News18 India World Cup 2019

ಸಕ್ಕರೆ ಕಾಯಿಲೆಯವರಿಗೆ ಸಿಹಿ ಸುದ್ದಿ; ಕ್ಯಾಡ್​ಬರಿ ಡೈರಿ ಮಿಲ್ಕ್​​ನಿಂದ ಲೋ-ಶುಗರ್​ ಚಾಕೋಲೆಟ್​​​

ಪ್ರತಿಷ್ಠಿತ ಮೆಂಡೆಲೆಜ್​ ಅಂತರಾಷ್ಟ್ರೀಯ ಚಾಕೊಲೆಟ್​ ಕಂಪೆನಿ ಇದೀಗ ಕಡಿಮೆ ಸಕ್ಕರೆ ಪ್ರಮಾಣದಲ್ಲಿ ಕ್ಯಾಡ್​ಬರಿ ಡೈರಿ ಮಿಲ್ಕ್​ ಚಾಕೋಲೆಟ್​ ಅನ್ನು ತಯಾರಿಸುತ್ತಿದೆ. ಪ್ರತಿ ಚಾಕೊಲೆಟ್​ನಲ್ಲಿ 30% ಶೇಕಡಾದಷ್ಟು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ.

news18
Updated:June 11, 2019, 10:58 PM IST
ಸಕ್ಕರೆ ಕಾಯಿಲೆಯವರಿಗೆ ಸಿಹಿ ಸುದ್ದಿ; ಕ್ಯಾಡ್​ಬರಿ ಡೈರಿ ಮಿಲ್ಕ್​​ನಿಂದ ಲೋ-ಶುಗರ್​ ಚಾಕೋಲೆಟ್​​​
ಕ್ಯಾಡ್​ಬರಿ ಡೈರಿ ಮಿಲ್ಕ್​ ಚಾಕೋಲೆಟ್​
news18
Updated: June 11, 2019, 10:58 PM IST
ಕ್ಯಾಡ್​ಬರಿ ಡೈರಿ ಮಿಲ್ಕ್​ ಚಾಕೋಲೆಟ್​ ಅಂದರೆ ಯಾರಿಗೆ ಇಷ್ಟವಿಲ್ಲ ಹೇಳಿ. ಮಕ್ಕಳಿಂದ ಹಿಡಿದು ಎಲ್ಲರಿಗೂ ಅಚ್ಚುಮೆಚ್ಚು. ಇಂತಹ ಡೈರಿ ಮಿಲ್ಕ್​ ಚಾಕೋಲೆಟ್​ ಇದೀಗ ಕಡಿಮೆ ಸಿಹಿಯಲ್ಲಿ ತಯಾರಿಸಲಾಗುತ್ತಿದೆ ಅಂದರೆ ನಂಬುತ್ತೀರಾ.?

ಹೌದು. ಪ್ರತಿಷ್ಠಿತ ಮೆಂಡೆಲೆಜ್​ ಅಂತರಾಷ್ಟ್ರೀಯ ಚಾಕೋಲೆಟ್​ ಕಂಪೆನಿ ಇದೀಗ ಕಡಿಮೆ ಸಕ್ಕರೆ ಪ್ರಮಾಣದಲ್ಲಿ ಕ್ಯಾಡ್​ಬರಿ ಡೈರಿ ಮಿಲ್ಕ್​ ಚಾಕೋಲೆಟ್​ ಅನ್ನು ತಯಾರಿಸುತ್ತಿದೆ. ಪ್ರತಿ ಚಾಕೋಲೆಟ್​ನಲ್ಲಿ 30% ಶೇಕಡಾದಷ್ಟು ಕಡಿಮೆ ಸಕ್ಕರೆ ಅಂಶವನ್ನು ಹೊಂದಿದೆ.

ಇದನ್ನೂ ಓದಿ: ಈ ಬಾರಿಯ ವಿಶ್ವಕಪ್​ನಲ್ಲಿ ಮಳೆಯದ್ದೇ ಆಟ; ಭಾರತ-ಪಾಕ್ ಪಂದ್ಯಕ್ಕೂ ವರುಣನ ಅಡ್ಡಿ ಸಾಧ್ಯತೆ!

ಈ ಕುರಿತು ಮಾತನಾಡಿದ ಮೆಂಡಲೆಸ್​ ಇಂಡಿಯಾ ಕಂಪನಿಯ ಮುಖ್ಯಸ್ಥ ದೀಪಕ್​ ಲೇರ್​, ಭಾರತದಲ್ಲಿ ಈ ರೀತಿಯ ಚಾಕೋಲೆಟ್​ ಬಿಡುಗಡೆಯಾಗುತ್ತಿರುವುದು ನಮಗೆ ಖುಷಿ ತಂದಿದೆ, ಗ್ರಾಹಕರ ಪ್ರೀತಿಯನ್ನು ಬಯಸುತ್ತೇವೆ ಎಂದು ಹೇಳಿದ್ದಾರೆ. ಅಂತೆಯೇ, ಈ ಚಾಕೋಲೆಟ್​ ತಯಾರಿಸಲು ಎರಡು ವರ್ಷದಿಂದ ಶ್ರಮ ವಹಿಸಿದ್ದೇವೆ. ಇದಕ್ಕಾಗಿ ಆಹಾರ ತಜ್ಞರು, ವಿಜ್ಞಾನಿಗಳು ಶ್ರಮವಹಿಸಿ ಈ ಚಾಕೋಲೆಟ್​ ಅನ್ನು ತಯಾರು ಮಾಡಲಾಗಿದೆ ಎಂದರು.

First published:June 11, 2019
ಮತ್ತಷ್ಟು ಓದಿರಿ
Loading...
ಮುಂದಿನ ಸುದ್ದಿ
Loading...