• Home
 • »
 • News
 • »
 • trend
 • »
 • Monday: ಸೋಮವಾರ ವಾರದ ಕೆಟ್ಟ ದಿನವಂತೆ : ಹೀಗಂತ ಅಧಿಕೃತವಾಗಿ ಹೇಳಿದ್ದು ಯಾರು ಗೊತ್ತೇ?

Monday: ಸೋಮವಾರ ವಾರದ ಕೆಟ್ಟ ದಿನವಂತೆ : ಹೀಗಂತ ಅಧಿಕೃತವಾಗಿ ಹೇಳಿದ್ದು ಯಾರು ಗೊತ್ತೇ?

file photo

file photo

ಅಧಿಕೃತವಾಗಿ ಸೋಮವಾರವನ್ನು ವಾರದ ಕೆಟ್ಟ ದಿನ ಅಂತ ದಾಖಲೆಯನ್ನು ನೀಡುತ್ತಿದ್ದೇವೆ

 • Share this:

  ಶಾಲೆಗೆ ಹೋಗುವ ಚಿಕ್ಕ ಮಕ್ಕಳಿಂದ ಹಿಡಿದು ಕೆಲಸಕ್ಕೆ ಹೋಗುವ ವಯಸ್ಕರರವರೆಗೆ ಅವರಿಗೆ ಶಾಲೆಗೆ ಮತ್ತು ಕೆಲಸಕ್ಕೆ ಹೋಗಲು ತುಂಬಾನೇ ಬೇಸರ ಅಂತ ಅನ್ನಿಸುವ ದಿನ(Day) ಯಾವುದು ಅಂತ ಕೇಳಿ ನೋಡಿ. ಅವರೆಲ್ಲರ ಉತ್ತರ ಬಹುತೇಕವಾಗಿ ಒಂದೇ ಆಗಿರುತ್ತದೆ ಅಂತ ಹೇಳಿದರೆ ತಪ್ಪಾಗುವುದಿಲ್ಲ. ಹೌದು.. ಅವರ ಉತ್ತರ ವಾರದ ಮೊದಲ ದಿನ ಸೋಮವಾರ (Monday) ಅಂತಾನೆ ಆಗಿರುತ್ತದೆ.


  ಈ ಸೋಮವಾರ ಭಾನುವಾರದ ನಂತರ ಬರುವುದಕ್ಕೆ ಜನರಿಗೆ ಈ ರೀತಿಯಾಗಿ ಬೇಸರ ಆಗುತ್ತೆ ಅಂತ ಹೇಳಬಹುದು. ಏಕೆಂದರೆ ಭಾನುವಾರ ಒಂದು ದಿನ ಈ ಶಾಲೆಗಳಿಂದ ಮತ್ತು ಕೆಲಸಗಳಿಂದ ಸಂಪೂರ್ಣವಾಗಿ ವಿರಾಮ ಸಿಕ್ಕಿ ಮತ್ತೆ ಮರುದಿನ ಅದೇ ಕೆಲಸಕ್ಕೆ ಮತ್ತು ಶಾಲೆಗೆ ಹೋಗಬೇಕು ಎಂದರೆ ಬಹುತೇಕರಿಗೆ ಬೇಸರ ಆಗುತ್ತದೆ.


  ಸೋಮವಾರ ಕೆಲಸಕ್ಕೆ ಹೋಗಲು ಬೇಸರವಾಗುವುದರ ಬಗ್ಗೆ ನಮ್ಮಲ್ಲಿ ಅನೇಕ ಜೋಕ್ ಗಳಿವೆ ಅಂತ ಹೇಳಿದರೆ ಸುಳ್ಳಲ್ಲ. ಒಟ್ಟಿನಲ್ಲಿ ಹೇಳುವುದಾದರೆ, ಬಹುತೇಕ ಜನರು ಸೋಮವಾರದ ದಿನವನ್ನು ಅತ್ಯಂತ ನಿಧಾನ ಮತ್ತು ನೀರಸವೆಂದು ಕಂಡು ಕೊಂಡಿದ್ದಂತೂ ನಿಜ ಅಂತ ಹೇಳಬಹುದು. ಇಲ್ನೋಡಿ ಈ ಸೋಮವಾರ ವಾರದಲ್ಲಿಯೇ ಅತ್ಯಂತ ಕೆಟ್ಟ ದಿನವಂತೆ ಅಂತ ಅಧಿಕೃತವಾಗಿ ಘೋಷಿಸಿದ್ದಾರೆ.


  ಇದನ್ನೂ ಓದಿ: ಗಣಿತದ ಸೂತ್ರಗಳನ್ನು ಎಷ್ಟು ಸುಲಭವಾಗಿ ಕಲಿಸಿದ್ದಾರೆ ನೋಡಿ ಈ ಶಿಕ್ಷಕ!


  ಸೋಮವಾರ ವಾರದ ಕೆಟ್ಟ ದಿನವಂತೆ!


  ಈಗ, ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ (ಜಿಡಬ್ಲ್ಯೂಆರ್) ಕೂಡ ಸೋಮವಾರದ ವಿರುದ್ಧದ ತನ್ನ ದ್ವೇಷವನ್ನು ಹೊರಹಾಕಿದೆ ಅಂತ ಹೇಳಬಹುದು. ಇದನ್ನು 'ವಾರದ ಕೆಟ್ಟ ದಿನ' ಎಂದು ಗುರುತಿಸಿದೆ. ಇದರರ್ಥ ನೀವು ಈಗ ಈ ಸೋಮವಾರವನ್ನು ಅಧಿಕೃತವಾಗಿ ದೂಷಿಸಬಹುದು.


  "ನಾವು ಅಧಿಕೃತವಾಗಿ ಸೋಮವಾರವನ್ನು ವಾರದ ಕೆಟ್ಟ ದಿನ ಅಂತ ದಾಖಲೆಯನ್ನು ನೀಡುತ್ತಿದ್ದೇವೆ" ಎಂದು ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಸೋಮವಾರ ತನ್ನ ಅಧಿಕೃತ ಟ್ವಿಟರ್ ಹ್ಯಾಂಡಲ್ ನಲ್ಲಿ ತಿಳಿಸಿದೆ.


  ಅಂತಿಮವಾಗಿ ಯಾರಾದರೂ ಇದನ್ನು ಅಧಿಕೃತವಾಗಿ ಗುರುತಿಸಿದ್ದಾರೆ ಎಂದು ಟ್ವಿಟರ್ ಬಳಕೆದಾರರು ಸಂತೋಷಪಟ್ಟರು. ಆ್ಯಂಗ್ರಿ ಬರ್ಡ್ಸ್ ಕ್ಯಾರೆಕ್ಟರ್ ರೆಡ್ ನ ಅಧಿಕೃತ ಪುಟವು ಜಿಡಬ್ಲ್ಯೂಆರ್ ನ ಟ್ವೀಟ್ ಗೆ ಪ್ರತಿಕ್ರಿಯಿಸಿ "ನೀವು ತುಂಬಾ ಸಮಯ ತೆಗೆದುಕೊಂಡ್ರಿ" ಎಂದು ಹೇಳಿದೆ. ಇದಕ್ಕೆ ಜಿಡಬ್ಲ್ಯೂಆರ್ ಪ್ರತಿಕ್ರಿಯಿಸಿ "ನನಗೆ ಸರಿಯಾಗಿ ತಿಳಿಯಿತು" ಎಂದು ಬರೆದಿದೆ.


  ಇದನ್ನೂ ಓದಿ: ಹೆಬ್ಬಾವಿನ ಹೊಟ್ಟೆಯಿಂದ ಜೀವಂತವಾಗಿ ಬದುಕಿ ಬಂದ ಮಹಿಳೆ!


  ಇದಕ್ಕೆ ನೆಟ್ಟಿಗರು ಹೇಗೆ ಪ್ರತಿಕ್ರಿಯಿಸಿದ್ದಾರೆ ನೋಡಿ..


  "ಈ ಕಾರಣಕ್ಕಾಗಿಯೇ ನಾನು ಸೋಮವಾರದಂದು ಕೆಲಸದಿಂದ ವಿರಾಮ ತೆಗೆದುಕೊಳ್ಳುತ್ತೇನೆ" ಎಂದು ಇನ್ನೊಬ್ಬ ಸಾಮಾಜಿಕ ಮಾಧ್ಯಮ ಬಳಕೆದಾರರು ಹೇಳಿದರು. ಜಿಡಬ್ಲ್ಯೂಆರ್ ಅವರನ್ನು "ಸ್ಮಾರ್ಟ್" ಎಂದು ಕರೆದಿದ್ದಾರೆ. ಅನೇಕ ಪ್ರಭಾವಶಾಲಿಗಳು ಮತ್ತು ಸೆಲೆಬ್ರಿಟಿಗಳು ತಮ್ಮ ಫಾಲೋವರ್ಸ್ ಗಳ 'ಮಂಡೇ ಬ್ಲೂಸ್' (ಸೋಮವಾರದ ಬೇಸರ) ವನ್ನು ತೊಡೆದು ಹಾಕಲು ಅನೇಕ ಪ್ರೋತ್ಸಾಹದಾಯಕ ವಿಷಯವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಸದಾ ಪೋಸ್ಟ್ ಮಾಡುತ್ತಲೇ ಇರುತ್ತಾರೆ. ಅವರಲ್ಲಿ ಕೈಗಾರಿಕೋದ್ಯಮಿ ಆನಂದ್ ಮಹೀಂದ್ರಾ ಕೂಡ ಒಬ್ಬರು ಅಂತ ಹೇಳಬಹುದು. ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿರುವ ಫಾಲೋವರ್ಸ್ ಗಳಿಗೆ ಜೀವನದ ಗುರಿಗಳ ಬಗ್ಗೆ ಸಲಹೆ ನೀಡುತ್ತಲೇ ಇರುತ್ತಾರೆ.


  ಇದರ ಪ್ರಾರಂಭದಿಂದ 1999 ರವರೆಗೆ, ಇದನ್ನು ಗಿನ್ನಿಸ್ ಬುಕ್ ಆಫ್ ರೆಕಾರ್ಡ್ಸ್ ಎಂದು ಕರೆಯಲಾಗುತ್ತಿತ್ತು. ಮಾನವ ಸಾಧನೆಗಳು ಮತ್ತು ನೈಸರ್ಗಿಕ ಪ್ರಪಂಚದ ಅತಿರೇಕಗಳೆರಡರ ವಿಶ್ವದಾಖಲೆಗಳನ್ನು ಪಟ್ಟಿ ಮಾಡಿ ದಾಖಲೆ ಪುಸ್ತಕವನ್ನು ವಾರ್ಷಿಕವಾಗಿ ಪ್ರಕಟಿಸಲಾಗುತ್ತದೆ.


  ಗಿನ್ನಿಸ್ ವರ್ಲ್ಡ್ ರೆಕಾರ್ಡ್ಸ್ ಇದುವರೆಗೆ 143 ಮಿಲಿಯನ್ ಪ್ರತಿಗಳನ್ನು ಮಾರಾಟ ಮಾಡಿದೆ ಮತ್ತು ಈಗ ಲಂಡನ್, ನ್ಯೂಯಾರ್ಕ್, ಬೀಜಿಂಗ್, ಟೋಕಿಯೋ ಮತ್ತು ದುಬೈನಲ್ಲಿ ಕಚೇರಿಗಳನ್ನು ಹೊಂದಿರುವ ಜಾಗತಿಕ ಬ್ರ್ಯಾಂಡ್ ಸಹ ಆಗಿದೆ. ಅದರ ತೀರ್ಪುಗಾರರು ಪ್ರಪಂಚದಾದ್ಯಂತ ನೆಲೆಸಿದ್ದಾರೆ ಅಂತ ಹೇಳಲಾಗುತ್ತದೆ.

  Published by:Seema R
  First published: