Money Saving Tips: ಎಷ್ಟೇ ಸಂಪಾದಿಸಿದರೂ ಕೈಯಲ್ಲಿ ಹಣವಿರಲ್ವಾ; ಹಾಗಾದ್ರೆ ಈ ಸಲಹೆ ತಪ್ಪದೇ ಪಾಲಿಸಿ!

ಸಂಸಾರ ತೂಗಿಸುವ ಜೊತೆ ಜೊತೆಯಲ್ಲಿ ಭವಿಷ್ಯತ್ತಿಗಾಗಿ ಅಲ್ಪ ಸ್ವಲ್ಪ ಉಳಿತಾಯವನ್ನೂ ಮಾಡುವುದು ಅತ್ಯವಶ್ಯಕ.

ಪ್ರಾತಿನಿಧಿಕ ಚಿತ್ರ

ಪ್ರಾತಿನಿಧಿಕ ಚಿತ್ರ

  • Share this:

ಬದುಕು ಏಕಾಂಕಿಯಾಗಿದ್ದಾಗ ಗಂಭೀರತೆಗಿಂತ ತುಂಟಾಟ, ಚೆಲ್ಲಾಟಗಳೇ ಹೆಚ್ಚಾಗಿರುತ್ತದೆ. ಬ್ಯಾಚುಲರ್ ಲೈಫ್‍ನಲ್ಲಿ ಕೆಲಸ, ಮನೆ, ಸ್ನೇಹಿತರು, ಪಾರ್ಟಿ, ಪ್ರವಾಸ ಇಷ್ಟಕ್ಕೆ ಸೀಮಿತವಾಗಿರುತ್ತದೆ. ಜವಾಬ್ದಾರಿ ಎನ್ನುವುದು ಅಷ್ಟೊಂದು ಇರುವುದಿಲ್ಲ. ಆದರೆ ಮದುವೆಯಾದ ಮೇಲೆ ಬದುಕಿನ ದಿಕ್ಕೇ ಕೊಂಚ ಬದಲಾಗುತ್ತದೆ. ಜವಾಬ್ದಾರಿ ಎನ್ನುವುದು ಹೆಗಲೇರುತ್ತದೆ. ತದನಂತರ ಪೋಷಕರ ಸ್ಥಾನದಲ್ಲಿ ಬದುಕು ಗುರಿಯಡೆಡೆಗೆ ಸಾಗುತ್ತಾ ಗಂಭೀರತೆಯ ಸ್ವರೂಪ ಪಡೆದುಕೊಂಡು ಮನೆ, ಮಕ್ಕಳು, ಸಂಸಾರದ ಹಿತದೃಷ್ಟಿಯ ಕಡೆಗೂ ಮನಸ್ಸು ಚಿಂತಿಸುತ್ತಿರುತ್ತದೆ. ಹಾಗಾಗಿ ಈ ಸಮಯದಲ್ಲಿ ಸಂಸಾರ ತೂಗಿಸುವ ಜೊತೆ ಜೊತೆಯಲ್ಲಿ ಭವಿಷ್ಯತ್ತಿಗಾಗಿ ಅಲ್ಪ ಸ್ವಲ್ಪ ಉಳಿತಾಯವನ್ನೂ ಮಾಡಿಕೊಳ್ಳಬೇಕಾಗುತ್ತದೆ.


ನೀವು ಹಣವನ್ನು ಉಳಿಸಲು ಹೆಣಗಾಡುತ್ತಿದ್ದರೆ www.offeroftheday.co.uk ಈ ವೆಬ್‍ಸೈಟ್ ನಿಮಗೆ ನೆರವಾಗುವುದರ ಜೊತೆಯಲ್ಲಿ ಕೆಲವೊಂದು ಸಲಹೆಯನ್ನು ನೀಡುತ್ತದೆ.


1. ಕುಟುಂಬದ ಹಣವನ್ನು ಒಟ್ಟುಗೂಡಿಸಿ
ಕುಟುಂಬದ ತಿಂಗಳ ಆದಾಯವನ್ನು ಒಂದೆಡೆ ಒಟ್ಟುಗೂಡಿಸಿ. ನಂತರ ಒಂದು ತಿಂಗಳಿಗೆ ಆಹಾರ, ಬಾಡಿಗೆ, ಹಾಲು ಹೀಗೆ ನಿಮ್ಮ ಖರ್ಚು ವೆಚ್ಚಗಳೆಷ್ಟು ಎಂಬುದನ್ನು ಗುರುತಿಸಿಕೊಳ್ಳಿ. ಇದರಿಂದ ಹಣವನ್ನು ಎಷ್ಟು ಉಳಿತಾಯ ಮಾಡಬೇಕು ಎಂಬ ಬಗ್ಗೆ ನಿಮಗೆ ತಿಳಿಯುತ್ತದೆ. ಇನ್ನು ಒಂದು ಮುಖ್ಯವಾದ ಸಲಹೆ ಎಂದರೆ ನಿಮ್ಮ ಬ್ಯಾಂಕ್ ಸ್ಟೇಟ್‍ಮೆಂಟ್ ಅನ್ನು ಆಗಾಗ ನೋಡುತ್ತೀರಿ. ಏಕೆಂದರೆ ಇದು ನಿಮಗೆ ಉಳಿತಾಯ ಮಾಡಲು ಸ್ಫೂರ್ತಿ ನೀಡುತ್ತದೆ.


2. ಅಗತ್ಯವಿದ್ದಷ್ಟು ಮಾತ್ರ ಶಾಪಿಂಗ್ ಮಾಡಿ
ಆನ್‍ಲೈನ್ ಶಾಪಿಂಗ್ ಕೆಲವೇ ಸಮಯದಲ್ಲಿ ಸೂಕ್ತ. ಎಲ್ಲ ಸಮಯದಲ್ಲೂ ಇದು ಅಷ್ಟೊಂದು ಒಳ್ಳೆಯದಲ್ಲ. ಉದಾಹರಣೆಗೆ ನವಜಾತ ಶಿಶುವಿದ್ದಾಗ ಮಗುವಿಗೆ ತುಂಬಾ ಬಟ್ಟೆಯ ಅಗತ್ಯವಿರುವುದಿಲ್ಲ. ಮಗು ಬೆಳೆದಂತೆ ಕೊಂಡು ಕೊಂಡ ಬಟ್ಟೆಗಳು ಮಗುವಿಗೆ ಸಣ್ಣ ಆಗುತ್ತದೆ. ಇದು ಸುಮ್ಮನೆ ದುಂದು ವೆಚ್ಚವಾಗುತ್ತದೆ. ಹಾಗಾಗಿ ಶಾರ್ಟ್ ಲಿಸ್ಟ್ ಮಾಡಿಕೊಂಡು ಅಗತ್ಯವಾದವುಗಳನ್ನು ಮಾತ್ರ ಖರೀದಿಸಿ. ಬಟ್ಟೆಯ ಸಂಖ್ಯೆಗಳನ್ನು ಮಿತಿಗೊಳಿಸಿ. ಮತ್ತೆ ನಿಮ್ಮ ಪಟ್ಟಿಯಲ್ಲಿ ಬಿಸಾಡಬಹುದಾದ ನ್ಯಾಪಿಕಿನ್ಸ್​​ಗಳಿರಲಿ. ಇದು ಹಣ ಉಳಿತಾಯ ಮಾಡುತ್ತದೆ.


3. ಸಂಶೋಧನೆ ಮಾಡಿ
ಹೆಚ್ಚು ಹಣ ಇದ್ದ ವಸ್ತುಗಳ ಗುಣಮಟ್ಟವು ಉತ್ತಮವಾಗಿರುತ್ತದೆ ಎಂದು ಹೇಳಲು ಬರುವುದಿಲ್ಲ. ಹಾಗಾಗಿ ಹೊಸ ವಿನ್ಯಾಸಗಳು, ಮಾದರಿಗಳಿಗೆ ಹಣ ವಿನಿಯೋಗಿಸಬಹುದು. ಆದ್ದರಿಂದ ನೀವು ಯಾವುದೇ ವಸ್ತುವನ್ನು ಖರೀದಿ ಮಾಡುವ ಮೊದಲು ಆ ವಸ್ತುವಿನ ಬಗ್ಗೆ ಸಂಪೂರ್ಣ ತಿಳಿದುಕೊಂಡರೆ ಹಣ ಉಳಿತಾಯ ಮಾಡಬಹುದು.


ಇದನ್ನು ಓದಿ: ಕೇಂದ್ರ ಸರಕಾರಿ ಉದ್ಯೋಗಿಗಳ ಸಂಬಳದಲ್ಲಿ ಪುನಃ ಏರಿಕೆ ಸಂಭವ; ತುಟ್ಟಿಭತ್ಯೆಯಲ್ಲೂ ಹೆಚ್ಚಳ ಸಂಪೂರ್ಣ ವಿವರ ಇಲ್ಲಿದೆ..

4. ಸಾಧ್ಯವಾದಷ್ಟು ಸೆಕೆಂಡ್ ಹ್ಯಾಂಡ್ ಬಟ್ಟೆ ಖರೀದಿಸಿ
ಸಣ್ಣ ಮಗುವಿಗೆ ಹೊಸ ಬಟ್ಟೆ ಖರೀದಿಸುವ ಮೊದಲು ಕುಟುಂಬದವರು, ಸ್ನೇಹಿತರಿಂದ ಅವರು ಕಡಿಮೆ ಸಮಯ ಬಳಸಿದ ಬಟ್ಟೆಗಳನ್ನು ಪಡೆದುಕೊಳ್ಳಿ. ಮಕ್ಕಳು ಬೆಳೆಯುವುದರಿಂದ ಅವುಗಳಿಗೆ ಅದೇ ಬಟ್ಟೆ ಸಾಕಾಗುತ್ತದೆ. ಬೆಳೆದ ನಂತರ ಅವರಿಗೆ ತಕ್ಕಂತೆ ಬಟ್ಟೆ ಖರೀದಿ ಮಾಡಬಹುದು.


ಇದನ್ನು ಓದಿ: UPSC, KAS, RRB ಸೇರಿದಂತೆ ಹಲವು ಪರೀಕ್ಷೆಗಳಿಗೆ ಸರ್ಕಾರದಿಂದಲೇ ತರಬೇತಿ; ಅರ್ಜಿ ಸಲ್ಲಿಕೆಗೆ ಕಡೆಯ ದಿನಾಂಕ ಸೆ. 30

5. ಹಿಂಜರಿಯಬೇಡಿ
ನಿಮಗೆ ಬೇಕಾಗಿರುವುದನ್ನು ಕೇಳಿ ಪಡೆಯಲು ಯಾವುದೇ ಕಾರಣಕ್ಕೂ ಹಿಂಜರಿಯಬೇಡಿ. ಹೌದು ನಿಮ್ಮ ಸ್ನೇಹಿತರು, ಕುಟುಂಬದವರು, ಸಂಬಂಧಿಕರು ಏನಾದರೂ ಮಗುವಿಗೆ ಗಿಫ್ಟ್ ನೀಡಲು ಯೊಚಿಸುತ್ತಿದ್ದರೆ ಮಗುವಿಗೆ ಹಾಗೂ ಮನೆಗೆ ಬೇಕಾಗಿರುವುದನ್ನು ಕೇಳಿ ಪಡೆಯಲು ಹಿಂದೇಟು ಹಾಕಬೇಡಿ. ಏಕೆಂದರೆ ಒಂದೇ ರೀತಿಯ ಮೂರು ವಸ್ತುಗಳು ಮನೆ ಸೇರುವುದಕ್ಕಿಂತ ಅವಶ್ಯಕತೆಗೆ ಅನುಗುಣವಾಗಿ ವಸ್ತುಗಳನ್ನು ಪಡೆದರೆ ಒಳ್ಳೆಯದು.


6. ರಿಯಾಯಿತಿಗಳಿಗಾಗಿ ಕ್ಲಬ್‍ಗಳಿಗೆ ಸೇರಿಕೊಳ್ಳಿ
ವಿಶೇಷವಾಗಿ ಈಗ ಪೋಷಕರಿಗಾಗಿ ಕೆಲವು ಬ್ರ್ಯಾಂಡ್‍ಗಳು ಕ್ಲಬ್‍ಗಳನ್ನು ಮಾಡಿಕೊಂಡಿವೆ, ಇದು ನಿಮಗೆ ವಿಶೇಷ ರಿಯಾಯಿತಿಗಳಿಂದ ಲಾಭ ಪಡೆಯಲು ಅನುವು ಮಾಡಿಕೊಡುತ್ತದೆ. ಬೂಟ್ಸ್ ಪೇರೆಂಟಿಂಗ್ ಕ್ಲಬ್ ಮಗುವಿನ ವಸ್ತುಗಳನ್ನು ಖರೀದಿಸುವಾಗ ಮತ್ತು ನಿಮ್ಮ ಮಗುವಿನ ಬೆಳವಣಿಗೆಯ ವಿವಿಧ ಹಂತಗಳಲ್ಲಿ ಉಚಿತ ಉಡುಗೊರೆಗಳನ್ನು ನೀಡುವಾಗ ಹೆಚ್ಚುವರಿ ಪ್ರಯೋಜನಗಳನ್ನು ನೀಡುತ್ತದೆ.


First published: