಲ್ಲಿ ವರ್ಷಕ್ಕೆ ಒಂದೂವರೆ ಲಕ್ಷಗಳಿಗಿಂತ ಹೆಚ್ಚು ಹಣವನ್ನು ಇಡಲು ಅವಕಾಶ ಇಲ್ಲ. ಹಾಗಾಗಿ ಆ ಗರಿಷ್ಠ ಹಣ ನಿಮ್ಮ ಖಾತೆಯಲ್ಲಿ ಇರುವಂತೆ ಲೆಕ್ಕಾಚಾರ ಮಾಡಬೇಕು. ನಿಮಗೆ ಮೆಚ್ಯೂರಿಟಿ ಅವಧಿಯ ವೇಳೆಗೆ ಒಟ್ಟಾರೆ ಹೂಡಿಕೆ 22.5 ಲಕ್ಷ ರೂಪಾಯಿ ನಿಮ್ಮ ಹೂಡಿಕೆ ಆಗಿರುತ್ತದೆ. ಇದರ ಜೊತೆಗೆ ಬಡ್ಡಿಯ ರೂಪದಲ್ಲಿ 18,18,209 ರೂಪಾಯಿ ಸೇರಿಕೊಂಡು ಒಟ್ಟಾರೆ 40,68,209 ರೂಪಾಯಿ ನಿಮ್ಮದಾಗುತ್ತದೆ. ಈ ಅವಧಿಯ ಬಳಿಕ ನೀವು ಹಣ ಹಿಂಪಡೆಯುವ ಬದಲಿಗೆ ಇನ್ನೂ ಹತ್ತು ವರ್ಷ ಪಿಪಿಎಫ್‌ನಲ್ಲಿ ಹೂಡಿಕೆ ಮಾಡಿದಲ್ಲಿ; ನಿಮ್ಮ ಹೂಡಿಕೆ 68,58,288 ರೂಪಾಯಿಗಳಾಗಿ, ಬಡ್ಡಿಯೂ ಸೇರಿ ಒಟ್ಟಾರೆ 1,03,08,015 ರೂಪಾಯಿ ನಿಮ್ಮದಾಗುತ್ತದೆ.ನ್ಯೂಸ್​​​18 ಕನ್ನಡ ಕಳಕಳಿ: ಕೊರೋನಾ ಪಾಸಿಟಿವ್ಕೇಸ್ಗಳ ಸಂಖ್ಯೆ ರಾಜ್ಯದಲ್ಲಿ ತಗ್ಗಿದೆಯಾದರೂ ಸೋಂಕಿನ ಅಪಾಯದಿಂದ ಸಂಪೂರ್ಣವಾಗಿ  ಇನ್ನೂ ಯಾರೂ ಸುರಕ್ಷಿತರಲ್ಲ. ಹೀಗಾಗಿ ಪ್ರತಿಯೊಬ್ಬರು ಕೋವಿಡ್​​ ನಿಯಮಗಳಾದ ಮಾಸ್ಕ್​​ ಧರಿಸುವುದು, ಸಾಮಾಜಿಕ ಅಂತರ ಕಾಯ್ದುಕೊಳ್ಳುವುದನ್ನು ಮರೆಯಬಾರದು. ಆದಷ್ಟು ಶೀಘ್ರವೇ ಲಸಿಕೆ ಪಡೆದು ಸೋಂಕಿನ ವಿರುದ್ಧದ ಯುದ್ಧದಲ್ಲಿ ಪ್ರತಿಯೊಬ್ಬರು ಕೈ ಜೋಡಿಸಬೇಕು. ತಮ್ಮ ತಮ್ಮ ಸರದಿ ಬಂದಾಗ ತಪ್ಪದೇ ಲಸಿಕೆ ಪಡೆಯಬೇಕು. ಈಗಿನ ಪರಿಸ್ಥಿತಿಯಲ್ಲಿ ಲಸಿಕೆ ಒಂದೇ ಸೋಂಕಿನ ವಿರುದ್ಧ ಹೋರಾಡುವ ಮಾರ್ಗವಾಗಿದೆ. ಅತ್ಯಗತ್ಯವಿದ್ದರೆ ಮಾತ್ರವೇ ಮನೆಯಿಂದ ಹೊರಗೆ ಹೋಗುವ ಅಭ್ಯಾಸ ರೂಢಿಸಿಕೊಳ್ಳಬೇಕು.
Published by:Soumya KN
First published: